ವಿಧಿವಿಜ್ಞಾನದಲ್ಲಿ ವಿಷ ಶಾಸ್ತ್ರಕ್ಕೆ ಹೆಚ್ಚಿನ ಮಹತ್ವ: ಎನ್. ಶಶಿ ಕುಮಾರ್
Team Udayavani, Nov 7, 2022, 6:40 AM IST
ಮಂಗಳೂರು: ವಿಧಿ ವಿಜ್ಞಾನ ವೈದ್ಯಕೀಯದಲ್ಲಿ (ಫೂರೆನ್ಸಿಕ್ ಮೆಡಿ ಸಿನ್) ವಿಷ ಶಾಸ್ತ್ರ (ಟೋಕ್ಸಿ ಕೋಲಜಿ) ಅತ್ಯಂತ ಸಂಕೀರ್ಣ ವಿಷಯವಾಗಿದ್ದು, ಪ್ರಮುಖ ಅಂಗವಾಗಿದೆ. ಪ್ರಸ್ತುತ ಈ ವಿಭಾಗ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಫೂರೆನ್ಸಿಕ್ ಮೆಡಿಸಿನ್ ಮತ್ತು ಟೋಕ್ಸಿಕೋಲಜಿ ವಿಭಾಗದ ಆಶ್ರಯದಲ್ಲಿ ಇಂಡಿಯನ್ ಸೊಸೈಟಿಆಫ್ ಟೋಕ್ಸಿಕೋಲಜಿಯ (ಐಎಸ್‌ಟಿ) 16ನೇ ವಾರ್ಷಿಕ ರಾಷ್ಟ್ರೀಯ ಸಮಾ ವೇಶವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವನ್ನು ಉನ್ನತೀಕರಿಸಿಕೊಳ್ಳಿ
ಅಧ್ಯಕ್ಷತೆ ವಹಿಸಿದ್ದ ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ವಿಧಿವಿಜ್ಞಾನ
ವಿಭಾಗ ವೈದ್ಯಕೀಯ ಕ್ಷೇತ್ರದ ಮಹತ್ವದ ಭಾಗವಾಗಿದ್ದು ವಿಷಶಾಸ್ತ್ರ ಇದರ ಪ್ರಮುಖ ಅಂಗವಾಗಿ ಗುರುತಿಸಿಕೊಂಡಿದೆ. ಈ ಕ್ಷೇತ್ರದಲ್ಲಿ ಆಗಿರುವ, ಆಗುತ್ತಿರುವ ಆವಿಷ್ಕಾರಗಳು, ಸಂಶೋಧನೆಗಳ ಬಗ್ಗೆ ಜ್ಞಾನದ ಉನ್ನತೀಕರಣಕ್ಕೆ ಈ ರೀತಿಯ ಸಮಾವೇಶಗಳು ಮಹತ್ವದ ಪಾತ್ರವನ್ನು ವಹಿಸುತ್ತಿವೆ ಎಂದರು.
ಮಾಹೆ ಸಹ ಉಪಕುಲಪತಿ (ಮಂಗಳೂರು ಕ್ಯಾಂಪಸ್) ಡಾ| ದಿಲೀಪ್ ಜಿ. ನಾೖಕ್ ಮಾತನಾಡಿದರು. ಮಂಗಳೂರು ಕೆಎಂಸಿ ಡೀನ್ ಡಾ| ಬಿ. ಉಣ್ಣಿಕೃಷ್ಣನ್, ಇಂಡಿ ಯನ್ ಸೊಸೈಟಿ ಆಫ್ ಟೋಕ್ಸಿಕೋಲಜಿ ಅಧ್ಯಕ್ಷ ಡಾ| ಸುರೇಂದ್ರನಾಥ್ ಜೆನಾ ಸಂಸ್ಥೆಯ ಬಗ್ಗೆ ವಿವರಿಸಿದರು.
ಮಾಹೆ ಸಹ ಉಪಕುಲಪತಿ (ಮಣಪಾಲ ಕ್ಯಾಂಪಸ್) ಡಾ| ವೆಂಕಟ್ರಾಯ ಪ್ರಭು, ಮಂಗಳೂರು ಕೆಎಂಸಿ ಅಸೋಸಿಯೇಟೆಡ್ ಡೀನ್ ಡಾ| ಸುರೇಶ್ ಕುಮಾರ್ ಶೆಟ್ಟಿ, ಡಾ| ಪ್ರಮೋದ್ ಕುಮಾರ್, ಎಂಕಾಡ್ಸ್ ಡೀನ್ ಡಾ| ಅಶಿತಾ ಉಪ್ಪೂರು, ಅಸೋಸಿಯೇಟೆಡ್ ಡೀನ್‌ಗಳಾದ ಡಾ| ಪ್ರೇಮಲತಾ ಶೆಟ್ಟಿ, ಡಾ| ಜುನೈದ್ ಅಹಮ್ಮದ್, ಐಎಸ್‌ಟಿ ಕಾರ್ಯದರ್ಶಿ ಸೆಂಥಿಲ್ ಕುಮಾರ್, ಡಾ| ವಿ. ಪಿಳ್ಳೈ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.