Social Media: ಸಾಮಾಜಿಕ ಜಾಲತಾಣ ಬಳಕೆಗೂ ಬೇಕಿದೆ ಚೌಕಟ್ಟು
Team Udayavani, Aug 30, 2024, 12:53 PM IST
ಇತ್ತೀಚೆಗೆ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎನ್ನುದು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ, ಅಬಾಲವೃದ್ಧರವರೆಗೆ ಬಳಕೆ ಮಾಡುವ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ವರವೂ ಹೌದು ಶಾಪವೂ ಹೌದು ಏಕೆಂದರೆ ಬಳಕೆ ಮಾಡುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ ಸಾಮಾಜಿಕ ಮಾಧ್ಯಮವು ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುತ್ತದೆ, ಸಂಬಂಧಗಳು ಮತ್ತು ಸಮುದಾಯಗಳನ್ನು ಬೆಳೆಸುತ್ತದೆ.
ಈ ಸಾಮಾಜಿಕ ಜಾಲತಾಣಗಳು ವರವಾಗಿದೆ ಹಲವಾರು ಮಾಹಿತಿಯನ್ನು, ಸುದ್ದಿ ವಿಚಾರಗಳ ಮಾಹಿತಿಯನ್ನು ನೀಡುತ್ತದೆ, ಶಿಕ್ಷಣವನ್ನು ಪಡೆಯಬಹುದು, ಸಾಮಾಜಿಕ ಮಾಧ್ಯಮವು ಸ್ವಯಂ ಅಭಿವ್ಯಕ್ತಿ, ಸೃಜನಶೀಲತೆ ಮತ್ತು ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಸಹಕಾರಿ. ತಮ್ಮದೇ ಬ್ರ್ಯಾಂಡ್‌ಗಳ ಪರಿಚಯ, ದಿನದ ಎಲ್ಲ ವೇಳೆಯಲ್ಲೂ ಸುದ್ದಿ ಸಮಾಚಾರಗನ್ನು ಪಡೆಯಬಹುದು. ವ್ಯಾಪಾರದ ಅವಕಾಶವನ್ನು ಕಲ್ಪಿಸಿಕೊಡುವುದು ಹೆಚ್ಚಿನ ಮನೋರಂಜನೆ ವೀಡಿಯೋ, ಚಿತ್ರಣಗನ್ನು ನೀಡುವುದು ಹಲವಾರು ಸಂಸ್ಕೃತಿಗಳ ಪರಿಚಯ ವಿಭಿನ್ನ ಭಾಷೆಗಳ ಅರಿವನ್ನು ಮೂಡಿಸುವುದು ಪ್ರಸ್ತುತ ವಿಚಾರಗಳ ಬಗ್ಗೆ ಅಭಿವ್ಯಕ್ತ ಪಡಿಸುವುದು ಇಂತಹ ಹಲವಾರು ವಿಚಾರಗಳನ್ನು ಸಾಮಾಜಿಕ ಜಾಲತಾಣ ನೀಡುತ್ತದೆ.
ಜಾಲತಾಣಗಳು ಕೆಲವೊಮ್ಮೆ ಶಾಪವಾಗಿ ಪರಿಣಮಿಸಬಹುದು ಏಕೆಂದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಮೊಬೈಲ್ ಮುಖ್ಯವಾಗಿದೆ. ಮೊಬೈಲ್ಗಳಿಂದ ದೂರ ಇರಿ ಎನ್ನುವ ದಿನಗಳಲ್ಲಿ ಮೊಬೈಲ್ ಇಲ್ಲದೆ ಶಿಕ್ಷಣವೆ ಇಲ್ಲ ಎಂಬಂತಾಗಿದೆ. ಹೆಚ್ಚು ಸಮಯ ಮೊಬೈಲ್‌ಗಳಲ್ಲಿ ಕಳೆಯುವುದರಿಂದ ಸಾಮಾಜಿಕ ಸಂಪರ್ಕಗಳು ದೂರವಾಗುವುದು,
ನಮ್ಮಲ್ಲಿ ಇರುವ ನೋವುಗಳನ್ನು ನಾವೇ ಅನುಭವಿಸುವುದು ಒಂಟಿತನವನ್ನು ಕಾಡಬಹುದು. ಜಾಲತಾಣಗಳು ಕೇವಲ ಕ್ಷಣಿಕ ಕಾಲದ ಸಂತೋಷವನ್ನು ನೀಡುವುದು ಕುಟುಂಬಿಕರು ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸೇರಿ ಹಾಡು ಹರಟೆ ಹೊಡೆಯುವ ಸಮಯಗಳು ಜಾಲತಾಣಗಳು ಮೊಬೈಲ್ ಬಳಕೆಯಿಂದ ದೂರವಾಗಿವೆ. ..ಕಳೆದು ಹೋಗುತ್ತಿರುವ ವಿದ್ಯಮಾನಗಳಲ್ಲಿ ದಿನದಿಂದ ದಿನಕ್ಕೆ ಸಂಬಂಧಗಳ ಬೆಲೆ ಕಡಿಮೆಯಾಗಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಮೊಬೈಲ್ ಬಳಕೆಗಳು ಬದುಕಿನಲ್ಲಿ ಇತಿಮಿತಿಯಲ್ಲಿರಲಿ . ಆದರೆ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡು ಸಾಗುವ ಚಾಕಚಕ್ಯತೆ ನಮ್ಮಲ್ಲಿರಲಿ ನೆನಪಿಡಿ.
-ಶ್ವೇತಾ, ಎಂಪಿಎಂ, ಕಾಲೇಜು
ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.