Upside Down House: ಇಂಗ್ಲೆಂಡ್‌ನ‌ಲ್ಲೊಂದು ತಲೆಕೆಳಗಾದ ವಿಚಿತ್ರ ಮನೆ


Team Udayavani, Sep 3, 2024, 7:03 PM IST

9-uv-fusion

ಭೂಮಿಯ ಮೇಲಿರುವ ಯಾವುದೇ ಒಂದು ಸಹಜವಾದ ವಸ್ತು ತಲೆಕೆಳಗಾದರೆ ಅದು ವಿಚಿತ್ರ ಮತ್ತು ಕುತೂಹಲಕಾರಿ ಸಂಗತಿಯಾಗಿಬಿಡುತ್ತದೆ. ಇಂಗ್ಲೆಂಡ್‌ನ‌ ಬ್ರೆ çಟೋನ್‌ ನಗರದಲ್ಲಿಯೂ ಇದೇ ರೀತಿಯ ಒಂದು ವಿಸ್ಮಯವಿದೆ. ಅಲ್ಲಿ ಅಪ್‌ಸೆçಡ್‌ ಡೌನ್‌ ಆಗಿರುವ ಮನೆಯೊಂದು ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿ ಎಲ್ಲವೂ ತಲೆಕೆಳಗಾಗಿರುವುದರಿಂದ ಇದಕ್ಕೆ ಬ್ರೈಟೊನ್‌ಹೌಸ್‌ ಎಂದು ಹೆಸರಿಡಲಾಗಿದೆ. ಇಲ್ಲಿಗೆ ಭೇಟಿ ನೀಡಿದ ಎಲ್ಲರೂ ಆಶ್ಚರ್ಯ ಚಕಿತರಾಗುತ್ತಿದ್ದಾರೆ. ಇದೊಂದು ಪ್ರವಾಸಿಗರ ಸೆಲ್ಫಿಸ್ಪಾಟ್‌ ಆಗಿಯೂ ಸದ್ಯ ಹೆಸರುವಾಸಿಯಾಗಿದೆ.

ಈ ಬಂಗಲೆಯಲ್ಲಿರುವ ವಿವಿಧ ರೀತಿಯ ಪೀಠೊಪಕರಣಗಳು ಬಂಗಲೆಯ ತಾರಸಿಯ ಒಳಮೈಯಲ್ಲಿದ್ದು, ಇದರೊಳಗಿನ ಶೌಚಾಲಯವೂ ತಲೆಕೆಳಗಾಗಿದೆ. ಇಲ್ಲಿಗೆ ಭೇಟಿ ನೀಡುವ ಜನರು  ಇಲ್ಲಿನ ವಿಚಿತ್ರ ದೃಶ್ಯಗಳನ್ನು ತಮ್ಮ ಕೆಮರಾ ಕಣ್ಣಿನಲ್ಲಿ ಖಂಡಿತವಾಗಿ ಸೆರೆಹಿಡಿದುಕೊಳ್ಳುತ್ತಾರೆ. ಈ ಮನೆಯೊಳಗೆ ಪ್ರವೇಶಿಸಿದರೆ ಎಲ್ಲವೂ ಅಪ್‌ಸೆçಡ್‌ ಡೌನ್‌ ಆಗಿದ್ದು, ಒಂದು ಹೊಸ ಅನುಭವವನ್ನು ನೀಡುತ್ತದೆ.

ಇಂಗ್ಲೆಂಡ್‌ ದೇಶದಲ್ಲಿ ಒಟ್ಟು ಇಂತಹ ನಾಲ್ಕು ಮನೆಗಳಿದ್ದು, ಒಂದೇ ಕಂಪನಿಯು ಇಂಥ ವಿಚಿತ್ರವಾದ ಮನೆಗಳನ್ನು ವಿಭಿನ್ನ ಪರಿಕಲ್ಪನೆಯೊಂದಿಗೆ ಸೃಷ್ಟಿಸಿದೆ. ಇಂಗ್ಲೆಂಡ್‌ನ‌ ದಕ್ಷಿಣ ಕರಾವಳಿಯ ಕಡಲ ಕಿನಾರೆ ರೆಸಾರ್ಟ್‌ ಬೌರ್ನ್ ಮೌತ್‌ನಲ್ಲಿ ದಿ ಟ್ರಯಾಂಗಲ್‌ ಅನ್ನು 2018ರಲ್ಲಿ ಕಂಪೆನಿಯು ನಿರ್ಮಿಸಿದ್ದು, ಇಂತಹ ಇನ್ನೆರಡು ಮನೆಗಳನ್ನು ಎಸೆಕ್ಸ್ ನ ಲೇಕ್‌ಸೈಡ್‌ ಮತ್ತು ಡೋರ್ಸೆಟ್‌ನ ಅಡ್ವೆಂಚರ್‌ ವಂಡರ್‌ ಲ್ಯಾಂಡ್‌ನ‌ಲ್ಲಿ ನಿರ್ಮಿಸಲಾಗಿದೆ.‌

ಪ್ರತೀ ಋತುವಿನಲ್ಲೂ ಈ ಮನೆಗಳ ಒಳ ಮತ್ತು ಹೊರ ವಿನ್ಯಾಸ ಹಾಗೂ ಬಣ್ಣದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದ್ದು ಚಳಿಗಾಲದಲ್ಲಿ ಇದು ಹಿಮದ ಬಣ್ಣದ ಮನೆಯಾಗಿ ಬದಲಾಗಿ ಇದರಲ್ಲಿ ತಲೆಕೆಳಗಾದ ಸಾರಂಗಗಳು ಬಣ್ಣ ಬಣ್ಣದ ದೀಪಗಳಿಂದ ಮಿನುಗುತ್ತಿರುತ್ತವೆ. ಹಬ್ಬಗಳ ಸಂದರ್ಭಗಳಲ್ಲಂತೂ ವಿಭಿನ್ನವಾದ ಒಳಾಂಗಣ ವಿನ್ಯಾಸವನ್ನು ನಿರ್ಮಿಸಲಾಗುತ್ತದೆ. ದಿ ಬ್ರೆ çಟೋನ್‌ ಹೌಸ್‌ ಬ್ರಿಟಿಷ್‌ ಏರ್ವೇಸ್‌ನ -360 ವೀಕ್ಷಣಾ ಗೋಪುರದ ಬಳಿಯಿರುವುದು ಇಲ್ಲಿನ ಮತ್ತೂಂದು ವಿಶೇಷ.

ಅಪ್‌ಸೆçಡ್‌ ಡೌನ್‌ ಹೌಸ್‌ನ ಸಿಇಒ ಆಗಿರುವ ಟಾಮ್‌ ಡಿರ್ಸೆ ಅವರು ಹೇಳುವಂತೆ ಈ ಮನೆಯನ್ನು ಒಂದಕ್ಕೊಂದು ಕೋನಗಳಲ್ಲಿ ಸರಳವಾಗಿ ಒಟ್ಟಿಗೆ ಹೊಂದಿಕೊಳ್ಳುವ ಮರದ ಫ‌ಲಕಗಳಿಂದ ನಿರ್ಮಿಸಲಾಗಿದೆ. 2013ರಲ್ಲಿ ಮೈನರ್‌ ಆನ್‌ ದಿ ಮೂನ್‌ ಎಂಬ ಯೋಜನೆಯಲ್ಲಿ ಕೆಲಸ ಮಾಡಿದ್ದ ಅಲೆಕ್ಸ್‌ ಚಿನ್ನೆಕ್‌ ಎಂಬಾತನೇ ಈ ತಲೆಕೆಳಗಾದ ಮನೆಯನ್ನೂ ನಿರ್ಮಿಸಿದ ಕಲಾವಿದ.

ಈ ಮನೆಯೊಳಗೆ ಕಾಲಿಟ್ಟರೆ ತಲೆ ತಿರುಗುತ್ತದೆ. ಈ ಮನೆಯನ್ನು ಹೊರಗಿನಿಂದ ನೋಡಿದಾಗ ಮನೆ ಸಂಪೂರ್ಣವಾಗಿ ತನ್ನ ಛಾವಣಿಯ ಮೇಲೆ ನಿಂತಂತೆ ಕಾಣುತ್ತದೆ. ಸಂದರ್ಶಕರಿಗೆ ಪಕ್ಕದ ಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಈ ಮನೆಯೊಳಗೆ ಕಚೇರಿ, ವಾಸಿಸುವ ಸ್ಥಳ, ಮಲಗುವ ಕೋಣೆ ಮತ್ತು ಸ್ನಾನಗೃಹ ಸೇರಿದಂತೆ ಹಲವಾರು ಕೊಠಡಿಗಳಿವೆ. ಮನೆಯೊಳಗೆ ನೈಜ ಪೀಠೊಪಕರಣಗಳು ಮತ್ತು ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ ಅವೆಲ್ಲವೂ ತಲೆಕೆಳಗಾಗಿ ಅಳವಡಿಸಲಾಗಿದೆ. ಕೋಣೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಮರಗಳನ್ನೇ ಬಳಸಲಾಗಿದೆ. ಈ ಮನೆಗಳ ಪ್ರವೇಶಕ್ಕೆ ಸಂದರ್ಶಕರೊಬ್ಬರಿಗೆ 4 ಪೌಂಡ್‌ (ಭಾರತೀಯ ಹಣದಲ್ಲಿ ರೂ.344/-) ದರವನ್ನು ನಿಗದಿಪಡಿಸಲಾಗಿದೆ.

-ಸಂತೋಷ್‌ ರಾವ್‌ ಪೆರ್ಮುಡ

ಬೆಳ್ತಂಗಡಿ

ಟಾಪ್ ನ್ಯೂಸ್

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

BBK11: ಬಿಗ್‌ಬಾಸ್‌ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ

ARMY (2)

Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?

Tollywood: ಲೋಕೇಶ್‌, ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್‌ ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

15

UV Fusion: ಬೆಳಕಿನೊಂದಿಗೆ ಸಂತೋಷ ಹರಡಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

hk-patil

Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ

lakshaman-savadi

Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ‌‌‌: ಲಕ್ಷ್ಮಣ ಸವದಿ

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Khandre

Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ

firing

Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.