Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Team Udayavani, Dec 24, 2024, 11:55 PM IST
ವಡೋದರಾ: ಹರ್ಲೀನ್ ದೇವಲ್ ಅವರ ಅಮೋಘ ಶತಕದೊಂದಿಗೆ ಅಬ್ಬರಿಸಿದ ಭಾರತದ ವನಿತೆಯರು ವೆಸ್ಟ್ ಇಂಡೀಸ್ ಎದುರಿನ ದ್ವಿತೀಯ ಪಂದ್ಯವನ್ನು 115 ರನ್ನುಗಳ ದೊಡ್ಡ ಅಂತರದಿಂದ ಗೆದ್ದು ಸರಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಭಾರತ 2-0ಯಿಂದ ಸರಣಿ ಗೆದ್ದಿದೆ. ಮೊದಲು ಬ್ಯಾಟಂಗ್ ನಡೆಸಿದ ಭಾರತ 5 ವಿಕೆಟಿಗೆ 358 ರನ್ ರಾಶಿ ಹಾಕಿತು. ಇದು ಏಕದಿನದಲ್ಲಿ ಭಾರತದ ಜಂಟಿ ಸರ್ವಾಧಿಕ ಮೊತ್ತ. 2017ರ ಪೊಚೆಫ್ಸೂಮ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2 ವಿಕೆಟಿಗೆ ಇಷ್ಟೇ ರನ್ ಬಾರಿಸಿತ್ತು. ಜವಾಬಿತ್ತ ವೆಸ್ಟ್ ಇಂಡೀಸ್ 46.2 ಓವರ್‌ಗಳಲ್ಲಿ 243ಕ್ಕೆ ಆಲೌಟ್ ಆಯಿತು. ನಾಯಕಿ ಹ್ಯಾಲಿ ಮ್ಯಾಥ್ಯೂಸ್ ಏಕಾಂಗಿಯಾಗಿ ಹೋರಾಟ ನಡೆಸಿ 106 ರನ್ ಬಾರಿಸಿದರು.
ಹರ್ಲೀನ್ ಮೊದಲ ಶತಕ: ಒನ್‌ಡೌನ್ ಆಟಗಾರ್ತಿ ಹಲೀìನ್ ದೇವಲ್ ಅವರ ಚೊಚ್ಚಲ ಶತಕ ಭಾರತದ ಸರದಿಯ ಆಕರ್ಷಣೆ ಆಗಿತ್ತು. ಅವರು 103 ಎಸೆತಗಳಿಂದ 115 ರನ್ ಕೊಡುಗೆ ಸಲ್ಲಿಸಿದರು. ಸ್ಮತಿ ಮಂಧನಾ 53, ಪ್ರತೀಕಾ 76 ರನ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ 50 ಓವರ್, 358/5 (ಹರ್ಲೀನ್ 115, ಪ್ರತೀಕಾ 76, ಮಂಧನಾ 53, ಜೆಮಿಮಾ 52, ಕ್ವಿಯಾನಾ 27ಕ್ಕೆ 1). ವೆಸ್ಟ್ ಇಂಡೀಸ್ 46.2 ಓವರ್, 243 (ಮ್ಯಾಥ್ಯೂಸ್ 106, ಪ್ರಿಯಾ 49ಕ್ಕೆ 3, ಪ್ರತೀಕಾ 37ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.