Women’s Quota Bill: ಲೋಕಸಭೆಯಲ್ಲಿ “ನಾರಿ ಶಕ್ತಿ ವಂದನ್ ಅಧಿನಿಯಮ’ ಮಸೂದೆ ಅಂಗೀಕಾರ
ಇಂದು ರಾಜ್ಯಸಭೆಯಲ್ಲಿ ಮಂಡನೆ
Team Udayavani, Sep 21, 2023, 8:40 AM IST
ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಐತಿಹಾಸಿಕ ಮಸೂದೆಯು ಬುಧವಾರ ಲೋಕಸಭೆಯಲ್ಲಿ ಅಂಗಿಕಾರ ಗೊಂಡಿದೆ. ಈ ಮೂಲಕ 27 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ “ಮಹಿಳಾ ಮೀಸಲಾತಿ’ಯ ಕನಸು ಕೊನೆಗೂ ಸಾಕಾರಗೊಳ್ಳುವತ್ತ ಸಾಗಿದೆ.
ಮಸೂದೆ ಅಂಗೀಕಾರಕ್ಕೆ ನೂತನ ಸಂಸತ್ ಭವನ ಸಾಕ್ಷಿಯಾಗಿದ್ದಲ್ಲದೆ, ಪಕ್ಷ ಭೇದ ಮರೆತು ಸಂಸದರೆಲ್ಲರೂ ಒಗ್ಗಟ್ಟಾಗಿ ಮಹಿಳಾ ಸಬಲೀಕರಣಕ್ಕೆ ಜೈಕಾರ ಹಾಕಿ ದರು. ಲೋಕ ಸಭೆಯ ಅಂಕಿತ ಪಡೆದ “ನಾರಿ ಶಕ್ತಿ ವಂದನ್ ಅಧಿನಿಯಮ’ ಮಸೂದೆಯು ಗುರುವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಲೋಕಸಭೆ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಸ್ತ್ರೀಯರಿಗೆ ಮೂರನೇ ಒಂದರಷ್ಟು ಮೀಸ ಲಾತಿ ಕಲ್ಪಿಸುವ ಮಸೂದೆ ಕುರಿತಾಗಿ ಬುಧ ವಾರ ಸತತ 7 ಗಂಟೆ ಚರ್ಚೆ ನಡೆದ ಬಳಿಕ ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ಪಡೆಯಲಾಯಿತು. 27 ಮಂದಿ ಮಹಿಳಾ ಸಂಸದರು ಚರ್ಚೆಯಲ್ಲಿ ಪಾಲ್ಗೊಂಡರು. 454 ಸಂಸದರು ಮಹಿಳಾ ಮೀಸಲಾತಿ ಪರ ಹಾಗೂ ಎಐಎಂಐಎಂ ಪಕ್ಷದ ಅಸಾದುದ್ದೀನ್ ಒವೈಸಿ ಹಾಗೂ ಅದೇ ಪಕ್ಷದ ಇಮಿ¤ಯಾಜ್ ಜಲೀಲ್ ಮಸೂದೆ ವಿರುದ್ಧ ಮತ ಚಲಾಯಿಸಿದವರು. ಇತರ ಸದಸ್ಯರು ಗೈರಾಗಿದ್ದರು. “ಸವರ್ಣೀಯ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದಷ್ಟೇ ಈ ಸರಕಾರದ ಉದ್ದೇಶ’ ಎಂದು ಆರೋಪಿಸಿದ ಈ ಇಬ್ಬರು ಸಂಸದರು, ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಲು ಆಗ್ರಹಿಸಿದರು.
1996ರಲ್ಲಿ ಮೊತ್ತ ಮೊದಲ ಬಾರಿಗೆ ಮಂಡನೆಯಾಗಿದ್ದ ಈ ಮಸೂದೆ ಇದುವರೆಗೆ 6 ಬಾರಿ ಪರೀಕ್ಷೆ ಎದುರಿಸಿತ್ತು. 2008ರಲ್ಲಿ ಯುಪಿಎ ಸರ ಕಾರ ಸಿದ್ಧಪಡಿಸಿದ್ದ ಈ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರ ಗೊಂಡಿತ್ತು. ಆದರೆ ಒಬಿಸಿಗೂ ಮೀಸಲಾತಿ ಗಾಗಿ ಹಲವು ಪಕ್ಷಗಳು ಒತ್ತಾಯಿಸಿದ್ದ ಕಾರಣ ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.
ಬಿಸಿ ಬಿಸಿ ಚರ್ಚೆ
ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆ ಯಲ್ಲಿ ಸಂಸದರು ಸಕ್ರಿಯವಾಗಿ ಪಾಲ್ಗೊಂಡರು. ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು, ಇತರ ಹಿಂದುಳಿದ ವರ್ಗಗಳ(ಒಬಿಸಿ) ಮಹಿಳೆಯ ರಿಗೂ ಮೀಸಲಾತಿಯನ್ನು ಒದಗಿ ಸುವ ನಿಬಂಧನೆಯನ್ನು ಸೇರಿಸಬೇಕು ಮತ್ತು ಮಸೂದೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ದರು. ಮಹಿಳೆಯರಿಗೆ ಮೀಸಲಾತಿ ಜಾರಿ ಮಾಡುವ ಮೊದಲು ಜನಗಣತಿ ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಯ ಬೇಕು ಎಂಬ ಸರಕಾರದ ನಿರ್ಧಾರವನ್ನು ವಿಪಕ್ಷಗಳ ಹಲವು ನಾಯಕರು ವಿರೋಧಿಸಿ ದರು. ಮಹಿಳಾ ಮೀಸಲಾತಿ ಜಾರಿ ಪ್ರಕ್ರಿಯೆ ಇದರಿಂದಾಗಿಯೇ ವಿಳಂಬವಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, “ವಿಳಂಬ ಆಗುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಕೂಡಲೇ ಮುಂದಿನ ಸರಕಾರ ಗಣತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಆರಂಭಿಸಲಿದೆ’ ಎಂದು ಹೇಳಿದರು.
ಮಹಿಳಾ ಮಸೂದೆ ಅಂಗೀಕಾರವಾಗಿರುವುದಕ್ಕೆ ಸಂತಸವಾಗಿದೆ. ಬೆಂಬಲ ನೀಡಿದ ಎಲ್ಲ ಪಕ್ಷಗಳ ಸಂಸದರಿಗೂ ಧನ್ಯವಾದಗಳು.
– ನರೇಂದ್ರ ಮೋದಿ, ಪ್ರಧಾನಿ
ಇದು ನನ್ನ ಬದುಕಿನ ಅತ್ಯಂತ ಹೃದಯಸ್ಪರ್ಶಿ ಕ್ಷಣ. ಈ ಮಸೂದೆ ಅಂಗೀಕಾರಗೊಂಡರೆ ರಾಜೀವ್ ಗಾಂಧಿಯವರ ಕನಸು ಈಡೇರಿದಂತೆ. ಒಬಿಸಿ ಮಹಿಳೆ ಯರಿಗೂ ಮೀಸಲಾತಿ ಸಿಗು ವಂತಾಗಬೇಕು. ಕಾಂಗ್ರೆಸ್ ಈ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.
– ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ
ಮಹಿಳಾ ಸುರಕ್ಷೆ, ಗೌರವ, ಸಮಾನ ಭಾಗೀದಾರಿಕೆಯು ಪ್ರಧಾನಿ ಮೋದಿ ನೇತೃತ್ವದ ಸರಕಾರದ ಸಂಕಲ್ಪವಾಗಿದೆ. ಮಹಿಳಾ ಮೀಸಲಾತಿ ಮಸೂದೆಯು ಹೊಸ ಯುಗಾರಂಭಕ್ಕೆ ನಾಂದಿ ಹಾಡಿದೆ.
– ಅಮಿತ್ ಶಾ, ಕೇಂದ್ರ ಗೃಹ ಸಚಿವ
ಇದನ್ನೂ ಓದಿ: ‘Donald Trump: ಡೊನಾಲ್ಡ್ ಟ್ರಂಪ್ ನಿಧನ… ಟ್ರಂಪ್ ಮಗನ X ಖಾತೆ ಹ್ಯಾಕ್ ಮಾಡಿ ಟ್ವೀಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.