ಗ್ರಾಹಕರ ಉಪಯೋಗಕ್ಕಾಗಿ ಮೀನು ಸಂಸ್ಕರಣ ಘಟಕ ಆರಂಭ: ಉಮಾನಾಥ
Team Udayavani, Jun 26, 2019, 5:00 AM IST
ಮೀನು ಸಂಸ್ಕರಣ ಘಟಕವನ್ನು ಶಾಸಕ ಉಮಾನಾಥ ಕೋಟ್ಯಾನ್ ಅವರು ಉದ್ಘಾಟಿಸಿದರು.
ಕಿನ್ನಿಗೋಳಿ: ಗ್ರಾಹಕರಿಗೆ ಉತ್ತಮ ಮೀನು ಒದಗಿಸುವ ಉದ್ದೇಶ ಮತ್ತು ಮೀನು ಮಾರಾಟಗಾರ ಉಪಯೋಗಕ್ಕಾಗಿ ಮೀನು ಸಂಸ್ಕರಣಾ ಘಟಕವನ್ನು ಆರಂಭಿಸಲಾಗಿದ್ದು ಇದು ಜಿಲ್ಲೆಯ ಪ್ರಥಮ ಘಟಕವಾಗಿದೆ. ಮುಂದಿನ ದಿನಗಳಲ್ಲಿ ಮೂಲ್ಕಿ ಮೀನು ಮಾರುಕಟ್ಟೆಗೂ ಅಳವಡಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಂಗಳೂರು ಮತ್ತು ಕಿನ್ನಿಗೋಳಿ ಗ್ರಾ.ಪಂ. ವತಿಯಿಂದ ಜೂ. 25 ರಂದು ಜರಗಿದ ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ಮತ್ಸ್ಯಜೋಪಾಸನ ಯೋಜನೆಯಡಿಯಲ್ಲಿ ಅಳವಡಿಸಲಾದ ಮೀನು ಸಂಸ್ಕರಣ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
20 ಕಡೆಗಳಲ್ಲಿ ಅನುಷ್ಠಾನ
ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಎಂ.ಎಲ್. ದೊಡ್ಮಣಿ ಮಾತನಾಡಿ, ರಾಜ್ಯಾದ್ಯಂತ ಒಂದು ಕೋಟಿ ರೂ. ಬಜೆಟ್‌ನಲ್ಲಿ 10 ಕಡೆಗಳಲ್ಲಿ ಈ ಯೋಜನೆಗೆ ಅನುಷ್ಠಾನಗೊಳ್ಳಲಿತ್ತು. ಆದರೆ ಟೆಂಡರ್ ಕರೆದ ನಂತರ ಘಟಕ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗುದರಿಂದ ಅನುಮತಿ ಪಡೆದು 20 ಕಡೆಗಳಲ್ಲಿ ಈ ಘಟಕ ಅಳವಡಿಸಲಾಗುತ್ತಿದ್ದು ಅದರಲ್ಲಿ ಕಿನ್ನಿಗೋಳಿಯಲ್ಲಿ ಪ್ರಥಮವಾಗಿ ಅಳವಡಿಸಲಾಗಿದೆ ಎಂದರು.
ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷರಾದ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತಾ, ದೇವಪ್ರಸಾದ್ ಪುನರೂರು, ಪ್ರಕಾಶ್ ಹೆಗ್ಡೆ, ರವೀಂದ್ರ ದೇವಾಡಿಗ ಪುನರೂರು, ಸಂತೋಷ್, ಚಂದ್ರಶೇಖರ್, ಹೇಮಲತಾ, ಸುಲೋಚನಾ, ವಾಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿ’ಸೋಜಾ, ಪ್ರಧಾನ ವ್ಯವಸ್ಥಾಪಕ ಮುದ್ದಣ್ಣ, ಕಿನ್ನಿಗೋಳಿ ಮೀನು ಮಾರುಕಟ್ಟೆ ಸಂಘದ ಅಧ್ಯಕ್ಷೆ ಗೀತಾ, ಅಹಲ್ಯಾ, ಉದ್ಯಮಿ ಲಕ್ಷಣ್ ಸಾಲ್ಯಾನ್ ಪುನರೂರು, ಈಶ್ವರ್ ಕಟೀಲು, ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಭುವನಾಭಿರಾಮ ಉಡುಪ, ಮಧುಸೂದನ್, ರಘುರಾಮ ಪುನರೂರು, ಸಂತೋಷ್ ಶೆಟ್ಟಿ ಪುನರೂರು, ತಿಲಕ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.