Father: ನಿಸ್ವಾರ್ಥ ಬದುಕನ್ನು ನಡೆಸುವ ವ್ಯಕ್ತಿ
Team Udayavani, Sep 20, 2023, 10:00 AM IST
ತಂದೆ. ಈ ಪದದಲ್ಲಿ ಅಡಗಿರುವ ವ್ಯಕ್ತಿತ್ವವನ್ನು ನಾ ಹೇಗೆಂದು ವರ್ಣಿಸಲಿ? ಆತನನ್ನು ವರ್ಣಿಸಲು ಪದಗಳು ಸಾಲಬಹುದೇ? ಅವನ ಪ್ರೀತಿ ಮತ್ತು ಶ್ರಮಗಳಿಗೆ ನಮ್ಮಿಂದ ಬೆಲೆ ಕಟ್ಟಲು ಸಾಧ್ಯವೇ? ಎಂದೆಲ್ಲ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತದೆ. ಕುಟುಂಬದವರಿಗೋಸ್ಕರ ದಿನನಿತ್ಯ ಬೆವರು ಸುರಿಸಿ ದುಡಿಯುವ ಆ ನಿಸ್ವಾರ್ಥ ಮನಸ್ಸಿಗೆ ನಾ ಏನೆಂದು ಹೇಳಲಿ? ತಾನು ಎಷ್ಟು ದುಡಿದು ಮಡಿದರೂ ಕೂಡ ಅದನ್ನು ಯಾರೊಂದಿಗು ತಿಳಿಸದೆ ತನ್ನೆದೆಯೊಳಗೆ ಮುಚ್ಚಿಟ್ಟುಕೊಂಡು ಎಲ್ಲರೊಂದಿಗೆ ಅರಳಿದ ನಗು ಮುಖದಿ ಮಾತನಾಡುವ ಮುದ್ದು ಜೀವವದು.
ಮಕ್ಕಳಿಗಾಗಲಿ ಮನೆಯ ಬೇರೆ ಯಾರೇ ಸದಸ್ಯರಿಗಾಗಲಿ ಇಲ್ಲ ಎಂದು ಹೇಳದೆ ಅವರಿಗೋಸ್ಕರ ಎಲ್ಲವನ್ನು ತಂದು ಕೊಡುತ್ತಾನೆ. ತಂದೆ ನೀಡುವಂತಹ ಪ್ರೀತಿ, ಕಾಳಜಿ ಮತ್ತು ರಕ್ಷಣೆಯನ್ನು ಬೇರೆ ಯಾರಿಂದಲೂ ನೀಡಲು ಸಾಧ್ಯವಿಲ್ಲ. ತನಗೆಷ್ಟೇ ಕಷ್ಟಗಳು ಬಂದರು ಮಕ್ಕಳು, ಮನೆಯವರು ಸಂತೋಷದಿಂದ ಜೀವಿಸಬೇಕು ಎಂದು ಬಯಸುವ ಈ ನಲ್ಮೆಯ ಮನಸ್ಸಿನ ತಂದೆಗೆ ನಾವೆಲ್ಲ ಶಿರಬಾಗಿ ನಮಿಸಲೇಬೇಕು. ಮಾತ್ರವಲ್ಲ ಅವನ ಕಷ್ಟಗಳನ್ನರಿತು ಅವನೊಂದಿಗೆ ಕೈ ಜೋಡಿಸುವಂತವರಾಗಬೇಕು. ನಮ್ಮಿಂದಾಗಿ ನೋವು ಅನುಭವಿಸದಂತೆ, ಅವನು ನಮ್ಮನ್ನೆಲ್ಲ ಹೇಗೆ ಸಂತೋಷ ಎಂಬ ಸಾಗರದಲ್ಲಿ ಕೊಂಡೊಯ್ಯುತ್ತಾನೊ ಹಾಗೆ ನಾವು ಕೂಡ ಅವನನ್ನು ಸಂತೋಷದಿಂದ ನೋಡಿಕೊಂಡು ಅವನ ಹೆಗಲಲ್ಲಿರುವ ಭಾರವನ್ನು ಇಳಿಸುವ ಕೆಲಸವನ್ನು ಮಾಡುವಂತವರಾಗೋಣ.
ತಂದೆ ನಮಗೋಸ್ಕರ ಮಾಡಿದ ತ್ಯಾಗವನ್ನು, ಅವನು ಪಟ್ಟ ಕಷ್ಟಗಳನ್ನು ನಮಗೆ ತೀರಿಸಲು ಸಾಧ್ಯವಾಗದೇ ಇದ್ದರು ಅದರರ್ಧದಷ್ಟಾದರೂ ಅವರ ಋಣ ತೀರಿಸುವ ಮನುಷ್ಯತ್ವವನ್ನು ಬೆಳೆಸುವಂತವರಾಗೋಣ. ತಂದೆಯನ್ನು ಪೀತಿಯಿಂದ, ಕಾಳಜಿಯಿಂದ ನೋಡಿಕೊಂಡು ಅವನ ಸಂತೋಷದಿಂದ ನಮ್ಮ ಸಂತೋಷವನ್ನು ಕಾಣೋಣ. ತಂದೆ ಇದ್ದರೇ ಮಕ್ಕಳು, ಕುಟುಂಬ. ಪ್ರತಿಯೊಬ್ಬರ ಜೀವನದಲ್ಲಿಯೂ ತಂದೆಯ ಪಾತ್ರ ಬಹಳ ಪ್ರಮುಖ.ತಂದೆ ಇದ್ದ ಮನೆ ಸದಾ
ಆಶ್ರೀತಾ ಎಂ
ವಿವೇಕಾನಂದ ಕಾಲೇಜು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.