ನಾವು ಬಳಸಿದ್ದು ಎಫ್-16 ವಿಮಾನವನ್ನೇ!
Team Udayavani, Apr 2, 2019, 6:00 AM IST
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್: ಬಾಲಕೋಟ್ ದಾಳಿಯ ನಂತರ ನಡೆದ ಬೆಳವಣಿಗೆಯಲ್ಲಿ ಭಾರತವು ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು ಎಂಬುದನ್ನು ತಿರಸ್ಕರಿಸುತ್ತಲೇ ಬಂದ ಪಾಕಿಸ್ಥಾನ ಈಗ ಏಕಾಏಕಿ, ಅಂದು ನಾವು ಎಫ್ 16 ಅನ್ನು ಬಳಸಿರಲೂಬಹುದು ಎನ್ನುವ ಮೂಲಕ ತನ್ನ ಸುಳ್ಳನ್ನು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಾಕಿಸ್ಥಾನದ ಸೇನಾ ವಕ್ತಾರರಾದ ಮೇಜರ್ ಜನರಲ್ ಆಸಿಫ್ ಗಫೂರ್, “ಭಾರತದ ದಾಳಿಯನ್ನು ಹಿಮ್ಮೆಟ್ಟಿಸಲು ಅಂದು ಪಾಕಿಸ್ಥಾನ ವಾಯುಪಡೆ ಎಫ್-16 ಬಳಸಿದ್ದಿರಬಹುದು. ತನ್ನ ಸ್ವಯಂ ರಕ್ಷಣೆಗಾಗಿ ಪಾಕಿಸ್ಥಾನ ತನ್ನಲ್ಲಿರುವ ಯಾವುದೇ ವಿಮಾನ ಬಳಸುವ ಸ್ವಾತಂತ್ರ್ಯ ಅದಕ್ಕಿದೆ’ ಎಂದಿದ್ದಾರೆ. ಫೆ. 27ರಂದು ನಡೆದಿದ್ದ ಈ ವಿದ್ಯಮಾನದಲ್ಲಿ ಐಎಎಫ್ ವಿಮಾನಗಳ ದಾಳಿಗೆ ಪಾಕಿಸ್ಥಾನದ ಎಫ್-16 ವಿಮಾನ ಪತನವಾಗಿತ್ತು. ಇದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ತನ್ನ ಅನುಮತಿಯಿಲ್ಲದೆ ತಾನು ನಿರ್ಮಿಸಿರುವ ಎಫ್-16 ಯುದ್ಧ ವಿಮಾನವನ್ನು ಬಳಸಿರುವ ಬಗ್ಗೆ ಅಮೆರಿಕ, ಪಾಕಿಸ್ಥಾನದ ವಿರುದ್ಧ ಸಿಡಿಮಿಡಿಗೊಂಡಿತ್ತು. ಆಗ ಪಾಕಿಸ್ಥಾನ ತಾನು ಚೀನಾ ನಿರ್ಮಿತ ಜೆಎಫ್-17 ವಿಮಾನ ಬಳಸಿದ್ದು, ಎಫ್-16 ಅಲ್ಲ ಎಂದಿತ್ತು. ಇತ್ತ, ಭಾರತ, ಪತನಗೊಂಡಿದ್ದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನದ ಅವಶೇಷಗಳ ಫೋಟೋ ಸಹಿತ ಹಲವಾರು ಬಾರಿ ಪಾಕಿಸ್ಥಾನ ಸುಳ್ಳು ಹೇಳುತ್ತಿರುವುದನ್ನು ಜಗತ್ತಿನ ಮುಂದೆ ಜಾಹೀರು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.