Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
ಬೇರೆ ಭಾಷೆ ಮಿಶ್ರಣ ಮಾಡಿ ಬಳಸುವುದರಿಂದ ಕನ್ನಡ ಭಾಷೆಯ ಸೌ೦ದರ್ಯ ಕೆಡುತ್ತದೆ
Team Udayavani, Dec 19, 2024, 6:23 PM IST
ಪ್ರಪಂಚದ ಯಾವುದೇ ಭಾಷೆ ಉಳಿಯುವುದು ಮತ್ತು ಬೆಳೆಯುವುದು ಪರಸ್ಪರ ಮಾತನಾಡುವುದರಿಂದ. ಕರ್ನಾಟಕದ ಕನ್ನಡ ಭಾಷೆ ಭಾರತದ ಭಾಷೆಗಳಲ್ಲಿ ಅತ್ಯಂತ ಸುಂದರವೂ ಸುಧೃಢವೂ ಆದ ಭಾಷೆಯಾಗಿದೆ.ಆದರೆ ಆಧುನಿಕತೆಯ ಸೋಗಿನಲ್ಲಿ ಕನ್ನಡ ಭಾಷೆಗೆ ಬೇರೆ ಭಾಷೆ ಮಿಶ್ರಣ ಮಾಡಿ ಬಳಸುವುದರಿಂದ ಕನ್ನಡ ಭಾಷೆಯ ಸೌ೦ದರ್ಯ ಕೆಡುತ್ತದೆ ಮತ್ತು ವಿರೂಪಗೊಳ್ಳುತ್ತದೆ.ಈ ನಿಟ್ಟಿನಲ್ಲಿ ಯಕ್ಷಗಾನವು ಸರಳ ಸುಂದರ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ಸಾರ್ವಕಾಲಿಕ ಕೊಡುಗೆಯನ್ನು ನೀಡುತ್ತಿದೆ.
ಯಕ್ಷಗಾನವು ಕರ್ನಾಟಕದ ಮಣ್ಣಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಮುಖ ಜನಪದ ಕಲೆ. ಇದು ಕೇವಲ ಮನೋರಂಜನೆಯ ಕಲೆಯಲ್ಲ, ಸಾಹಿತ್ಯ, ಸಂಸ್ಕೃತಿ, ಮತ್ತು ಭಾಷಾ ಶುದ್ಧಿಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಿದೆ. ಕನ್ನಡ ಭಾಷೆಯ ಶುದ್ಧತೆ ಮತ್ತು ಸಾಂಸ್ಕೃತಿಕ ಪೈತೃಕವನ್ನು ಉಳಿಸಲು ಯಕ್ಷಗಾನವು ಅಪಾರ ಕೊಡುಗೆಯನ್ನು ನೀಡಿದೆ.
ಯಕ್ಷಗಾನದ ಪ್ರಸಂಗಗಳು ಪೌರಾಣಿಕ ಕಥೆಗಳನ್ನು ಆಧಾರವಾಗಿಟ್ಟುಕೊಂಡಿರುತ್ತವೆ. ಈ ಕಥೆಗಳು ಪಾಂಡಿತ್ಯಪೂರ್ಣ ಕನ್ನಡದಲ್ಲಿ ವಿದ್ವಾಂಸರಿಂದ ರಚಿಸಲ್ಪಟ್ಟಿರುತ್ತವೆ. ಯಕ್ಷಗಾನದ “ಪದ್ಯಗಳು” ಸಾಹಿತ್ಯದ ಪ್ರಾಮಾಣಿಕತೆಯನ್ನು ತೋರುತ್ತವೆ. ಯಕ್ಷಗಾನದಲ್ಲಿ ಬಳಸುವ ಭಾಷೆ ಶುದ್ಧ, ಶೈಲೀಬದ್ಧ ಮತ್ತು ಸಮೃದ್ಧ ನುಡಿಗಟ್ಟಿನ ಮೂಲಕ ಜನರಿಗೆ ಕನ್ನಡದ ಸಂಪತ್ತು ತಿಳಿಯುವಂತೆ ಮಾಡುತ್ತದೆ.
ಯಕ್ಷಗಾನವು ಪ್ರಾರಂಭದಿಂದಲೇ ಗ್ರಾಮೀಣ ಜನರ ನಡುವೆ ಜನಪ್ರಿಯವಾಗಿದ್ದು, ಅವರ ಸ್ಥಳೀಯ ಉಚ್ಚಾರಣೆ, ನುಡಿಗಟ್ಟು, ಮತ್ತು ಮಾತುಕತೆಯನ್ನು ಬೆಳೆಸಲು ಕಾರಣವಾಗಿದೆ. ಇದು ಕನ್ನಡದ ವಿವಿಧ ಉಪಭಾಷೆಗಳನ್ನು ಆಕರ್ಷಕ ರೀತಿಯಲ್ಲಿ ಪ್ರಸ್ತುತಗೊಳಿಸುತ್ತದೆ .
ಯಕ್ಷಗಾನದ ತಾಳಮದ್ದಲೆ ಮತ್ತು ಶ್ರಾವ್ಯ ಭಾಗಗಳು ಪ್ರೇಕ್ಷಕರ ಮುಂದೆ ಪಾತ್ರಧಾರಿಯ ಭಾಷಾ ನೈಪುಣ್ಯವನ್ನು ಪ್ರದರ್ಶಿಸುತ್ತವೆ. ಪಾತ್ರಧಾರಿಗಳು ಪದ್ಯಗಳನ್ನು ನಿಖರವಾಗಿ ಉಚ್ಚರಿಸುತ್ತಾರೆ ಮತ್ತು ಅರ್ಥದಾರಿಕೆಯನ್ನು ಅಷ್ಟೇ ಸ್ಪಷ್ಟವಾಗಿ ಭಾಷಾ ನಾವಿನ್ಯತೆಯೊಂದಿಗೆ ಪ್ರಸ್ತಿತಗೊಳಿಸುತ್ತಾರೆ. ಕಲಾವಿದರ ಶೈಕ್ಷಣಿಕ ಅರ್ಹತೆ ಕಡಿಮೆಯಿದ್ದರೂ ಯಕ್ಷಗಾನದಲ್ಲಿ ಅವರ ಭಾಷಾ ಶುದ್ಧತೆ, ಪದ ಪ್ರಯೋಗ , ಸಾಂದರ್ಭಿಕ ಉಕ್ತಿಗಳ ಬಳಕೆ, ಅವರ ಭಾಷೆಯ ಶುದ್ಧತೆ ಮತ್ತು ಸೊಗಸನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸುತ್ತದೆ.ಇದು ಪುಸ್ತಕದ ಜ್ಞಾನಕ್ಕಿಂತ ಮಸ್ತಕದ ಜ್ಞಾನವೇ ಮೇಲು ಎಂಬುದನ್ನು ಶ್ರುತ ಪಡಿಸುತ್ತದೆ.ಯಕ್ಷಗಾನದಲ್ಲಿ ಭಾಷೆಯ ಮಿಶ್ರಣವಾಗದು ,ಬಳಕೆಯಲ್ಲಿ ತಪ್ಪುಗಳು ನುಸುಳುವುದು ವಿರಳಾತಿವಿರಳ.ಕನ್ನಡಭಾಷೆಯ ನೈಜ ಸೌ೦ದರ್ಯಪ್ರಕಟವಾಗುವುದು ಯಕ್ಷಗಾನದಲ್ಲಿ ಮಾತ್ರವಾಗಿದೆ.
ಯಕ್ಷಗಾನವು ಒಂದು ಮುಕ್ತ ಪಾಠಶಾಲೆಯಾಗಿ ಕಾರ್ಯನಿರ್ವಹಿಸುತ್ತದೆ. ಪೌರಾಣಿಕ ಕಥೆಗಳ ಮೂಲಕ ಕನ್ನಡ ಸಾಹಿತ್ಯ, ಮಹಾಕಾವ್ಯಗಳು, ಮತ್ತು ಇತಿಹಾಸದ ಕುರಿತಾದ ಜ್ಞಾನವನ್ನು ಕನ್ನಡ ಪ್ರೇಮಿಗಳಿಗೆ ಹಂಚುತ್ತದೆ.ಈ ಕಾರಣದಿಂದ ಅಶಿಕ್ಷಿತರೂ ಕೂಡ ಪೌರಾಣಿಕ ಕಥೆಗಳನ್ನು ತಿಳಿದುಕೊಂಡಿದ್ದಾರೆ .ಸಂಸ್ಕಾರವನ್ನು ಅರಿತಿದ್ದಾರೆ .ಜೀವನ ಮೌಲ್ಯಗಳನ್ನು ತಿಳಿದಿದ್ದಾರೆ.ಆದ್ದರಿಂದಲೇ ಯಕ್ಷಗಾನವು ಇತರ ಭಾರತೀಯ ಕಲೆಗಳಿಂತ ಭಿನ್ನವಾಗಿ ಶ್ರೀಮಂತವಾಗಿ ನಿಲ್ಲುತ್ತದೆ.
ಯಕ್ಷಗಾನವು ಕನ್ನಡದ ಅನನ್ಯ ಕಲೆ ಹಾಗೂ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಇಲ್ಲಿ ಭಾಷೆಯ ಸೊಗಸಿದೆ, ಉಚ್ಚಾರದಲ್ಲಿ ಸ್ಪಷ್ಠತೆಯಿದೆ, ಮಿದುಳಿಗೆ ಚಿಂತನೆಗೆ ಅವಕಾಶವಿದೆ,ಜೀವನ ಮೌಲ್ಯಗಳ ಪಾಠವಿದೆ, ಮನರಂಜನೆಯಿದೆ,ಸಂಸ್ಕಾರದ ಸಂದೇಶವಿದೆ. ಆಧುನಿಕತೆಯ ಹೊಸ್ತಿಲಿನಲ್ಲಿ, ಭಾಷೆಯ ಶುದ್ಧತೆಯನ್ನು ಕಾಪಾಡಿ ಅದರ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಗೆ ಸಾಗಿಸಲು ಯಕ್ಷಗಾನವು ಮಹತ್ವದ ಕೊಂಡಿಯಂತೆ ಪಾತ್ರವಹಿಸುತ್ತದೆ.
ಯಕ್ಷಗಾನ ಕನ್ನಡ ಭಾಷಾ ಶುದ್ಧತೆಯನ್ನು ಕೇವಲ ರಕ್ಷಿಸುವುದಲ್ಲ, ಬದಲಾಗಿ ಕನ್ನಡ ಭಾಷೆಯನ್ನೂ ಉಳಿಸುವಲ್ಲಿ ವಿಶ್ವವಿದ್ಯಾಲಯಯಗಳಿಗಿಂತ ಹೆಚ್ಚಿನದಾದ ಕೊಡುಗೆಯನ್ನು ನೀಡಿದೆ.
ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಯಕ್ಷಗಾನವನ್ನು ಕಡ್ಡಾಯಗೊಳಿಸುವ ಮೂಲಕ ಸುಲಭವಾಗಿ ಕನ್ನಡ ಭಾಷೆಯನ್ನು ವಿರೂಪಗಳಿಂದ ಉಳಿಸುವಲ್ಲಿ ಬಳಸುವಲ್ಲಿ ಮತ್ತು ಬೆಳೆಸುವಲ್ಲಿ ಕಾರ್ಯಪ್ರವರ್ತರಾಗಬೇಕಿದೆ. ಶುದ್ಧ ಬಾಷಾ ಪ್ರಯೋಗವನ್ನು ಉಳಿಸುವಲ್ಲಿ ಇಂದಿನ ಪೀಳಿಗೆಯು ಕೂಡಾ ಯಕ್ಷಗಾನದ ಮಹತ್ವವನ್ನು ಅರಿತು, ಕನ್ನಡದ ಶ್ರೇಷ್ಠತೆಯನ್ನು ಉಳಿಸುವಲ್ಲಿ ಯಕ್ಷಗಾನಕ್ಕೆ ಹೆಚ್ಚೆಚ್ಚು ಪ್ರೋತ್ಸಾಹಿಸುವುದರ ಮೂಲಕ ತನ್ನ ಕೊಡುಗೆಯನ್ನು ನೀಡಬೇಕು.
ಕುಮಾರ ಸುಬ್ರಹ್ಮಣ್ಯ ಮುಳಿಯಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana; ಇಲ್ಲಿ ಎಲ್ಲವೂ ಇದೆ, ಹೊಸತನದ ಆವಿಷ್ಕಾರ ಅಗತ್ಯ ಇಲ್ಲ: ಕೊಕ್ಕಡ ಈಶ್ವರ ಭಟ್
Yakshagana; ವಿದೇಶದಲ್ಲಿ ಕಣ್ಮನ ಸೆಳೆದ ಬಡಗು ತಿಟ್ಟಿನ ಗದಾಯುದ್ಧ
Yakshagana;ತೆಂಕು-ಬಡಗು ತಿಟ್ಟುಗಳ ನಡುವೆ ಸೌಹಾರ್ದ ಸಂಬಂಧವಿದೆ:ಗಾವಳಿ ಬಾಬು ಕುಲಾಲ್
Yakshagana; ಸಂಘಟನಾ ಪರ್ವವಾದ ಯಕ್ಷಾಂಗಣದ ‘ತಾಳಮದ್ದಳೆ ಸಪ್ತಾಹ’
‘ಬಪ್ಪʼ ಸಾರಿದ ಸಹಿಷ್ಣುತೆ…ದೇವನೊಬ್ಬ ನಾಮ ಹಲವು…ಮತ ಯಾವುದಾದರೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.