ಕೊಳವೆಬಾವಿಯಲ್ಲಿ ನೀರಿನ ಕೊರತೆ; ಟ್ಯಾಂಕರ್ ನೀರೇ ಗತಿ
ಮೂಡುಪಡುಕೋಡಿ ಒಂದನೇ ವಾರ್ಡ್‌ಗೆ ನೀರಿಲ್ಲ
Team Udayavani, May 9, 2019, 5:50 AM IST
ಕೆಲವು ಪ್ರದೇಶಗಳು ಎತ್ತರ ಪ್ರದೇಶದಲ್ಲಿರುವುದರಿಂದ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿದರೆ ಎಲ್ಲ ಕಡೆಗೆ ನೀರು ಸರಬರಾಜು ಸಾಧ್ಯವಾಗಬಹುದು ಎಂಬ ಅಭಿಪ್ರಾಯಗಳು ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಮೂಡುಪಡುಕೋಡಿ ಗ್ರಾಮದ 1ನೇ ವಾರ್ಡ್ ಪ್ರದೇಶಗಳಲ್ಲಿ ಜೀವಜಲ ನೀರಿನ ಸಮಸ್ಯೆ ಕುರಿತು ಉದಯವಾಣಿ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಕೇಳಿ ಬಂದವು.
ಪುಂಜಾಲಕಟ್ಟೆ ಮೇ 8: ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಮೂಡುಪಡುಕೋಡಿ ವಾರ್ಡ್ 1ರಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮುಂಡಬೆಲು, ಕೊಮ್ಮಲೆ, ಕುಕ್ಕೆರೋಡಿ, ಅಂಕದಳ, ಮೂರ್ಜೆ, ಕುದ್ರೋಟಿಕಟ್ಟೆಗಳ ಜನರು ನೀರಿನ ಸಮಸ್ಯೆಯಿಂದ ಚಿಂತಾಕ್ರಾಂತರಾಗಿದ್ದು, ಪರಿಹಾರಕ್ಕಾಗಿ ಜನ ಪ್ರತಿನಿಧಿಗಳು, ಅಧಿಕಾರಿಗಳನ್ನು ಎದುರು ನೋಡುತ್ತಿದ್ದಾರೆ.
ಮುಂಡಬೈಲು, ಕೊಮ್ಮಲೆ ಗುಡ್ಡ ಪ್ರದೇಶ
ಬಾಂಬಿಲದಿಂದ ಸ್ವಲ್ಪ ಮುಂದಕ್ಕೆ ಮುಂಡಬೈಲು, ಕೊಮ್ಮಲೆ ಎತ್ತರ ಪ್ರದೇಶದಲ್ಲಿದ್ದು ಇಲ್ಲಿನ ಹೆಚ್ಚಿನ ಜನರು ಸಾರ್ವಜನಿಕ ನೀರಿನ ಸೌಲಭ್ಯ ಅವಲಂಬಿಸಿದ್ದಾರೆ. ಪ್ರಸ್ತುತ ಕೊಳವೆ ಬಾವಿಯ
ನೀರು ಸರಬರಾಜಾಗುತ್ತಿಲ್ಲ. ಮುಂಡಬೈಲುನಲ್ಲಿ ಕಳೆದ ವರ್ಷವಷ್ಟೇ ಕೊಳವೆ ಬಾವಿ ನಿರ್ಮಿಸಲಾಗಿದ್ದು, ಇದರಿಂದ ಸುಮಾರು 65 ಮನೆಗಳಿಗೆ ಸಂಪರ್ಕವಿದೆ. ಕೊಮ್ಮಲೆ ಪರಿಶಿಷ್ಟ ಜಾತಿ ಮತ್ತು ವರ್ಗದವರ ಕಾಲನಿಗೆ ಇದೇ ಕೊಳವೆ ಬಾವಿಯಿಂದ ನೀರು ಸರಬರಾಜು ಆಗುತ್ತಿತ್ತು. ಆದರೆ ಈ ಮನೆಗಳು ತುಂಬಾ ಎತ್ತರ ಪ್ರದೇಶದಲ್ಲಿದೆ. ಕೆಳಭಾಗಕ್ಕೆ ಸ್ವಲ್ಪ ಹೊತ್ತು ನೀರು ಸರಬರಾಜಾದ ಬಳಿಕ ಗೇಟ್ ವಾಲ್Ì ಬಂದ್ ಮಾಡಿ ಮೇಲ್ಗಡೆಯ ಮನೆಗಳಿಗೆ ನೀರು ಹರಿಯುವಂತೆ ಮಾಡಬಹುದು. ಆದರೆ ಅದಕ್ಕೆ ಅವಕಾಶವಾಗುತ್ತಿಲ್ಲ. ಬದಲಾಗಿ ನಾವೇ ಕೆಳಗೆ ಹೋಗಿ ಕಾದು ನೀರು ಹೊತ್ತು ತರುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ನಿವಾಸಿ, ಗ್ರಾ.ಪಂ. ಸದಸ್ಯೆಯೂ ಆದ ಸುನಂದಾ ಅವರು. ಹಿಂದೆ ಸುಮಾರು 1 ಕಿ.ಮೀ. ದೂರದಿಂದ ಖಾಸಗಿ ಬಾವಿಯಿಂದ ನೀರು ತರುತ್ತಿದ್ದೆವು. ಆದರೆ ಈ ಪರಿಸರದಲ್ಲಿ ಯಾರ ಬಾವಿಯಲ್ಲೂ ನೀರಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಹೆದ್ದಾರಿ ಕಾಮಗಾರಿಗೆ ಪೈಪ್‌ಲೈನ್ ಕಟ್
ಬಾಂಬಿಲದಲ್ಲಿ ಹೆದ್ದಾರಿ ಬದಿ ಸುಮಾರು 25 ವರ್ಷ ಹಳೆಯದಾದ ಕೊಳವೆಬಾವಿಯಿದ್ದು, ಅದರಿಂದ 25 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಮೂಲಕ ನೀರು ಸರಬರಾಜಾಗುತ್ತಿದ್ದು, ಬಾಂಬಿಲದ ಸುಮಾರು 25 ಮನೆಗಳಿಗೆ ಸಮಸ್ಯೆಯಾಗಿರಲಿಲ್ಲ. ಗುಂಪಕಲ್ಲು, ಕುಕ್ಕೆರೋಡಿ ಕಡೆಗಳಿಗೆ ಕೊಳವೆಬಾವಿಯಿಂದ ನೇರವಾಗಿ ಸಂಪರ್ಕವಿದೆ. ಆದರೆ ಹೆದ್ದಾರಿ ಕಾಮಗಾರಿ ವೇಳೆ ಪೈಪ್‌ಲೈನ್ ತುಂಡರಿಸಿದ್ದು, ನೀರು ಸರಬರಾಜು ಸ್ಥಗಿತಗೊಂಡಿದೆ. ಆ ಭಾಗದ ಮಣ್ಣು ತೆಗೆದ ಬಳಿಕವಷ್ಟೆ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಗುತ್ತಿಗೆದಾರರ ಹೇಳಿಕೆ. ಸದ್ಯ ಇಲ್ಲಿನ ಜನರು ಖಾಸಗಿ ಬಾವಿ, ಕೊಳವೆ ಬಾವಿಯನ್ನು ಆಶ್ರಯಿಸಿದ್ದರೂ ನೀರು ಸಾಲುವುದಿಲ್ಲ ಎಂದು ನೀರಿನ ನಿರ್ವಹಣೆಯ ಮಹಮ್ಮದ್ ಅವರ ಅಭಿಪ್ರಾಯ.
65 ಮನೆಗೆ 1 ಕೊಳವೆಬಾವಿ
ಅಂಕದಳ ಸಮೀಪ ವರೆಕೊಂಬು ವಿನಲ್ಲಿ ಕೊಳವೆ ಬಾವಿಯಿದ್ದು, ಇದರಿಂದಲೂ ಒಂದೂವರೆ ಕಿ.ಮೀ. ದೂರದವರೆಗೆ ಸುಮಾರು 65 ಮನೆಗಳಿಗೆ ನೀರು ಸರಬರಾಜುಗೊಳ್ಳ ಬೇಕಿದೆ. ಇಲ್ಲಿ ಇನ್ನೊಂದು ಕೊಳವೆ ಬಾವಿಗೆ ಸ್ಥಳ ಗುರುತಿಸಲಾಗಿದೆ. ಶೀಘ್ರ ನಿರ್ಮಾಣವಾದಲ್ಲಿ ಸಮಸ್ಯೆ ಪರಿಹಾರವಾಗಬಹುದು.ಇಲ್ಲಿನ ದೇಜಮ್ಮ ಅವರಿಗೆ ಬಾವಿಯಿದ್ದು, ಬಾವಿಯ ಬಂಡೆ ಒಡೆದಲ್ಲಿ ನೀರು ಲಭಿಸಬಹುದು. ಆದರೆ ನೆರೆಹೊರೆ ಯವರ ಆಕ್ಷೇಪಣೆಯಿಂದ ಸಾಧ್ಯ ವಾಗಿಲ್ಲ. ನೀರಿಲ್ಲದಿದ್ದರೆ ಮನೆ ಮಾರಿ ಬೇರೆಡೆಗೆ ಹೋಗಬೇಕಷ್ಟೆ ಎಂಬ ಅಳಲು ಅವರದು.
ನಿವಾಸಿಗಳ ಬೇಡಿಕೆಗಳು
· ಕೊಳವೆ ಬಾವಿಯಿಂದ ನೇರವಾಗಿ ನೀರು ಸರಬರಾಜು ಬದಲು ಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡಬೇಕು.
· ನೀರಿಲ್ಲದೆಡೆ ಟ್ಯಾಂಕರ್‌ನಲ್ಲಿ ನೀರು ಒದಗಿಸಬೇಕು.
· ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕು.
· ಬಾವಿಯ ಕಲ್ಲು ಒಡೆದು ಆಳ ಮಾಡಲು ಅವಕಾಶ ನೀಡಬೇಕು.
ಹೊಸ ಕೊಳವೆ ಬಾವಿಗೆ ಸ್ಥಳ ಪರೀಕ್ಷೆ
ಖಾಸಗಿ ಕೊಳವೆ ಬಾವಿ ಕೊರೆದುದರಿಂದ ಕಳೆದ ಕೆಲವು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿದೆ. ಮುಂಡಬೈಲಿನಲ್ಲಿ ಹೊಸ ಕೊಳವೆ ಬಾವಿಗೆ ಸ್ಥಳ ಪರೀಕ್ಷೆ ನಡೆಸಲಾಗಿದೆ. ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿದಲ್ಲಿ ನೀರು ಸರಬರಾಜಿಗೆ, ಮುಂದಕ್ಕೆ ಬಹುಗ್ರಾಮ ನೀರಿನ ಯೋಜನೆ ಅನುಷ್ಠಾನವೂ ಸುಲಭವಾಗುತ್ತದೆ.
- ಅವಿನಾಶ್ ಬಿ.ಆರ್., ಪಿಡಿಒ, ಇರ್ವತ್ತೂರು ಗ್ರಾ.ಪಂ.
ಅಧಿಕಾರಿಗಳು ಮುತುವರ್ಜಿ ವಹಿಸಲಿ
ಗ್ರಾಮೀಣ ಪ್ರದೇಶದಲ್ಲಿಯೂ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಪರಿಹಾರ ಕಾಣುತ್ತಿಲ್ಲ. ನೀರಿನ ವ್ಯವಸ್ಥೆಗೆ ಕೈಗೊಂಡಿರುವ ಕ್ರಮಗಳು ಶೀಘ್ರವಾಗಿ ಅನುಷ್ಠಾನಗೊಳ್ಳುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು.
- ಎಂ. ತುಂಗಪ್ಪ ಬಂಗೇರ, ಜಿ.ಪಂ. ಸದಸ್ಯರು, ಸಂಗಬೆಟ್ಟು
ನೀರು-ನೈರ್ಮಲ್ಯ ಸಮಿತಿ ಗಮನ ಹರಿಸಿಲ್ಲ
ಈ ಭಾಗದ ಜನರಿಗೆ ನೀರಿನ ಸಮಸ್ಯೆ ಇದೆ. ಇರುವ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರಿಲ್ಲ. ಕೆಲವೆಡೆ ಪ್ಲಾಸ್ಟಿಕ್ ಟ್ಯಾಂಕ್‌ನಲ್ಲಿ ನೀರು ತುಂಬಿಸಿ ಪಿಕಪ್ ವಾಹನದಲ್ಲಿ ಸರಬರಾಜು ಮಾಡಲಾಗಿದೆ. ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಮೀಟಿಂಗ್ ನಡೆದಿಲ್ಲ. ನೀರಿನ ಸಮಸ್ಯೆ ಬಗ್ಗೆ ಗ್ರಾ.ಪಂ. ಆಡಳಿತದ ಗಮನಕ್ಕೆ ತರಲಾಗಿದೆ.
- ಸುಧೀಂದ್ರ ಶೆಟ್ಟಿ, ಗ್ರಾ.ಪಂ. ಸದಸ್ಯರು
ಉದಯವಾಣಿ ಆಗ್ರಹ
ಮೂಡುಪಡುಕೋಡಿ ಒಂದನೇ ವಾರ್ಡ್‌ನ ಮುಂಡಬೈಲು, ಕೊಮ್ಮಲೆ, ಕುಕ್ಕೆರೋಡಿ. ಅಂಕದಳ, ಕುದ್ರೋಟಿಕಟ್ಟೆ ಪ್ರದೇಶಗಳಿಗೆ ನೀರಿನ ಸೌಲಭ್ಯ ಒದಗಿಸಲು ಕೊಳವೆ ಬಾವಿ ಹಾಗೂ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಬೇಕು. ಬಾಂಬಿಲದಲ್ಲಿ ರಾ.ಹೆ. ಪಕ್ಕವಿರುವ ಕೊಳವೆ ಬಾವಿಯನ್ನು ಉಳಿಸಬೇಕು. ನೀರಿನ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು.
- ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.