ರಸ್ತೆ ಗುಂಡಿಗಳಿಗೆ ಕೆಂಪು ಮಣ್ಣು ಕಟ್ಟಡ ತ್ಯಾಜ್ಯ! ಜವಾಬ್ದಾರಿ ಮರೆಯಿತೇ ಪ್ರಾಧಿಕಾರ?
Team Udayavani, Oct 13, 2020, 1:14 PM IST
ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯಲ್ಲಿ ಬಿದ್ದಿರುವ ರಸ್ತೆ ಗುಂಡಿಗಳು ಒಂದೆಡೆಯಾದರೆ, ಅವುಗಳನ್ನು ಮುಚ್ಚಲು ಕೆಂಪು ಮಣ್ಣು ಸುರಿಯಲಾಗುತ್ತಿದೆ. ವೆಟ್‌ಮಿಕ್ಸ್ ಅಥವಾ ಇತರೆ ತಂತ್ರಜ್ಞಾನದಿಂದ ಗುಂಡಿ ಮುಚ್ಚಲು ಮಹಾನಗರ ಪಾಲಿಕೆಗೆ ಆರ್ಥಿಕ ಸಮಸ್ಯೆಯಾಗಿದೆಯೇ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಮಹಾನಗರ ವ್ಯಾಪ್ತಿಯ ರಸ್ತೆಗಳ ದುಸ್ಥಿತಿ ಹೇಳತೀರದು. ಕಾಂಕ್ರೀಟ್ ರಸ್ತೆಗಳನ್ನು ಹೊರತುಪಡಿಸಿ ದ್ವಿಚಕ್ರ ವಾಹನಗಳು ಓಡಾಡದ ಶೋಚನೀಯ ಪರಿಸ್ಥಿತಿಗೆ ಉಳಿದ ರಸ್ತೆಗಳು ತಲುಪಿವೆ. ಅಡಿ ಆಳದ ಗುಂಡಿಗಳು
ಬಿದ್ದು, ಜನರು ಪರಿತಪಿಸುವಂತಾಗಿದೆ. ಮಳೆಗಾಲದಲ್ಲಿ ದುರಸ್ತಿ ಸಾಧ್ಯವಿಲ್ಲದ ಕಾರಣ ಗುಂಡಿಗಳನ್ನು ಮುಚ್ಚಲು ವೆಟ್‌ಮಿಕ್ಸ್ ಬಳಸಲಾಗುತ್ತದೆ. ಆದರೆ ಬಹುತೇಕ ರಸ್ತೆಗಳಿಗೆ ವೆಟ್‌ಮಿಕ್ಸ್ ಬಳಸದೆ ಕಟ್ಟಡ ತ್ಯಾಜ್ಯ ಸುರಿಯಾಗುತ್ತಿದೆ. ಮಳೆಯಿಂದ ವಾಹನಗಳು ಓಡಾಡಿ ಇಡೀ ತ್ಯಾಜ್ಯ ರಸ್ತೆ ತುಂಬ ಹರಡಿ ಓಡಾಡದಂಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದರೆ ಇದೀಗ ಪ್ರಮುಖ ರಸ್ತೆ
ಕಿತ್ತೂರು ಚನ್ನಮ್ಮ ವೃತ್ತ ಸೇರಿದಂತೆ ಕೆಲವಡೆ ಕೆಂಪು ಮಣ್ಣನ್ನು ಗುಂಡಿಗೆ ಸುರಿಯಾಗುತ್ತಿದೆ.
ಇದನ್ನೂ ಓದಿ:ತೀರ್ಥಹಳ್ಳಿ: ಬಾಗಿಲು ಮುರಿದು ಮನೆಮಂದಿಯ ಮೇಲೆ ದುಷ್ಕರ್ಮಿಗಳಿಂದ ದಾಳಿ
ಅಕ್ಟೋಬರ್ ತಲುಪಿದರೂ ಇನ್ನು ಮಳೆ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವುದು ಪಾಲಿಕೆಗೆ ಸವಾಲಿನ ಕಾರ್ಯವಾಗಿದೆ. ಆದರೆ ಹೇಗಾದರೂ ಸರಿ ಗುಂಡಿ ಮುಚ್ಚಿದರೆ ಸಾಕು ಎನ್ನುವ ಕಾರಣಕ್ಕಾಗಿ ಕೆಂಪು ಮಣ್ಣು ಸುರಿಯಲಾಗುತ್ತಿದೆ.
ಅಭಿವೃದ್ಧಿ ನೆಪದಲ್ಲಿ ದುರಸ್ತಿಯಿಲ್ಲ: ಈಗಾಗಲೇ ಕಾಟನ್ ಮಾರುಕಟ್ಟೆಯ ಹಲವು ರಸ್ತೆ ಸೇರಿದಂತೆ ಕೆಲವು ರಸ್ತೆಗಳನ್ನು ಸಿಆರ್‌ಎಫ್ ಅಡಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಲಿವೆ ಎನ್ನುವ ಕಾರಣಕ್ಕೆ ಗುಂಡಿಗಳನ್ನು ಮುಚ್ಚಲು ಮನಸ್ಸು ಮಾಡುತ್ತಿಲ್ಲ. ಕೆಲ ರಸ್ತೆಗಳಲ್ಲಿ ಡಾಂಬರ್ ಎಲ್ಲಾದರೂ ಇದೆಯಾ ಎಂದು
ಹುಡುಕಾಡುವಷ್ಟು ಇಡೀ ರಸ್ತೆ ಗುಂಡಿಮಯವಾಗಿವೆ. ಯಾರೇ ಕೇಳಿದರೂ ಶೀಘ್ರದಲ್ಲಿ ಈ ರಸ್ತೆಗಳು ಕಾಂಕ್ರೀಟಿಕರಣಗೊಳ್ಳಲಿವೆ ಎನ್ನುವ ಸಬೂಬು ನೀಡಲಾಗುತ್ತಿದೆ.
ವಿದ್ಯುತ್, ನೀರು ಇತ್ಯಾದಿ ಸಂಪರ್ಕಕ್ಕೆ, ಇನ್ನಿತರೆ ಕಾರಣಗಳಿಗೆ ರಸ್ತೆ ಅಗೆಯಬೇಕಾದರೆ, ಪಾಲಿಕೆಯಿಂದ ಪರವಾನಗಿ, ಅಗತ್ಯ ಶುಲ್ಕ ಪಾವತಿಸಬೇಕು. ಸಾರ್ವಜನಿಕರು ಅನೇಕರು ಶುಲ್ಕ ಪಾವತಿಸಿ ಪರವಾನಗಿ ಪಡೆಯುತ್ತಾರೆ. ಇನ್ನು ಕೆಲವರು ಹೇಳದೆ-ಕೇಳದೆ ಅಗೆಯುತ್ತಾರೆ. ರಸ್ತೆ ಅಗೆತದಿಂದ ಬಂದ ಶುಲ್ಕವನ್ನು ಅದೇ ಅಗೆದ ಸ್ಥಳದಲ್ಲಿ ದುರಸ್ತಿಗೆ ಬಳಸಬೇಕೆಂಬ ನಿಯಮ ಇದ್ದರೂ, ಅದರ ಬಳಕೆ ಮಾತ್ರ ಶೂನ್ಯ ಎಂಬುದಕ್ಕೆ ಅವಳಿನಗರದ ರಸ್ತೆಗಳು ಸಾಕ್ಷಿ ಹೇಳುತ್ತಿವೆ.
ಇದನ್ನೂ ಓದಿ:ಝೂಮ್‌ನಲ್ಲಿ ಹಳ್ಳಿ ಹೈದರ ಝಗಮಗ : ಉಪರಾಷ್ಟ್ರಪತಿ ಜತೆ ಆನ್‌ಲೈನ್ ಸಂವಾದ
ನಗರದಲ್ಲಿ ಕೆಲ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿದ್ದು, ಪ್ರಾಧಿಕಾರ ತನ್ನ ಹೊಣೆಗಾರಿಕೆ ಮರೆತಂತೆ ಕಾಣುತ್ತಿದೆ. ಪ್ರತಿವರ್ಷವೂ ಕಿತ್ತೂರು ಚನ್ನಮ್ಮ ವೃತ್ತ ಭಾಗದಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗುತ್ತಿದ್ದು, ಶಾಶ್ವತ
ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಹೀಗಾಗಿ ಜನರಿಗೆ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕಾಗಿ ಪಾಲಿಕೆಯಿಂದ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
ಪ್ರಮುಖ ರಸ್ತೆಗಳಲ್ಲಿ ಮಣ್ಣು ಸುರಿದು ಗುಂಡಿ ಮುಚ್ಚುತ್ತಿರುವ ಅಧಿಕಾರಿಗಳ ಬುದ್ಧಿಮತ್ತೆ ಮೆಚ್ಚಲೇಬೇಕು. ತೆರಿಗೆ
ಕಟ್ಟಿಸಿಕೊಳ್ಳುವ ಪಾಲಿಕೆ ಗುಂಡಿಗಳನ್ನು ಮುಚ್ಚುತ್ತಿಲ್ಲ ಎನ್ನುವ ಸಾರ್ವಜನಿಕರ ಆಕ್ರೋಶಕ್ಕೆ ಪ್ರತಿಯಾಗಿ ಇದು ಜನರ ಕಣ್ಣೊರೆಸುವ ತಂತ್ರಗಾರಿಕೆಯಾಗಿದೆ ಎನ್ನುವುದು ಸ್ಪಷ್ಟ.
– ವಿಶಾಲ ಕುಂದಗೋಳ, ಸಾರ್ವಜನಿಕ
– ಹೇಮರಡ್ಡಿ ಸೈದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Champions Trophy: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Champions Trophy: ಕೊನೆಗೂ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆಗೊಳಿಸಿದ ಐಸಿಸಿ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.