INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Team Udayavani, Dec 23, 2024, 5:40 PM IST
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ರೋಮಾಂಚನಕಾರಿಯಾಗಿ ಸಾಗುತ್ತಿದೆ. ಸರಣಿಯ ನಾಲ್ಕನೇ ಟೆಸ್ಟ್ ಗೆ ಮುನ್ನಾ ಎರಡೂ ತಂಡಗಳು ಸಿದ್ದತೆಯಲ್ಲಿದೆ. ಇದರ ನಡುವೆಯೇ ಮೈದಾನದ ಹೊರಗಿನ ಪೈಪೋಟಿಯೂ ಹೆಚ್ಚಾಗುತ್ತಿದೆ. ಇದು ಉಭಯ ತಂಡಗಳ ನಡುವಿನ ಸರಣಿಯ ತೀವೃತೆಯನ್ನು ಹೆಚ್ಚಿಸುತ್ತಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಅಂತಾರಾಷ್ಟ್ರೀಐ ಕ್ರಿಕೆಟ್ ಕೌನ್ಸಿಲ್ (ICC), ಮತ್ತು ಭಾರತೀಯ ಕ್ರಿಕೆಟನ್ನು ತಲಾ ಒಂದು ಪದದಲ್ಲಿ ವ್ಯಾಖ್ಯಾನಿಸಲು ಕೇಳಲಾಯಿತು. ಆಸೀಸ್ ಆಟಗಾರರು ನೀಡಿದ ಉತ್ತರ ಇದೀಗ ಚರ್ಚೆಯ ವಿಚಾರವಾಗಿದೆ.
ಆಸೀಸ್ ಟೆಸ್ಟ್ ತಂಡದ ಉಪ ನಾಯಕ ಟ್ರಾವಿಸ್ ಹೆಡ್ ಬಳಿ ಬಿಸಿಸಿಐ ವ್ಯಾಖ್ಯಾನಿಸಲು ಕೇಳಲಾಯಿತು. ಅವರು ಬಿಸಿಸಿಐ ಅಂದರೆ ಆಡಳಿತಗಾರ (Ruler) ಎಂದು ಕರೆದರು.
ಹೆಡ್ ಅವರ ಪದದ ಆಯ್ಕೆಯು ಜಾಗತಿಕ ಕ್ರಿಕೆಟ್‌ನಲ್ಲಿ ಬಿಸಿಸಿಐ ಹೊಂದಿರುವ ಅಪಾರ ಪ್ರಭಾವವನ್ನು ಖಂಡಿತವಾಗಿಯೂ ಸೂಚಿಸುತ್ತದೆ. ಆರ್ಥಿಕ ಸಂಪನ್ಮೂಲಗಳು, ಐಪಿಎಲ್‌ನ ಅಗಾಧ ಯಶಸ್ಸಿನೊಂದಿಗೆ ಬಿಸಿಸಿಐ ಐಸಿಸಿಗಿಂತ ಹೆಚ್ಚಿನ ಹಿಡಿತವನ್ನು ಹೊಂದಿದೆ ಎಂದು ಹಲವರು ನಂಬುವ ಸ್ಥಾನಕ್ಕೆ ಏರಿದೆ.
🤭 Describe the BCCI, the ICC and Indian cricket in one word….
Don’t worry everyone, Smudge was just jokin! pic.twitter.com/AxJZJT15P8
— ABC SPORT (@abcsport) December 23, 2024
ಟ್ರಾವಿಸ್ ಹೆಡ್ ಹೇಳಿಕೆ ಅಲ್ಲಿಗೆ ನಿಲ್ಲಲಿಲ್ಲ. ಐಸಿಸಿ ಬಗ್ಗೆ ಕೇಳಿದಾಗ, ಅವರು “ದ್ವಿತೀಯ” ಎಂದು ಶೀಘ್ರವಾಗಿ ಹೇಳಿದರು. ಈ ಪದದ ಆಯ್ಕೆಯು ತೋರಿಕೆಯಲ್ಲಿ ಸರಳವಾಗಿದ್ದರೂ, ಕ್ರೀಡೆಯ ಭವಿಷ್ಯವನ್ನು ರೂಪಿಸುವಲ್ಲಿ ಬಿಸಿಸಿಐಯ ಪ್ರಾಬಲ್ಯಕ್ಕೆ ಐಸಿಸಿ ಎರಡನೇ ಸ್ಥಾನದಲ್ಲಿದೆ ಎಂದು ಸೂಚಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್ ಉತ್ತಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.