ನವಿಲುಗರಿಯ ಹೊತ್ತಗೆಯಲ್ಲಿದೆ ಕಥೆಗಳು-ವ್ಯಥೆಗಳು
Team Udayavani, Mar 16, 2021, 3:41 PM IST
ಎ.ಆರ್. ಮಣಿಕಾಂತ್ ಅವರ, “ನವಿಲುಗರಿ’ (ಅಡಿಬರಹ-ನಿನಗೊಂದು ನನಗೊಂದು) ಪುಸ್ತಕದಲ್ಲಿ ಹಲವರ ಜೀವನದ ವಿವಿಧ ಮಜಲುಗಳನ್ನು ಬಿಂಬಿಸಲಾಗಿದೆ.
ಇಂತಹ ತಲೆಬರಹದಲ್ಲಿ ಇರುವ ಒಳಮರ್ಮ ಏನು ಎಂಬುದು ಕುತೂಹಲ ಹುಟ್ಟಿಸುವುದು ಸಹಜ. ಗರಿಗಳಂತೆ ಕಥೆಗಳನ್ನು ಹೆಣೆದು ತಂದಿರುವ ಲೇಖಕರ ಕೈಚಳಕ ಅದ್ಭುತವಾದುದು.
ಲೇಖನಕ್ಕೆ ಕೊಟ್ಟಿರುವ ತಲೆಬರಹ ಕಲ್ಪನೆಗೂ ಮೀರಿದ್ದು, ಕಾರಣ ನವಿಲುಗರಿಯಲ್ಲಿನ ಬಣ್ಣಗಳಂತೆ ಪುಸ್ತಕದ ಒಂದೊಂದು ಹಾಳೆಗಳೂ ಒಂದೊಂದು ಕಥೆಯನ್ನು ಹೊರಹೇಳುತ್ತವೆ. ಲೇಖಕ ಎ.ಆರ್. ಮಣಿಕಾಂತ್ ಅವರ ಈ ಹೊತ್ತಗೆ, ಎಂಥವರಲ್ಲೂ ಛಲ ಹುಟ್ಟಿಸುವಂತಿದೆ. ಬರುವಾಗ, ಹೋಗುವಾಗ ಖಾಲಿ ಕೈಯಲ್ಲಿ, ಈ ನಾಲ್ಕು ದಿನಗಳ ಸಂತೆಯ ಜೀವನದಲ್ಲಿ, ಉತ್ತಮರಾಗಿ, ಒಳ್ಳೆಯವರಾಗಿ ಬದುಕುವ ಪರಿಯನ್ನು ಅರ್ಥಮಾಡಿಕೊಡುತ್ತದೆ.
ನವಿಲುಗರಿ ಹೊತ್ತಿರುವ ಆ ಪಕ್ಷಿಯೊಳಗೆ (ಪುಸ್ತಕ), ಒಟ್ಟು 32 ಗರಿಗಳಿವೆ. ಒಂದೊಂದು ಗರಿಯ ಕಥೆಯೂ ಮನ ಮುಟ್ಟುವಂತಿದೆ. ಕೋಟಿ ಕೋಟಿ ಸಂಪತ್ತಿದ್ದರೂ ನೆಮ್ಮದಿಯಿಲ್ಲದ ಸಂಸಾರ ಒಂದೆಡೆಯಾದರೆ, ಒಂದೊತ್ತು ಊಟ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಡುವ ಪುಟ್ಟ ಸಂಸಾರ ಮತ್ತೂಂದು ಕಡೆ. ಶ್ರೀಮಂತರಿಗೆ ಸಂಪತ್ತಿದ್ದಾಗ ಸುಖವಿಲ್ಲ. ಅಪ್ಪನ ಕನಸು, ಅಮ್ಮನ ಕಣ್ಣೀರು, ಮಕ್ಕಳ ಅಹಂಕಾರ, ಹೆಣ್ಣಿನ ಸಂಕಟ, ಹೀಗೆ ಹಲವು ಗರಿಗಳನ್ನು ಹೊತ್ತಿರುವ ಪುಸ್ತಕ ಈ ನವಿಲುಗರಿ ನನಗೊಂದು ನಿನಗೊಂದು.
ಮೊದಲ ಅಧ್ಯಾಯ ಒಂದು ಕಪ್ ಮೊಸರು, ಅಪ್ಪನ ಬಿಸಿಯುಸಿರಿನಿಂದ ಆರಂಭವಾಗುವ ಈ ಅಧ್ಯಾಯ ಮೊದಲ ಭಾಗದಲ್ಲೇ ಮನೆ ಸೊಸೆಯಾದವಳು. ಕೇವಲ ತನ್ನ ಗಂಡ, ಮಕ್ಕಳ ಕಾಳಜಿ ವಹಿಸಿ, ಉಳಿದವರನ್ನೂ ನಿರ್ಲಕ್ಷ್ಯ ಮಾಡುವ ಕಥಾ ಹಂದರವನ್ನು ಬಿಚ್ಚುಡುತ್ತದೆ. ಅಲ್ಲದೇ ಒಂದು ಕಪ್ ಮೊಸರಿನ ಮಹತ್ವ ಹಾಗೂ ಸಂಪಾದನೆಯ ಅಗತ್ಯವನ್ನು ವಿವರಿಸುತ್ತದೆ.
ಸಾಧಿಸುವ ಛಲದಿಂದ ಯಶಸ್ಸಿನ ಶಿಖರವೇರಿ ಪದ್ಮಶ್ರೀ ಪಡೆದ ಗರಿ, ಕಣ್ಣಿಲ್ಲದ ಯುವಕ ನೂರಾರು ಜನರಿಗೆ ಬೆಳಕಾದ ಯಶೋಗಾಥೆ. ಯುದ್ಧಭೂಮಿಯಲ್ಲಿ ವೀರಮರಣವನ್ನಪ್ಪಿದ ಅಪ್ಪ, ಕನಸಿನಲ್ಲಿ ಬಂದರೆ ಎಬ್ಬಿಸಮ್ಮ ಎನ್ನುವ ಕೂಸಿನ ಕಂಬನಿಯ ಕಥೆ. ರೂಪ-ರೂಪಗಳನ್ನು ದಾಟಿ ಆ್ಯಸಿಡ್ ದಾಳಿಗೆ ತುತ್ತಾದ ಹೆಣ್ಣಿನ ಬಾಳಿಗೆ ಬೆಳಕಾದ ಪರಿ. ಹೆತ್ತವರಿಗೆ ಮಕ್ಕಳ ಮೇಲಿರುವ ಮೋಹ, ಪ್ರೀತಿಗೆ ಪ್ರತಿಯಾಗಿ ಮಕ್ಕಳಿಂದ ಬಯಸುವ ಅದೇ ಪ್ರೀತಿ ಕಾಳಜಿ ಸಿಗದೇ ಹೋದಾಗ ಆಗುವ ನೋವು. ಸಂಪತ್ತಿನ ಮದದಲ್ಲಿ ಮೆರೆಯುವ ಮಕ್ಕಳು, ಹೆತ್ತವರಿಗಾಗಿ ಒಂದು ಕ್ಷಣಿಕ ಸುಖವನ್ನು ಮೀಸಲಿಡಲಾರರು.
ಮಕ್ಕಳಿಗೆ ನನ್ನ ಮೇಲೆ ತುಂಬಾ ಪ್ರೀತಿಯಿದೆ. ಆದರೆ ಎಲ್ಲರೂ ಹೆಂಡತಿಗೆ ಹೆದರ್ತಾರೆ. ಈಗ ನಾನೊಂದು ಮೊಬೈಲ್ ತಗೊಂಡ್ರೆ, ಮಕ್ಕಳು ಫೋನ್‌ನಲ್ಲಿ ಮಾತಾಡ್ತಾರೆ ಎಂದೆಲ್ಲ ಕನಸು ಕಂಡ ಅಪ್ಪಯ್ಯನ ಮೊಬೈಲ್ ಫೋನ್ ಅಂಗೈಯಲ್ಲಿ ಎರಡು ತಿಂಗಳಿದ್ದರೂ ರಿಂಗಾಗಲೇ ಇಲ್ಲ. ಮೊಬೈಲ್ ಅಂಗಡಿಯಾತ ಸಾರ್ ನಿಮ್ಮ ಫೋನ್ ಚೆನ್ನಾಗಿಯೇ ಇದೇ ಏನೂ ಆಗಿಲ್ಲ ಎಂದಾಗ ಹೆತ್ತಪ್ಪನ ಮನಸ್ಸು ಮರಗಟ್ಟುವ ವ್ಯಥೆ, ಜವಾನ ಆಗಿದ್ದವನು ದಿವಾನನಾದ, ಉಡುಗೊರೆಯಾಗಿ ಸಿಕ್ಕಿ ಜೀವ ಉಳಿಸಿದ ಡಾಕ್ಟರ್. ಒಂದು ಸ್ಫೂರ್ತಿದಾಯಕವಾ ದ ಅಮರ ಕಥೆಯಲ್ಲಿ, ಅಮ್ಮ ನೀನೇಕೆ ರಾತ್ರಿಯ ಹೊತ್ತು ಕೆಲಸಕ್ಕೆ ಹೋಗ್ತಿಯ? ಎಂದಾಗ ಅಮ್ಮ ಮಾತ್ರ, ನಾನು ವೇಶ್ಯೆ ಎಂದು ಹೇಗೆ ಹೇಳಲಿ, ಎನ್ನುವ ಹೆಣ್ಣಿನ ಸಂಕಟ.
ನವಿಲುಗರಿಯಲ್ಲಿ ಮನದ ಕದ ತೆರೆಯುವಂತೆ ಮಾಡುತ್ತದೆ.
ಒಂದೊಂದು ಕಣ್ಣಿನೊಳಗೆ, ಒಂದೊಂದು ಮನದೊಳಗೆ ಹನ್ನೊಂದು ವ್ಯಥೆಗಳು ಕಥೆಗಳನ್ನು ಹೊರತಂದಿರುವ. ಎ.ಆರ್. ಮಣಿಕಾಂತ್ ಅವರ ಬರವಣಿಗೆ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.
ಆಶಿತಾ ಎಸ್., ಬಿಳಿನೆಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.