ಯುದ್ಧ ಸನ್ನದ್ಧ ಸ್ಥಿತಿ ವೇಳೆ ತೈವಾನ್‌ನ ರಕ್ಷಣಾ ಅಧಿಕಾರಿ ಸಾವು
Team Udayavani, Aug 6, 2022, 2:13 PM IST
ತೈಪೆ : ದ್ವೀಪ ರಾಷ್ಟ್ರ ತೈವಾನ್ ಸುತ್ತಲೂ ಚೀನ ಸೇನಾ ಶಕ್ತಿ ಪ್ರದರ್ಶಿಸುತ್ತಿರುವ ವೇಳೆಯಲ್ಲೇ ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥ ಶನಿವಾರ ಬೆಳಗ್ಗೆ ಹೋಟೆಲ್ ಕೋಣೆಯಲ್ಲಿ ಸಾವನ್ನಪ್ಪಿದ್ದಾರೆ.
ಸೇನಾ ಒಡೆತನದ ನ್ಯಾಶನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥ ಔ ಯಾಂಗ್ ಲಿ-ಹಸಿಂಗ್ ಅವರು ದಕ್ಷಿಣ ತೈವಾನ್‌ನ ಹೋಟೆಲ್ ಕೋಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಿಎನ್‌ಎ ವರದಿ ಮಾಡಿದೆ. ಅವರ ಸಾವು ಸಹಜವಾಗಿ ಅನುಮಾನಗಳಿಗೆ ಕಾರಣವಾದರೂ, 57 ವರ್ಷದ ಯಾಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೋಟೆಲ್ ಕೊಠಡಿಗೆ ಯಾರೂ ಒಳನುಗ್ಗುವ ಯಾವುದೇ ಸಾಧ್ಯತೆಗಳಿಲ್ಲ ಎಂದು ಸಿಎನ್ಎ ತಿಳಿಸಿದೆ. ವರದಿಯ ಪ್ರಕಾರ ಅವರಿಗೆ ಹೃದಯ ಕಾಯಿಲೆ ಇತ್ತು ಮತ್ತು ಸ್ಟೆಂಟ್ ಅಳವಡಿಸಲಾಗಿತ್ತು ಎಂದು ಅವರ ಕುಟುಂಬ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.