ಟೋಕಿಯೊ ಒಲಿಂಪಿಕ್ಸ್ ಸಂಘಟನ ಸಮಿತಿಗೆ ಯೊಶಿರೊ ಮೊರಿ ರಾಜೀನಾಮೆ
Team Udayavani, Feb 12, 2021, 3:58 AM IST
ಟೋಕಿಯೊ: “ಲಿಂಗ ತಾರತಮ್ಯ ಹೇಳಿಕೆ’ಯ ವಿವಾದಕ್ಕೆ ಸಿಲುಕಿದ ಟೋಕಿಯೊ ಒಲಿಂಪಿಕ್ಸ್ ಸಂಘಟನಾ ಸಮಿತಿಯ ಮುಖ್ಯಸ್ಥ, ಜಪಾನಿನ ಮಾಜಿ ಪ್ರಧಾನಿ ಯೊಶಿರೊ ಮೊರಿ (83) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ಮೊರಿ ಜಪಾನ್ ಒಲಿಂಪಿಕ್ಸ್ ಸಮಿತಿ ಸಭೆಯೊಂದರಲ್ಲಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. “ಮಹಿಳೆಯರು ಬಲವಾದ ಜಗಳಗಂಟಿ ಸ್ವಭಾವ ಹೊಂದಿರುತ್ತಾರೆ. ಒಬ್ಬರು ಮಾತನಾಡಲಿಕ್ಕೆ ಕೈಯೆತ್ತಿದರೆ, ಉಳಿದವರಿಗೆ ತಾವೂ ಮಾತನಾಡಬೇಕು ಎಂದೆನಿಸುತ್ತದೆ. ಪ್ರತಿಯೊಬ್ಬರೂ ಏನಾದರೂ ಹೇಳಿಯೇ ಮುಗಿಸುತ್ತಾರೆ. ಜಪಾನ್ ಒಲಿಂಪಿಕ್ಸ್ ಸಮಿತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿಸಬೇಕೆಂದು ಕೆಲವರು ಹೇಳಿದ್ದನ್ನು ಕೇಳಿದೆ. ಹಾಗೆ ಮಾಡುವುದಾದರೆ ಮಾತನಾಡುವ ಸಮಯಕ್ಕೆ ಒಂದು ಮಿತಿ ಹಾಕಬೇಕಾಗುತ್ತದೆ. ಇಲ್ಲವಾದರೆ ಸಭೆ ಮುಗಿಯುವ ಸಾಧ್ಯತೆಯೇ ಇಲ್ಲ…’ ಎಂದಿದ್ದರು.
ಕ್ಷಮೆ ಬಳಿಕ ರಾಜೀನಾಮೆ
ಮೊರಿ ಅವರ ಈ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆಯಿತು. ಅವರು ಲಿಂಗ ತಾರತಮ್ಯ ಆರೋಪವನ್ನೂ ಹೊರಬೇಕಾಯಿತು. ಈ ಕಾರಣಕ್ಕಾಗಿ ಒಲಿಂಪಿಕ್ಸ್ ಸಂಘಟನಾ ಸಮಿತಿಗೆ ಮೊರಿ ರಾಜೀನಾಮೆ ನೀಡುವಂತೆ ಒತ್ತಾಯ ಕೇಳಿಬಂದಿತ್ತು. ಕೊನೆಗೆ ಮೊರಿ ಕ್ಷಮೆಯಾಚಿಸುವುದರೊಂದಿಗೆ ವಿವಾದ ಇತ್ಯರ್ಥವಾಗಿತ್ತು.
ಗುರುವಾರದ ಬೆಳವಣಿಗೆಯೊಂದಲ್ಲಿ ಯೊಶಿತೊ ಮೊರಿ ತಮ್ಮ ಒಲಿಂಪಿಕ್ಸ್ ಸಂಘಟನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇವರ ಸ್ಥಾನಕ್ಕೆ ಜಪಾನ್ ಫುಟ್ಬಾಲ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ, ಒಲಿಂಪಿಕ್ ವಿಲೇಜ್ನ ಮೇಯರ್ ಸಬುರೊ ಕವಾಬುಚಿ ಅವರನ್ನು ನೇಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.