ಶ್ರೀಕೃಷ್ಣ ಮಠದಲ್ಲಿ ವಾರ್ಷಿಕ ಉದ್ವರ್ತನೆ
Team Udayavani, Jul 10, 2019, 5:08 AM IST
ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯಲ್ಲಿ ಮಹಾಭಿಷೇಕದ ಪೂರ್ವ ವರ್ಷಂಪ್ರತಿ ನಡೆಯುವ ಗರ್ಭಗುಡಿಯೊಳಗಿನ ಉದ್ವರ್ತನೆ (ಶುದ್ಧೀಕರಣ) ಮಂಗಳವಾರ ನಡೆಯಿತು.
ನಿತ್ಯ ಬೆಳಗ್ಗೆ ನಡೆಯುವ ನೈರ್ಮಾಲ್ಯ ವಿಸರ್ಜನೆ ಪೂಜೆ, ಉಷಃಕಾಲ ಪೂಜೆ, ಗೋಪೂಜೆ, ಅಕ್ಷಯಪಾತ್ರೆ ಪೂಜೆ, ಕನಕಾಭಿಷೇಕ, ಪಂಚಾಮೃತ ಅಭಿಷೇಕ ನಡೆದ ಬಳಿಕ ಉದ್ವರ್ತನೆ ನಡೆಯಿತು.
ಬೆಳಗ್ಗಿನ ಪೂಜೆಯು 3ಕ್ಕೆ ಆರಂಭ ವಾಗಿ 4.30ರ ವರೆಗೆ ನಡೆಯಿತು. ಬಳಿಕ ಶ್ರೀಕೃಷ್ಣ ವಿಗ್ರಹವಲ್ಲದೆ ಪಟ್ಟದ ದೇವರ ವಿಗ್ರಹಗಳನ್ನು ತೊಳೆಯಲಾಯಿತು. ದಿನದ 24 ಗಂಟೆಯೂ ತುಪ್ಪದ ದೀಪಉರಿಯುವ ಕಾರಣ ಕಟ್ಟಿದ ಕರಿಯನ್ನುಇದಕ್ಕಾಗಿಯೇ ತಯಾರಿಸಿದ ಪರಿಕರಗಳ ಮೂಲಕ ಶುಚಿಗೊಳಿಸಲಾಯಿತು.
ಸ್ವಾಮೀಜಿಯವರು ತಲೆ ಮೇಲೆ ಕಸ, ನೀರು ಬೀಳಬಾರದೆಂದು ಬಾಳೆಎಲೆಯ ಟೋಪಿಯನ್ನು ಧರಿಸಿದ್ದರು. ಇದೆಲ್ಲ ಕೆಲಸವನ್ನು ಮಠಾಧೀಶರೇ ಮಾಡುವುದು ವಿಶೇಷ. ಈ ಸಂದರ್ಭಶ್ರೀಕೃಷ್ಣನ ವಿಗ್ರಹಕ್ಕೆ ಬಿದಿರಿನ ಚಾಪೆ ಯನ್ನು ಬೋರಲು ಹಾಕಿಡಲಾಗುತ್ತದೆ. ಬಿದಿರಿನ ಕೋಲಿಗೆ ಹೊಸ ತೆಂಗಿನ ಗರಿಯ ಕಡ್ಡಿಗಳ ಪೊರಕೆ, ನೆಲ, ಗೋಡೆ ತೊಳೆಯಲು ತೆಂಗಿನ ಕಾಯಿಯ ಸಿಪ್ಪೆಯನ್ನು ಬಳಸಲಾಗುತ್ತದೆ. ಸುಮಾರು4.30ರಿಂದ 7.30ರ ವರೆಗೆ ಶುಚಿಗೊಳಿ ಸುವ ಕೆಲಸವನ್ನು ಮಠಾಧೀಶರು ನಡೆಸಿದರೆ, ಬಳಿಕ ಸುಮಾರು 9 ಗಂಟೆವರೆಗೆ ಹೊರಗೆ ಸಂಗ್ರಹವಾದ ತ್ಯಾಜ್ಯವನ್ನು ಮಠದ ಸಿಬಂದಿ ಶುಚಿ ಗೊಳಿಸಿದರು. ಅನಂತರ ಕಲಶಾಭಿಷೇಕ, ಅಲಂಕಾರ ಪೂಜೆ, ಅವಸರ ಸನಕಾದಿ ಪೂಜೆ, ಮಹಾಪೂಜೆ, ಉತ್ತರ ಪೂಜೆ ನಡೆಯಿತು.
ಪರ್ಯಾಯ ಶ್ರೀ ಪಲಿಮಾರು ಮಠದಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಶ್ರೀ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಶ್ರೀ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರುಹಾಗೂ ಮಠದ ಶಿಷ್ಯರು ಶುದ್ಧೀಕರಣ ವನ್ನು ಮಾಡಿದರು. ಗುರುವಾರ ವಾರ್ಷಿಕ ಮಹಾಭಿಷೇಕ ನಡೆಯಲಿದೆ. ಇದೇ ರೀತಿಯಲ್ಲಿ ಉದ್ವರ್ತನೆಯು ಎಲ್ಲ ಮಠಗಳಲ್ಲಿಯೂ ವಾರ್ಷಿಕ ಮಹಾಭಿಷೇಕದ ಸಮಯದಲ್ಲಿ ನಡೆಯುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.