Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Team Udayavani, Jan 5, 2025, 7:45 PM IST
ಹೈದರಾಬಾದ್: ಇತ್ತೀಚಿನ ಚಿತ್ರ ”ಪುಷ್ಪ 2 ” ಪ್ರಥಮ ಪ್ರದರ್ಶನದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯೊಬ್ಬರು ದುರಂತ ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿರುವ ನಟ ಅಲ್ಲು ಅರ್ಜುನ್ ಅವರು ಜಾಮೀನು ಷರತ್ತುಗಳ ಭಾಗವಾಗಿ ರವಿವಾರ(ಜ5) ಪೊಲೀಸರ ಮುಂದೆ ಹಾಜರಾದರು.
ಚಿಕ್ಕಡಪಲ್ಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಮುಂದೆ ಹಾಜರಾಗಿ, ನ್ಯಾಯಾಲಯದ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಮರಳಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿ ಸಂಖ್ಯೆ 11 ಅಲ್ಲು ಅರ್ಜುನ್ ಅವರಿಗೆ ನಗರ ನ್ಯಾಯಾಲಯವು ಜನವರಿ 3 ರಂದು ಸಾಮಾನ್ಯ ಜಾಮೀನು ನೀಡಿತ್ತು. ನ್ಯಾಯಾಲಯದ ನಿರ್ದೇಶನದಂತೆ, ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ನಡುವೆ ಎಸ್‌ಎಚ್‌ಒ, ಚಿಕ್ಕಡಪಲ್ಲಿ ಪೊಲೀಸ್ ಠಾಣೆಯ ಮುಂದೆ ಹಾಜರಾಗಬೇಕಾಗುತ್ತದೆ. ಎರಡು ತಿಂಗಳ ಅವಧಿಗೆ ಅಥವಾ ಚಾರ್ಜ್ ಶೀಟ್ ಸಲ್ಲಿಸುವವರೆಗೆ ಈ ರೀತಿ ಮಾಡಬೇಕಾಗುತ್ತದೆ.
ಪ್ರಾಣ ಕಳೆದುಕೊಂಡ ಮಹಿಳೆಯ ಎಂಟು ವರ್ಷದ ಪುತ್ರ ಗಾಯಗೊಂಡಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲು ಅರ್ಜುನ್ ಆಸ್ಪತ್ರೆಗೆ ಭೇಟಿ ನೀಡಲು ಉದ್ದೇಶಿಸಿದ್ದರು ಆದರೆ, ಆಸ್ಪತ್ರೆಯ ಶಾಂತಿಯುತ ಪರಿಸರಕ್ಕೆ ಭಂಗ ತರುವಂತಹ ಸಾಧ್ಯತೆಗಳಿದ್ದು, ಭೇಟಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳುವಂತೆ ಪೊಲೀಸರು ಅವರಿಗೆ ಸಲಹೆ ನೀಡಿದ ಕಾರಣ ಭೇಟಿ ರದ್ದು ಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor: ಮದ್ಯ ಸೇವಿಸಿ ರಂಪಾಟ; ನೆರೆಹೊರೆಯವರ ಮುಂದೆ ಅರೆನಗ್ನವಾಗಿ ಹೊರಳಾಡಿದ ಖ್ಯಾತ ನಟ
Kannappa Movie: ಕಣ್ಣಪ್ಪ ಮಾಡಲು ಡಾ.ರಾಜ್ ಸ್ಫೂರ್ತಿ
Actor Darshan: ದರ್ಶನ್ ಗನ್ ಲೈಸೆನ್ಸ್ ರದ್ದು ಮಾಡಿದ ಪೊಲೀಸರು
IT Raids: ʼಪುಷ್ಪ-2ʼ, ‘ಗೇಮ್ ಚೇಂಜರ್’ ನಿರ್ಮಾಪಕರ ನಿವಾಸ, ಕಚೇರಿ ಮೇಲೆ ಐಟಿ ರೇಡ್
ಶೂಟಿಂಗ್‌ನಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಜನಪ್ರಿಯ ನಟ ಹೃದಯಾಘಾತದಿಂದ ನಿಧನ