“ಸ್ವತ್ಛ ನಗರ ನಿರ್ಮಾಣ ಬಿಜೆಪಿ ಸಂಕಲ್ಪ’
ನಗರ ಪಂಚಾಯತ್ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ
Team Udayavani, May 26, 2019, 10:55 AM IST
ಸುಳ್ಯ: ನ.ಪಂ. ಚುನಾವಣೆಯಲ್ಲಿ ಬಹುಮತದೊಂದಿಗೆ ಆಡಳಿತಕ್ಕೆ ಬಂದು ಸ್ವತ್ಛ ಸುಂದರ ನಗರ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡುವುದೇ ಬಿಜೆಪಿ ಸಂಕಲ್ಪ ಎಂದು ಶಾಸಕ ಎಸ್. ಅಂಗಾರ ಅವರು ಹೇಳಿದರು.
ಬಿಜೆಪಿ ಚುನಾವಣ ಪ್ರಚಾರ ಕಚೇರಿ ಯಲ್ಲಿ ನ.ಪಂ. ಚುನಾವಣೆಗೆ ಸಂಬಂಧಿಸಿ ಬಿಜೆಪಿ ಪ್ರಣಾಳಿಕೆ ಬಿಡುಗ ಡೆಗೊಳಿಸಿ ಅವರು ಮಾತ ನಾಡಿದರು. ಎಲ್ಲ 20 ವಾರ್ಡ್ ಗಳಲ್ಲಿಯೂ ಬಿಜೆಪಿ ಅಭ್ಯ ರ್ಥಿಗಳು ಗೆಲುವು ಪಡೆ ಯುವ ವಿಶ್ವಾಸ ಇದೆ ಎಂದವರು ತಿಳಿಸಿದರು.
ಕೊರತೆಗೆ ಕಾಂಗ್ರೆಸ್ ಕಾರಣ
1930ರಿಂದ 1996ರ ತನಕ ನಗರ ಆಡಳಿತ ನಡೆಸಿದ್ದ ಕಾಂಗ್ರೆಸ್ ಮೂಲ ಸೌಕರ್ಯ ಒದಗಿಸಲು ಜಮೀನು ಮೊದ ಲಾದ ಸೌಲಭ್ಯ ಕಾದಿರಿಸದ ಪರಿಣಾಮದಿಂದ ಅಭಿವೃದ್ಧಿ ಯೋಜನೆ ಅನುಷ್ಠಾನಗಳಿಗೆ ಅಡ್ಡಿ ಉಂಟಾಗಿದೆ. ಅನಂತರ ಬಿಜೆಪಿ ಆಡಳಿತಕ್ಕೆ ಬಂದು ಪಾರ್ಕಿಂಗ್ ಸೌಲಭ್ಯ, ಬಸ್ ನಿಲ್ದಾಣಕ್ಕೆ ಸ್ಥಳಾವಕಾಶ, ಕೆಎಸ್‌ಆರ್‌ಟಿಸಿ ಡಿಪೋ, ಅಗ್ನಿಶಾಮಕ ದಳದ ಕಚೇರಿ ಮೊದಲಾದ ಸೌಲಭ್ಯಗಳ ಅನುಷ್ಠಾನಕ್ಕೆ ಸೂಕ್ತ ಸ್ಥಳಾವಕಾಶ, ಮೂಲಸೌಕರ್ಯ ಒದಗಿಸಿತ್ತು ಎಂದು ಅಂಗಾರ ಹೇಳಿದರು.
ಶಾಶ್ವತ ಯೋಜನೆಗಳು
ಪ್ರಣಾಳಿಕೆ ಅಂಶ ಪ್ರಸ್ತಾವಿಸಿದ ಅವರು, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ, ಗುಣಮಟ್ಟದ ವಿದ್ಯುತ್ ಪೂರೈಕೆ, ಘನ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ, ಒಳಚರಂಡಿ ಸುವ್ಯವಸ್ಥೆ ಗೊಳಿಸುವುದು, ಇ-ಆಡಳಿತ, ಆನ್‌ಲೈನ್ ಸೌಲಭ್ಯಕ್ಕೆ ಆದ್ಯತೆ ನೀಡಿ ಜನಸ್ನೇಹಿ ಕಚೇರಿಯನ್ನಾಗಿ ರೂಪಿಸುವುದು. ನಾಗರಿಕರಿಗೆ ತ್ವರಿತ ಸೇವೆ, ಭ್ರಷ್ಟಾಚಾರ ರಹಿತ ಆಡಳಿತ, ಸಕಾಲ ಯಶಸ್ವಿ ನಿರ್ವಹಣೆಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಅಲ್ಲಲ್ಲಿ ಕಿಂಡಿ ಅಣೆಕಟ್ಟು
ಇಪ್ಪತ್ತೈದು ಜನವಸತಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಮನೆ, ಆಸ್ಪತ್ರೆ, ಹೋಟೇಲು, ವ್ಯಾಪಾರ ಕೇಂದ್ರ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ನೀರು ಶುದ್ಧೀಕರಣ ಘಟಕ ಸ್ಥಾಪಿಸುವವರಿಗೆ ಪ್ರೋತ್ಸಾಹ, ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಳಕ್ಕಾಗಿ ಪಯಸ್ವಿನಿ ನದಿಗೆ ನಾಗಪಟ್ಟಣ, ಕಾಂತಮಂಗಲ, ಓಡಬೈ ಮತ್ತು ಕಂದಡ್ಕ ಹೊಳೆಗೆ ಕೊಡಿಯಾಲಬೈಲ್, ಮೊಗರ್ಪಣೆ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಒಳಚರಂಡಿ ಯೋಜನೆಯ ಸಮಗ್ರ ಅಭಿವೃದ್ಧಿ, ಕೊಳಚೆ ನೀರು, ದ್ರವ ತ್ಯಾಜ್ಯ ಸಹಿತ ಸಂಸ್ಕರಿಸಿ ಮರುಬಳಕೆ, ಇದಕ್ಕಾಗಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಕಸ ವಿಲೇ ಘಟಕ ಇನ್ನಿತರ ಯೋಜನೆ ಅನು ಷ್ಠಾನಿಸಲಾಗುವುದು ಎಂದರು.
ಕಾಂಗ್ರೆಸ್ ಗೆದ್ದಾಗ ಏಕೆ ಅನುಮಾನ ಬರಲಿಲ್ಲ?
ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಇವಿಎಂ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಂಗಾರ, 45 ವರ್ಷಗಳ ಕಾಲ ನಿರಂತರವಾಗಿ ದೇಶವನ್ನಾಳಿದ ಸಂದರ್ಭ ಆಗ ನಡೆದ ಚುನಾವಣೆ, ಫಲಿತಾಂಶದ ಬಗ್ಗೆ ಪಕ್ಷಗಳು ಸಂಶಯ ವ್ಯಕ್ತಪಡಿಸದೆ ಜನರ ತೀರ್ಪುನ್ನು ಗೌರವಿಸಿದ್ದವು. ಆದರೆ ಈಗ ಬಿಜೆಪಿ ಗೆದ್ದಾಗ ಕಾಂಗ್ರೆಸ್‌ಗೆ ಇವಿಎಂ ಮೇಲೆ ಸಂಶಯ ಬಂದಿರುವುದು ಸೋಲಿನ ಹತಾಶೆಯ ಸಂಕೇತ ಎಂದವರು ಟೀಕಿಸಿದರು.
ಹಕ್ಕುಪತ್ರ: ಸಕಾರಾತ್ಮಕ ಸ್ಪಂದನ
ಮಿಲಿಟ್ರಿ ಗ್ರೌಂಡ್‌ನಲ್ಲಿ ಹಕ್ಕುಪತ್ರ ರಹಿತ ಕುಟುಂಬಗಳಿಗೆ ಹಕ್ಕುಪತ್ರ ಒದಗಿಸುವ ಬಗ್ಗೆ ನಾವು ಪ್ರಯತ್ನ ಮಾಡಿದ್ದು, ಈ ಬಗ್ಗೆ ರಕ್ಷಣ ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಸಕರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಶಾಸಕ ಎಸ್.ಅಂಗಾರ ಹೇಳಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಪ್ರಮುಖರಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಪ್ರಕಾಶ್ ಹೆಗ್ಡೆ, ಪುಷ್ಪಾ ಮೇದಪ್ಪ, ಪುಷ್ಪಾವತಿ ಬಾಳಿಲ, ಆಶಾ ತಿಮ್ಮಪ್ಪ, ಸೋಮನಾಥ ಪೂಜಾರಿ, ವಿನಯ ಕಂದಡ್ಕ, ಹರೀಶ್ ಬೂಡುಪನ್ನೆ, ವೇದಾವತಿ ಮಾಣಿಬೆಟ್ಟು, ಗಿರೀಶ್ ಕಲ್ಲಗದ್ದೆ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
UGC; ಪದವಿ ಕಲಿಕೆ ಅವಧಿ ನಿರ್ಧಾರ ಆಯ್ಕೆ ಶೀಘ್ರ: ಚೇರ್ಮನ್ ಹೇಳಿದ್ದೇನು?
Bangladesh; ಚಿನ್ಮಯಿ ಕೃಷ್ಣದಾಸ್‌ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bullet train ದೇಶದಲ್ಲಿಯೇ ನಿರ್ಮಾಣ: ಸಂಸತ್ತಿಗೆ ಕೇಂದ್ರ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.