US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!
ಆತ್ಮಚರಿತ್ರೆಯಲ್ಲಿ ಬರೆದುಕೊಳ್ಳಲಾಗಿರುವ "ಆ"ವಿಚಾರ ಬಹಿರಂಗ...!!!
Team Udayavani, Nov 14, 2024, 9:15 PM IST
ಹವಾಯಿ (ಯುಎಸ್): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ರಕ್ಷಣೆಗೆಂದು ನಿಯೋಜಿಸಲ್ ಪಟ್ಟಿದ್ದ ರಹಸ್ಯ ಸೇವಾ ಏಜೆಂಟ್ ಓರ್ವ ಮಾಡಬಾರದ ಸ್ಥಳದಲ್ಲಿ ಮಾಡಬಾರದ್ದನ್ನು ಮಾಡಿ ಅಮಾನತಾಗಿದ್ದಾನೆ. ಈ ವಿಚಾರ ತಡವಾಗಿ ವಿಶ್ವದೆಲ್ಲೆಡೆ ಸುದ್ದಿಯಾಗುತ್ತಿದೆ.
2022 ರಲ್ಲಿ ಹವಾಯಿಯಲ್ಲಿರುವ ಬೀಚ್ಫ್ರಂಟ್ ಬಂಗಲೆಯಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಕುಟುಂಬ ಇಲ್ಲದಿದ್ದಾಗ ಸೀಕ್ರೆಟ್ ಸರ್ವಿಸ್ ಏಜೆಂಟ್ ತನ್ನ ಗೆಳತಿಯನ್ನು ಕರೆತಂದು ದೈಹಿಕ ಸಂಪರ್ಕ ನಡೆಸಿದ್ದಾನೆ. ಕರ್ತವ್ಯದ ನಿಯಮ ಉಲ್ಲಂಘಿಸಿದ ಮತ್ತು ರಾಷ್ಟ್ರೀಯ ಭದ್ರತೆಗೆ ರಾಜಿ ಮಾಡಿಕೊಂಡ ಕಾರಣಕ್ಕೆ ಆತನನ್ನು ವಜಾ ಮಾಡಲಾಗಿದೆ.ಇದು ಭಾರೀ ಭದ್ರತಾ ಲೋಪ ಎಂದು ಪರಿಗಣಿಸಲಾಗಿದೆ.
ಈ ವಿಚಾರವನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್ನ ಮಾಜಿ ಪ್ರೇಯಸಿ ಕೊರಿಯಾಹ್ ಡ್ವಾನ್ಯೆನ್ ಅವರ ಆತ್ಮಚರಿತ್ರೆಯಲ್ಲಿ ಬರೆದುಕೊಳ್ಳಲಾಗಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಸ್ವಯಂ-ಪ್ರಕಟಿತ ಪುಸ್ತಕ, ಅಕ್ಟೋಬರ್ 28 ರಂದು ಬಿಡುಗಡೆಯಾಗಿದೆ.
ಸೀಕ್ರೆಟ್ ಸರ್ವಿಸ್ ಏಜೆಂಟ್ ಪ್ರೇಯಸಿಗೆ, ”ಸದ್ಯ ಒಬಾಮಾ ಮನೆಯಲ್ಲಿ ಯಾರೂ ಇಲ್ಲ. ನೀನು ಇಲ್ಲಿಗೆ ಬಾ.ನಾವು ಮಿಚೆಲ್ (ಒಬಾಮಾ ಪತ್ನಿ) ಅವರ ಬಾತ್ ರೂಮ್ ನಲ್ಲೆ ಐಷಾರಾಮಿ ಕ್ಲಬ್ನಂತೆ ಲೈಂಗಿಕತೆಯನ್ನು ಆನಂದಿಸಬಹುದು. ಯಾರಿಗೂ ತಿಳಿಯುವುದಿಲ್ಲ. ಹಾಗೇನಾದರೂ ಆದರೆ ನಾನು ತೊಂದರೆ ಎದುರಿಸುತ್ತೇನೆ” ಎಂದು ಹೇಳಿ ಅಪಾಯವನ್ನು ಆಹ್ವಾನಿಸಿಕೊಂಡಿದ್ದ ಎಂದು ಬರೆದುಕೊಂಡಿರುವುದಾಗಿ ಎಬಿಸಿ ನ್ಯೂಸ್ ಪ್ರಕಟಿಸಿದೆ.
ಕೊರಿಯಾಹ್ ಡ್ವಾನ್ಯೆನ್ ಅವರು 2022 ರಲ್ಲಿ ಮ್ಯಾಸಚೂಸೆಟ್ಸ್ನ ಮಾರ್ಥಾಸ್ ವೈನ್ಯಾರ್ಡ್ನಲ್ಲಿ ವಿಹಾರ ಮಾಡುತ್ತಿದ್ದಾಗ ಮೊದಲ ಬಾರಿಗೆ ಸೀಕ್ರೆಟ್ ಸರ್ವೀಸ್ ಏಜೆಂಟ್ ಭೇಟಿಯಾಗಿದ್ದ. ಅಲ್ಲಿ ಆತನನ್ನ ಒಬಾಮಾ ಕುಟುಂಬದ ಭದ್ರತೆಗೆ ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನೋಡಲು ಪೆಟ್ರೋಲ್ ಟ್ಯಾಂಕರ್… ಇದರ ಒಳಗಿರುವುದು ಮಾತ್ರ ರಾಶಿ ರಾಶಿ ದನಗಳು
Tragedy: ದೇವಸ್ಥಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಮೃತ್ಯು, CCTVಯಲ್ಲಿ ಸೆರೆಯಾಯ್ತು ದೃಶ್ಯ
Viral Video: ಮದ್ಯ ಸೇವಿಸಿ ನಡುರಸ್ತೆಯಲ್ಲೇ ಮೂತ್ರ ವಿಸರ್ಜಿಸಿದ ಪೊಲೀಸ್ ಪೇದೆ.!
Odisha Police; 4 ಆರೋಪಿಗಳ ಮುಖಕ್ಕೆ ಭಿನ್ನ ಇಮೋಜಿ!: ಪೋಸ್ಟ್ ವೈರಲ್
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.