ಬೇಸಿಗೆಯಲ್ಲಿ ಚರ್ಮದ ಆರೈಕೆ


Team Udayavani, Mar 29, 2019, 6:00 AM IST

19

ಬಿರು ಬೇಸಿಗೆಯಲ್ಲಿ ಕೆಲವು ಚರ್ಮದ ತೊಂದರೆಗಳು ವಿಶೇಷವಾಗಿ ಕಾಡುತ್ತವೆ. ಮನೆಯಲ್ಲೇ ಆಹಾರ, ವಿಹಾರ, ಗೃಹೌಷಧಿ ಹಾಗೂ ಗೃಹೋಪಚಾರಗಳೊಂದಿಗೆ ಬೇಸಿಗೆಯ ಚರ್ಮದ ತೊಂದರೆಗಳನ್ನು ನಿವಾರಣೆ ಮಾಡಿ, ಆರೋಗ್ಯಪೂರ್ಣವಾಗಿರಬಹುದು.

ಬೇಸಿಗೆಯ ಮೊಡವೆ
ಬೇಸಿಗೆಯಲ್ಲಿ ಅಧಿಕ ಬೆವರುವುದರಿಂದ ಬೆವರಿನೊಂದಿಗೆ ಧೂಳು, ಕೊಳೆ, ಬ್ಯಾಕ್ಟೀರಿಯಾ ಜೊತೆಗೂಡಿ ಒಂದೇ ಬಾರಿ ಮುಖವಿಡೀ ಮೊಡವೆ ಉಂಟಾಗುತ್ತದೆ. ತೈಲಯುಕ್ತ ಚರ್ಮದವರಲ್ಲಿ ಈ ಸಮಸ್ಯೆ ಅಧಿಕ.

*ಮುಖದ ಬೆವರನ್ನು ಶುದ್ಧ ಕರವಸ್ತ್ರದಿಂದ ಒರೆಸಿ ಕೊಳ್ಳುವುದರ‌ ಜೊತೆಗೆ ಆಗಾಗ್ಗೆ ತಣ್ಣೀರಲ್ಲಿ ಮುಖ ತೊಳೆಯಬೇಕು.
*ಮುಖಕ್ಕೆ ಲೇಪಿಸುವ ಕ್ರೀಮ್‌, ಲೋಶನ್‌ಗಳಲ್ಲಿ ತೈಲಾಂಶ ಇಲ್ಲದಿರುವ “ಆಯಿಲ್‌ ಫ್ರೀ’ ಅಥವಾ “ಆಯಿಲ್‌ ಬ್ಯಾಲೆನ್ಸ್‌’ ಆಗಿರುವ ಕ್ರೀಮ್‌, ಲೋಶನ್‌ ಬಳಸಬೇಕು.
*ಕಿತ್ತಳೆರಸ, ಜೇನು, ಸೌತೆರಸ ಹಾಗೂ ಗುಲಾಬಿ ಜಲಗಳ ಮಿಶ್ರಣವನ್ನು ದಿನಕ್ಕೆ 1-2 ಬಾರಿ ಲೇಪಿಸಿ 15 ನಿಮಿಷಗಳ ಬಳಿಕ ಮುಖ ತೊಳೆದರೆ ಬೇಸಿಗೆಯ ಮೊಡವೆ ಹಾಗೂ ಕಲೆಗಳು ನಿವಾರಣೆ ಆಗಿ ಮುಖ ಹೊಳೆಯುತ್ತದೆ.
*ನಿತ್ಯ 3-5 ಲೀಟರ್‌ಗಳಷ್ಟು ನೀರು ಸೇವಿಸಬೇಕು. ತಾಜಾ ಹಣ್ಣಿನ ಹಾಗೂ ತರಕಾರಿಗಳ ಸೇವನೆ ಹಿತಕರ.
ಫಾಲಿಕ್ಯುಲೈಟಿಸ್‌ ಎಂಬ ಚರ್ಮದ ಕಾಯಿಲೆ
ಬೇಸಿಗೆಯಲ್ಲಿ ಅಧಿಕ ಚರ್ಮದ ರಂಧ್ರ ಅಂದರೆ “ಫಾಲಿಕಲ್‌’ ಗಳಲ್ಲಿ ವಿವಿಧ ಕಾರಣಗಳಿಂದ ಸೋಂಕು ಉಂಟಾಗಿ ತುರಿಕೆ ಹಾಗೂ ಕೆಂಪಾಗಿರುವ ಗುಳ್ಳೆಗಳು ಎಲ್ಲೆಡೆ ಚರ್ಮವನ್ನು ಆವರಿಸುತ್ತವೆ.
*ತೀರ ಬಿಸಿಯಿಲ್ಲದ ನೀರಿನಲ್ಲಿ ಅಂದರೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಚಂದನದ ಹುಡಿ ಹಾಗೂ ಗುಲಾಬಿ ಪಕಳೆಗಳನ್ನು ಹಾಕಿಟ್ಟು , ಆ ನೀರಿನಲ್ಲಿ ಸ್ನಾನ ಮಾಡಬೇಕು.
*ಒಂದು ದಿನ ಬಳಸಿದ ಬೆವರಿನಿಂದ ಕೂಡಿದ ಬಟ್ಟೆಯನ್ನು ಮರುದಿನ ಬಳಸಬಾರದು.
*ಅಧಿಕ ಬೆವರು ಉಳ್ಳವರು ಬೆವರುನಿವಾರಕ ಪೌಡರ್‌ ಅಥವಾ ಚಂದನದ ಪುಡಿ ಲೇಪಿಸಿದರೆ ಹಿತಕರ.
*ವ್ಯಾಯಾಮ ಅಥವಾ ವರ್ಕ್‌ಔಟ್‌ ಮಾಡುವವರು ಸಡಿಲ, ತಿಳಿ ಬಣ್ಣದ, ಹತ್ತಿಯ ಬಟ್ಟೆ ಧರಿಸುವುದರ ಜೊತೆಗೆ ಕೆಲಸದ ಬಳಿಕ ಬಟ್ಟೆಗಳನ್ನು ಬದಲಿಸಬೇಕು. ಶ್ರಮ ನಿವಾರಣೆಗೆ ಬಿಸಿ ನೀರಿನಲ್ಲಿ ಸ್ನಾನಮಾಡುವವರಲ್ಲಿ “ಹಾಟ್‌ಟಬ್‌ ಫಾಲಿಕ್ಯುಲೈಟಿಸ್‌’ ಕಾಣಿಸಿಕೊಳ್ಳುತ್ತದೆ. ನೀರಿನಲ್ಲಿರುವ ಕ್ಲೋರಿನ್‌ ಹಾಗೂ ಆಮ್ಲಿàಯ ದ್ರವ್ಯಗಳ ವ್ಯತ್ಯಯದಿಂದ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಬಿಸಿನೀರಿನ “ಟಬ್‌ಬಾತ್‌’ ಬೇಸಿಗೆಯಲ್ಲಿ ಹಿತಕರವಲ್ಲ.
*ಅಕ್ಕಿಹಿಟ್ಟು , ಅರಸಿನ ಪುಡಿ, ಕಹಿಬೇವಿನರಸ ಬೆರೆಸಿ ಲೇಪಿಸಿ 20 ನಿಮಿಷದ ಬಳಿಕ ತೊಳೆದರೆ ಪರಿಣಾಮಕಾರಿ.
ಒಣ ಹಾಗೂ ಉರಿಯುಳ್ಳ ಚರ್ಮದ ತೊಂದರೆ ಬೇಸಿಗೆಯಲ್ಲಿ ಕಾಡುವ ಇನ್ನೊಂದು ಸಮಸ್ಯೆ. ಇದು ಬಿಸಿಲಿನಲ್ಲಿ ಕೆಲಸ ಮಾಡುವವರಲ್ಲಿ , ಈಜುಕೊಳದಲ್ಲಿ ಈಜಾಡಿದ ಬಳಿಕ ಹಾಗೂ ಹೆಚ್ಚು ಸಮಯ ಹವಾನಿಯಂತ್ರಿತ ಕೊಠಡಿಯಲ್ಲಿ ಕಳೆಯುವವರಲ್ಲಿ ಕಾಣಿಸಿಕೊಳ್ಳುತ್ತದೆ.
*ಬೇಸಿಗೆಯಲ್ಲಿ ಈಜುಕೊಳದಲ್ಲಿ ಈಜಾಡಿದ ಬಳಿಕ ಶುದ್ಧ ನೀರಿನಲ್ಲಿ ನೈಸರ್ಗಿಕ ಕ್ಲೆನ್ಸರ್‌ ಅಥವಾ ಬಾಡಿವಾಶ್‌ ಬಳಸಿ ಸ್ನಾನ ಮಾಡಬೇಕು.
*ಈಜಲು ಹೋಗುವಾಗಲೂ ಎಸ್‌ಪಿಎಫ್ 30 ಇರುವಂತಹ ಸನ್‌ಸ್ಕ್ರೀನ್‌ ಲೋಶನ್‌ ಬಳಸಬೇಕು.
*ಆ್ಯಂಟಿ ಬ್ಯಾಕ್ಕೀರಿಯಲ್‌ ಸೋಪ್‌, ಬಾಡಿವಾಶ್‌ ಹಾಗೂ ವಿವಿಧ ತೀಕ್ಷ್ಣ ಡಿಯೋಡೊರೆಂಟ್‌ಗಳು ಚರ್ಮವನ್ನು ಒಣಗಿಸುವುದರಿಂದ ಅವುಗಳನ್ನು ಬಳಸಕೂಡದು.
*ಬೇಸಿಗೆಯಲ್ಲೂ ಮಾಯಿಶ್ಚರೈಸರ್‌ (ಮೂಲಿಕೆ ಗಳ) ಬಳಸಿ ನಂತರ ಸ್ನಾನ ಮಾಡಿದರೆ ಹಿತಕರ.
ಮೆಲಾಸ್ಮಾ ತೊಂದರೆ
ಮುಖದಲ್ಲಿ ಅದರಲ್ಲೂ ಕೆನ್ನೆ , ಮೂಗು, ಹಣೆಯಲ್ಲಿ ಅಧಿಕ ಕಾಣಿಸಿಕೊಳ್ಳುವ ಬಿಸಿಲಿನಲ್ಲಿ ಗಾಢ ಕಂದು ಬಣ್ಣ ಪಡೆಯುವ ಚರ್ಮದ ತೊಂದರೆಯೇ ಮೆಲಾಸ್ಮಾ. ಬಿಸಿಲಿನಲ್ಲಿ ಹೋಗುವಾಗ 2 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್‌ ಬಳಸಬೇಕು. ಹ್ಯಾಟ್‌, ಛತ್ರಿ ಮೊದಲಾದವುಗಳನ್ನು ಬಳಸುವುದರಿಂದ ಅಧಿಕ ಬಿಸಿಲಿನಿಂದ ಉಂಟಾಗುವ ಮೆಲಾಸ್ಮಾ (ಬ್ಯಾಂಗಿನಂತಹ) ಕಲೆಗಳನ್ನು ತಡೆಗಟ್ಟಬಹುದು.
*ಸಮ ಪ್ರಮಾಣದ ನೀರು ಹಾಗೂ ಆ್ಯಪಲ್‌ ಸಿಡಾರ್‌ ವಿನೆಗರ್‌ ಮಿಶ್ರ ಮಾಡಿ ಲೇಪಿಸಿ 10 ನಿಮಿಷದ ಬಳಿಕ ತೊಳೆಯಬೇಕು. ನಿತ್ಯ ಲೇಪಿಸಿದರೆ ಹಿತಕರ.
*ನೀರುಳ್ಳಿ ರಸ ಹಾಗೂ ಆ್ಯಪಲ್‌ ಸಿಡಾರ್‌ ವಿನೆಗರ್‌ಗಳ ಸಮಪ್ರಮಾಣ ಮಿಶ್ರಣ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು.
*ಹಸಿ ಆಲೂಗಡ್ಡೆಯನ್ನು ಅರೆದು ಲೇಪಿಸಿದರೆ ಪರಿಣಾಮಕಾರಿ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.