Baloons: ಉಸಿರು ತುಂಬಿದ ಬಲೂನು


Team Udayavani, Dec 14, 2024, 3:07 PM IST

7-uv-fusion

ಬಲೂನು ಎಂದರೆ ಯಾರಿಗಿಷ್ಟ ಇಲ್ಲ ಹೇಳಿ. ಉತ್ಸಾಹದ ಪ್ರತೀಕವಾದ ಬಲೂನುಗಳು ತನ್ನ ಕೆಂಪು,ಗುಲಾಬಿ, ಬಿಳಿ,ಹಸುರು,ನೀಲಿ,ಹಳದಿ ಬಣ್ಣಗಳಿಂದ ನಮ್ಮನ್ನು ಕೈಬೀಸಿ ಕರೆಯುತ್ತವೆ.

ಬಲೂನು ಎಂದರೆ, ಭಾವನಾತ್ಮಕ ಬೆಸುಗೆ. ನಮ್ಮ ಉಸಿರನ್ನು ಊದಿ ಕಟ್ಟಿಕೊಡುವ ಬಲೂನೆಂದರೆ ಪ್ರೀತಿ ಪಾತ್ರರಿಗೆ ಅದೇನೋ ಪುಳಕ. ಬೆಲೆಕಟ್ಟಲಾಗದ ಉಡುಗೊರೆ.

ನಾ ಇಲ್ಲಿ ಹೇಳುತ್ತಿರುವುದು ದುಡ್ಡು ಕೊಟ್ಟು ಜಾತ್ರೆಯಲ್ಲಿ ಬಲೂನು ಮಾರುವವರಿಂದಲೋ, ಅಂಗಡಿಯಲ್ಲೋ ತೆಗೆದುಕೊಂಡ ಬಣ್ಣ ಬಣ್ಣದ ಬಲೂನಿನ ಬಗ್ಗೆ ಅಲ್ಲ..ಬಾಲ್ಯದಲ್ಲಿ ನಮ್ಮ ಕನಸಿಗೆ ಬಣ್ಣ ತುಂಬುತ್ತಿದ್ದ, ಮನೆಯಲ್ಲೆ ಮಾಡಿಕೊಂಡು ಸಂಭ್ರಮಿಸುತ್ತಿದ್ದ, ಗೆದ್ದೇವು ಎಂದು ಬೀಗುತ್ತಿದ್ದ ಬಲೂನ್‌ ಬಗ್ಗೆ..ನೆನಪಾಯ್ತ.?

ಹೌದು. ಅದೇ ಬೆಲೆ ಕಟ್ಟಲಾಗದ “ದುಬಾರಿ ಬೆಲೆ”ಯ ಸಂತೋಷವನ್ನು ನೀಡುತ್ತಿತ್ತಲ್ಲ ಖಾಲಿಯಾದ ಪೆನ್ನಿನ ಕಡ್ಡಿಯನ್ನು ಬೆಂಕಿಗೆ ತಾಗಿಸಿ ಉಸಿರನ್ನು ಊದಿ ಮಾಡುತ್ತಿದ್ದ “ಬಲೂನು”.

ಪೆನ್ನಿನ ಖಾಲಿಯಾದ ಕಡ್ಡಿಯನ್ನು ಬೆಂಕಿಗೆ ಏಕಾಗ್ರತೆಯಿಂದ ನಾಜೂಕಿನಿಂದ ತಾಗಿತೆನಿಸುವಷ್ಟು ಸುಟ್ಟು ಉಸಿರನ್ನು ಊದಿದಾಗ ನಮ್ಮ ಬಲೂನು ತಯಾರಾಗುತ್ತಿತ್ತು. ಇದರಲ್ಲಿ ಸಿಗುವ ಸಂತೋಷ, ಕಣ್ಣಲ್ಲಿನ ಹೊಳಪು, ಮಧುರ ಅನುಭೂತಿ ದುಬಾರಿ ಅಲ್ಲದೇ ಮತ್ತೇನು?

ರಾತ್ರಿ ಬರವಣಿಗೆ, ಓದು ಎಲ್ಲ ಮುಗಿದ ಮೇಲೆ ಪೆನ್ನಿನ ಕಡ್ಡಿಯನ್ನು ಚಿಮಣಿ ದೀಪಕ್ಕೆ ತಾಗಿಸಿ ಬಲೂನು ಮಾಡಲು ಹೋದಾಗ ಕಡ್ಡಿ ಕರಗಿ ಹೋಗಿದ್ದೆ ಜಾಸ್ತಿ. ಆದರೆ ನಮ್ಮ ಉತ್ಸಾಹ ಕರಗಿ ಹೋಗ್ತಾ ಇರಲಿಲ್ಲ..ಮರಳಿ ಯತ್ನವ ಮಾಡು ಎಂಬಂತೆ ಮತ್ತೂಂದು ಕಡ್ಡಿ..ಊಹ್ಮೂ..ಇಲ್ಲೂ ಯಶಸ್ಸಾಗಲಿಲ್ಲ. ಕಡ್ಡಿ ಕರಗಿತು. ಊದಿ ನೋಡುವ ಅಂತ ಇರುವ ಉಸಿರನ್ನೆಲ್ಲ ಸೇರಿಸಿ ಜೋರಾಗಿ ಊದಿದಾಗ ಕರಗಿದ ಪ್ಲಾಸ್ಟಿಕ್‌ ನನ್ನ ಎದುರು ದೊಡ್ಡ ಸಂಶೋಧನೆ ನೋಡುವ ಹಾಗೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಕುಳಿತ ತಂಗಿಯ ಹಣೆ ಮೇಲೆ ಹೋಗಿ ತಾಗಿತು.. ಅಂಟಿಕೊಂಡಿತು. ಚುರ್‌ ಅಂತು,ಅಲ್ಲೆ ಮಾಸದ ಕಲೆಯಾಗಿ ಇಂದಿಗೂ ನೆನಪಿನ ಕಚಗುಳಿ ನೀಡುತ್ತದೆ. ಎಷ್ಟೊಂದು ಮಧುರ ಆ ಬಾಲ್ಯದ ನೆನಪುಗಳು.

ಟುಸ್‌ ಆದ ಕತೆಗಳ ಜೊತೆಗೆ ಯಶಸ್ಸಿನ ಕತೆಗಳೂ ಇದೆ.ಈ ಪೆನ್ನಿನ ಕಡ್ಡಿಯನ್ನು ಬೆಂಕಿಗೆ ತಾಗಿಸುವಾಗ ಎಷ್ಟು ಏಕಾಗ್ರತೆ ಎಂದರೆ,ಕಣ್ಣಿಗೆ ಹಕ್ಕಿಯ ಕಣ್ಣು-ಬಾಣದ ಮೊನೆ- ಅರ್ಜುನ.. ನೆನಪಾಯ್ತಲ್ಲ ಹಾಗೆ..ಹೀಗೆ ಏಕಾಗ್ರತೆಯಲ್ಲಿ ಸುಡುವಾಗ ಮುಂದೆಲೆಯ ಕೂದಲು ಚಿಮಣಿ ಗೆ ತಾಕಿ ಕರಟಿದರೂ ಅರಿವಾಗ್ತಾ ಇರಲಿಲ್ಲ. ಅದರ ಕರಟಿದ ವಾಸನೆ ಒಳಗಿದ್ದ ಅಮ್ಮನ ಮೂಗಿಗೆ ಬಡಿದು,” ಯಾರದ್ದ… ಮಕ್ಕಳೇ ಮಂಡಿ ಕೂದ್ಲ… ಸುಟ್ಟ… ಹೋದ್‌ ಜಂಬ್‌(ವಾಸನೆ) ಬತ್ತಲೆ” ಅಂತ ಕೂಗಿದ ಮೇಲೆ ಮಂಡಿ ಮುಟ್ಟಿ ಕಾಂತ ಇತ್ತಲ್ಲ. ಎಂತ ಏಕಾಗ್ರತೆ ಅಲ್ವಾ..?

ಸಕ್ಸಸ್‌ ಆದ ಕಡ್ಡಿ ಬಲೂನನ್ನು ಭದ್ರವಾಗಿ ಕಂಪಾಸು ಪೆಟ್ಟಿಗೆಯಲ್ಲಿಟ್ಟು ಮಲಗಿ ಅದರದ್ದೇ ಕನಸಲ್ಲಿ ತೇಲಾಡುತ್ತಾ ಶಾಲೆಗೆ ಹೋಗಿ ಗೆಳೆಯರೆದುರು ಊದಿ ತೋರಿಸಿ ಒಂಥರಾ, “ಹೀರೋಯಿಸಂ” ಅನುಭೂತಿ ಪಡೆಯುತ್ತೀವಲ್ಲ ಅದು ಎಷ್ಟು “ದುಬಾರಿ” ಅಲ್ವಾ? ಈಗಿನ ಮಕ್ಕಳಿಗೆ ಬಲೂನುಗಳ ಪ್ಯಾಕ್‌ ನ್ನೆ ಕೊಡಿಸುವ ನಾವುಗಳು ಇಂತಹದೊಂದು ಬಲೂನು ಮಾಡಿ ಖುಷಿ ಪಡುತ್ತಿದ್ದೆವು ಎಂಬ ಕ್ಷಣವನ್ನು ಹಂಚಿಕೊಳ್ಳೋಣವೇ..ಸಾಧ್ಯವಾದರೆ ನಾವೇ ಮಾಡಿ ತೋರಿಸಿ ಅವರ ಪ್ರಪಂಚವನ್ನು ನಮ್ಮ “ದುಬಾರಿ” ಬಲೂನಿನೊಂದಿಗೆ ಶ್ರೀಮಂತಗೊಳಿಸೋಣ..ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸುವುದನ್ನು ಕಲಿಸೋಣ..

 ರೇಖಾ ಪ್ರಭಾಕರ್‌ ಶಿವಮೊಗ್ಗ

ಟಾಪ್ ನ್ಯೂಸ್

INWvWIW: India women’s squad announced for ODI-T20 series against West Indies

INWvWIW: ವೆಸ್ಟ್‌ ಇಂಡೀಸ್‌ ವಿರುದ್ದ ಏಕದಿನ-ಟಿ20 ಸರಣಿಗೆ ಭಾರತ ವನಿತಾ ತಂಡ ಪ್ರಕಟ

BBK11: ರಜತ್‌ – ಧನರಾಜ್‌ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ

BBK11: ರಜತ್‌ – ಧನರಾಜ್‌ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ

1-RAGA

Rahul Gandhi ಸಾವರ್ಕರ್ ವಿಚಾರ ಪ್ರಸ್ತಾಪ; ಇಂದಿರಾಗಾಂಧಿ ಪತ್ರದೊಂದಿಗೆ ಬಿಜೆಪಿ ಕೌಂಟರ್

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್‌ ಆಗುತ್ತಿರುವ ಈ ಬಾಲಕ ಯಾರು?

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

SSMB29: ರಾಜಮೌಳಿ – ಮಹೇಶ್‌ ಬಾಬು ಸಿನಿಮಾದ ಲೀಡ್‌ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?

SSMB29: ರಾಜಮೌಳಿ – ಮಹೇಶ್‌ ಬಾಬು ಸಿನಿಮಾದ ಲೀಡ್‌ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-uv-fusion

UV Fusion: ನೀನು ನೀನಾಗಿ ಬದುಕು

9-uv-fusion

UV Fusion: ನಂಬಿಕೆಗಳು ನಮ್ಮನ್ನು ದಿಕ್ಕುತಪ್ಪಿಸದಿರಲಿ

8-uv-fusion

Health: ಕೋಟಿಗೂ ಮಿಗಿಲು ಆರೋಗ್ಯ ಸಂಪತ್ತು!

6-aids

AIDS: ಏಡ್ಸ್‌ -ಜಾಗೃತಿಯೇ ಮೂಲ ಮಂತ್ರವಾಗಿರಲಿ…

5-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

Sandalwood: ‘ಬಾಸ್‌’ ಆಗಿ ಬಂದ ತನುಷ್‌ ಶಿವಣ್ಣ

Sandalwood: ‘ಬಾಸ್‌’ ಆಗಿ ಬಂದ ತನುಷ್‌ ಶಿವಣ್ಣ

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

11

Gowribidanur: ಸಮಸ್ಯೆಗಳ ಆಗರ ಗೌರಿಬಿದನೂರು ಬಸ್‌ ನಿಲ್ದಾಣ  

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.