Sullia: ಮಾಲೆಂಗಿರಿಯಲ್ಲಿ ತಾತ್ಕಾಲಿಕ ಸಂಪರ್ಕ ಸೇತುವೆಯೂ ಕುಸಿತ

ಎಡಮಂಗಲ-ಅಲೆಕ್ಕಾಡಿ ಸಂಪರ್ಕ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್‌

Team Udayavani, Sep 4, 2024, 12:57 PM IST

Sullia: ಮಾಲೆಂಗಿರಿಯಲ್ಲಿ ತಾತ್ಕಾಲಿಕ ಸಂಪರ್ಕ ಸೇತುವೆಯೂ ಕುಸಿತ

ಸುಳ್ಯ: ಸುಳ್ಯ ತಾಲೂಕಿನ ಅಲೆಕ್ಕಾಡಿ ಹಾಗೂ ಕಡಬ ತಾಲೂಕಿನ ಎಡ ಮಂಗಲ ಸಂಪರ್ಕದ ಜಿಲ್ಲಾ ಮುಖ್ಯ ರಸ್ತೆಯ ಎಡಮಂಗಲ ಸಮೀಪದ ಮಾಲೆಂಗಿರಿ ಎಂಬಲ್ಲಿ ಸೇತುವೆ ಕುಸಿತದಿಂದಾಗಿ ಮೋರಿ ಅಳವಡಿಸಿ ತಾತ್ಕಾಲಿಕವಾಗಿ ಲಘು ವಾಹನ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈಗ ನಿರಂತರ ಮಳೆಗೆ ಮೋರಿಯಲ್ಲಿ ಮಣ್ಣು ಕುಸಿದಿದ್ದು, ಈ ರಸ್ತೆಯಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಅಲೆಕ್ಕಾಡಿ- ಎಡಮಂಗಲ- ಪುಳಿಕುಕ್ಕು ಜಿಲ್ಲಾ ಮುಖ್ಯ ರಸ್ತೆಯ ಮಾಲೆಂಗಿರಿ ಎಂಬಲ್ಲಿನ ಸೇತುವೆ ಕೆಲವು ದಿನಗಳ ಹಿಂದಿನ ಮಳೆಗೆ ಕುಸಿತಗೊಂಡಿತ್ತು, ವಾಹನ ಸಂಚಾರಕ್ಕೆ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ಸೇತುವೆ ತೆರವು ಮಾಡಿ, ಮೋರಿ ಅಳವಡಿಸಿ ರಸ್ತೆ ಸಂಪರ್ಕ ಕಲ್ಪಿಸಿ ಲಘು ವಾಹನ, ದ್ವಿಚಕ್ರ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಸೋಮವಾರದ ಮಳೆಗೆ ಮೋರಿಯ ಮಣ್ಣು ಮತ್ತೆ ಕುಸಿದು ಇದೀಗ ಸಂಪರ್ಕ ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮೊದಲೇ ಸಂಚಾರ ಸ್ಥಗಿತ ಮಾಡುವಂತೆ ಲೋಕೋ ಪಯೋಗಿ ಇಲಾಖೆಯಿಂದಲೂ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಅವರೂ ಸಂಚಾರ ನಿರ್ಬಂಧಿಸಿ ಆದೇಶಿಸಿದ್ದರು. ಪರ್ಯಾಯ ಮಾರ್ಗವಾಗಿ ಮಹಾಕಾಳಿ- ಕಲ್ಲೆಂಬಿ- ಪೊಟ್ರೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿತ್ತು.

ಸಂಕಷ್ಟದಲ್ಲಿ ಎಡಮಂಗಲದ ಜನತೆ
ಎಡಮಂಗಲ ಕಡಬ ತಾಲೂಕು ವ್ಯಾಪ್ತಿಯಲ್ಲಿದ್ದು ಎಡಮಂಗಲದ ಜನರು ಅಲೆಕ್ಕಾಡಿ ಹಾಗೂ ಅಲೆಕ್ಕಾಡಿ ಭಾಗದವರು ಎಡಮಂಗಲ ಭಾಗಕ್ಕೆ ಸಂಚರಿಸುವ ಪ್ರಮುಖ ರಸ್ತೆಯಲ್ಲಿ ನಿರ್ಬಂಧ ಮಾಡಲಾಗಿರುವುದರಿಂದ ಎಡಮಂಗಲದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಮಾರ್ಗದಿಂದ ಸಂಚರಿಸುತ್ತಿದ್ದ ಸರಕಾರಿ ಬಸ್‌ ಓಡಾಟ ನಿಲ್ಲಿಸಲಾಗಿದ್ದು, ಒಂದೆರಡು ಬಸ್‌ ಕಾಣಿಯೂರಿನಿಂದ ಎಡಮಂಗಲ ಮೂಲಕ ಸಂಚರಿಸುತ್ತಿದೆ. ಆದರೂ ಹೆಚ್ಚಿನ ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಖಾಸಗಿ ವಾಹನ ಬಳಕೆ, ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ರಸ್ತೆ ಸೂಚಿಸಿದ್ದರೂ ಸುತ್ತು ಬಳಸಿ ಹಾಗೂ ಅಧಿಕ ವೆಚ್ಚ ಬಳಸಿ ಸಂಚರಿಸಬೇಕಾಗಿದೆ.

ಜತೆಗೆ ಕಾಣಿಯೂರು ಅಥವಾ ಪಂಜ ಮೂಲಕ ಸುತ್ತು ಬಳಸಿ ಸಂಚರಿಸಬೇಕಾಗಿದೆ. ಸದ್ಯಕ್ಕೆ ಎಡಮಂಗಲದಿಂದ ಅಲೆಕ್ಕಾಡಿ ಭಾಗಕ್ಕೆ ಹಾಗೂ ಅಲೆಕ್ಕಾಡಿ ಭಾಗದಿಂದ ಎಡಮಂಗಲ ಭಾಗಕ್ಕೆ ದಿನನಿತ್ಯ ಸಂಚರಿಸುತ್ತಿದ್ದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಥಳೀಯ ಶಾಲೆ, ಅಂಗನವಾಡಿ ತೆರಳುವವರು, ಸ್ಥಳೀಯವಾಗಿ ಸಂಚರಿ ಸುವವರಿಗೂ ತೀವ್ರ ಸಂಕಷ್ಟ ಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಇಲ್ಲಿ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅಧಿಕಾರಿಗಳು, ಶಾಸಕರು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಮಳೆ ಮುಗಿಯುವವರೆಗೆ ಕಾಮಗಾರಿ ಆರಂಭ ಕಷ್ಟ ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ. ಅಲ್ಲಿಯವರೆಗೆ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಟಾಪ್ ನ್ಯೂಸ್

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.