ಬದಲಾದ ಶಿಕ್ಷಣ ವ್ಯವಸ್ಥೆ ಮತ್ತು ಯುವ ಭಾರತ
Team Udayavani, Aug 15, 2020, 10:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಯಾವುದೇ ಕ್ಷೇತ್ರವಾದರೂ ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾವಣೆಗೆ ತೆರೆದು ಕೊಳ್ಳುತ್ತಿರಬೇಕು.
ಹೊಸತನವನ್ನು ಅಳವಡಿಸಿಕೊಳ್ಳುವಷ್ಟು ಉದಾರವಾಗಿರಬೇಕು. ತನ್ನಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಷ್ಟು ಪ್ರಾಮಾಣಿಕರಾಗಿರಬೇಕು.
ಆಗ ಮಾತ್ರ ಸತ್ವಪೂರ್ಣವಾಗಿರಲು ಸಾಧ್ಯ. ಈ ಮಾತು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆಯಾದರೂ ಶಿಕ್ಷಣ ವ್ಯವಸ್ಥೆಗೆ ಈ ಬದಲಾವಣೆಗಳು ಹೆಚ್ಚು ಆವಶ್ಯಕ.
ಈ ನಿಟ್ಟಿನಲ್ಲಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಹಲವು ದಶಕಗಳ ಬಳಿಕವಾದರೂ ಬದಲಾವಣೆಗೆ ಮೈಯೊಡ್ಡಿರುವುದು, ಈ ಕಾಲದ ಆವಶ್ಯಕತೆ ಹಾಗೂ ಅನಿವಾರ್ಯಕ್ಕೆ ತಕ್ಕಂತೆ ಹೆಜ್ಜೆ ಇಡುವ ಮನಸ್ಸು ಮಾಡಿರುವುದು ಸಮಾಧಾನಕರ ಸಂಗತಿ.
ಶಿಕ್ಷಣ ಎಂದರೇನು? ಶಿಕ್ಷಣ ಹೇಗಿರಬೇಕು? ಶಿಕ್ಷಣದ ಮೂಲ ಉದ್ದೇಶವೇನು… ಇತ್ಯಾದಿ ಪ್ರಶ್ನೆಗಳನ್ನು ನಮ್ಮ ಮುಂದಿರಿಸಿಕೊಂಡು ಕೂತರೆ ಒಂದಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ವಿಪರ್ಯಾಸವೆಂದರೆ ಆ ಗೊಂದಲಗಳ ನಡುವೆಯೇ ಹಲವು ತಲೆಮಾರುಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿವೆ! ಶಿಕ್ಷಣದ ಉದ್ದೇಶ ಅಂಕಗಳ ಹಿಂದೆ ಓಡುವುದು, ಆಸಕ್ತಿಗಿಂತ ಹೆಚ್ಚು ಒತ್ತನ್ನು ಅಂಕಪಟ್ಟಿಗೆ ನೀಡುವುದು, ಪರೀಕ್ಷೆಯೆಂದರೆ ಯುದ್ಧವೆಂಬಂತೆಯೂ, ಅದರಲ್ಲಿ ಅನುತ್ತೀರ್ಣರಾದರೆ ಬದುಕೇ ಮುಗಿದು ಹೋಯಿತೆಂಬ ಭ್ರಮೆಯನ್ನು ಹುಟ್ಟುಹಾಕುವುದು, ಮಕ್ಕಳ ಆಸಕ್ತಿಗಿಂತ ಪೋಷಕರ ಆಸಕ್ತಿಯ ವಿಷಯವೇ ಕಲಿಕೆಯ ಮುಖ್ಯ ವಸ್ತುವಾಗುವುದು. ಹೀಗೆ ಸುಮಾರು ಒತ್ತಡಗಳ ನಡುವೆಯೇ ಯುವ ಮನಸ್ಸುಗಳು ಸಿಲುಕಿ ಕೊಂಡಿರುವುದು ಅನೇಕ ವರ್ಷಗಳಿಂದ ಕಂಡು ಬರುತ್ತಿವೆ.
ಪ್ರತಿವರ್ಷ ಶಿಕ್ಷಣವನ್ನು ಪೂರೈಸಿ ಹೊರ ಬರುವ ಒಂದು ದೊಡ್ಡ ಸಮೂಹಕ್ಕೆ ಸ್ವಾವಲಂಬಿಯಾಗಿ ಮುಂದಡಿ ಇಡುವಷ್ಟು ಧೈರ್ಯ ತುಂಬುವಲ್ಲಿ ಈಗಿನ ಶಿಕ್ಷಣ ವ್ಯವಸ್ಥೆ ಸಫಲವಾಗಿದೆಯೇ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಅದರ ಸಾಧಕ ಭಾದಕದ ಒಂದು ಸಾಧಾರಣ ಚಿತ್ರಣವಾದರೂ ಸಿಗಬಹುದು.
ದೇಶದ ಯುವ ಸಮುದಾಯವನ್ನು ಕೇವಲ ಅಂಕಪಟ್ಟಿ ಆಧಾರಿತ ಶಿಕ್ಷಣಕ್ಕೆ ಮೀಸಲಾಗಿಸುವುದಕ್ಕಿಂತ ಅವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಆವಶ್ಯಕತೆ ಇರುವ ಮಾಹಿತಿ ಆಧಾರಿತ ಶಿಕ್ಷಣ ನೀಡಿದರೆ ಸಹಜವಾಗಿಯೇ ಓದು ಮುಗಿಸುವಷ್ಟರಲ್ಲಿ ಅವರ ಆತ್ಮವಿಶ್ವಾಸ ಹಾಗೂ ಕೆಲಸದೆಡೆಗಿನ ಅನುಭವ ವೃದ್ಧಿಸುತ್ತದೆ. ಓಡುತ್ತಿರುವ ಕಾಲಘಟ್ಟದಲ್ಲಿ ಈ ಮಾದರಿಯ ಶಿಕ್ಷಣ ಮಾತ್ರ ಯುವ ಜನತೆಯಲ್ಲಿ ಶಕ್ತಿ ತುಂಬಬಲ್ಲದು. ಜತೆಗೆ ಪದವಿ ಶಿಕ್ಷಣದಲ್ಲೂ ಮಹತ್ತರ ಬದಲಾವಣೆ ತರಲು ನಿರ್ಧರಿಸಿರುವುದು ಕೂಡ ಅತ್ಯಂತ ಪ್ರಬುದ್ಧ ತೀರ್ಮಾನ ಎಂದೆನ್ನಿಸುತ್ತದೆ.
ಆದರೆ ಈ ನೂತನ ಶಿಕ್ಷಣ ನೀತಿಯೇ ಇನ್ನು ಮುಂದಿನ ಐದಾರು ದಶಕಗಳಲ್ಲಿ ಮುಂದುವರಿದು ಮತ್ತೆ ನಿಂತ ನೀರಿನಂತಾಗದಿರಲಿ. ಆಡಳಿತ ವರ್ಗವು ಪ್ರತಿ ವರ್ಷ ವರ್ಷವೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಶಿಕ್ಷಣವು ಸದಾ ಹೊಸತನದತ್ತ ಹೊರಳಲು ಅವಕಾಶ ಕಲ್ಪಿಸಿಕೊಡಲಿ ಎಂಬುದಷ್ಟೇ ಈ ಹೊತ್ತಿನ ಆಶಯ.
ಒಂದುವೇಳೆ, ಈಗ ಘೋಷಿಸಲಾಗಿರುವ ನೂತನ ಶಿಕ್ಷಣ ನೀತಿ ಈ ಮೇಲಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗುವಲ್ಲಿ ಸಫಲವಾದರೆ ಅದು ಕೇವಲ ಶಿಕ್ಷಣ ಕ್ಷೇತ್ರದ ನಿಯಮಗಳ ಮೇಲಷ್ಟೇ ಅಲ್ಲದೆ, ಇಡೀ ವ್ಯವಸ್ಥೆಯ ಮೇಲೆಯೇ ಧನಾತ್ಮಕ ಪರಿಣಾಮ ಬೀರಲಿದೆ. ಎಳೆಯ ಮಕ್ಕಳಿಗೆ ಮಾತೃಭಾಷಾ ಶಿಕ್ಷಣವೇ ಸೂಕ್ತ ಎಂಬಲ್ಲಿಂದ ಇದುವರೆಗೂ ರೂಢಿಸಿಕೊಂಡು ಬಂದಿದ್ದ ಅನೇಕ ಪದ್ಧತಿಗಳನ್ನು ಮಾರ್ಪಾಡು ಮಾಡುವಲ್ಲಿ ಹೊಸ ಶಿಕ್ಷಣ ನೀತಿ ಪರಿಣಾಮ ಕಾರಿಯಾಗಬಹುದು. ಕೌಶಲಾಧಾರಿತ ಶಿಕ್ಷಣದ ಆವಶ್ಯಕತೆಯ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದ್ದ ಹೊತ್ತಿನಲ್ಲಿ ಇಡೀ ದೇಶವೇ ಅದನ್ನು ಅಳವಡಿಸಿಕೊಳ್ಳುವಂತೆ ಮಾಡಲು ಹೊರಟಿರುವುದು ಅತ್ಯಂತ ಸ್ವಾಗತಾರ್ಹ.
ಸ್ಕಂದ ಆಗುಂಬೆ, ಎಸ್‌ಡಿಎಂ ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.