UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ
Team Udayavani, Jan 5, 2025, 11:44 AM IST
ಗಗನಚುಂಬಿಸುವ ಐಷಾರಾಮಿ ಕಟ್ಟಡಗಳಲ್ಲಿ ವಾಸಿಸುವ ಜನರು ಒಂದೆಡೆಯಾದರೆ, ತುತ್ತು ಅನ್ನಕ್ಕೂ ದಿನದ ದುಡಿಮೆ ನಂಬಿ ಮಂಡಿ ಚಾಚಿಯೂ ಮಲಗಲು ಅಸಾಧ್ಯವಾದ ಮನೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಮತ್ತೂಂದೆಡೆ. ಇದು ಒಂದೇ ನಾಣ್ಯದ ಎರಡು ಮುಖದ ರೀತಿ ಕಾಣುವ ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ಎಂಬ ಬೃಹತ್ ನಗರದ ಪರಿಸ್ಥಿತಿ. ಮುಂಬಯಿ ಮಹಾನಗರದ ಹೃದಯ ಭಾಗದಲ್ಲಿರುವ ಏಷ್ಯಾದ ಅತೀದೊಡ್ಡ ಕೊಳಗೇರಿ ಎಂದೇ ಕರೆಯುವ ಧಾರಾವಿ ಪ್ರದೇಶವು ಸುಮಾರು 590 ಎಕರೆ ಜಾಗದಲ್ಲಿ ಹೊಂದಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ.
ಇಸಿಹಾಸವನ್ನು ತಿರುಗಿ ನೋಡಿದಾಗ ಧಾರಾವಿ ಕೊಳಗೇರಿಗೆ ಅದರದ್ದೇ ಆದ ಬೆಳೆದುಬಂದ ಹಾದಿಯುಂಟು. ಸಮುದ್ರ ತಟದಲ್ಲಿರುವ ನಗರಕ್ಕೆ ಸ್ವಾತಂತ್ರ್ಯೋತ್ತರ ಭಾರತದಲ್ಲೇ ವ್ಯಾಪಾರ ಹಾಗೂ ವಾಣಿಜ್ಯ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದವು.ಅನಂತರ ಕೈಗಾರಿಕಾ ಕ್ರಾಂತಿಯಿಂದ ಕೋಲ್ಕತಾ ಹಾಗೂ ಮುಂಬಯಿ ನಗರಗಳಲ್ಲಿ ಮಾತ್ರವೇ ಕೈಗಾರಿಕೆಗಳು ಸ್ಥಾಪನೆಯಾದವು. ವಿವಿಧ ರೀತಿಯ ಉದ್ಯಮಗಳು ಉದ್ಯಮಿಗಳ ಬಂಡವಾಳದಿಂದ ಪ್ರಾರಂಭವಾದವು.
ಅದರಲ್ಲಿ ಮುಂಬಯಿ ನಗರವು ಅತೀ ಹೆಚ್ಚು ಮಹತ್ವವನ್ನು ಪಡೆಯುವಲ್ಲಿ ಸಾಧ್ಯವಾಯಿತು ಅದಕ್ಕೇ ಕಾರಣ ದೇಶದ ಮಧ್ಯ ಭಾಗದಲ್ಲಿರುವ ಕಾರಣಕ್ಕೆ ಕೆಲಸಗಳನ್ನು ಅರಸಿಕೊಂಡು ದಕ್ಷಿಣ ಹಾಗೂ ಉತರ್ತ ಭಾರತದಿಂದ ವಲಸಿಗರು ಬರಲು ಪ್ರಾರಂಭಿಸಿದರು. ಅಂತಹ ಐಷಾರಾಮಿ ನಗರಕ್ಕೆ ಅರಸಿ ಬಂದ ಕಾರ್ಮಿಕರಿಗೆ ಬರುವ ದಿನಗೂಲಿಯಲ್ಲಿ ವಾಸಿಸಲು ಜಾಗವಿರದೇ ಜೀವನ ಸಾಗಿಸಲು ದುಸ್ತರವಾದಾಗ 1883ರಲ್ಲಿ ರೂಪಗೊಂಡ ಕೊಳಗೇರಿ ಪ್ರದೇಶವೇ ಧಾರಾವಿ.
ಸಾಮಾನ್ಯವಾಗಿ ಮನೆ ಬಾಡಿಗೆಗಳು 15 ರಿಂದ 20 ಸಾವಿರದವರೆಗೆ ಇದ್ದರೆ, ಧಾರಾವಿಯಲ್ಲಿ ಕೇವಲ ಎರಡೂ¾ರು ಸಾವಿರ ರೂಪಾಯಿಯಲ್ಲಿ ಮನೆಗಳು ಬಾಡಿಗೆಯ ರೂಪದಲ್ಲಿ ದೊರೆಯುತ್ತವೆ. ಇದೇ ಕಾರಣಕ್ಕೆ ದೇಶದ ನಾನಾ ಮೂಲೆಗಳಿಂದ ಬರುವ ಕೂಲಿ ಕಾರ್ಮಿಕರು ಧಾರಾವಿ ಪ್ರದೇಶದಲ್ಲಿ ತಂಗುತ್ತಾರೆ. ಮುಂಬಯಿ ಎಂಬ ಮಹಾನಗರದಲ್ಲಿ ಮನುಷ್ಯನು ಹಗಲು ರಾತ್ರಿ ಎನ್ನದೇ ಯಂತ್ರದಂತೆ ದುಡಿಯುತ್ತಾನೆ. ವಿಶ್ವದಲ್ಲೇ ಅತೀ ಹೆಚ್ಚು ಜನ ಸಾಂದ್ರತೆ ಇರುವ ಪ್ರದೇಶವೆಂದು ಇದನ್ನು ಕರೆಯಲಾಗುತ್ತದೆ.
ಮಿಥಿಯ ನದಿ ದಡದಲ್ಲಿರುವ ಧಾರಾವಿ ಪ್ರದೇಶವು ಚರ್ಮೋದ್ಯಮ, ಬಟ್ಟೆ ತಯಾರಿಕೆ, ಚಿನ್ನ ತಯಾರಿ ಸೇರಿದಂತೆ 5 ಸಾವಿರಕ್ಕೂ ಅಧಿಕ ಗುಡಿ ಕೈಗಾರಿಕೆಗಳು ಇಲ್ಲಿ ನಡೆಯುತ್ತವೆ. ಪ್ರತಿ ವರ್ಷಕ್ಕ 650 ರಿಂದ 1000 ಬಿಲಿಯನ್ ಡಾಲರ್‌ನಷುx ವ್ಯಾಪಾರ ವಹಿವಾಟು ಇಲ್ಲಿ ನಡೆಯುತ್ತದೆ ಎಂದು ಅಂದಾಜಿಸಲಾಗುತ್ತದೆ. ದೇಶದ ಆರ್ಥಿಕ ಪ್ರಗತಿ ಧಾರಾವಿ ಪ್ರದೇಶವೂ ಒಮದು ಪ್ರಮುಖ ಭಾಗವೇ ಎಂದು ಹೇಳಿದರೆ ತಪ್ಪಾಗಲಾರದು.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ನಿಯಂತ್ರಣಕ್ಕೆ ಮಹಾರಾಷ್ಟÅ ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದು ಸುಳ್ಳಲ್ಲ. ಈ ಹಿಂದೆ 1786ರಲ್ಲಿ ಧಾರಾವಿ ಪ್ರದೇಶಕ್ಕೆ ಪ್ಲೇಗ್ ಎಂಬ ಮಹಾಮಾರಿ ಒಕ್ಕರಿಸಿ ಇಡೀ ಅರ್ಧದಷುx ಜನರನ್ನೇ ಬಲಿತೆಗೆದುಕೊಂಡಿತ್ತು. ಇದೇ ಕಾರಣಕ್ಕೆ ಸರಕಾರಗಳಿಗೆ ನಿಯಂತ್ರಣದ ಸವಾಲಾಗಿತ್ತು. ಆದರೆ ಅಂತಹ ಅನಾಹುತ ಆಗಲಿಲ್ಲ ಎಂದು ಇಡೀ ದೇಶವೆ ನಿಟ್ಟುಸಿರು ಬಿಟ್ಟಿತ್ತು.
ಕೇವಲ ವಾಸಿಸಲು ಪ್ರದೇಶವಾಗಿರದೇ ಅನೇಕ ವಿದೇಶಿಗರು ಧಾರಾವಿ ವೀಕ್ಷಿಸಲು ಬರುತ್ತಾರೆ. ಗೈಡ್‌ಗಳ ಸಹಾಯದಿಂದ ಅಲ್ಲಿನ ಸಂಪೂರ್ಣ ಚಿತ್ರಣವನ್ನು ಪಡೆಯುತ್ತಾರೆ. ದಿವಾರ್, ಸಲಾಂ ಬಾಂಬೆ ಸೇರಿದಂತೆ ಹಲವಾರು ಸಿನೆಮಾಗಳ ಚಿತ್ರಿಕರಣವೂ ಇಲ್ಲಿ ನಡೆದಿದೆ.
-ವಿಜಯಕುಮಾರ ಎಚ್.
ಗದಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Karnataka: ವಿದ್ಯುತ್ ದರದಂತೆ ವರ್ಷವೂ ಬಸ್ ಯಾನ ದರ ಹೆಚ್ಚಳ?
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.