Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Team Udayavani, Jan 8, 2025, 1:00 AM IST
“ಅಪೌರುಷೇಯದಂತೆ ಪುಣ್ಯಪಾಪ ಉಂಟು ಎನ್ನುವುದನ್ನೇನೋ ಒಪ್ಪಿಕೊಳ್ಳೋಣ. ವೇದವನ್ನು ಏಕೆ ಒಪ್ಪಬೇಕು?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಂಶಯ ನಿವಾರಣೆಯಾಗಬೇಕಾದರೆ ಸಂಹಿತೆ ಬೇಕು. ಯಾವುದೇ ವ್ಯಕ್ತಿ ಏನನ್ನೇ ಹೇಳಿದರೂ ಅವರಲ್ಲಿ ಮನುಷ್ಯರಿಗೆ ಸಹಜವಾದ ಅಜ್ಞಾನಾದಿದೋಷ ಸಂಭವಿಸುವ ಸಾಧ್ಯತೆಗಳಿವೆ. ಪ್ರಶ್ನೆ ಇಲ್ಲದೆ ನಂಬಿದರೆ ಅದನ್ನು ದೃಢ ನಂಬಿಕೆ ಎಂದು ಹೇಳಲಾಗದು. ತತ್ತ್ವ ನಿಶ್ಚಯವಾಗದೆ ಇದ್ದರೆ ಯಾರು ಏನು ಹೇಳಿದರೂ ಕೇಳುವ ಸ್ಥಿತಿ ಇರುತ್ತದೆ. ನ್ಯೂಜೆರ್ಸಿಯಲ್ಲಿ ನಾವು ಒಂದು ಅಂತರ್ಧಮೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದೆವು.
ಆಗ ವಿವಿಧ ಮತಧರ್ಮಗುರುಗಳ ಜತೆ ಖಾಸಗಿಯಾಗಿ ಹೀಗೆಂದು ಪ್ರಶ್ನಿಸಿದ್ದೆವು. “ಜಗತ್ತಿನಲ್ಲಿ ಏಕೆ ಇಷ್ಟು ವ್ಯತ್ಯಾಸ ಬಂತು? ಒಬ್ಬ ಬಡವ, ಒಬ್ಬ ಶ್ರೀಮಂತ, ಒಬ್ಬ ರೋಗಿ, ಒಬ್ಬ ನಿರೋಗಿ, ಒಬ್ಬ ಕಳ್ಳ, ಇನ್ನೊಬ್ಬ ಸುಭಗ ಹೀಗೆ ಒಬ್ಬೊಬ್ಬ ಒಂದೊಂದು ರೀತಿ ಇದು ಏಕೆ ಬಂತು?’ ಎಂದು ಕೇಳಿದಾಗ ಯಾರಿಂದಲೂ ಸ್ಪಷ್ಟ ಉತ್ತರವಿರಲಿಲ್ಲ. “ಮುಂದಿನದ್ದನ್ನು ಯಾರೂ ಹೇಳುವುದು ಬೇಡವಪ್ಪ, ಈಗಿನದ್ದಾದರೂ ಹೀಗೇಕೆ’ ಎಂದರೆ ಉತ್ತರವಿಲ್ಲ. “ನಾವು ಅಷ್ಟು ಆಳವಾಗಿ ಚಿಂತನೆ ನಡೆಸಿಲ್ಲ’ ಎಂದರು. ಇದಕ್ಕೆ ಕರ್ಮ ಸಿದ್ಧಾಂತವನ್ನು ಒಪ್ಪದೆ ಹೋದರೆ ಬೇರೆ ದಾರಿಯೇ ಇಲ್ಲ. ಮನುಷ್ಯನಿಗೆ ಸಂಶಯಗಳಿರಲೇಬೇಕು, ಪ್ರಶ್ನೆ ಕೇಳಿದಾಗ ವಿಚಲಿತರಾಗಬಾರದು. ತಣ್ತೀ ನಿಶ್ಚಯವಾದ ಬಳಿಕವೇ ಧ್ಯಾನ ನಡೆಸಬೇಕು. “ಧ್ಯಾನಂ ನಿಶ್ಚಿತ ತಣ್ತೀಸ್ಯ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಯುವತಿ ನಾಪತ್ತೆ; ದೂರು ದಾಖಲು
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.