Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್‌ವುಡ್‌ನ‌ ಪಾರ್ಟ್‌-2 ಕ್ರೇಜ್‌


Team Udayavani, Sep 27, 2024, 12:55 PM IST

Sandalwood; ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌

“ಮುಂದಿನ ಭಾಗದಲ್ಲಿ ನಿರೀಕ್ಷಿಸಿ.. ಪಾರ್ಟ್‌-2, ಟು ಬಿ ಕಂಟಿನ್ಯೂಡ್‌..- ಇತ್ತೀಚೆಗೆ ಒಂದಷ್ಟು ಸಿನಿಮಾಗಳ ಕೊನೆಯಲ್ಲಿ ಈ ತರಹದ ವಾಕ್ಯಗಳನ್ನು ನೋಡಿರುತ್ತೀರಿ. ಸಿನಿಮಾ ಮುಂದುವರೆಯಲಿದೆ, ಮುಂದುವರೆದ ಭಾಗ ಬರಲಿದೆ, ಪಾರ್ಟ್‌-2 ಸದ್ದು ಮಾಡಲಿದೆ ಎಂಬ ಸಂದೇಶದೊಂದಿಗೆ ಬಹುತೇಕ ಸಿನಿಮಾಗಳು ಕೊನೆಗೊಳ್ಳುತ್ತವೆ. ಹೀಗೆ ಕೊನೆಗೊಂಡ ಸಿನಿಮಾಗಳು ನಿಜಕ್ಕೂ ಸೆಟ್ಟೇರುತ್ತವಾ ಅಥವಾ ಸೆಟ್ಟೇರಿದ ಸಿನಿಮಾಗಳು ಹಿಟ್‌ ಆಗುತ್ತಾ ಎಂದು ಕೇಳಿದರೆ ಉತ್ತರ ಕಷ್ಟ.

ಉಪೇಂದ್ರ ನಟನೆಯ “ಕಬ್ಜ’ ಚಿತ್ರದ ಕೊನೆ ಯಲ್ಲೂ “ಕಬ್ಬ-2′ ಎಂದು ಹಾಕಲಾಗಿತ್ತು. ಶಿವರಾಜ್‌ಕುಮಾರ್‌ ಅವರ “ಘೋಸ್ಟ್‌’ ಸಿನಿಮಾ ಕೂಡಾ “ಘೋಸ್ಟ್‌-2′ ಬರುವುದಾಗಿ ಹೇಳಿತ್ತು. “ಸಲಾರ್‌’ ಕೂಡಾ “ಸಲಾರ್‌-2′ ಘೋಷಣೆ ಮಾಡಿತ್ತು. ಇತ್ತೀಚೆಗೆ ತೆರೆಕಂಡ “ಭೀಮ’ ಕೂಡಾ ಮತ್ತೂಂದು ಸಿನಿಮಾಕ್ಕೆ ಲೀಡ್‌ ಕೊಟ್ಟಿತ್ತು. ಅಷ್ಟೇ ಅಲ್ಲ, ಇತ್ತೀಚೆಗೆ ತೆರೆಕಂಡ “ಪೆಪೆ’, “ಪೌಡರ್‌’ ಚಿತ್ರಗಳು ಕೂಡಾ ಮುಂದುವರೆದ ಭಾಗದ ಸೂಚನೆಯೊಂದಿಗೆ ಕೊನೆಗೊಂಡಿದ್ದವು. ಹಾಗಾದರೆ ನಿಜಕ್ಕೂ ಈ ಚಿತ್ರಗಳು ಮುಂದುವರೆಯುತ್ತಾ ಎಂದು ಕೇಳಿದರೆ, ಆ ಚಿತ್ರಗಳ ಮೊದಲ ಭಾಗದ ಗೆಲುವಿನ ಮೇಲೆ ಅವಲಂಬಿತವಾಗಿರುತ್ತವೆ. ಮೊದಲ ಭಾಗವೇನಾದರೂ ದೊಡ್ಡ ಮಟ್ಟದಲ್ಲಿ ಗೆದ್ದು, ಬಿಝಿನೆಸ್‌ನಲ್ಲೂ ಸದ್ದು ಮಾಡಿದರೆ ಚಿತ್ರತಂಡ ಪಾರ್ಟ್‌-2 ಮಾಡುವ ಯೋಚನೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಮತ್ತೆ ಕಥೆಗೆ ಹೊಸ ರೂಪ ಕೊಡಬೇಕಾಗುತ್ತದೆ. ಇದರ ಜೊತೆಗೆ ಮೊದಲ ಭಾಗ¨ನಾಯಕ ನಟನ ಕಮಿಟ್‌ ಮೆಂಟ್‌ ಹಾಗೂ ಆ ತಂಡದ ಜೊತೆಗಿನ ಸಂಬಂಧ ಕೂಡಾಮುಖ್ಯವಾಗುತ್ತದೆ. ಅದೆಷ್ಟೋ ನಾಯಕ ನಟರು ಸಿನಿಮಾ ಮುಗಿಯುವ ಹೊತ್ತಿಗೆ ತಂಡದದಿಂದ ದೊಡ್ಡ ಅಂತರ ಕಾಯ್ದು ಕೊಂಡಿರುತ್ತಾರೆ. ಹೀಗಿರುವಾಗ ಮತ್ತೆ ಅವರೊಂದಿಗೆ ಸಿನಿಮಾ ಮಾಡಬೇಕಾದರೆ ಹೊಸ “ಬೆಸುಗೆ’ಯೇ ಬೇಕಾಗುತ್ತದೆ.

ಘೋಷಿಸಿದ ಸಿನಿಮಾಗಳ ಕಥೆಯೇನು?

ಈಗಾಗಲೇ ಉಪೇಂದ್ರ ಅವರ “ಕಬ್ಜ’, ಶಿವರಾಜ್‌ಕುಮಾರ್‌ ಅವರ “ಘೋಸ್ಟ್‌’ ಹಾಗೂ ಪ್ರಭಾಸ್‌ ನಟನೆಯ “ಸಲಾರ್‌’ ಚಿತ್ರಗಳು ಮುಂದುವರೆದ ಭಾಗ ಘೋಷಿಸಿವೆ. ಆದರೆ, ಸದ್ಯ ಈ ಚಿತ್ರಗಳು ಸೆಟ್ಟೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಸದ್ಯ ಈ ಚಿತ್ರಗಳ ನಾಯಕ ನಟರು, ನಿರ್ದೇಶಕರು ಬೇರೆ ಬೇರೆ ಸಿನಿಮಾಗಳಲ್ಲಿ ಬಿಝಿ ಇದ್ದಾರೆ. ಎಲ್ಲವೂ “ಹೊಂದಿಕೆ’ಯಾದರೆ ಚಿತ್ರ ಸೆಟ್ಟೇರಬಹುದು. ಎಷ್ಟೋ ಸಿನಿಮಾಗಳು ಮುಂದುವರೆದ ಭಾಗ ಬರುತ್ತದ ಎಂಬ ಕಾರಣಕ್ಕೆ ಮೊದಲ ಭಾಗದ ಕ್ಲೈಮ್ಯಾಕ್ಸ್‌ ಅನ್ನು ಅಪೂರ್ಣವಾಗಿಸಿ, ನೋಡುಗರ ಕುತೂಹಲ ಹೆಚ್ಚಿಸಿವೆ.

ಪಾರ್ಟ್‌-2ಗೆ ಕೆಜಿಎಫ್ ನಾಂದಿ

ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಕ್ರೇಜ್‌ ಜೊತೆಗೆ ಪಾರ್ಟ್‌-2 ಕ್ರೇಜ್‌ ಹುಟ್ಟಿಸಿದ್ದು ಯಶ್‌ ನಟನೆಯ “ಕೆಜಿಎಫ್’. ಮೊದಲ ಭಾಗ ದೊಡ್ಡ ಹಿಟ್‌ ಆಗುವ ಮೂಲಕ ಚಿತ್ರತಂಡ ಎರಡನೇ ಭಾಗ ಮಾಡುವ ಮನಸು ಮಾಡಿತು. ಆ ಚಿತ್ರ ಕೂಡಾ ಭರ್ಜರಿ ಯಶಸ್ಸು ಕಂಡಿತು. ಇದರೊಂದಿಗೆ ಸ್ಯಾಂಡಲ್‌ವುಡ್‌ನ‌ಲ್ಲಿ ಪಾರ್ಟ್‌-2 ಕ್ರೇಜ್‌ ಜೋರಾಯಿತು ಎಂದರೆ ತಪ್ಪಲ್ಲ. ಆ ನಂತರ ಕೆಲವು ಸಿನಿಮಾಗಳು ಪಾರ್ಟ್‌-2 ಆಗಿ ಬಂದರೂ “ಕೆಜಿಎಫ್’ ಮಟ್ಟದ ಯಶಸ್ಸು ಸಿಗಲಿಲ್ಲ.

ಕಾಂತಾರದ ಗೆಲುವಲ್ಲಿ ಪ್ರೀಕ್ವೆಲ್‌

ಸದ್ಯ ಸಿನಿಮಾಗಳ ಮುಂದುವರೆದ ಭಾಗಗಳ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವುದು ರಿಷಬ್‌ ನಿರ್ದೇಶನದ “ಕಾಂತಾರ-1′. ಚಿತ್ರತಂಡ ಹೇಳಿಕೊಂಡಂತೆ ಇದು ಸೀಕ್ವೆಲ್‌ ಅಲ್ಲ, ಪ್ರೀಕ್ವೆಲ್‌, ಕಾರಣ “ಕಾಂತಾರ’ದ ದೊಡ್ಡ ಯಶಸ್ಸು. ಕನ್ನಡದ ಈ ಚಿತ್ರ ಪ್ಯಾನ್‌ ಇಂಡಿಯಾ, ಪ್ಯಾನ್‌ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡಿ, ಚಿತ್ರತಂಡವೇ ದಂಗಾಗುವಂತಹ ಬಿಝಿನೆಸ್‌ ಮಾಡಿತು. ಅಲ್ಲಿಂದ ರಿಷಬ್‌ ಶೆಟ್ಟಿ ಎಂಬ ಕೆರಾಡಿಯ ಪ್ರತಿಭೆ ಪ್ಯಾನ್‌ ಮಟ್ಟದಲ್ಲಿ ಗುರುತಿಸಿಕೊಂಡರು. ಈ ಮೂಲಕ “ಕಾಂತಾರ’ ದ ಮತ್ತೂಂದು ಭಾಗ ಮಾಡುವ ಕನಸು ಹುಟ್ಟಿತು. ಅಲ್ಲಿಂದ ಕಥೆ ಆರಂಭವಾಗಿ ಈಗ ಭರ್ಜರಿ ಶೂಟಿಂಗ್‌ ಕೂಡಾ ನಡೆಯುತ್ತಿದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-aane

Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

1-asasa

KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ

02002

World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!

Gurugram: ಗುಂಡಿನ ಚಕಮಕಿ-ನಟೋರಿಯಸ್‌ ಕ್ರಿಮಿನಲ್‌ ಭಾಷಾ ಬಂಧನ, ಶಸ್ತ್ರಾಸ್ತ್ರ ವಶ

Gurugram: ಗುಂಡಿನ ಚಕಮಕಿ-ನಟೋರಿಯಸ್‌ ಕ್ರಿಮಿನಲ್‌ ಭಾಷಾ ಬಂಧನ, ಶಸ್ತ್ರಾಸ್ತ್ರ ವಶ

000

World Tourism Day:ಚಾರಣ- ಇದು ಮಲೆಕುಡಿಯರ ಊರಿನ ನಡುವಿನ ನಿಗೂಢ ಜಲಪಾತ

UNSC: ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವ; ಭಾರತಕ್ಕೆ ಮತ್ತಷ್ಟು ಬೆಂಬಲ

UNSC: ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವ; ಭಾರತಕ್ಕೆ ಮತ್ತಷ್ಟು ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

upendra

Upendra Movie: ರೀ ರಿಲೀಸ್‌ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ

night road kannada movie

Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್‌ ರೋಡ್‌ʼ

Sanju Movie

Sanju Movie; ಯತಿ ಕಣ್ಣಲ್ಲಿ ಸಂಜು ಕನಸು: ಹರೆಯದ ಪ್ರೀತಿಯ ಏರಿಳಿತದ ಪಯಣ

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

BBK-11: ನಾನು ಯಾವ ಮನೆಗೂ ಹೋಗ್ತಿಲ್ಲ.. ಬಿಗ್ ಬಾಸ್ ಗೆ ಹೋಗಲ್ಲ ಎಂದ ಕನ್ನಡದ ಖ್ಯಾತ ನಟಿ

daali dhananjay zebra movie releasing on oct 31

Zebra; ಡಾಲಿ ಅಭಿನಯದ ಜೀಬ್ರಾ ಅ.31ಕ್ಕೆ ತೆರೆಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

crime (2)

Horrific; ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನೇ ಬ*ಲಿ ನೀಡಿದ ಮಾಲಕ !!!

1-aane

Elephant; ಆಂಧ್ರಕ್ಕೆ ದಸರಾ ಆನೆಗಳನ್ನು ಕೊಡುವುದಿಲ್ಲ, ಗೊಂದಲ ಬೇಡ : ಈಶ್ವರ ಖಂಡ್ರೆ

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

ಬೈಲಹೊಂಗಲ: ಸರಕಾರಿ ತೋಟದ ಶಾಲೆ ಕಟ್ಟಡ ಅನಾಥ-ಅನೈತಿಕ ಚಟುವಟಿಕೆಗಳ ತಾಣ!

1-asasa

KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ

02002

World Tourism Day:ಪಶ್ಚಿಮ ಘಟ್ಟದ ಕಾನನದ ಸಣ್ಣ ಜಲಪಾತದ ಹುಡುಕಾಟದ ಸಾಹಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.