UV Fusion: ಹೋರಾಟಗಾತಿಯೊಬ್ಬಳ ಕಥನ- ವಖಾರಿ ಧೂಸ


Team Udayavani, Aug 22, 2023, 3:42 PM IST

14-uv-fusion

ಆಳುವವರು ಮತ್ತು ಆಳಿಸಿಕೊಳ್ಳುವವರ ಮಧ್ಯದ ಸಂಘರ್ಷ ಇಂದು ನಿನ್ನೆಯದಲ್ಲ. ಬಡವ-ಬಲ್ಲಿದ, ಮೇಲು-ಕೀಳುಗಳೆಂಬ ಭೇದ-ಭಾವ ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ. ಉಳ್ಳವರ ಅಧಿಕಾರದ ಸೊಕ್ಕು, ಹಣದ ಮದವನ್ನು ಇಳಿಸಲು ಕೆಲವೊಮ್ಮೆ ಶೋಷಣೆಗೊಳಗಾಗುವ ವರ್ಗವು ಹೋರಾಟ, ಆಂದೋಲನಗಳೆಂಬ ಅಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ. ಇವರ ಹೋರಾಟದ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿರುತ್ತದೆ. ಕೆಲವೊಮ್ಮೆ ನ್ಯಾಯಕ್ಕಾಗಿ ಧ್ವನಿ ಎತ್ತಿದವರ ದಮನವೂ ಆಗಬಲ್ಲದು ಎಂಬುದನ್ನು ಹೇಳುತ್ತದೆ ವಖಾರಿ ಧೂಸ ನಾಟಕ.

“”ವಖಾರಿ ಧೂಸ” ಇದು ಮರಾಠಿ ಶಬ್ದವಾಗಿದ್ದು, ಗೋದಾಮಿನ ಧೂಳು ಎಂಬರ್ಥವನ್ನು ಕೊಡುತ್ತದೆ. ನಿಪ್ಪಾಣಿ, ಅದರ ಸುತ್ತ ಮುತ್ತಲಿನ ಪ್ರದೇಶಗಳ ಬೀಡಿ ಕಾರ್ಮಿಕರ ಬವಣೆಗಳನ್ನು ಹೇಳುತ್ತದೆ ಈ ನಾಟಕ. ಮಾಲಕರ ಶೋಷಣೆಯನ್ನು ಸಹಿಸಿಕೊಂಡೇ ಬಂದ ಭೀಮವ್ವ ಗಟ್ಟಿಗಿತ್ತಿ. ಶೋಷಣೆಗೊಳಗಾಗಿ ಕುಡಿತ, ಮೋಜುಗಳಲ್ಲಿಯೇ ಬದುಕನ್ನು ದೂಡುತ್ತಿರುವ ತನ್ನ ಸಮುದಾಯದ ಜನರ ಬದುಕನ್ನು ಮೇಲೆತ್ತಬೇಕೆಂಬ ಕಳಕಳಿಯುಳ್ಳವಳು. ಬೀಡಿ ಕಾರ್ಖಾನೆಯ ಮಾಲಕರು ವಖಾರಿಗೆ ದುಡಿಯಲು ಬರುವ ಹೆಂಗಸರ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ತಮ್ಮ ದೇಹದ ಹಸಿವನ್ನು ಇಂಗಿಸಿಕೊಳ್ಳುವವರು. ಕಚ್ಚಾ ಮಾಲನ್ನು ಪೂರೈಸುವ ತಂಬಾಕು ಬೆಳೆಗಾರರಿಗೆ ತರಾವರಿ ಮೋಸ ಮಾಡುವವರು.

ಕಾರ್ಮಿಕರಲ್ಲಿ ಹೋರಾಟದ ಕಿಚ್ಚನ್ನು ಹುಟ್ಟು ಹಾಕುವ ಭೀಮವ್ವ ಬೃಹತ್‌ ಪ್ರಮಾಣದಲ್ಲಿ ಆಂದೋಲನವನ್ನು ನಡೆಸಲು ಕಾರ್ಮಿಕರನ್ನು ಸಜ್ಜುಗೊಳಿಸುತ್ತಾಳೆ. ಇದರ ಸುಳಿವು ಸಿಕ್ಕ ಮಾಲಕರು, ವ್ಯಾಪಾರಿಗಳೆಲ್ಲ ಒಂದಾಗುತ್ತಾರೆ. ಆಂದೋಲನ ನಡೆದರೆ ಕಾರ್ಖಾನೆಗಳ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಕಾರ್ಮಿಕರ ನಾಯಕಿ ಭೀಮವ್ವಳನ್ನು ಮಟ್ಟ ಹಾಕಲು ನಾನಾ ವಿಧದಲ್ಲಿ ಬಲೆ ಹೆಣೆಯತ್ತಾರೆ. ಭೀಮವ್ವನ ಹೋರಾಟಕ್ಕೆ ಹೆಗಲು ಕೊಡಲು ನಿಂತ ಶಶಾಂಕ ದೇಶಪಾಂಡೆ ಎಂಬ ಕಾರ್ಮಿಕ ಹೋರಾಟಗಾರನ ದೌರ್ಬಲ್ಯಗಳನ್ನು ತಿಳಿದುಕೊಂಡು ಆತನನ್ನು ಬೆದರಿಸಿ, ವಿವಿಧ ಆಮಿಷಗಳನ್ನೊಡ್ಡುತ್ತಾರೆ. ಹೋರಾಟಗಾರನ ರೆಕ್ಕೆಗಳನ್ನು ಕತ್ತರಿಸುವಲ್ಲಿ ಯಶಸ್ವಿಯಾಗುತ್ತಾರೆ ಮಾಲಕರು. ಇದಕ್ಕೆಲ್ಲ ಬೆದರದ ಭೀಮವ್ವ ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಆದರೆ ಸಮಯ ಸಾಧಿಸಿ ಭೀಮವ್ವಳನ್ನು ಹಾದಿಯ ಹೆಣವಾಗಿಸುತ್ತಾರೆ ಉಳ್ಳವರು. ಆಕೆಯ ಮಾರ್ಗದರ್ಶಿಯೂ ಹಿತೈಷಿಯೂ ಆದ ಸಾಧು ಬಾಬಾ ಭರವಸೆಯನ್ನು ಕಳೆದುಕೊಂಡ ಕಾರ್ಮಿಕರಲ್ಲಿ ಮತ್ತೆ ಹೋರಾಟದ ಕಿಚ್ಚನ್ನು ಹಚ್ಚುವ ಮೂಲಕ ನಾಟಕಕ್ಕೆ ಪರದೆ ಬೀಳುತ್ತದೆ.

ನಾಟಕದುದ್ದಕ್ಕೂ ಉಪ ಕತೆಯಂತೆ ಹಾಡುಗಳ ರೂಪದಲ್ಲಿ ಬಂದು ಹೋಗುವ ಸಂಗ್ಯಾ-ಬಾಳ್ಯಾ ನಾಟಕದ ಪ್ರಸಂಗಗಳು ಮುದಗೊಳಿಸುತ್ತವೆ. ನಂಬಿದ ಗೆಳೆಯನಿಂದಲೇ ಮೋಸ ಹೋಗಿ ಪ್ರಾಣ ಕಳೆದುಕೊಳ್ಳುವಂತೆ ಇಲ್ಲಿ ಭೀಮವ್ವ ಕೂಡ ತಾನು ನಂಬಿದ ತನ್ನ ಗೆಳೆಯನಿಂದಲೇ ಮೋಸ ಹೋಗುವ ಕತೆಯನ್ನು ಸೂಚ್ಯವಾಗಿ ಹೇಳಿದ್ದಾರೆ ಲೇಖಕರು.

ಸಶಕ್ತ ನಾಟಕಗಳನ್ನು ಬರೆಯುವಲ್ಲಿ ನಿಸ್ಸೀಮರಾದ ಡಿ.ಎಸ್‌. ಚೌಗಲೆ ಅವರ ರಚನೆಯಾದ “”ವಖಾರಿ ಧೂಸ” ನಾಟಕ ಇತ್ತೀಚೆಗೆ ಶಿವಮೊಗ್ಗೆಯ ಸಹ್ಯಾದ್ರಿ ರಂಗ ತರಂಗದ ಕಲಾವಿದರಿಂದ ಪ್ರಯೋಗಗೊಂಡಿತು. ಹಿರಿಯ ನಿರ್ದೇಶಕರಾದ ಕಾಂತೇಶ ಕದರಮಂಡಲಗಿ ಅವರ ನಿರ್ದೇಶನದಲ್ಲಿ ಈ ನಾಟಕ ಪ್ರೇಕ್ಷಕರನ್ನು ರಂಜಿಸಿತು. ಉತ್ತರ ಕರ್ನಾಟಕದ ಗಡಸು ಭಾಷೆಯಿಂದ ಕೂಡಿದ ಸಂಭಾಷಣೆಗಳು, ಗೋಪಾಲ ಸ್ವಾಮಿ ಅವರ ನೆರಳು ಬೆಳಕು, ಸತೀಶ ಸಾಸ್ವೆಹಳ್ಳಿ ಅವರ ಪ್ರಸಾಧನ ನಾಟಕದ ಪ್ಲಸ್‌ ಪಾಯಿಂಟ್‌.

-ಗೌರಿ ಚಂದ್ರಕೇಸರಿ, ಶಿವಮೊಗ್ಗ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.