ಕಾಲ್ತೊಡು ಅಂಗನವಾಡಿಯಲ್ಲಿ ಸ್ಥಳಾವಕಾಶದ ಸಮಸ್ಯೆ…!
30 ವರ್ಷದ ಹಿಂದಿನ ಕಟ್ಟಡದಲ್ಲೇ ನಡೆಯುತ್ತಿದೆ ಅಂಗನವಾಡಿ
Team Udayavani, Mar 30, 2019, 6:30 AM IST
ಕಾಲೊ¤àಡು: ಅಂಗನವಾಡಿಗಳಿಗೆ ಹೋಗುವ ಮಕ್ಕಳ ಸಂಖ್ಯೆ ಇಳಿಮುಖ ವಾಗುತ್ತಿರುವುದರ ಮಧ್ಯೆಯೇ, ಕಾಲೊ¤àಡಿನ ಅಂಗನವಾಡಿಯಲ್ಲಿ 50 ಮಕ್ಕಳಿದ್ದರೂ, ಸರಿಯಾದ ಮೂಲ ಸೌಕರ್ಯವಿಲ್ಲದ ಕಾರಣ ಪೋಷಕರು ಮಕ್ಕಳನ್ನು ಅನಿವಾರ್ಯವಾಗಿ ಕಷ್ಟಪಡುವಂತಾಗಿದೆ.
ಬೈಂದೂರು ತಾಲೂಕಿನ ಕಾಲೊ¤àಡಿನಲ್ಲಿರುವ ಈ ಅಂಗನವಾಡಿಯಲ್ಲಿ ಒಟ್ಟು 50 ಮಂದಿ ಮಕ್ಕಳಿದ್ದಾರೆ. ಅದರಲ್ಲಿ 4-5 ಮಂದಿ ಗೈರಾದರೂ, 45 ಮಂದಿ ಮಕ್ಕಳಂತೂ ಪ್ರತಿನಿತ್ಯ ತಪ್ಪದೇ ಬರುತ್ತಾರೆ. ಆದರೆ ಈಗಿರುವ ಅಂಗನವಾಡಿ ಕಟ್ಟಡ ಸಣ್ಣದಾಗಿರುವುದರಿಂದ 50 ಮಂದಿ ವಿದ್ಯಾರ್ಥಿಗಳಿಗೆ ಇಲ್ಲಿ ಕಷ್ಟವಾಗುತ್ತಿದೆ.
30 ವರ್ಷದ ಹಿಂದಿನ ಕಟ್ಟಡ
ಕಾಲೊ¤àಡಿನಲ್ಲಿರುವ ಈ ಅಂಗನವಾಡಿ ಕಟ್ಟಡ ನಿರ್ಮಾಣವಾಗಿರುವುದು 30 ವರ್ಷಗಳ ಹಿಂದೆ. ಹೆಚ್ಚಿನ ಕಡೆಗಳಲ್ಲಿ ಅಂಗನವಾಡಿಗೆ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಇಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದಾರೆ. ಆದರೆ ಸಣ್ಣ ಕಟ್ಟಡದಿಂದಾಗಿ ಪುಟಾಣಿ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.
ಹೊಸ ಕಟ್ಟಡ/ವಿಸ್ತರಣೆ ಕ್ರಮ ಕೈಗೊಳ್ಳಿ
ನಮ್ಮ ಈ ಅಂಗನವಾಡಿ ಕಟ್ಟಡದಲ್ಲಿ ಒಂದು ಸಣ್ಣ ಅಡುಗೆ ಕೋಣೆ, ಮತ್ತೂಂದು ಕೋಣೆಯಲ್ಲಿ ಮಕ್ಕಳು ಕುಳಿತುಕೊಳ್ಳುತ್ತಾರೆ. ಅಲ್ಲಿಯೇ ಅವರ ಊಟ, ಆಟ, ಪಾಠ ಎಲ್ಲವೂ ನಡೆಯುತ್ತಿದೆ. 50 ಮಕ್ಕಳಿದ್ದರೂ, ಹೊಸದಾಗಿ ಕಟ್ಟಡ ಅಥವಾ ಇದನ್ನು ವಿಸ್ತರಿಸುವ ಕುರಿತಂತೆ ಯಾರೂ ಕೂಡ ಗಮನವೇ ಹರಿಸಿಲ್ಲ.
– ಮಂಜು ಪೂಜಾರಿ ಹಾಗೂ ಪ್ರತೀಶ್, ಕಾಲೊ¤àಡು
ಮಾಹಿತಿ ಪಡೆಯಲಾಗುವುದು
ಕಾಲೊ¤àಡಿನ ಈ ಅಂಗನವಾಡಿಯಲ್ಲಿ ಮಕ್ಕಳು ಪಡುತ್ತಿರುವ ಸಮಸ್ಯೆ ಕುರಿತು ಸೂಪರ್‌ವೈಸರ್‌ರಿಂದ ಮಾಹಿತಿ ಪಡೆಯಲಾಗುವುದು. ಈ ಸಮಸ್ಯೆ ಪರಿಹಾರಕ್ಕೆ ಇಲಾಖೆಯಿಂದ ಏನು ಮಾಡಬಹುದು ಎನ್ನುವುದನ್ನು ನಿರ್ಧರಿಸಲಾಗುವುದು.
– ನಿರಂಜನ್ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ, ಕುಂದಾಪುರ
ಮಕ್ಕಳನ್ನು ಕಳುಹಿಸಲು ಹಿಂದೇಟು
ಗ್ರಾಮೀಣ ಪ್ರದೇಶವಾದ ಕಾಲೊ¤àಡಿನಲ್ಲಿ ಆಸುಪಾಸಿನಲ್ಲಿ ಬೇರೆಲ್ಲೂ ಅಂಗನವಾಡಿ ಇಲ್ಲದಿರುವುದರಿಂದ, ಇಲ್ಲಿ ಸ್ಥಳಾವಕಾಶದ ಸಮಸ್ಯೆಯಿದ್ದರೂ, ಅನಿವಾರ್ಯವಾಗಿ ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆದರೆ ಈಗ ಮಕ್ಕಳು ಇಲ್ಲಿ ಅನುಭವಿಸುತ್ತಿರುವ ಸಂಕಷ್ಟ ನೋಡಿ, ಕೆಲವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.