Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Team Udayavani, Dec 27, 2024, 2:14 AM IST
ನಮ್ಮ ಮನೆಗೆ ಬೆಂಕಿ ಬಿದ್ದರೆ ದುಃಖವಾಗುತ್ತದೆ, ಬೇರೆಯವರ ಮನೆಗೆ ಬೆಂಕಿ ಬಿದ್ದರೆ ದುಃಖವಾಗದು. ಇಲ್ಲಿ ದುಃಖವಾಗಲು ಬೆಂಕಿ ಕಾರಣವಲ್ಲ. “ನನ್ನ ಮನೆ’ ಎಂದು ತಿಳಿದುಕೊಂಡದ್ದು ಕಾರಣ. ಬೆಂಕಿಗಾಗಿಯೇ ಆಗಿದ್ದರೆ ಬೇರೆಯವರ ಮನೆಗೆ ಬೆಂಕಿ ಬಿದ್ದಾಗಲೂ ದುಃಖವಾಗಬೇಕಿತ್ತು. ನಮ್ಮ ಮಕ್ಕಳಿಗೆ ಬಹುಮಾನ ಬಂದಾಗ “ನಮ್ಮ ಮಕ್ಕಳು’ ಎಂಬ ಕಾರಣಕ್ಕೆ ಖುಷಿಯಾಗಿದೆಯೋ ಹಾಗೆ “ನನ್ನ ಮನೆ’ ಎನ್ನುವುದು ದುಃಖಕ್ಕೆ ಕಾರಣ.
“ನನ್ನ’ ಎಂಬುದನ್ನು ಬಿಟ್ಟರೆ ಬಹುಮಾನ ಬಂದರೂ ಖುಷಿಯಾಗುವುದಿಲ್ಲ. ಈ ಅಭಿಮಾನ ಮನಸ್ಸಿನಲ್ಲಿರುತ್ತದೆ. ದೇಹದಲ್ಲಿರುವುದನ್ನು ಆತ್ಮನು ತನ್ನದೆಂದು ತಿಳದುಕೊಂಡದ್ದರಿಂದ ಆತನಿಗೆ ಸುಖದುಃಖಗಳು ಬಂತು. ಯಾವುದೇ ಜಡವಸ್ತುವಿನಲ್ಲಿ ಭಾವನೆ, ಅಭಿಮಾನವಿಲ್ಲ. ನಮ್ಮ ಮನಸ್ಸಿನಲ್ಲಿ ಇದೆ. ನಮ್ಮ ಮನೆ, ನಮ್ಮ ಮಕ್ಕಳು, ನನ್ನ ದೇಹ ಎನ್ನುವುದರಿಂದ ದುಃಖವಾಗುತ್ತದೆ. “ನನ್ನದು’ ಎಂಬ ಭಾವ ಕಡಿಮೆಯಾಗುತ್ತದೋ ಆಗ ದುಃಖವೂ ಕಡಿಮೆಯಾಗುತ್ತದೆ. ಮನಸ್ಸಿಗೆ ಬೇಸರವಾದಾಗ ದೇಹಕ್ಕೆ ಹೆಚ್ಚು ಅಲಂಕಾರ ಮಾಡಿಕೊಳ್ಳುವುದಿಲ್ಲ. “ಒಂದು ದಿನ ನಮಗೂ ಹೀಗೆಯೇ’ ಎಂದು ಸುಮ್ಮನಿರುತ್ತೇವೆ. ಮತ್ತೆ “ನನ್ನ ದೇಹ ಹಾಗಿರಬೇಕು, ಹೀಗಿರಬೇಕು’ ಎಂದುಕೊಳ್ಳುತ್ತೇವೆ. ಅಂದರೆ ಅಭಿಮಾನ ಜಾಸ್ತಿಯಾದಷ್ಟು ಒತ್ತು ಕೊಡುತ್ತೇವೆ, ಕಡಿಮೆಯಾದಷ್ಟು ಉಪೇಕ್ಷೆ ಮಾಡುತ್ತೇವೆ. ಒಟ್ಟಾರೆ ಅಭಿಮಾನವೇ ಸುಖದುಃಖಗಳಿಗೆ ಮೂಲ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.