Sports Day: ಪದವಿ ಶಿಕ್ಷಣದಲ್ಲೊಂದು ಮಾದರಿ ಕ್ರೀಡಾಕೂಟ


Team Udayavani, Jan 12, 2024, 2:43 PM IST

8-uv-fusion

ಬಿಡುವಿಲ್ಲದ ಪ್ರತೀ ದಿನದ ಜಂಜಾಟಗಳಿಂದ ಹೊರಬಂದು ಪ್ರಶಾಂತ ವಾತಾವರಣದಲ್ಲಿ ಸಮಯ ಕಳೆಯಬೇಕೆಂದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹೌದು ಬೆಳ್ಳಂ ಬೆಳಗ್ಗೆ ಕಾಲೇಜಿನತ್ತ ಬಸ್‌ ಹಿಡಿದರೆ ಮತ್ತೆ ಮರಳಿ ಮನೆ ಸೇರುವುದು ಸೂರ್ಯ ಪಡುವಣದಲ್ಲಿ ಮರೆಯಾದ ಬಳಿಕವೇ.

ಡಿಗ್ರಿ ಜೀವನವೇ ಹೀಗೆ ಅಸೈನ್ಮೆಂಟ್, ಸೆಮಿನಾರ್‌, ಇಂಟರ್‌ನಲ್ಸ್‌, ಮಿನಿ ರಿಸರ್ಚ್‌ ಇವುಗಳ ನಡುವೆ ಕಳೆದು ಹೋಗುವ ನಮಗೆ ಈ ಮಧ್ಯದಲ್ಲೂ ಮನಸ್ಸಿಗೆ ಮುದ ಹಾಗೂ ಹೊಸ ಆತ್ಮವಿಶ್ವಾಸ ನೀಡಿದ್ದು ಮಾತ್ರ ಇತ್ತೀಚಿಗೆ ನಡೆದ ಸ್ಪೋರ್ಟ್ಸ್ ಡೇ.

ಪ್ರಾತಃಕಾಲದ ಸೂರ್ಯನ ಆಗಮನವಾಗಿ ಇನ್ನೇನು ಕೆಲವು ಸಮಯ ಸರಿದಿರಬಹುದು. ಅಷ್ಟರಲ್ಲಿ ನಾವೆಲ್ಲರೂ ಕುಂದಾಪುರದ ಗಾಂಧಿ ಮೈದಾನದಲ್ಲಿ ಸೇರಿ ಆಗಿತ್ತು. ಬೆಳಗ್ಗೆ ಪೈಪೋಟಿಯಲ್ಲಿ ಬೇಗ ಮೈದಾನಕ್ಕೆ ಹೋಗಬೇಕೆಂದು ಕೊಂಡವರು ಕೆಲವರು, ಎಲ್ಲ ಕ್ರೀಡೆಯಲ್ಲೂ ಭಾಗವಹಿಸಿ ಬಹುಮಾನ ಪಡೆಯಬೇಕೆಂಬ ಕನಸು ಹೊತ್ತವರು ಹಲವರು, ತಮ್ಮ ಸ್ನೇಹಿತರನ್ನು ಹುರಿದುಂಬಿಸಲು ತಂಡದ ಗೆಲುವಿಗಾಗಿ ಕಾದು ಕಾತರದಲ್ಲಿದ್ದವರು ಅನೇಕರು. ಆ ಹಿಂದಿನ ದಿನದ ರಾತ್ರಿ ನಿದ್ದೆ ಮಾಡಿದ್ದರೂ ಇಲ್ಲವೋ ಎಂಬ ಅನುಮಾನ ನನಗೆ. ಎಲ್ಲರೂ ಒಗ್ಗಟ್ಟಿನಿಂದ ತಮ್ಮ ತರಗತಿಯ ಗೆಲುವಿಗಾಗಿ ಕಾದು ಕುಳಿತ ಕ್ಷಣ.

ಮುಂಜಾನೆಯ ಸುಡುಬಿಸಿಲಿನಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ಸುಕರಾಗಿ ತುಂಬಾ ತಯಾರಿ ನಡೆಸಿ ಬಂದಂತಹ ದಿನ. ಎಲ್ಲರೂ ಎಂಟು ಮೂವತ್ತಕ್ಕೆ ನಡೆಯುವ ತರಗತಿವಾರು ಪಥ ಸಂಚಲನದ ಕ್ಷಣಗಣನೆಯಲ್ಲಿರುವಾಗ ಆರಂಭವಾಯಿತು ನೋಡಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ 1,500 ವಿದ್ಯಾರ್ಥಿಗಳನ್ನು ಒಳಗೊಂಡ 19 ತರಗತಿವಾರು ತಂಡಗಳು ಗಾಂಧಿ ಮೈದಾನದ 400 ಮೀಟರ್‌ ಟ್ರ್ಯಾಕ್‌ ಸಂಪೂರ್ಣ ತುಂಬಿದ್ದು; ನೋಡುಗರಿಗೆ ರೋಮಾಂಚನ ಮೂಡಿಸಿದ ಬೃಹತ್‌ ಪಥ ಸಂಚಲನ.

ಒಂದೊಂದು ತರಗತಿಯವರದ್ದು ವಿಶಿಷ್ಟ ವಿಭಿನ್ನ ಪರಿಕಲ್ಪನೆ ಎಂಬುದಕ್ಕೆ ಸಾಕ್ಷಿಯಾಗಿದ್ದು ಚಂದ್ರಯಾನ, ರಕ್ತದಾನ, ಸ್ತ್ರೀ ಶಿಕ್ಷಣ, ಕ್ರಿಕೆಟ್‌ ವಿಶ್ವಕಪ್‌, ಕರ್ನಾಟಕದ ವಿಶೇಷಗಳು ಹೀಗೆ ಹೊಸ ಹೊಸ ಹತ್ತು ಹಲವು ಯೋಜನೆಗಳನ್ನು ಹೊಂದಿದ ಎಲ್ಲ ತರಗತಿಗಳು ಕಾಲೇಜಿನ ಧ್ವಜವನ್ನು ಹಿಡಿದು ಪಥಸಂಚನದಲ್ಲಿ ಸಾಗಿ ಬಂದ ರೀತಿ ಅವಿಸ್ಮರಣೀಯ. ಅನಂತರ ಕಾಲೇಜಿನ ಕ್ರೀಡಾ ಪ್ರತಿಭೆಗಳಿಂದ ಕ್ರೀಡಾ ಜ್ಯೋತಿ ಆಗಮನ! ಹಾಗೆಯೇ ಗಿನ್ನಿಸ್‌ ಬುಕ್‌ ನಲ್ಲಿ ದಾಖಲೆ ಬರೆದ ಉಸೈನ್‌ ಬೋಲ್ಟ್ ನ ಭಾವಚಿತ್ರವನ್ನು ಹೊತ್ತ ಬಲೂನನ್ನು ಬಾನೆತ್ತರಕ್ಕೆ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ರಾಷ್ಟ್ರಮಟ್ಟದ ಈಜು ಪಟುವಿನಿಂದ ವಿದ್ಯುಕ್ತ ಚಾಲನೆ ನೀಡಲಾಯಿತು.

ಬೃಹತ್‌ ಪಥ ಸಂಚಲನವನ್ನು ಮುಗಿಸಿ ಸುಡುಬಿಸಿಲಿನಲ್ಲಿ ಕುಳಿತಿರುವ ನಮ್ಮೆಲ್ಲರಿಗೆ ತಣ್ಣಗಿನ ಪಾನೀಯವನ್ನು ನೀಡಿ ತನು – ಮನವನ್ನು ತಣಿಸಿದವರು ಕಾಲೇಜಿನ ಕಚೇರಿ ಸಿಬಂದಿ. ಅನಂತರ ಕೆಲವು ವಿದ್ಯಾರ್ಥಿಗಳು ತಮ್ಮ ಕೆಲಸ ಮುಗಿಯಿತು ಎಂಬಂತೆ ತಮ್ಮ ಪಾಡಿಗೆ ತಾವು ಕುಳಿತರು.  ಆದರೆ ಇನ್ನೊಂದೆಡೆ ಸ್ಪರ್ಧೆ ಪ್ರಾರಂಭವಾಯಿತು. ಸ್ಪರ್ಧೆಯಲ್ಲಿ ಎಲ್ಲರೂ ಬಹುಮಾನ ಗೆಲ್ಲಲೇ ಬೇಕೆಂಬ ಹುಮ್ಮಸ್ಸಿನಿಂದ‌  rಚcಛಿ, ಛಜಿscuss ಠಿಜrಟಡಿ, sಜಟಠಿ ಟuಠಿ, jಚvಛಿllಜಿnಛಿ, lಟnಜ juಞಟ ಹೀಗೆ ಎಲ್ಲಾ ಕ್ರೀಡೆಯಲ್ಲೂ ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಳ್ಳುತ್ತಿರುವ ಕ್ರೀಡಾಳುಗಳನ್ನು ನೋಡುವುದೇ ಖುಷಿ, ಸಂಭ್ರಮ ನಮಗೆ.

ಇದರ ನಡುವೆ ಪಾಪ ನಾಯಿಗಳು ತಾವು ಎಲ್ಲಿ ಮಲಗುವುದು ಎಂದು ತಿಳಿಯದೆ ಟ್ರ್ಯಾಕ್‌ ನಲ್ಲಿ ವಿದ್ಯಾರ್ಥಿಗಳ ಜೊತೆ ಓಡುತ್ತಿದ್ದವು. ಅವುಗಳು ದಿನವೂ ಮಲಗುವ ಸ್ಥಳವನ್ನು ನಮ್ಮವರು ಆಕ್ರಮಿಸಿಕೊಂಡಿದ್ದರು. ಅವುಗಳು ಸ್ಪರ್ಧೆಯನ್ನು ನೋಡುತ್ತಾ ಸ್ಪರ್ಧಾಳುಗಳ ಜೊತೆ ತಾವು ಓಡುತ್ತಾ ಖುಷಿ ಅನುಭವಿಸಿದವು. ಇನ್ನೊಂದು ವಿಶೇಷವೇನೆಂದರೆ ನಮ್ಮ ಸ್ನೇಹಿತರೆ ವಿವಿಧ ಬಗೆಯ ತಿಂಡಿ, ತಂಪು ಪಾನೀಯ, ಐಸ್‌ ಕ್ರೀಮ್‌ ಮಾಡುವ ಎರಡು ಸ್ಟಾಲ್‌ ಗಳನ್ನು ಇಟ್ಟಿದ್ದರು. ಇಲ್ಲಿ ಗ್ರಾಹಕರು – ಉತ್ಪಾದಕರು ಎಲ್ಲವೂ ವಿದ್ಯಾರ್ಥಿಗಳೇ…!  ಸ್ನೇಹಿತರಿಗಾಗಿ ಮಾರುವವರು ಒಂದೆಡೆಯಾದರೆ, ಕೊಳ್ಳುವವರು ಇನ್ನೊಂದೆಡೆ.

ಪ್ರತಿ ವರ್ಷ ನಮ್ಮ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಮುಖ್ಯ ಅತಿಥಿ ಎಂದರೆ ಡೋಲು – ಬೋಲು. ನಾವೆಲ್ಲರೂ ಡೋಲು ಬೋಲುವಿನ ಆಗಮನಕ್ಕಾಗಿ ಕಾದು ಕುಳಿತಿರುವುದು ಮಾತ್ರವಲ್ಲದೆ ಯಾರು ಈ ಡೋಲು ಬೋಲು?? ಎಂಬುದನ್ನು ಪತ್ತೆ ಹಚ್ಚುವ ಪತ್ತೆದಾರಿಗಳಾಗಿಯೂ ನಮ್ಮ ಚುರುಕು ಬುದ್ಧಿ ಓಡುತ್ತಿತ್ತು. ಕೇವಲ ವಿದ್ಯಾರ್ಥಿಗಳು ಮಾತ್ರ ಸ್ನೇಹಿತರನ್ನು ಹುರಿದುಂಬಿಸುವುದಲ್ಲ, ಉಪನ್ಯಾಸಕರು ಮಕ್ಕಳ ಜೊತೆ ಮಕ್ಕಳಾಗಿ ಸುಡು ಬಿಸಿಲಿನಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಪೋ›ತ್ಸಾಹಿಸುತ್ತಾ ಅವರ ಗೆಲುವಿಗಾಗಿ ಕಾಯುತ್ತಿದ್ದರು. ಕ್ರೀಡೆಯಲ್ಲಿ ಎಲ್ಲಾ ಸ್ಪರ್ಧೆಗಳು ಮುಗಿದು overall winners, runners ಹಾಗೂ march past ನ ವಿಜೇತರು ಯಾರಾಗುತ್ತಾರೆಂಬ ಕುತೂಹಲದಲ್ಲಿ ಕುಳಿತ ಕ್ಷಣ.

ಇನ್ನು ಕೆಲವೇ ಕೆಲವು ವಿಜೇತರ ಪಟ್ಟಿ ಓದಿದ್ದಾಗಿತ್ತು. ಅದರಲ್ಲಿ ನಮ್ಮ ತರಗತಿಯ ಪಥ ಸಂಚಲನದಲ್ಲಿ ದ್ವಿತೀಯ ಸ್ಥಾನ ಬಂದಿತ್ತು. ಅಷ್ಟರಲ್ಲಿ ವರುಣ ನಮ್ಮ ತಂಡದ ಗೆಲುವಿಗಾಗಿ ಕಾಯುತ್ತಿದ್ದನು ಎಂಬಂತೆ ಗುಡುಗು ಸಿಡಿಲಿನ ಚಪ್ಪಾಳೆಯ ಅಭಿನಂದನೆಯನ್ನು ಸಲ್ಲಿಸುತ್ತಾ ಮೂರು ವರ್ಷಗಳಿಂದ ನಮ್ಮ ಇಡೀ ತಂಡ ಪಟ್ಟ ಪ್ರಯತ್ನಕ್ಕೆ ಪ್ರತಿಫ‌ಲ ದೊರೆತ ಕ್ಷಣ.

ಬೆಳಿಗ್ಗೆಯಿಂದ ಸುಡು ಬಿಸಿಲಿದ್ದು ತಕ್ಷಣ ಬಾನ ಮೋಡ ಮಳೆಯಾಗಿ ಬಂದಾಗ ನನಗೆ ಅನಿಸಿದ್ದು ಹೀಗೆ – ನಮಗಿಂತ ಹೆಚ್ಚಾಗಿ ವರುಣನೇ ನಮ್ಮ ಗೆಲುವಿಗಾಗಿ ಕಾಯುತ್ತಿದ್ದನೋ? ಎಂಬಂತೆ. ಎಲ್ಲ ವಿದ್ಯಾರ್ಥಿಗಳ ಒಗ್ಗಟ್ಟಿನ ಸಂತಸದ ಕೇಕೆ. ಆದರೆ ಪ್ರತಿ ವರ್ಷದಂತೆ ಈ ವರ್ಷ ಕೊನೆಯಲ್ಲಿ ಡಿಜೆಗೆ ಎರಡು ಹೆಜ್ಜೆ ಹಾಕಲಿಲ್ಲ ಎಂಬ ಬೇಸರ ನಮಗೆ.

ಆಗ ತಾನೇ ಸುಡುವ ಧರೆ ತಂಪಾದ ಸಮಯ. ಮೇಘಗಳು ಕಣ್ಣ ಮುಚ್ಚಾಲೆ ಆಡುತ್ತಾ ಉರಿಯುವ ಭೂರಮೆಗೆ ತುಂತುರಿನ ಸ್ಪರ್ಶ ಮಾಡಿದಂತಾಯಿತು. ಗೆದ್ದ ತಂಡ ಸಂತಸದಿಂದ ನವಿಲು ಗರಿ ಬಿಚ್ಚಿ ಕುಣಿದಂತೆ ನಲಿದಾಡಿದರು. ಮಳೆಯ ಒಂದೊಂದು ಹನಿಗಳು ಪ್ರತಿಯೊಬ್ಬರ ಪರಿಶ್ರಮ, ಕನಸನ್ನು ಪೃಥ್ವಿಗೆ ತಿಳಿಸಿದಂತಾಗುತ್ತಿತ್ತು. ಎಲ್ಲರ ಸಂತಸ ನೋಡುತ್ತಿದ್ದ ಪಾಪದ ನಾಯಿಯೂ ಸಹ ಮಳೆಯಲ್ಲಿ ನೆನೆಯುತ್ತಾ ಸಂಭ್ರಮವನ್ನುಂಡಂತಾಯಿತು. ಗೆದ್ದವರ ಮನಸ್ಸನ್ನು ಪ್ರಶಾಂತಗೊಳಿಸಿದರೆ ಸೋತವರ ಕಣ್ಣೀರನ್ನು ಒರೆಸುವ ವರುಣನು ಈ ಕ್ಷಣ ಶಾಶ್ವತವಲ್ಲ; ಸೋಲು ಎಂಬುದು ಎಂದಿಗೂ ಶಿಕ್ಷೆಯಲ್ಲ, ಗೆಲುವು ಎಂಬುದು ಎಂದಿಗೂ ರಕ್ಷೆಯಲ್ಲ ಎಂದು ಎಲ್ಲರಿಗೂ ತಿಳಿಸಿದ ಹಾಗೆ ಇತ್ತು. ನನ್ನ ಕೊನೆಯ ಸ್ಪೋರ್ಟ್ಸ್ ಡೇ ನೆನಪಿನ ಬುತ್ತಿಯನ್ನು ಕಟ್ಟಿಕೊಂಡು ಮರೆಯದ ಮಾಣಿಕ್ಯದಂತೆ ನೆನಪಿನಲ್ಲಿ ಉಳಿಯುವುದು ಮಾತ್ರ ಖಂಡಿತ.

 ರಶ್ಮಿ ಉಡುಪ

ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

 

ಟಾಪ್ ನ್ಯೂಸ್

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.