ರಂಗಕಲೆ, ಪಠ್ಯೇತರ ಚಟುವಟಿಕೆಯಿಂದ ಪರಿಪೂರ್ಣ ವ್ಯಕ್ತಿತ್ವ: ಮುಂಡಾಜೆ
Team Udayavani, Jul 9, 2019, 5:11 AM IST
ಸುಬ್ರಹ್ಮಣ್ಯ: ರಂಗಭೂಮಿ ಸದಾ ಜೀವಂತವಾದುದು. ಪಠ್ಯದಲ್ಲಿ ಕಲಿಸಲಾಗದ ಜೀವನ ಪಾಠವನ್ನು ರಂಗಭೂಮಿ ಕಲಿಸುತ್ತದೆ. ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಲು ಪ್ರತಿ ವಿದ್ಯಾರ್ಥಿ ಪಠ್ಯೇತರ ಚಟುವಟಿಯಲ್ಲಾದರೂ ಒಳಗೊಳ್ಳುವುದು ಆವಶ್ಯಕ ಎಂದು ಕೆಎಸ್‌ಎಸ್ ಕಾಲೇಜು ಪೂರ್ವ ವಿದ್ಯಾರ್ಥಿ ದಿವಾಕರ ಮುಂಡಾಜೆ ಹೇಳಿದರು.
ಅವರು ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನಲ್ಲಿ ಸೋಮವಾರ ನಡೆದ ಕುಸುಮಸಾರಂಗ-2019 ಮತ್ತು ಐಕ್ಯೂಎಸಿ ಸಹಯೋಗದಲ್ಲಿ 27ನೇ ವರ್ಷದ ರಂಗ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜದ ಗೌರವಕ್ಕೆ ಪಾತ್ರರಾಗಲು ಪಠ್ಯೇತರ ಚಟುವಟಕೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದವರು ತಿಳಿಸಿದರು.
ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮೋಹನದಾಸ್ ರೈ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಬಾಲಕೃಷ್ಣ ಪೈ, ಕುಸುಮ ಸಾರಂಗದ ಸ್ಥಾಪಕ ನಿರ್ದೇಶಕ ತುಕಾರಾಮ್ ಯೇನೆಕಲ್ಲು, ಪೂರ್ವ ವಿದ್ಯಾರ್ಥಿ ರಾಮಚಂದ್ರ ಮುಖ್ಯ ಅತಿಥಿಗಳಾಗಿದ್ದರು.
ವಾಣಿಜ್ಯ ಶಾಸ್ತ್ರ ಉಪನ್ಯಾಸಕ ವಿನ್ಯಾಸ್ ಎಚ್. ವಂದಿಸಿದರು. ಲೋಹಿತ್ ಎಂ.ಡಿ. ವಂದಿಸಿದರು. ಬಳಿಕ ಕುಸುಮ ಸಾರಂಗ ವಿದ್ಯಾರ್ಥಿಗಳು ನಟಿಸಿದ ಪ್ರೊ| ಜಯಪ್ರಕಾಶ್ ಮಾವಿನಕುಳಿ ರಚಿಸಿದ ಅಭಿಯಾನ ನಾಟಕ ಪ್ರದರ್ಶನಗೊಂಡಿತು. ಉಪನ್ಯಾಸಕರು, ಪೋಷಕರು, ಪೂರ್ವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ ಕೆಎಸ್‌ಎಸ್ ಕಾಲೇಜು ರಂಗಭೂಮಿಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಲ್ಲಿ ನಿರ್ದೇಶನ ನೀಡುವಾಗ ಯಾವ ತೊಂದರೆ, ಕೊರತೆ ಹಾಗೂ ಆತಂಕ ಎದುರಾಗಿಲ್ಲ ಎಂದು ಅಭಿಪ್ರಾಯ ಪಟ್ಟ ನಿರ್ದೇಶಕಿ ದಾಕ್ಷಾಯಿಣಿ ಭಟ್, ಇತ್ತೀಚಿನ ದಿನಗಳಲ್ಲಿ ರಂಗಭೂಮಿಯನ್ನು ವ್ಯಾಪಾರ ಮೆಟ್ಟಿಲಾಗಿಸುವ ಪ್ರಯತ್ನ ನಡೆಯುತ್ತಿದೆ. ಎರಡು ಪ್ರದರ್ಶನ ನೀಡಿದ ಬಳಿಕ ರಂಗಭೂಮಿ ಕಲಾವಿದರು ಸಿನೆಮಾದಲ್ಲಿ ಹಾರಿ ಅಲ್ಲಿ ಬಣ್ಣ ಹಚ್ಚುತ್ತಾರೆ. ಬಳಿಕ ರಂಗಭೂಮಿಯನ್ನೇ ಮರೆಯುತ್ತಾರೆ. ಇದು ಬೇಸರದ ಸಂಗತಿ ಎಂದರು.
ಪ್ರಸ್ತಾವನೆಗೈದ ಕಾಲೇಜು ಪ್ರಾಂಶುಪಾಲ ಪ್ರೊ| ಉದಯಕುಮಾರ್ ಕೆ. ಅವರು ನಾಟಕವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಫೂರ್ತಿಯನ್ನು ತುಂಬುತ್ತದೆ. ಅದೇ ಉದ್ದೇಶವಿರಿಸಿ ಕಾಲೇಜಿನಲ್ಲಿ ಆರಂಭಗೊಂಡ ನಾಟಕ ರಂಗ ಘಟಕ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.