Vatican: ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಮಾನವೀಯತೆ ಸಂದೇಶ ನೀಡಿದ ಖಾದರ್‌


Team Udayavani, Dec 3, 2024, 12:11 AM IST

Vatican: ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಮಾನವೀಯತೆ ಸಂದೇಶ ನೀಡಿದ ಖಾದರ್‌

ಮಂಗಳೂರು: ರೋಮ್‌ನ ವ್ಯಾಟಿಕನ್‌ ನಗರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೊದಲ ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದ ಶತಮಾನೋತ್ಸವ ಸ್ಮರಣಾರ್ಥ “ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು’ ಶೀರ್ಷಿಕೆಯೊಂದಿಗೆ ಆಯೋಜಿಸ ಲಾದ 3 ದಿನಗಳ ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್‌ ಯು.ಟಿ ಖಾದರ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ತಮ್ಮ ಐತಿಹಾಸಿಕ ಭಾಷಣದ ಮೂಲಕ ಗಮನ ಸೆಳೆದರು.

“ನಾನು ಇಲ್ಲಿ ಯಾವುದೇ ಒಂದು ಧರ್ಮದ ಪ್ರತಿನಿಧಿಯಾಗಿ ಬಂದಿಲ್ಲ. ಬದಲಾಗಿ ಮಾನವೀಯತೆಯ ವಿನಮ್ರ ಧ್ವನಿಯಾಗಿ, ಶಾಂತಿ, ಪ್ರೀತಿ ಮತ್ತು ಸೌಹಾರ್ದದಿಂದ ತುಂಬಿದ ಒಂದು ಸುಂದರ ಪ್ರಪಂಚದ ಕನಸು ಕಾಣುವ ಶತಕೋಟಿ ಜನರ ಸಾಮೂಹಿಕ ಆಶಯ, ಹೋರಾಟ ಮತ್ತು ಆಕಾಂಕ್ಷೆಗಳನ್ನು ಹೊತ್ತುಕೊಂಡು ಅವರೆಲ್ಲರ ದ್ವನಿಯಾಗಿ ಬಂದಿದ್ದೇನೆ’ ಎಂದು ಮಾತು ಆರಂಭಿ ಸಿದ ಅವರು 1924ರಲ್ಲಿ ಕೇರಳ ರಾಜ್ಯದ ಆಲುವಾದಲ್ಲಿರುವ ಅದ್ವೈತ ಆಶ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಆಯೋಜಿಸಿದ್ದ ಮೊದಲ ಅಂತಾರಾಷ್ಟ್ರೀಯ ಸರ್ವ ಧರ್ಮ ಸಮ್ಮೇಳನದ ಶತಮಾನೋತ್ಸವದ ಸ್ಮರಣಾರ್ಥ ನಡೆಸುತ್ತಿರುವ ಈ ಐತಿಹಾಸಿಕ ವಿಶ್ವ ಸಮ್ಮೇಳನದಲ್ಲಿ ಭಾಗವಹಿ ಸಲು ನನಗೆ ಅವಕಾಶ ದೊರಕಿರು ವುದು ನನಗೆ ಗೌರವ ಮತ್ತು ಸಂತೋಷದ ವಿಷಯವಾಗಿದೆ ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್‌ ಆಧ್ಯಾತ್ಮಿಕ ದಾರ್ಶನಿಕರ ಪುಣ್ಯಭೂಮಿ ಭಾರತದಿಂದ ಬಂದಿದ್ದೇನೆ ಎನ್ನಲು ನಾನು ಹೆಮ್ಮೆ ಪಡುತ್ತೇನೆ. ನನಗೆ ಮತ್ತು ನನ್ನಂತಹ ಅಸಂಖ್ಯಾಕರಿಗೆ ಏಕತೆ, ಶಾಂತಿ, ಮತ್ತು ಸೌಹಾರ್ದದಿಂದ ಕೂಡಿದ ಹೊಸ ಸಮಾಜ ನಿರ್ಮಾಣಕ್ಕೆ ಪ್ರೇರೇಪಣೆ ನೀಡಿದ ಈ ಮಹಾನ್‌ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.

ಆಧ್ಯಾತ್ಮಿಕತೆಯ ಸಾರವನ್ನು ಸಾರುವ ಪವಿತ್ರ ನಗರವಾದ ವ್ಯಾಟಿಕನ್‌ನಲ್ಲಿ ಒಟ್ಟು ಸೇರಿದ್ದೇವೆ. ಈ ಶುಭ ಸಂದರ್ಭದಲ್ಲಿ, ನನಗೆ ನನ್ನ ತಾಯ್ನಾಡಾದ ಭಾರತದ ಪೂಜ್ಯ ಋಷಿ ಮುನಿಗಳ “ವಸುಧೈವ ಕುಟುಂಬಕಂ’ (ಜಗತ್ತು ಒಂದೇ ಕುಟುಂಬ) ಎನ್ನುವ ಅಮರ ನುಡಿಗಳು ನೆನಪಿಗೆ ಬರುತ್ತದೆ. ಎಲ್ಲರೂ ನಮ್ಮವರು ಎನ್ನುವ ಈ ಪ್ರಾಚೀನ ಮಂತ್ರವು ಇಂದಿನ ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದ್ದು, ನಮ್ಮ ದೇಶದ ಸಂವಿಧಾನದ ಆದರ್ಶವನ್ನೂ ಪ್ರತಿಬಿಂಬಿಸುತ್ತದೆ ಎಂದರು.

ಯಾವುದೇ ಧರ್ಮವು ಕೀಳರಿಮೆಯಿಂದ ಬಳಲಬಾರದು. ಯಾವುದೇ ವರ್ಗವು ಪ್ರತ್ಯೇಕತೆಯನ್ನು ಅನುಭವಿಸಬಾರದು. ಧಾರ್ಮಿಕ ನಂಬಿಕೆಗಳು ಸ್ಪರ್ಧೆಯ ವಿಷಯವಲ್ಲ. ಅವು ಸಹಯೋಗ ಮತ್ತು ಸತ್ಯದ ಕಡೆಗೆ ನಂಬಿಕೆಯ ಪಯಣವಾಗಿದೆ. ಧಾರ್ಮಿಕ ನಂಬಿಕೆ ದೌರ್ಬಲ್ಯವಲ್ಲ, ಅದು ಭೂಮಿಯ ಮೇಲಿನ ಸೌಹಾರ್ದದ ಪ್ರಬಲ ಶಕ್ತಿಯಾಗಿದೆ. ಕಾಮನಬಿಲ್ಲಿನ ವೈಭವವನ್ನು ಸೃಷ್ಟಿಸಲು ಅನೇಕ ಬಣ್ಣಗಳು ಸಾಮರಸ್ಯದಿಂದ ಬೆರೆತಂತೆ, ನಾವು ವೈವಿಧ್ಯದ ಶಕ್ತಿಯನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಬೇಕು. ಅದು ಗಾಯ ಮಾಡುವ ಕತ್ತಿಯಂತೆ ಅಲ್ಲ, ಗಾಯವನ್ನು ಗುಣಪಡಿಸುವ ಔಷಧಿಯಂತೆ ಆಗಬೇಕು ಎಂದು ಯು.ಟಿ.ಖಾದರ್‌ ಹೇಳಿದರು.

ಟಾಪ್ ನ್ಯೂಸ್

DK SHI NEW

Congress; ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ: ಶಿವಕುಮಾರ್‌

Rain Heavy (2)

Cyclone Fengal: ರಾಜಧಾನಿ, ಹಳೇ ಮೈಸೂರು ತತ್ತರ

ind-jpn

Asia Cup: ಅಂಡರ್‌-19 ಏಷ್ಯಾ ಕಪ್‌: ಜಪಾನ್‌ ಮೇಲೆ ಭಾರತ ಸವಾರಿ

Malpe; ದಡಕ್ಕೆ ಮರಳಿದ ಮೀನುಗಾರಿಕಾ ಬೋಟುಗಳು

Malpe; ದಡಕ್ಕೆ ಮರಳಿದ ಮೀನುಗಾರಿಕಾ ಬೋಟುಗಳು

Heavy Rain: ಕಾಸರಗೋಡು ಜಿಲ್ಲಾದ್ಯಂತ ಭಾರೀ ಮಳೆ

Heavy Rain: ಕಾಸರಗೋಡು ಜಿಲ್ಲಾದ್ಯಂತ ಭಾರೀ ಮಳೆ

accident

Bengaluru; ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್‌ ಸಾ*ವು

Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿUllal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ

Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿUllal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ

Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ

Govt Hospital ಔಷಧಕ್ಕಾಗಿ ರೋಗಿಗಳನ್ನು ಹೊರಗೆ ಕಳಿಸಬೇಡಿ: ಉಪಲೋಕಾಯುಕ್ತ ನ್ಯಾ|ಮೂ|ಬಿ.ವೀರಪ್ಪ

Govt Hospitalಔಷಧಕ್ಕಾಗಿ ರೋಗಿಗಳನ್ನು ಹೊರಗೆ ಕಳಿಸಬೇಡಿ: ಉಪಲೋಕಾಯುಕ್ತ ನ್ಯಾ|ಮೂ|ಬಿ.ವೀರಪ್ಪ

Mangaluru: ಅಡಿಕೆ ಸಂಶೋಧನೆಗಾಗಿ ಅನುದಾನ: ಸಚಿವೆ ನಿರ್ಮಲಾರಿಗೆ ಕ್ಯಾಂಪ್ಕೊ ಆಗ್ರಹ

Mangaluru: ಅಡಿಕೆ ಸಂಶೋಧನೆಗಾಗಿ ಅನುದಾನ: ಸಚಿವೆ ನಿರ್ಮಲಾರಿಗೆ ಕ್ಯಾಂಪ್ಕೊ ಆಗ್ರಹ

Ullal; ತಲಪಾಡಿ ಟೋಲ್‌ ಸಿಬಂದಿಗೆ ಹಲ್ಲೆ: ಕಾರಿನಲ್ಲಿದ್ದ ಮೂವರ ತಂಡದ ಕೃತ್ಯ

Ullal; ತಲಪಾಡಿ ಟೋಲ್‌ ಸಿಬಂದಿಗೆ ಹಲ್ಲೆ: ಕಾರಿನಲ್ಲಿದ್ದ ಮೂವರ ತಂಡದ ಕೃತ್ಯ

2

Mangaluru: ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

DK SHI NEW

Congress; ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ: ಶಿವಕುಮಾರ್‌

Rain Heavy (2)

Cyclone Fengal: ರಾಜಧಾನಿ, ಹಳೇ ಮೈಸೂರು ತತ್ತರ

paddy

ಭತ್ತ, ರಾಗಿ ಬೆಳೆಗೆ ಹಾನಿ ತಂದ ಮಳೆ

1-kpll

Waqf Board ಜನರನ್ನು ಕ್ಯಾನ್ಸರ್‌ನಂತೆ ಕಾಡುತ್ತಿದೆ : ಆರ್‌. ಅಶೋಕ್‌

ind-jpn

Asia Cup: ಅಂಡರ್‌-19 ಏಷ್ಯಾ ಕಪ್‌: ಜಪಾನ್‌ ಮೇಲೆ ಭಾರತ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.