Folk Dance: ಜಾನಪದ ಸಾಹಿತ್ಯದ ಒಂದು ಭಾಗ- ಕಂಸಾಳೆ
Team Udayavani, Feb 4, 2024, 8:00 AM IST
ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಜಾನಪದ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರ ಎನಿಸಿದೆ ನಮ್ಮ ಪರಂಪರೆಯ ಜೀವಂತಿಕೆ ಇರುವ ಜಾನಪದ ಸಾಹಿತ್ಯ ಹಾಗೂ ಕಲೆಗಳ ಸಂರಕ್ಷಣೆ ಬಹಳ ಅಗತ್ಯವಿದೆ. ಆಡು ಮುಟ್ಟದ ಸೊಪ್ಪಿಲ್ಲ ಜಾನಪದ ಹೇಳದ ವಿಷಯಗಳಿಲ್ಲ ಜಾನಪದರು ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ನಿರತರಾಗಿದ್ದರೂ ಅನಕ್ಷರಸ್ಥರಾಗಿದ್ದರು.
ಸ್ವಾನುಭವದ ಸಂಗತಿಗಳನ್ನು ಕಾವ್ಯಗಳಾಗಿ, ಕಥೆಗಳಾಗಿ ಕಟ್ಟಿಕೊಡುತ್ತಿದ್ದರು. ಆದರೆ ಆಧುನಿಕತೆ ತಾಂತ್ರಿಕ ಯುಗದಲ್ಲಿ ಈಗಿನ ಯುವ ಸಮೂಹ ಟಿವಿ ಮೊಬೈಲ್ ಅಂತರ್ಜಾಲದಂತಹ ಪ್ರಭಾವಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆಯಿಂದ ವಿಮುಖರಾಗಿದ್ದಾರೆ ಹೀಗಾಗಿ ಭವಿಷ್ಯದ ಯುವ ಜನಾಂಗಕ್ಕೆ ಜಾನಪದ ಕಲೆ ಸಾಹಿತ್ಯದ ಅರಿವು ಮೂಡಿಸುವ ಕೆಲಸ ಮಾಡಬೇಕು.
ಡೊಳ್ಳು ಕುಣಿತ, ಕಂಸಾಳೆ, ಕರಡಿಮಜಲು, ವೀರಗಾಸೆ ನಂದಿಕೋಲು ಕುಣಿತ ಈ ರೀತಿಯ ವಿವಿಧ ಪ್ರಕಾರಗಳನ್ನು ನಾವು ನೋಡಬಹುದು ಅದರಲ್ಲಿ ನನಗಿಷ್ಟವಾದದ್ದು ಕಂಸಾಳೆ ನೃತ್ಯ.
ಇದು ಮೈಸೂರು,ನಂಜನಗೂಡು, ಮಂಡ್ಯ ಕೊಳ್ಳೇಗಾಲ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಪ್ರಚಲಿತವಾಗಿರುವ ನೃತ್ಯ ಪ್ರಕಾರವಾಗಿದೆ ಹಾಗೆಯೇ ಈ ಪ್ರದೇಶಗಳಲ್ಲಿ ಕಲೆ ಇಂದಿಗೂ ಜೀವಂತವಾಗಿದೆ.
ಇದು ಮಹದೇಶ್ವರನ ಭಕ್ತ ವೃಂದದವರಿಂದ ಪ್ರಾರಂಭಿಸಲ್ಪಟ್ಟ ಜಾನಪದ ಕಲೆ, ದೇವರ ಗುಡ್ಡರು ಬಳಸುವ ವಿಶೇಷ ವಾದ್ಯ, ವಾಹನ ಸಂಚಾರ ಕಡಿಮೆ ಇದ್ದ ಆ ದಿನಗಳಲ್ಲಿ ಜನರು ಮಹದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಗುಂಪು ಗುಂಪಾಗಿ ಸಾಗುತ್ತಿದ್ದರು. ದಟ್ಟ ಅರಣ್ಯದಲ್ಲಿ ಹೀಗೆ ಸಾಗುವಾಗ ಕಾಡು ಪ್ರಾಣಿ ಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಕಂಚಿನಿಂದ ಮಾಡಿದ ಜೋಡಿ ಕಂಸಾಳೆಯನ್ನು ಬಳಸುತ್ತಿದ್ದರು. ಕಂಸಾಳೆಯನ್ನು ಕೈಯಲ್ಲಿ ಹಿಡಿದು ತಾಳ ಹಾಕುತ್ತ ಶಿವಶರಣನ ಮಹಿಮೆಗಳನ್ನು ಹಾಡುತ್ತ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಪ್ರಯಾಣ ಮಾಡುತ್ತಿದ್ದರು. ಹೀಗೆ ಪ್ರಾರಂಭವಾದ ಕಲೆಯು ಈಗ ನಾಗರಿಕತೆ ಬೆಳೆದ ಮೇಲೂ ತನ್ನ ಕಂಪನ್ನು ಉಳಿಸಿಕೊಂಡಿದೆ. ಕಂಸಾಳೆ ನೃತ್ಯ ಹಲವು ಶತಮಾನಗಳಿಂದ ಆಚರಣೆಯಲ್ಲಿದೆ. ಈ ನೃತ್ಯವನ್ನು ಸಾಮಾನ್ಯವಾಗಿ 10-12 ನೃತ್ಯ ಗಾರರ ದೊಡ್ಡ ಗುಂಪುಗಳಲ್ಲಿ ಮಾಡಲಾಗುತ್ತದೆ.
ಕಂಸಾಳೆ ನೃತ್ಯದಲ್ಲಿ ಬಳಸುವ ಹಾಡುಗಳು ಮತ್ತು ನೃತ್ಯಗಳು ಸಾಮಾನ್ಯವಾಗಿ ಭಗವಂತನನ್ನು ಸ್ತುತಿಸುತ್ತದೆ. ಸಾಮಾನ್ಯ ಜನರು ಎದುರಿಸುತ್ತಿರುವ ತೊಂದರೆ ಗಳನ್ನು ತಿಳಿಸುತ್ತದೆ. ಈ ರೀತಿಯಾಗಿ ಕಂಸಾಳೆ ನೃತ್ಯವೂ ಪ್ರಚಲಿತವಾಗಿದೆ, ಹಾಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ.
-ರಂಜಿತ ಎಚ್. ಕೆ.,
ಹಾಸನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
ಹೋಮ್ ವರ್ಕ್ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.