Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
Team Udayavani, Jan 11, 2025, 12:09 AM IST
ಸುರತ್ಕಲ್: ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬಾಂಗ್ಲಾ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಅನರುಲ್ ಶೇಖ್ (25) ಬಂಧಿತ ಬಾಂಗ್ಲಾ ಪ್ರಜೆ.
ರಾಜ್ಯ ಆಂತರಿಕ ಭದ್ರತಾ ವಿಭಾಗ ಹಾಗೂ ಮಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಮುಕ್ಕದಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಆತನನ್ನು ವಶಕ್ಕೆ ತೆಗೆದುಕೊಂಡರು.
ಈತ ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಈತ ಮೂರು ವರ್ಷಗಳ ಹಿಂದೆ ಭಾರತ-ಬಾಂಗ್ಲಾ ಗಡಿರೇಖೆ ಲಾಲ್ ಗೋಲ್ ಮೂಲಕ ಒಳ ನುಸುಳಿದ್ದ. ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಮೂಲಕ ಆಗಮಿಸಿದ್ದ ಈತ ಮೊದಲು ಉಡುಪಿಯಲ್ಲಿ ಕೆಲಸ ಮಾಡಿಕೊಂಡಿದ್ದು ,ಬಳಿಕ ಮಂಗಳೂರಿಗೆ ಬಂದಿದ್ದ. ಭಾರತದ ಆಧಾರ್ ಸಹಿತ ಇತರ ದಾಖಲೆ ಮಾಡಲು ಈತ ಪ್ರಯತ್ನಿಸಿದ್ದನಾದರೂ ಅದರಲ್ಲಿ ಯಶ ಕಂಡಿರಲಿಲ್ಲ. ಖಚಿತ ಮಹಿತಿ ಮೇರೆಗೆ ದಾಳಿ ನಡೆಸಿ ಆತನನ್ನು ಬಂಧಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.