ಸಿರಿವಂತ ಶಾಸಕರು ವೇತನ ಬಿಟ್ಟುಕೊಡಲಿ: ತೇಜಸ್ವಿನಿಗೌಡ ಪ್ರಸ್ತಾವನೆ
Team Udayavani, Mar 9, 2022, 11:15 PM IST
ವಿಧಾನಪರಿಷತ್ತು: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಲ್‌ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ (ಗಿವ್ ಇಟ್ ಅಪ್) ಯೋಜನೆ ಮಾದರಿಯಲ್ಲಿ ಸ್ಥಿತಿವಂತ ಶಾಸಕರು ತಮ್ಮ ವೇತನವನ್ನು ಬಿಟ್ಟುಕೊಡಬೇಕು ಎಂಬ ಪ್ರಸ್ತಾವನೆಯನ್ನು ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಸದನದ ಮುಂದಿಟ್ಟರು.
ಬಜೆಟ್ ಮೇಲಿನ ಚರ್ಚೆ ವೇಳೆ ಶಾಸಕರ ವೇತನ ಹೆಚ್ಚಳದ ಬಗ್ಗೆ ಜೆಡಿಎಸ್ ಸದಸ್ಯ ಭೋಜೇಗೌಡ ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿದ ತೇಜಸ್ವಿನಿಗೌಡ, ಶಾಸಕರ ವೇತನದ ಬಗ್ಗೆ ಬೇರೆ-ಬೇರೆ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಸಿರಿವಂತ ರಾಜಕಾರಣಿಗಳು, ಯಾರಿಗೆಲ್ಲ ಭಗವಂತ ಅನುಕೂಲಗಳನ್ನು ಕೊಟ್ಟಿದ್ದಾನೆ, ಅವರೆಲ್ಲ ವೇತನವನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಬೇಕು. ಶಾಸಕರ ವೇತನವನ್ನು ಬೇರೊಬ್ಬರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂ ದು ಸಭಾಪತಿಯವರಲ್ಲಿ ಮನವಿ ಮಾಡಿದರು.
ಶಾಸಕರ ಪಿಂಚಣಿ ವ್ಯವಸ್ಥೆ ಹೇಗೆ ಬಂತು?
ಈ ವೇಳೆ ಹಿರಿಯ ಸದಸ್ಯ ಎಚ್. ವಿಶ್ವನಾಥ್ ಶಾಸಕರ ಪಿಂಚಣಿ ವ್ಯವಸ್ಥೆ ಹೇಗೆ ಜಾರಿಗೆ ಬಂತು ಎಂಬ ಬಗ್ಗೆ ಸದನಕ್ಕೆ ವಿವರಿಸಿದರು. 1978ರಲ್ಲಿ ಶಾಸಕರಿಗೆ 600 ರೂ. ವೇತನ, 50 ರೂ. ಸಭಾಭತ್ಯೆ ನೀಡಲಾಗುತ್ತಿತ್ತು. ಆಗ ಪಿಂಚಣಿ ಇರಲಿಲ್ಲ. ಒಬ್ಬ ಹುಡುಗ ಶಾಸಕರ ಭವನದಲ್ಲಿ ನನ್ನ ಕಾರು ತೊಳೆದು ದಿನ 2 ರೂ. ಕೇಳುತ್ತಿದ್ದ, ಒಮ್ಮೆ ಸಿಟ್ಟಿನಲ್ಲಿ ಅವನ ಕಪಾಳಕ್ಕೆ ಹೊಡೆದೆ. ಅವನು ಮಾಜಿ ಶಾಸಕರೊಬ್ಬರ ಮಗ ಎಂದು ಗೊತ್ತಾಯಿತು. ಮಾಜಿ ಶಾಸಕರೊಬ್ಬರ ಮಗನ ಆ ಸ್ಥಿತಿ ಕಂಡು ನನಗೆ ನೋವಾಯಿತು. ದೇವರಾಜ ಅರಸು ಅವರ ಬಳಿ ಕರೆದುಕೊಂಡು ಹೋಗಿ ಪರಿಸ್ಥಿತಿ ವಿವರಿಸಿದೆ.
ಇದನ್ನೂ ಓದಿ : ನನಗೆ ಯಾವುದೇ ರಾಹುಕಾಲ, ಗುಳಿಕ ಕಾಲವಿಲ್ಲ: ರೇವಣ್ಣ
ಅರಸು ಅವರ ಅಣತಿಯಂತೆ ನಾನು, ಜಯಚಂದ್ರ, ಕಡಿದಾಳ ದಿವಾಕರ ಶಾಸಕರ ಪಿಂಚಣಿ ಯೋಜನೆಯ ಕರಡು ಸಿದ್ಧಪಡಿಸಿದೇವು. ಮುಂದೆ ಗುಂಡೂರಾವ್ ಅವಧಿಯಲ್ಲಿ 1000 ಗೌರವಧನ, 350 ರೂ. ಪಿಂಚಣಿ ನಿಗದಿಯಾಯಿತು. ಗೌರವಧನ ಕಡಿಮೆ ಇದ್ದರೂ ಸಮಸ್ಯೆಯಿಲ್ಲ, ಪಿಂಚಣಿ ಹೆಚ್ಚು ಮಾಡಿ, ಮಾಜಿಯಾದ ಮೇಲೆ ಗೌರಯುತ ಬದಕು ನಡೆಸಲು ಅನುಕೂಲವಾಗುತ್ತದೆ ಎಂದು ಅನೇಕರು ಬೇಡಿಕೆ ಇಟ್ಟರು ಎಂದು ವಿಶ್ವನಾಥ್ ಹೇಳಿದರು.
ಸಿಎಂಗೆ ಪತ್ರ ಬರೆಯುತ್ತೇನೆ:
ಸಭಾಪತಿ ಬಸವರಾಜ ಹೊರಟ್ಟಿ ಮಧ್ಯ ಪ್ರವೇಶಿಸಿ, ನನ್ನ ಬಳಿ 20 ಮಂದಿ ಮಾಜಿ ಶಾಸಕರು ಬಂದು ತಮ್ಮ ಸಮಸ್ಯೆಗಳು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ನಾನು ಪತ್ರ ಬರೆಯುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.