ವನ್ಯಜೀವಿ ವಿಜ್ಞಾನದ ಅಸೂಯೆ ರಾಜಕಾರಣ


Team Udayavani, May 13, 2018, 6:00 AM IST

x-13.jpg

ಮೈಸೂರಿನಿಂದ ಹೊರಟ ತಕ್ಷಣ ಮಾಧ್ಯಮಗಳಿಂದ ಕರೆಗಳು ಬರಲು ಪ್ರಾರಂಭವಾಯಿತು. ಚಿರತೆ ಸತ್ತದ್ದೇಕೆ? ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು. ಮರುದಿನ ಬೆಳಿಗ್ಗೆ ಕೆಲ ಪತ್ರಿಕೆಗಳನ್ನು ನೋಡಿದಾಗ ಆಘಾತವಾಯಿತು. ಒಂದು ಪ್ರಮುಖ ಪತ್ರಿಕೆಯಲ್ಲಿ “”ರೇಡಿಯೋ ಕಾಲರ್‌ ಅಳವಡಿಸಿದ್ದರಿಂದಲೇ ಚಿರತೆ ಸಾವನ್ನಪಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದ್ದು, ಅದರ ಕಳೇಬರವನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ” ಎಂದು ಬರೆಯಲಾಗಿತ್ತು. ಚಿರತೆಯ ಕಳೇಬರವನ್ನು ಮೈಸೂರಿನಲ್ಲೇ ಸುಟ್ಟಿದ್ದರೂ ಹೀಗೆ ಪ್ರಕಟವಾಗಿತ್ತು.

ಪಶು ವೈದ್ಯಾಧಿಕಾರಿ ನಾಗರಾಜ್‌ ಮತ್ತು ಕರಿಕಾಳನ್‌ ಉಪಸ್ಥಿತ ರಿದ್ದರು. ಅವರೊಡನೆ ಸ್ವತಂತ್ರ ಸಾಕ್ಷಿಯಾಗಿ ಎರಡು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಸಹ ಕರೆಸಲಾಗಿತ್ತು. ಎಲ್ಲಾ ವಿಚಾರಗಳನ್ನು ದಾಖಲೆ ಮಾಡಿಕೊಂಡ ಅರಣ್ಯ ಇಲಾಖೆಯವರು ಪ್ರಾಣಿಯ ಮರಣೋತ್ತರ ಪರೀಕ್ಷೆ ಪ್ರಾರಂಭಿಸಲು ಆದೇಶಿಸಿದರು. ನನಗೆ ಸ್ವಲ್ಪ ಕುತೂಹಲಕಾರಿ ಅಂಶ ಕಂಡಿತು. ಪ್ರಾಣಿಯ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗಿತ್ತು, ಇದು ಸಾಮಾನ್ಯ ವಲ್ಲ. ನನಗೇನೋ ಅನುಮಾನವಾಯಿತು. ಪಶುವೈದ್ಯರ ಗಮನಕ್ಕೆ ತಂದೆ. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ನೋಡಿದರೆ ಪ್ರಾಣಿಯ ಯಕೃತೆಲ್ಲ ನೇರಳೆ ಬಣ್ಣಕ್ಕೆ ತಿರುಗಿದೆ. ಗಮನ ಸೆಳೆದ ಇನ್ನೊಂದು ವಿಚಾರವೆಂದರೆ ಚಿರತೆಯ ಹೊಟ್ಟೆಯಲ್ಲಿ ಅರ್ಧ ಜೀರ್ಣವಾದ ಮೇಕೆಯ ಮಾಂಸ ಮತ್ತು ಚರ್ಮವಿದೆ. ಎರಡೂ ವರೆಗೆ ಪ್ರಾರಂಭವಾದ ಮರಣೋತ್ತರ ಪರೀಕ್ಷೆ ಮುಗಿಯುವು ದರಲ್ಲಿ ಎರಡು ತಾಸು ತೆಗೆದುಕೊಂಡಿತು. ಮರಣೋತ್ತರ ಪರೀಕ್ಷೆಯ ನಂತರ ಚಿರತೆಯ ಕಳೇಬರ ಸುಡುವಾಗ ಬಹು ದುಃಖವಾಯಿತು. ಅಷ್ಟು ಸುಂದರವಾದ, ಶಾಂತವಾದ ಪ್ರಾಣಿ ಯನ್ನು ಅಂಥ ಸ್ಥಿತಿಯಲ್ಲಿ ನನ್ನಿಂದ ನೋಡಲಾಗಲಿಲ್ಲ. ಚಿರತೆಯ ದೇಹದ ಕೆಲ ಭಾಗಗಳನ್ನು ಮೈಸೂರಿನಲ್ಲೇ ಇದ್ದ ಪಶು ರೋಗ ನಿರ್ಣಯ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿಕೊಡಲಾಯಿತು.

ಅಲ್ಲಿದ್ದ ಕೆಲವರು ಚಿರತೆಯ ಸಾವಿನ ಸ್ಥಳದ ಬಗ್ಗೆ ಚಿತ್ರಗಳೊಡನೆ ವಿವರಿಸಿದರು. ಅರಣ್ಯ ಇಲಾಖೆಯವರಿಗೆ ಚಿರತೆಯ ಸಾವಿನ ಬಗ್ಗೆ ಮಾಹಿತಿ ಬಂದಾಗ ಅದು ಒಂದು ದೊಡ್ಡ ಹುಣಸೇಮರದ ರಂಬೆಯಲ್ಲಿ ತನ್ನ ಹಿಂದಿನ ಎಡಗಾಲು ಸಿಕ್ಕಿಸಿಕೊಂಡು ನೇತಾಡುತಿತ್ತು. ಅದರ ಸೊಂಟ ಮತ್ತು ಬೆನ್ನಿಗೆ ಹಗ್ಗ ಕಟ್ಟಿ ಕೆಳಗೆ ಇಳಿಸಲಾಗಿತ್ತು. ಆ ಚಿತ್ರಗಳನ್ನು ಸಹ ನನ್ನೊಟ್ಟಿಗೆ ಹಂಚಿಕೊಂಡರು. ಎಲ್ಲಾ ಕಾರ್ಯವಿಧಾನಗಳನ್ನು ಮುಗಿಸಿ ವಾಪಸ್ಸು ಹೊರಟೆ. ತಲೆಯಲ್ಲಿ ಚಿರತೆಯೇ ತುಂಬಿಕೊಂಡಿತ್ತು. ಪರೀಕ್ಷೆಯ ಫ‌ಲಿತಾಂಶ ಬರಲು ಕನಿಷ್ಠ ವಾರದಿಂದ ಹತ್ತು ದಿನಗಳಾದರೂ ಬೇಕಾಗಿತ್ತು. ತದನಂತರವೇ ಅದರ ಸಾವಿಗೆ ಕಾರಣ ತಿಳಿಯಲು ಸಾಧ್ಯ. 

ಮೈಸೂರಿನಿಂದ ಹೊರಟ ತಕ್ಷಣ ಮಾಧ್ಯಮಗಳಿಂದ ಕರೆಗಳು ಬರಲು ಪ್ರಾರಂಭವಾಯಿತು. ಚಿರತೆ ಸತ್ತದ್ದೇಕೆ? ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು. ಮರುದಿನ ಬೆಳಿಗ್ಗೆ ಕೆಲ ಪತ್ರಿಕೆಗಳನ್ನು ನೋಡಿದಾಗ ಆಘಾತವಾಯಿತು. ಒಂದು ಪ್ರಮುಖ ಪತ್ರಿಕೆಯಲ್ಲಿ “”ರೇಡಿಯೋ ಕಾಲರ್‌ ಅಳವಡಿಸಿದ್ದರಿಂದಲೇ ಚಿರತೆ ಸಾವನ್ನಪಿ ರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದ್ದು, ಅದರ ಕಳೇಬರವನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ” ಎಂದು ಬರೆಯಲಾಗಿತ್ತು. ಆದರೆ ಚಿರತೆಯ ಕಳೇಬರವನ್ನು ಮೈಸೂರಿನಲ್ಲೇ ಸುಟ್ಟಿದ್ದರೂ ಹೀಗೆ ಪ್ರಕಟವಾ ಗಿತ್ತು. ಇನ್ನೊಂದು ಪ್ರಮುಖ ಆಂಗ್ಲ ಪತ್ರಿಕೆಯಲ್ಲಿ ಚಿರತೆಯನ್ನು ಮರದ ಮೇಲಿನಿಂದ ಹಗ್ಗ ಕಟ್ಟಿ ಇಳಿಸುತ್ತಿರುವ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿ, ಚಿರತೆಯ ರೇಡಿಯೋ ಕಾಲರ್‌ ಮರದ ರೆಂಬೆಗೆ ಸಿಕ್ಕಿಕೊಂಡು ಅದರ ಕಳೇಬರಹ ತೂಗಾಡುತ್ತಿ ರುವಂತೆ ಅಭಿಪ್ರಾಯ ಬರುವ ಹಾಗೆ ಪ್ರಕಟಿಸಿದ್ದರು. ಈ ಸುದ್ದಿಗಳನ್ನು ಓದಿ ಮುಗಿಸುವ ಹೊತ್ತಿಗೆ ಸ್ನೇಹಿತರೊಬ್ಬರು ಫೋನಾಯಿಸಿ “”ಒಮ್ಮೆ ಫೇಸ್‌ಬುಕ್‌ ನೋಡು, ಏನೇನೊ ವಿಚಿತ್ರವಾಗಿ ಬರೆಯುತ್ತಿ¨ªಾರೆ” ಎಂದು ತಿಳಿಸಿದರು.  

ಅಂದೇ ನನಗೆ ಸೋಷಿಯಲ್‌ ಮೀಡಿಯಾದ ನಕಾರಾತ್ಮಕ ಶಕ್ತಿ ತಿಳಿದದ್ದು. 800 ಕಿಲೋಮೀಟರು ದೂರದ ಹೈದರಾಬಾದಿನಲ್ಲಿ ಕುಳಿತಿದ್ದ ಒಬ್ಬ ವನ್ಯಜೀವಿ ತಜ್ಞರು, ಶುಕ್ರವಾರ ಮೈಸೂರಿನ ಹತ್ತಿರ ರೇಡಿಯೋ ಕಾಲರ್‌ ಹಾಕಿದ್ದ ಚಿರತೆಯು ಮರದಿಂದ ನೇತಾಡುತ್ತಾ ಸಿಕ್ಕಿದೆ ಎಂಬ ತಪ್ಪು ತಲೆಬರಹವಿದ್ದ ಚಿತ್ರವನ್ನು(ಆಂಗ್ಲ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸಿದ ಸುದ್ದಿಯನ್ನು ಹಾಕಿ) ಹೀಗೆ ಪ್ರಾರಂಭಿಸಿದರು ಹೈದರಾಬಾದಿನ ತಜ್ಞೆ: “”ಪ್ರತಿದಿನವೂ ಹೀಗೆ ಪ್ರಾರಂಭವಾಗ ಬೇಕೇ?!  ಇದರ ಕಥೆಯೇನು?” 
ಇದರ ಹಿಂದೆ ಹತ್ತಾರು ಹೇಳಿಕೆಗಳು ಪ್ರಾರಂಭವಾದವು. ಮೈಸೂ ರಿನಿಂದ ಐದುನೂರು ಕಿಲೋಮೀಟರು ದೂರದ ಚೆನ್ನೈ ನಲ್ಲಿ ಕುಳಿತಿದ್ದ, ಸ್ವತಂತ್ರವಾಗಿ ಕೆಲಸ ಮಾಡುವ ಪತ್ರಕರ್ತೆ ಯೊ ಬ್ಬರು: “”ಮೇಲ್ನೋಟಕ್ಕೆ ಚಿರತೆ ತನ್ನನ್ನು ತಾನೇ ಮರಕ್ಕೆ ನೇಣು ಹಾಕಿಕೊಂಡಂತೆ ಕಾಣಿಸುತ್ತಿದೆ” ಎಂದು ಮೂದಲಿಸಿ ಬರೆದರು. 

ಇದಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತೆ ಮಹಾರಾಷ್ಟ್ರದ ಪುಣೆಯಲ್ಲಿ ಕುಳಿತಿದ್ದ, ಚಿರತೆಗಳ ಮೇಲೆ ಕೆಲಸ ಮಾಡುವ ವನ್ಯ ಜೀವಿ ವಿಜ್ಞಾನಿಯೊಬ್ಬರು: “”ಮರಣೋತ್ತರ ಪರೀಕ್ಷೆ ಯಲ್ಲಿ ಚಿರತೆ ಹಸಿವಿನಿಂದ ಸತ್ತಿತ್ತು ಎಂದು ಹೇಳುವ ಬಹು ಸಾಧ್ಯತೆಗಳಿವೆ” ಎಂದು ಬರೆದರು. ಉತ್ತರವಾಗಿ ಚೆನ್ನೈನ ಪತ್ರಕರ್ತೆ: “”ಆಮೇಲೆ ತಾನಾಗಿಯೇ ನೇಣು ಹಾಕಿ ಕೊಂಡಿತು?”

ಪುಣೆಯ ವಿಜ್ಞಾನಿ: “”ಅದರ ಹಿಂದಿನ ಕಾಲುಗಳಿಂದ” ಹೈದರಾಬಾದಿನ ತಜ್ಞೆ: “”ಇದ್ಯಾವುದೋ ಬಾಲಿವುಡ್‌ ಸಿನೆಮಾದ ಒಳಸಂಚಿನಂತೆ ಇದೆ -ಇದರಲ್ಲಿ ಇನ್ನೂ ಏನೋ ಹೆಚ್ಚಿನದ್ದು ಅಡಗಿದೆ. ವರ್ಷಗಳಿಂದ ಕೆಎಫ್.ಡಿ ಇಂತಹ ವಿಚಾರಗಳನ್ನು ಮುಚ್ಚಿಹಾಕುತ್ತಿದೆ” ಇನ್ನೊಬ್ಬ ತಜ್ಞ: “”ಇದು ಬಹಳ ಮುಜುಗರದ ಸಂಗತಿ. ಈ ನೆತ್ತರು ಹರಿಸುವ (ಬ್ಲಿಡಿ) ಕಾಯಕಗಳು ಯಾವಾಗ ಕೊನೆಗೊಳ್ಳುತ್ತವೆ?”   ಹೀಗೆ ಹಲವಾರು ಟೀಕೆಟಿಪ್ಪಣಿಗಳಿದ್ದವು.  ಅಂದು ಮತ್ತೆ ಮಾಧ್ಯಮದವರ ದೂರವಾಣಿ ಕರೆಗಳು ಪ್ರಾರಂಭವಾದವು. ದಯವಿಟ್ಟು ಮರಣೋತ್ತರ ಪರೀಕ್ಷೆಯ ಫ‌ಲಿತಾಂಶಗಳು ಬರುವವರೆಗೆ ಕಾಯೋಣವೆಂದರೆ “”ಇದೇನು ಸಾರ್‌? ಪುಣೆಯ ಚಿರತೆ ವಿಜ್ಞಾನಿಯೇ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಮಾತನಾಡುತ್ತಿದ್ದಾರೆ, ಅದಕ್ಕಿಂತ ತಜ್ಞರ ಅಭಿಪ್ರಾಯ ಬೇಕೇ?” ಎಂದು ಸವಾಲೊ ಡ್ಡಿದರು.  ಮರಣೋತ್ತರ ಪರೀಕ್ಷೆಯ ಫ‌ಲಿತಾಂಶ ಬರುವವರೆಗೆ ಹೆಚ್ಚು ಹೇಳಲಾಗುವುದಿಲ್ಲವೆಂದು ಸುಮ್ಮನಾದೆ. 
ಎಲ್ಲರನ್ನೂ ಪ್ರಚೋದಿಸುವಲ್ಲಿ ಮತ್ತು ಮಾಧ್ಯ ಮದವರನ್ನೆಲ್ಲ ದಾರಿ ತಪ್ಪಿಸುವಲ್ಲಿ ಯಶಸ್ವಿಯಾದ ಪುಣೆಯ ತಜ್ಞರು ಒಂದು ದಿನದ ನಂತರ ಮತ್ತೂಮ್ಮೆ ಫೇಸ್‌ಬುಕ್‌ನಲ್ಲಿ ಬರೆದರು: “”ಎವ್ರಿಒನ್‌ ರಿಲಾಕ್ಸ್‌, ಚಿರತೆಯು ಮರದ ಮೇಲೆಯೇ ಸತ್ತಿತ್ತು, ಅರಣ್ಯ ಇಲಾಖೆಯವರು ಅದನ್ನು ಕೆಳಗಿಳಿಸುವುದಕ್ಕಾಗಿ ಹಗ್ಗ ಹಾಕಿ¨ªಾರೆ. ಚಿತ್ರದ ತಲೆಬರಹ ತಪ್ಪಿದೆ. ಅದು ಮರದಿಂದ ನೇತಾಡುತ್ತಿರಲಿಲ್ಲ. ಒಂದು ಘಟನೆಯನ್ನು ಮಾಧ್ಯಮ ಹೇಗೆ ಬಿಂಬಿಸುತ್ತದೆ ಎಂಬುದನ್ನು ಇದು ತೋರುತ್ತದೆ” ಎಂದು ಹೇಳಿ ತಾವು ಮಾಡಿದ ಟೀಕೆಗಳನ್ನೆಲ್ಲ ಮಾಧ್ಯಮಗಳ ಮೇಲೆ ಸಾಗಹಾಕಿ ಜಾರಿಕೊಂಡುಬಿಟ್ಟರು. ಈ ವಿವೇಕ ಅವರು ಹಿಂದಿನ ದಿನ ಸಾಮಾಜಿಕ ಜಾಲತಾಣಗಳಲ್ಲಿ ಮೂದಲಿಕೆಯ ಹೇಳಿಕೆಗಳು ಕೊಡುವಾಗ ಇರಲಿಲ್ಲ. 

ಸಾಮಾಜಿಕ ತಾಣಗಳಲ್ಲಿ ಕೆಲ ತಜ್ಞರು ಕೊಡುವ ಹೇಳಿಕೆ ಗಳು ಎಷ್ಟು ಪಕ್ಷಪಾತ ಹಾಗೂ ಅವಿವೇಕದಿಂದ ಕೂಡಿರುತ್ತದೆ ಎಂಬುದನ್ನು ಈ ಚರ್ಚೆ ತೋರಿಸಿತ್ತು. ವಿಜ್ಞಾನಿಯಾದವರು ಯಾವುದೇ ವಿಚಾರವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ, ಅದರ ಹಿಂದಿರುವ ವಾಸ್ತವವನ್ನು ತಿಳಿದುಕೊಂಡು ಮಾತನಾಡ ಬೇಕು. ಆದರೆ ಅಂದು ಈ ವಿಜ್ಞಾನಿ ಸಿನಿಮೀಯ ರೀತಿಯಲ್ಲಿ ಎಲ್ಲರನ್ನೂ ಪ್ರಚೋದಿಸಿದ್ದನ್ನು, ದಾರಿತಪ್ಪಿಸಿದ್ದನ್ನು ನೋಡಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಮತಾಂಧತೆಯನ್ನು ಹಬ್ಬಿಸುವವರಿಗೂ ಇವರಿಗೂ ವ್ಯತ್ಯಾಸವೇನೂ ಇಲ್ಲ ಎಂದೆನಿಸಿ ಗಾಬರಿಯಾಯಿತು.  ಘಟನೆ ನಡೆದು ಹತ್ತು ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ಫ‌ಲಿತಾಂಶ ಹೊರಬಿದ್ದಿತ್ತು. ನನ್ನ ಆತಂಕ ನಿಜವಾಗಿತ್ತು. ಚಿರತೆ ಯನ್ನು ವಿಷಹಾಕಿ ಕೊಲ್ಲಲಾಗಿತ್ತು. ಚಿರತೆಯ ಹೊಟ್ಟೆ ಮತ್ತು ಯಕೃತ್ತಿ ನಲ್ಲಿ, ಪ್ರಧಾನವಾಗಿ ಇಲಿ ಪಾಷಾಣವಾಗಿ ಉಪಯೋಗಿ ಸುವ ಹಾಗೂ ಸುಲಭವಾಗಿ ದೊರಕುವ ಜಿಂಕ್‌ಫಾಸ್‌ಫೈಡ್‌ ವಿಷ ಪತ್ತೆಯಾಗಿತ್ತು. 

ಈಗ ನನಗೆ ಏನು ನಡೆದಿರಬಹುದೆಂದು ಸ್ವಲ್ಪ ಸ್ವಲ್ಪವಾಗಿ ಜಿಗ್‌ಸಾ ಪಸಲ್‌ನಂತೆ ಪ್ರಸಂಗಗಳನ್ನು ಜೋಡಿಸಲು ಸಾಧ್ಯ ವಾಯಿತು. ಬಹುಶಃ ಚಿರತೆ ಮೇಕೆಯನ್ನು ಹಿಡಿದು ಕೊಂದು ಹಾಕಿದೆ, ಅದನ್ನು ಕಂಡ ಯಾರೋ ಚಿರತೆ ಇರದಿದ್ದ ಸಮಯ ನೋಡಿ ಅಥವಾ ಅದನ್ನು ಓಡಿಸಿ ಸತ್ತ ಮೇಕೆಗೆ ವಿಷ ಹಾಕಿದ್ದಾರೆ. ತಿರುಗಿ ಬಂದ ಚಿರತೆ ಮೇಕೆಯನ್ನು ತಿಂದು ಮರದ ಮೇಲೆ ಹೋಗಿ ಕುಳಿತಿದೆ. ವಿಷ ಪರಿಣಾಮ ಬೀರಿ ಚಿರತೆಯ ಶ್ವಾಸಕೋಶ ವಿಫ‌ಲವಾಗಿ, ಅದು ಮರದ ಮೇಲೆಯೇ ಸತ್ತಿದೆ. ಸತ್ತ ಮೇಲೆ ಮರದ ಮೇಲಿಂದ ಉರುಳುವಾಗ ಅದರ ಕಾಲು ರಂಬೆಗೆ ಸಿಕ್ಕಿಹಾಕಿಕೊಂಡಿರಬಹುದು. ಅದು ಹಾಗೆ ಸಿಕ್ಕಿಹಾಕಿಕೊಂಡಿದ್ದೇ ಇಷ್ಟೆಲ್ಲಾ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿತು. 

ಚಿರತೆ ರೇಡಿಯೋ ಕಾಲರ್‌ನಿಂದಲೇ ಸತ್ತದ್ದು ಎಂದು ಬರೆದಿದ್ದ ಪ್ರಮುಖ ಕನ್ನಡ ಪತ್ರಿಕೆಯೊಂದರ ಪತ್ರಕರ್ತನಿಗೆ ಕರೆ ಮಾಡಿದೆ. ಚಿರತೆಯ ಸಾವಿನ ಕಾರಣವನ್ನು ತಿಳಿಸಿ, “”ನೀವು ಯಾಕೆ ಹಾಗೆ ಆತುರದಲ್ಲಿ ಬರೆದಿರಿ?” ಎಂದು ಕೇಳಿದರೆ. ಅದಕ್ಕೆ ಆತ “”ಸಾರ್‌, ಬುಡಕಟ್ಟು ಜನರನ್ನು ನಾಗರಹೊಳೆಯ ಕಾಡಿನಿಂದ ಪುನರ್ವಸತಿ ಮಾಡಲು ಹುಣುಸೂರಿನಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರಿನ ಸಂಸ್ಥೆಯೊಂದರ ಕಾರ್ಯಕರ್ತ ನನಗೆ ಹೀಗೆಯೇ ಆಗಿದೆಯೆಂದು ಹೇಳಿಬಿಟ್ಟರು, ಅವರನ್ನು ನಂಬಿ ಎಡವಿಬಿಟ್ಟೆ ಸಾರ್‌. ದಯವಿಟ್ಟೂ ಕ್ಷಮಿಸಿ” ಎಂದರು. ಯುವ ಪತ್ರಕರ್ತ ಪ್ರಚೋದನಕಾರಿ ಸುದ್ದಿ ಕೊಡುವ ಆಸೆಗೆ ಬಿದ್ದು ಬರೆದಿದ್ದಾರೆ ಎಂದು ಸುಮ್ಮನಾಗಿಬಿಟ್ಟೆ. (ಮುಂದೆ ಈ ಯುವ ಪತ್ರಕರ್ತ ನಮ್ಮ ಚಿರತೆ ಅಧ್ಯಯನದಲ್ಲಿ ಭಾಗಿ ಕೂಡ ಆಗಿದ್ದರು.) 

ಈ ಎಲ್ಲಾ ಘಟನೆಗಳು ವನ್ಯಜೀವಿ ವಿಜ್ಞಾನ ಮತ್ತು ಸಂರಕ್ಷಣೆ ಕ್ಷೇತ್ರದಲ್ಲಿನ ಅಸೂಯೆ, ರಾಜಕೀಯ, ಹಗೆತನಕ್ಕೆ ಹಿಡಿದ ಕನ್ನಡಿಯಾಗಿತ್ತು. ಮೈಸೂರಿನ ಚಿರತೆಯ ಸಾವನ್ನು ವಿವಾದಾ ಸ್ಪದವಾಗಿ ಕಾಣುವ ಹಾಗೆ ಮಾಡಿದ ವನ್ಯಜೀವಿ ತಜ್ಞರು, ಬುಡಕಟ್ಟು ಜನಾಂಗದವರ ಏಳಿಗೆಗೆ ಕೆಲಸ ಮಾಡುವ ಕಾರ್ಯಕರ್ತ ಮತ್ತು ಅವರುಗಳಿಗೆ ಉದ್ಯೋಗ ಕೊಟ್ಟ  ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ಹುಲಿ ತಜ್ಞರು ಕೆಲವೇ ತಿಂಗಳುಗಳಲ್ಲಿ ಇನ್ನೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿದರು. ದುರದೃಷ್ಟವೆಂದರೆ ಅವರೆಲ್ಲ ತಮ್ಮ ಪ್ರತಿಭೆ, ಸಂಪನ್ಮೂಲಗಳನ್ನು ವನ್ಯಜೀವಿ ಸಂರಕ್ಷಣೆಗೆ ವ್ಯಯಿಸಿದರೆ ವನ್ಯಜೀವಿಗಳಿಗೆ ಎಷ್ಟು ಅನುಕೂಲ ವಾಗುವುದು ಎಂದು ಯೋಚಿಸಿದಾಗ, ಎಷ್ಟು ಸಮಯ ವ್ಯರ್ಥ ಮಾಡುತ್ತಾರಲ್ಲ ಅನಿಸುತ್ತದೆ. 

ಪಿಂಕಿ ಸತ್ತು ಮೂರು ವರ್ಷವಾದರೂ ನಿನಾದ ಇಂದಿಗೂ “ಪಿಂಕಿಗೆ ಏನಾಯಿತು?’ ಎಂದು ಮುಗ್ಧತೆಯಿಂದ ಕೇಳುತ್ತಾನೆ. ಅವನಿಗೇನು ಉತ್ತರಕೊಡುವುದೆಂದು ನನಗೆ ಗೊತ್ತಿಲ್ಲ. ಅವನಿಗೆ ವನ್ಯಜೀವಿ ವಿಜ್ಞಾನದ ಅಸೂಯೆ ರಾಜಕಾರಣದ ಬಗ್ಗೆ ಹೇಗೆ ಹೇಳುವುದು? ವನ್ಯಜೀವಿ ವಿಜ್ಞಾನ, ಸಂರಕ್ಷಣೆಯತ್ತ ಬನ್ನಿ ಎಂದು ಯುವ ಪೀಳಿಗೆಗೆ ನಾವು ಹೇಗೆ ಉತ್ತೇಜಿಸುವುದು?

ಲೇಖನ ಸಂಬಂಧಿ ವಿಡಿಯೋ ನೋಡಲು ಈ ಲಿಂಕ್‌ ಟೈಪ್‌ ಮಾಡಿ: bit.ly/2rCMIhs

ಟಾಪ್ ನ್ಯೂಸ್

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

train-track

Mangaluru;ಹಳಿ ನಿರ್ವಹಣೆ: ರೈಲು ಸೇವೆ ವ್ಯತ್ಯಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

dw

Surathkal: ವ್ಯಕ್ತಿಯ ಮೃತದೇಹ ಪತ್ತೆ

1-koneru

Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.