Lifestyle: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ
Team Udayavani, Apr 21, 2024, 1:45 PM IST
ಈಗಿನ ಕಾಲದಲ್ಲಿ ನಮ್ಮ ಜೀವನ ಶೈಲಿ ಎಂಬುದು ತುಂಬಾನೇ ಬದಲಾಗಿಬಿಟ್ಟಿದೆ. ಪೇಟೆ ಮಂದಿಯ ಜೀವನ ಶೈಲಿ ಹೇಗೂ ಆಧುನಿಕತೆಯಾಗಿದೆ. ಅದೇ ಆಧುನಿಕತೆ ಎಂಬುದು ಹಳ್ಳಿಯನ್ನು ಆವರಿಸಿಕೊಳ್ಳುತ್ತಿದೆ. ಆದರೆ ಹಳ್ಳಿ ಗ್ರಾಮೀಣ ಭಾಗದವರು ನಮ್ಮತನವನ್ನು ಎಂದೂ ಮರೆಯಬಾರದು. ಸಂಸ್ಕೃತಿ ಸಂಪ್ರದಾಯವನ್ನು ಇಲ್ಲಿ ಕಳೆದಂತ ಸುಂದರ ಕ್ಷಣದ ದಿನಗಳನ್ನು ಮರೆಯಬಾರದು.
ಜೀವನ ಶೈಲಿ ಎಂಬುದು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಬಟ್ಟೆ, ಹೊಸ ಹೊಸ ಮಾತು, ಹೊಸ ತಿಂಡಿಗಳು, ಈ ರೀತಿಯಿಂದಾಗಿ ಆರೋಗ್ಯಕರ ಜೀವನ ಶೈಲಿಯನ್ನು ಮರೆಯುತ್ತಿದ್ದೇವೆ.
ಮೊದಲಿನ ಕಾಲದಲ್ಲಿ ಹೇಗಿತ್ತು ಎಂದರೆ ಹಬ್ಬ ಸಮಾರಂಭಗಳು ಬಂದಾಗ ಮನೆಯವರೆಲ್ಲ ಸೇರಿ ಬಟ್ಟೆ ಅಂಗಡಿಗೆ ಹೋಗಿ ಹೊಸ ಬಟ್ಟೆಯನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈವಾಗ ಏನಾಗಿ ಬಿಟ್ಟಿದೆ ಎಂದರೆ ಆಧುನಿಕತೆ ಎಂಬುದು ಜನ್ಮ ತಾಳಿದ್ದು, ಮೊಬೈಲ್‌ನಲ್ಲಿ ತಮಗಿಷ್ಟವಾದ ಬಟ್ಟೆಗಳನ್ನು ಇಷ್ಟ ಬಂದ ಸಮಯದಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಇಂದು ಹಳ್ಳಿಗಳಲ್ಲಿ ವಾಸಿಸುವವರು ಆಧುನಿಕತೆಗೆ ಮಾರು ಹೋಗಿದ್ದಾರೆ ಎಂಬುದು ತಿಳಿಯಬಹುದು.
ಆರೋಗ್ಯಕರ ಜೀವನ ಶೈಲಿ ಎಂಬುದು ಪರಿಸರದ ವಾತಾವರಣ ಜತೆ ಕ್ಷಣ ಕಳೆಯುವುದು, ಮನೆಯ ವಾತಾವರಣದಲ್ಲಿ ಆಕಾಶ ನೋಡುವುದು, ನಡೆದುಕೊಂಡು ಹೋಗುವುದು, ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವುದು, ಪಕ್ಷಿಗಳ ಸ್ವರಗಳು ಕೇಳುವುದು ಆರೋಗ್ಯಕರ ಜೀವನ ಶೈಲಿಯಾಗಿದೆ.
ಈಗಿನ ಕಾಲದ ಬದುಕಿನಲ್ಲಿ ಏನಾಗುತ್ತಿದೆ ಎಂದರೆ ನಾವು ಬೆಳಗ್ಗೆ ಏಳುವುದು ತಡವಾಗಿ ಎದ್ದು ಹಾಸಿಗೆಯಲ್ಲಿ ಮೊಬೈಲ್ ನೋಡಿಕೊಂಡು ಅದರಲ್ಲಿ ಕಳೆದು ಹೋಗುತ್ತೇವೆ. ಬೇಕಾ ಬೇಡ ಎನ್ನುವ ಹಾಗೆ ನಮ್ಮ ದಿನವನ್ನು ಪ್ರಾರಂಭ ಮಾಡುತ್ತೇವೆ. ಹಾಗೆ ಯಾಂತ್ರಿಕವಾಗಿ ಕೆಲಸವನ್ನು ಮಾಡುತ್ತೇವೆ. ಹೇಗೋ ಮಲಗೋದು ಲೇಟು ಮಲಗುವಾಗಲು ನಾವು ಕೇವಲ ಮೊಬೈಲ್ ನೋಡಿ ಮಲಗುತ್ತೇವೆ. ಇದು ಒಂದು ರೀತಿಯಾಗಿ ನಮ್ಮ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗುತ್ತದೆ.
ನಮ್ಮ ಮನೆಯವರ ಜತೆ ಕ್ಷಣ ಕಳೆಯುವುದಿಲ್ಲ. ಮನೆ ಮಂದಿ ಸೇರಿ ಜತೆಗೂಡಿ ಊಟ ಮಾಡುವುದೂ ಇಲ್ಲ. ಈಗ ಹೇಗಾಗಿದೆ ಎಂದರೆ ಒಟ್ಟಿಗೆ ಕೂತುಕೊಂಡು ಊಟಕ್ಕೆ ಕರೆದರೂ ಹೋಗದಂತ ಪರಿಸ್ಥಿತಿ ಈ ಮೊಬೈಲ್ ಮಾಡಿಬಿಟ್ಟಿದೆ. ಇವಾಗ ಒಬ್ಬರೊಬ್ಬರ ಊಟದ ಸಮಯ ಬೇರೆ ಬೇರೆ ಆಗಿದೆ. ಹಾಗಾಗಿ ಈಗೀಗ ಎಲ್ಲರಲ್ಲಿಯೂ ಸಾಮರಸ್ಯದ ಜೀವನ ಕಡಿಮೆಯಾಗುತ್ತದೆ. ಅರ್ಥ ಮಾಡಿಕೊಳ್ಳುತ್ತಿಲ್ಲ. ಇದು ನಮ್ಮ ಆರೋಗ್ಯಕರ ಜೀವನ ಶೈಲಿ ಅಲ್ಲ. ಇದು ನಮ್ಮ ಅನಾರೋಗ್ಯ ಜೀವನ ಶೈಲಿಯಾಗಿದೆ.
ನಾವು ಆಧುನಿಕತೆಯಲ್ಲಿ ಎಷ್ಟೇ ಮುಂದುವರಿದರೂ ಈ ರೀತಿಯ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನು ಕಳೆದುಕೊಳ್ಳಬಾರದು. ನಮ್ಮ ದಿನದ ಸಮಯವನ್ನು ಹೊಸ ಹೊಸ ವಿಚಾರದ ಬಗ್ಗೆ ತಿಳಿಯಲು ಶುರು ಮಾಡಬೇಕು. ಹಾಗೆಯೇ ಒಳ್ಳೆಯ ಆಹಾರ ಕ್ರಮಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ರೂಪಿಸಿಕೊಳ್ಳಬೇಕು. ಹಾಗೆಯೇ ಪ್ರಕೃತಿಯ ಜತೆ ಒಡನಾಟ ಮಾಡಬೇಕು.
ಆರೋಗ್ಯಕರವಾಗಿರಲು ನಮ್ಮ ನಮ್ಮ ಮನೆಯವರ ಜತೆ ಒಳ್ಳೆಯ ಕ್ಷಣಗಳನ್ನು ಕಳೆಯಬೇಕು. ಮನೆಯವರ ಜತೆ ಕಷ್ಟ ಸುಖ ಹಂಚಿಕೊಳ್ಳಬೇಕು. ಹಾಗೆಯೇ ಮನೋರಂಜನೆಯಿಂದ ಕೂಡಿರಬೇಕು. ಈ ರೀತಿಯಾದಂತಹ ಸಂಸ್ಕೃತಿ ಎಂಬುದು ಹಳ್ಳಿಗಳಲ್ಲಿ ಸ್ವಲ್ಪವಾದರೂ ಉಳಿದುಕೊಂಡಿದೆ. ಆದರೆ ಈಗಲೂ ಕೆಲವರು ಈ ಸಂಸ್ಕೃತಿಗಳನ್ನು ಮರೆತು ಆಧುನಿಕರಾಗಲು ಹೋಗುತ್ತಿದ್ದಾರೆ. ಆದರೆ ಆಧುನಿಕರಾಗಬೇಕು ನಮ್ಮ ಸಂಸ್ಕೃತಿ ಸಂಪ್ರದಾಯ ಜೀವನ ಶೈಲಿಗಳನ್ನು ತೊರೆದು ಅಲ್ಲ. ಈ ರೀತಿಯಾದ ಸುಂದರ ಭಾವನೆಗಳನ್ನು ಮರೆತು ಅಲ್ಲ.
ನಮ್ಮ ಜೀವನವನ್ನು ಆರೋಗ್ಯಕರವಾಗಿ. ನಮ್ಮಿಂದಲೇ ಸಾಧ್ಯವಿದೆ. ಅದನ್ನು ಬಿಟ್ಟು ನಾವು ಬೇರೆ ಎಲ್ಲಿ ಹುಡುಕಬಾರದು. ನಮ್ಮ ದಿನಾಚರಣೆಯನ್ನು ಸ್ವಲ್ಪವಾದರೂ ಬದಲಾಯಿಸಿಕೊಳ್ಳಬೇಕು. ಯಾವಾಗಲೂ ಒಂದೇ ರೀತಿಯಿಂದ ಬದುಕದೆ ನಮ್ಮಲ್ಲಿ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಅಂದರೆ ಆಡುವುದು, ಬರೆಯುವುದು, ಪುಸ್ತಕ ಓದುವುದು, ಮನೆಯವರ ಜತೆ ಕ್ಷಣ ಕಳೆಯುವುದರಿಂದ ನಮ್ಮ ಜೀವನ ಶೈಲಿ ಎಂಬುದು ಅದ್ಭುತ ವಾಗಿರುತ್ತದೆ.
ಲೈಫ್ ಸ್ಟೈಲ್ ಎನ್ನುವಂತದು ದಿನೇ ದಿನೇ ಬದಲಾಗುತ್ತಾ ಹೋಗುತ್ತಿದೆ. ಪ್ರತೀ ದಿನ ಬದಲಾವಣೆಯಾಗುತ್ತಿದೆ. ಈಗಿನ ಕಾಲದಲ್ಲಿ ಬದಲಾವಣೆಯಾಗಬೇಕು, ಆದರೆ ನಾವು ನಡೆದು ಬಂದ ಹಾದಿಯನ್ನು ಮರೆಯಬಾರದಲ್ಲವೇ.
ಉದಾಹರಣೆಗೆ ಒಂದು ಮರ ಬೆಳೆದು ನಿಂತ ಮೇಲೆ ತನ್ನ ಬೇರನ್ನೇ ಮರೆತರೆ ಆ ಮರ ಉಳಿಯುಲು ಸಾಧ್ಯವಿಲ್ಲ. ಹಾಗೆಯೇ ನಾವು ಪೇಟೆಯಲ್ಲಿದ್ದ ಮಾತ್ರಕ್ಕೆ ಹಳ್ಳಿಯ ಜೀವನವನ್ನು ಮರೆಯೋದು ಸರಿಯೇ. ಅಲ್ಲಿ ಕಳೆದ ಕ್ಷಣಗಳನ್ನು ಪೇಟೆಯಲಿದ್ದಾಗ ನೆನಪಿಸಿಕೊಂಡಾದರೂ ಅನುಭವವನ್ನು ಮೆಲುಕು ಹಾಕುತ್ತಿರಬೇಕು. ಹಳ್ಳಿಯ ಲೈಫ್ ಹಳ್ಳಿಯಲ್ಲಿ ಬದುಕುವುದೇ ಒಂದು ಮಜಾ.
–ಪ್ರತೀಕ್ಷಾ ರಾವ್ ಶಿರ್ಲಾಲ್
ಎಂಪಿಎಂ, ಸರಕಾರಿ ಪ್ರ.ದ. ಕಾಲೇಜು ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.