ಮೋದಿ ಸರ್ಕಾರ್: ಜಗತ್ತಿನ ನಾಯಕರ ಕತೆ
Team Udayavani, May 30, 2019, 11:18 AM IST
ಕೆಲವು ವಿಶ್ವ ನಾಯಕರು ಮೋದಿಯಂತೆಯೇ ಪುನರಾಯ್ಕೆಯಾದವರಿದ್ದಾರೆ. ಕೈಗೊಂಡ ಅಭಿವೃದ್ಧಿ ಕಾರ್ಯಗಳು, ನೀತಿ ನಿರೂಪಣೆಯಲ್ಲಿ ತೋರಿದ ಪ್ರಬುದ್ಧತೆ, ಕ್ಲಿಷ್ಟ ಸಂದರ್ಭಗಳ ಸಮರ್ಥ ನಿರ್ವಹಣೆ ಎಲ್ಲವೂ ಇದಕ್ಕೆ ಕಾರಣವಾಗಿರಬಹುದು. ಈ ಪೈಕಿ ಕೆಲವು ನಾಯಕರ ಉಲ್ಲೇಖ ಇಲ್ಲಿದೆ.
ಕೆಲವರು ಅದೃಷ್ಟದ ಮೂಲಕ ಅತ್ಯುನ್ನತ ಹುದ್ದೆಯನ್ನು ಏರಿದರೆ ಹಲವರು ಕಷ್ಟಪಟ್ಟು, ಹೋರಾಟದ ಮೂಲಕ ಹುದ್ದೆಯನ್ನು ಅನುಭವಿಸಿದರು. ಆದರೆ ಅದೃಷ್ಟ ಮತ್ತು ಶ್ರಮ ಇವೆರಡರ ಮೂಲಕ ನಾಯಕತ್ವವನ್ನು ಬೆಳೆಸಿಕೊಂಡು ಜಗತ್ತಿನ ವರ್ಚಸ್ವಿ ನಾಯಕರಾಗಿ ಬೆಳೆದು ರಾಷ್ಟ್ರವನ್ನು ಮುನ್ನಡೆಸುತ್ತಿರುವ ಅದೆಷ್ಟೂ ತಲೆಗಳು ನಮ್ಮ ಮುಂದಿವೆ. ಜನರ ಅಪೇಕ್ಷೆಗನುಸಾರವಾಗಿ ದಶಕಗಳ ಕಾಲ ಅಧಿಕಾರ ಅನುಭವಿಸುತ್ತಿರುವ ಪ್ರಮುಖ ನಾಯಕರುಗಳನ್ನು ಇಲ್ಲಿ ಹೆಸರಿಸಲಾಗಿದೆ.
ವಾಲ್ಡಿಮರ್ ಪುಟಿನ್
ವ್ಲಾದಿಮಿರ್ ಪುಟಿನ್ ಅವರು ಜಗತ್ತಿನ ಪ್ರಭಾವಿ ನಾಯಕರಲ್ಲಿ ಒಬ್ಬರು. 1999ರಿಂದ ಅವರು ರಷ್ಯಾದ ಎರಡು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆರಂಭದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಪುಟಿನ್ ಅವರು ಬಳಿಕ ಅಧ್ಯಕ್ಷರಾಗಿದರು. ಬಳಿಕ ರಷ್ಯಾದ ಪ್ರಧಾನ ಮಂತ್ರಿಯಾಗಿ ಇಂದು ಅಧ್ಯಕ್ಷರಾಗಿದ್ದಾರೆ. ಇವರು ಎರಡೂ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರಾಗಿದ್ದು, 19 ವರ್ಷಗಳಿಂದ ಪ್ರಮುಖ ಸ್ಥಾನವನ್ನು ಅನುಭವಿಸಿದ್ದಾರೆ.ಕೆಲವು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದ ಪುಟಿನ್ ಅವರು, ಸ್ಟಾರ್ಟ್ ಅಪ್‌ಗ್ಳನ್ನು ಸ್ಥಾಪಿಸಿದ್ದರು. ದೇಶದ ಜಿಡಿಪಿ ಬೆಳವಣಿಗೆಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದ್ದ ಪುಟಿನ್ ಅವರನ್ನು ಜನ ಮತ್ತೆ ಅಧ್ಯಕ್ಷರಾಗಿ ಕಾಣಲು ಬಯಸಿದರು.
ಶೇಖ್ ಹಸೀನ
ಶೇಖ್ ಹಸೀನಾ ನೆರೆಯ ಬಾಂಗ್ಲಾದೇಶದ ಪ್ರಧಾನ ಮಂತ್ರಿ. ಮಹಿಳೆಯಾಗಿದ್ದುಕೊಂಡು ಅವರು ದೇಶವನ್ನು ಮುನ್ನಡೆಸಿದ ರೀತಿ ಪ್ರಶಂಸನೀಯವಾದುದು. 1996ರ ಬಳಿಕ ಎರಡು ಅವಧಿಗೆ ಬಾಂಗ್ಲಾದ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದ ಜತೆಗೆ ಉತ್ತಮ ಸಂಬಂಧವನ್ನು ಕಾಯ್ದುಕೊಂಡ ಹೆಗ್ಗಳಿಕೆಯೂ ಇವರದ್ದು. ಇವರ ಆಡಳಿತ ಅವಧಿಯಲ್ಲಿ ಬಾಂಗ್ಲಾದ ವರಮಾನ 3 ಪಟ್ಟು ಹೆಚ್ಚಾಗಿತ್ತು. ಉದ್ಯೋಗ ಮತ್ತು ಜಿಡಿಪಿಯ ಏಳಿಗೆಗಾಗಿ ಕೈಗಾರಿಕೆಗಳನ್ನು ಸ್ಥಾಪಿಸಿದರು. ಈ ಮೂಲಕ 45 ಲಕ್ಷ ಉದ್ಯೋಗ ಸೃಷ್ಟಿಯಾಗಿತ್ತು.
ಏಜೆಂಲಾ ಮಾರ್ಕೆಲ್
ಜರ್ಮನಿ ಫೆಡರಲ್ ವ್ಯವಸ್ಥೆಯನ್ನು ಹೊಂದಿದ ದೇಶ. ಏಜೆಂಲಾ ಮಾರ್ಕೆಲ್ ಅವರು ದೇಶದ ಮುಖ್ಯಸ್ಥರಾಗಿದ್ದಾರೆ. 2005ರಲ್ಲಿ ಅಧಿಕಾರ ಸ್ವೀಕರಿಸಿದ ಇವರು 13 ವರ್ಷಗಳಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇವರು ಪಾರದರ್ಶಕವಾಗಿ ಆರ್ಥಿಕತೆಯನ್ನು ನಿಭಾಯಿಸಿದರು. ಕೆಲವು “ಫ್ರೀ ಟ್ರೇಡ್ ಏರಿಯಾ’ಗಳನ್ನು ಇವರು ಸ್ಥಾಪಿಸಿದರು. ಇದು ಆರ್ಥಿಕತೆಗೆ ಚೈತನ್ಯವನ್ನು ನೀಡಿತು. ಇಷ್ಟು ಮಾತ್ರವಲ್ಲದೆ ಅಂತಾರಾಜ್ಯ ಸಂಬಂಧಗಳನ್ನೂ ಸುಧಾರಿಸುವತ್ತ ಮುಂದಡಿ ಇಟ್ಟರು. ಇದು ಆರ್ಥಿಕವಾಗಿ ದೇಶಕ್ಕೆ ಧನಾತ್ಮಕ ಪರಿಣಾಮವನ್ನು ನೀಡಿತು.
ಬೆಂಜಮಿನ್ ನೇತಾನ್ಯಾಹು
ಇಸ್ರೇಲ್‌ನ ಪ್ರಧಾನ ಮಂತ್ರಿ
ಬೆಂಜಮಿನ್ ನೇತಾನ್ಯಾಹು ಅವರು ಎರಡು ಅವಧಿಗಳ ಕಾಲ ದೇಶವನ್ನು ಮುನ್ನಡೆಸಿದವರು. 1996ರಿಂದ 1999 ಮತ್ತು 2009ರ ಬಳಿಕ
ಇಸ್ರೇಲ್‌ನ ಪ್ರಧಾನಿಯಾಗಿದ್ದಾರೆ. ನೇತಾನ್ಯಾಹು ಗೆಲುವಿಗೆ ಆ ದೇಶ ಕೈಗೊಂಡ ಭದ್ರತಾ ಕ್ರಮಗಳೇ ಕಾರಣ. ಗಡಿಯಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ಅಪಾರ ಪ್ರಮಾಣದ ಸಾವುನೋವುಗಳು ಹೆಚ್ಚಾಗುತ್ತಿದ್ದ ಸಂದರ್ಭ ಕೈಗೊಂಡ ಕೆಲವು ಭದ್ರತಾ ಕ್ರಮಗಳು ಹಲವು ಜೀವಗಳನ್ನು ಉಳಿಸಿದ್ದವು. ಇನ್ನು ಆರ್ಥಿಕ ಸುಧಾರಣೆಗಳೂ ಇವರ ಬೆನ್ನಿಗಿವೆ.
ಲೀ ಹೈನ್ ಲೂಂಗ್
ಲೀ ಹೈನ್ ಲೂಂಗ್ ಅವರು ಸುಂದರ ದೇಶ ಸಿಂಗಾಪುರದ ಪ್ರಧಾನ ಮಂತ್ರಿಯಾಗಿದ್ದಾರೆ. 2004ರಲ್ಲಿ ಅಧಿಕಾರ ಸ್ವೀಕರಿಸಿದ ಇವರು ಸದ್ಯ ಪದದಲ್ಲಿ ಇದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.