National Unity Day: ನಗರ ನಕ್ಸಲೀಯರನ್ನು ಗುರುತಿಸಿ, ಹೋರಾಡಿ; ಪ್ರಧಾನಿ ಮೋದಿ ಕರೆ
ಏಕತಾ ಮೂರ್ತಿಗೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.
Team Udayavani, Oct 31, 2024, 11:46 AM IST
ನವದೆಹಲಿ: ಇಂದು ಕೆಲವು ಶಕ್ತಿಗಳು ರಾಜಕೀಯಕ್ಕಾಗಿ ರಾಷ್ಟ್ರೀಯ ಏಕತೆಯನ್ನು(National Unity) ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಅಷ್ಟೇ ಅಲ್ಲ “ನಗರ ನಕ್ಸಲೀಯರ” (Urban Naxals) ಮೈತ್ರಿಯನ್ನು ಗುರುತಿಸಿ ಅವರ ವಿರುದ್ಧ ಹೋರಾಡುವಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಅ.31) ಕರೆ ನೀಡಿದರು.
ಗುಜರಾತ್ ನ ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭವ್ಯ ಪ್ರತಿಮೆ ಬಳಿ ಇಂದು ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಏಕತಾ ದಿನ ಉದ್ದೇಶಿಸಿ ಮಾತನಾಡಿದರು. ವಿಶೇಷ ಎಂಬಂತೆ ಈ ಬಾರಿಯ ರಾಷ್ಟ್ರೀಯ ಏಕತಾ ದಿನ ಮತ್ತು ದೀಪಾವಳಿ ಹಬ್ಬ ಒಂದೇ ದಿನ ಬಂದಿರುವುದು ಕಾಕತಾಳೀಯವಾಗಿದೆ ಎಂದು ವರದಿ ತಿಳಿಸಿದೆ.
ಬೇರೆ, ಬೇರೆ ದೇಶಗಳು ಅಭಿವೃದ್ಧಿ ಹೊಂದುತ್ತಿವೆ, ಆದರೆ ಭಾರತಕ್ಕೆ ನಿಕಟವಾಗುತ್ತಿವೆ. ಇದು ಸಾಮಾನ್ಯ ಸಂಗತಿಯಲ್ಲ, ಹೊಸ ಇತಿಹಾಸ ಬರೆಯಲಿವೆ. ಭಾರತ ಹೇಗೆ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದೆ ಎಂಬುದನ್ನು ಜಗತ್ತು ವೀಕ್ಷಿಸುತ್ತಿದೆ. ಹಾಗಾಗಿ ನಾವು ನಮ್ಮ ಒಗ್ಗಟ್ಟನ್ನು ರಕ್ಷಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾರಣೆ ಅಂಗವಾಗಿ ಏಕತಾ ಮೂರ್ತಿಗೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದರು.
ಭಾರತದ ಅಭಿವೃದ್ಧಿ ಕೆಲವು ವಿಕೃತ ಶಕ್ತಿಗಳಿಗೆ ಚಿಂತೆಗೀಡು ಮಾಡಿದೆ. ಅವರು ಭಾರತದ ಒಳಗೂ, ಹೊರಗೂ ಇದ್ದಾರೆ. ಇಂತಹ ಜನರು ದೇಶವನ್ನು ಅಸ್ಥಿರಗೊಳಿಸಿ, ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekar: ನೀರೆಯ ಭತ್ತದ ಗದ್ದೆಯಲ್ಲಿ ಬಾವಿ ಹೋಲುವ ಗುಹೆ ಪತ್ತೆ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
Bagheera Movie : ʼಬಘೀರʼ ನೋಡಿ ಹಬ್ಬದ ಬಾಡೂಟ ಸವಿದ ಸಿನಿಮಂದಿ.. ಹೇಗಿದೆ ಸಿನಿಮಾ?
Kollur: ಕಿರುಸೇತುವೆ ಸಂಪೂರ್ಣ ಕೆಸರುಮಯ; ರಸ್ತೆ ತುಂಬಾ ಹೊಂಡಗುಂಡಿ
Udupi: ಪಟಾಕಿ ಸಿಡಿಸಿ, ಆದರೆ ಎಚ್ಚರ ವಹಿಸಿ; ಇಲಾಖೆಯಿಂದ ಜಿಲ್ಲಾದ್ಯಂತ ಅಗತ್ಯಕ್ರಮ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.