ಕೃಷಿ -ಸಂಸ್ಕೃತಿ: ಅಪ್ಪಟ ಕೃಷಿಕರ ಆಚರಣೆ ಹೊಸ್ತ್


Team Udayavani, Aug 29, 2020, 9:15 AM IST

hosthu-habba-3

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕರಾವಳಿಯ ಪ್ರಮುಖ ಕಸುಬು ವ್ಯವಸಾಯ. ಆ ಪೈಕಿ ಪ್ರಮುಖ ಬೆಳೆ ಭತ್ತ. ಹೀಗಾಗಿ ಭತ್ತಕ್ಕೆ ಹೆಚ್ಚಿನ ಪ್ರಾಶಸ್ತ್ಯ.

ಸೆಪ್ಟಂಬರ್‌ನಲ್ಲಿ ಅಂದರೆ ನವರಾತ್ರಿ ಸಮಯದ ಯಾವುದಾದರೂ ಒಂದು ದಿನ ಹೊಸ್ತ್ ಆಚರಣೆ ನಮ್ಮಲ್ಲಿದೆ.

ಇದು ಮುಂಜಾವ ಪ್ರಾರಂಭವಾಗುವುದರಿಂದ ಹಿಂದಿನ ದಿನದಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು.

ಮಾವಿನ ಎಲೆ, ಹಲಸಿನ ಎಲೆ, ಬಿದಿರಿನ ಚಿಗುರು, ಸಾಂತ್‌(ತೆಂಗಿನ ಗರಿಗಳಿಂದ ಮಾಡುವುದು),ಅಡಿಕೆ, ವೀಳ್ಯದೆಲೆ ಈ ಆಚರಣೆಗೆ ಅಗತ್ಯ.

ಜೂನ್‌ ತಿಂಗಳಲ್ಲಿ ಬಿತ್ತಿದ ಬೆಳೆ ಈ ಸಮಯಕ್ಕೆ ತೆನೆ ಕಟ್ಟಿರುತ್ತದೆ. ಭತ್ತದ ತೆನೆಯನ್ನು ತಮ್ಮದೇ ಅಥವಾ ಬೇರೆಯವರ ಗದ್ದೆಯಿಂದ ತರಲಾಗುತ್ತದೆ. ಬೇರೆಯವರ ಗದ್ದೆಯಿಂದ ತರುವ ಸಂದರ್ಭ ಕೆಲವೆಡೆ ವೀಳ್ಯದೆಲೆ ಅಡಿಕೆ ಇಟ್ಟು ತೆನೆ ತಂದು, ತಮ್ಮ ಮನೆಯ ಗದ್ದೆಯಲ್ಲಿ ಎರಡು ಕೋಲು ನಿಲ್ಲಿಸಿ, ಅದರ ಮೇಲೆ ಇನ್ನೊಂದು ಕೋಲು ಇಟ್ಟು ಅದಕ್ಕೆ ಒರಗಿಸಿ ಇಡುತ್ತಾರೆ.

ಬೆಳಗ್ಗೆ ಬೇಗ ಎದ್ದು ತಂದಿಟ್ಟ ತೆನೆಗೆ ಮನೆಯ ಗಂಡಸರು ಪೂಜೆ ಮಾಡಿ, ಕಾಯಿ ಒಡೆದು, ಮುಳ್ಳುಸೌತೆ ಕತ್ತರಿಸಿಟ್ಟು, ತೆನೆಗೆ ಹಾಲು ಹಾಕಿ, ಆರತಿ ಮಾಡಿ, ತೆನೆ ಕತ್ತರಿಸಿ ಹರಿವಾಣದಲ್ಲಿ ಇಟ್ಟು, ಮಾವಿನ ಎಲೆ ಮೇಲೆ ಹಲಸಿನ ಎಲೆ ಇಟ್ಟು, ಅದರ ಮೇಲೆ ಬಿದಿರು, ತೆನೆಯಿಟ್ಟು, ಬಲ ಮತ್ತು ಎಡ, ಕೆಳಗಿನಿಂದ ಮಡಚಿ, ಸಾಂತಿನಿಂದ ಕಟ್ಟಿ ನಿಲ್ಲಿಸಿದ ಕೋಲಿಗೆ ಕಟ್ಟುತ್ತಾರೆ. ತಲೆಗೆ ಶುಭ್ರ ವಸ್ತ್ರ ಕಟ್ಟಿಕೊಂಡು, ತಲೆಯ ಮೇಲೆ ಹೊತ್ತು ಶಂಖದ ನಾದದೊಂದಿಗೆ ಅಂಗಳಕ್ಕೆ ತಂದು ಮೇಟಿಕಂಬ(ಮರದ ಕಂಬ)ದ ಕೆಳಕ್ಕೆ ಇಟ್ಟು ಅಲ್ಲೊಂದು ತೆನೆ ಕಟ್ಟಿ, ಮತ್ತೆ ತುಳಸಿಕಟ್ಟೆ ಮೇಲೆ ತಂದಿಟ್ಟು ಅಲ್ಲೊಂದು ಕಟ್ಟಿ, ಪುನಃ ತಲೆಯ ಮೇಲೆ ಹೊತ್ತು ಒಳಗೆ ಬರುವಾಗ ಹುಡುಗಿಯರು ತೆನೆಗೆ ಅಕ್ಷತೆ ಹಾಕಿ, ಕಾಲು ತೊಳೆದು ಬರಮಾಡಿಕೊಳ್ಳುವುದು ಸಂಪ್ರದಾಯ.

ಅನಂತರ ದೇವರ ಮುಂದೆ ರಂಗೋಲಿ ಇಟ್ಟು, ಅದರ ಮೇಲೆ ಮಣೆ ಇಟ್ಟು, ಅದರ ಮೇಲೆ ಹರಿವಾಣ ಇಟ್ಟು, ಉಳಿದ ತೆನೆಯನ್ನು ಬಾಗಿಲು, ಮರ, ಅರೆಯುವ ಕಲ್ಲು, ಗೋಧಿಕಲ್ಲು, ಹಡಿಮಂಚ(ಭತ್ತದ ಸೂಡಿಯನ್ನು ಬಡಿಯಲು ಬಳಸುವ ಮೇಜಿನ ತರಹದ್ದು)ಹೀಗೆ ಎಲ್ಲ ಉಪಕರಣಗಳಿಗೆ ಕಟ್ಟಿ ಸಂಭ್ರಮಿಸಲಾಗುತ್ತದೆ.

ತೆನೆ ತರುವ ಸಮಯದಲ್ಲಿ ಒಲೆ ಮೇಲೆ ಕೆಸು ಹಾಗೂ ಹರಿವೆಗಳನ್ನು ಬೇಯಿಸಲು ಇಡುವ ಪದ್ಧತಿ ಇದೆ. ಮಧ್ಯಾಹ್ನ ಊಟಕ್ಕೆ ಹಲವು ಬಗೆಯ ತರಕಾರಿ ಬಳಸಿ ಅಡುಗೆ ಮಾಡಲಾಗುತ್ತದೆ. ಹಾಗೇ ಕೆಸು, ಹರಿವೆಯ ಸಾರು, ಸೌತೆಕಾಯಿಯ ಒಂದು ರೀತಿಯ ಗಸಿ ಆವಶ್ಯಕ. ಅಕ್ಕಿಗೆ ಹೊಸ ತೆನೆಯ 9(ನವರಾತ್ರಿಯ ವಿಶೇಷ)ಭತ್ತ ಸುಲಿದು ವೀಳ್ಯದೆಲೆ ಮೇಲೆ ಇಟ್ಟು ಹಾಲು ಸುರಿದು ಅನ್ನದ ಪಾತ್ರಕ್ಕೆ ಬಿಟ್ಟು ಪೂಜೆ ಮಾಡುವುದು ವಾಡಿಕೆ.

ಸಂಪ್ರದಾಯವೆಂದರೆ ತಮ್ಮ ಮನೆಯ ಹೊಸ್ತಿನ ಊಟ ಮಾಡದೇ ಬೇರೆಯವರ ಮನೆಯಲ್ಲಿ ಹೊಸ ಅಕ್ಕಿಯನ್ನು ಹಾಕಿದ ಅನ್ನ ಉಣ್ಣುವಂತಿಲ್ಲ. ವಿಶೇಷವೆಂದರೆ ವರ್ಷದಲ್ಲಿ 7 ಮನೆಯ ಹೊಸ್ತ್ ಊಟ ಮಾಡಿದರೆ ಒಳ್ಳೆಯದು ಅನ್ನುತ್ತಾರೆ ಹಿರಿಯರು. ಹಾಗೆಯೇ ಆ ವರ್ಷದಲ್ಲಿ ಮದುವೆಯಾದ ಮನೆಯಲ್ಲಿ ವಿಶೇಷ ತುಸು ಹೆಚ್ಚು. ಆ ದಿನ ಹುಡುಗಿಯ ಮನೆಯವರು ತುಪ್ಪ, ಮೊಟ್ಟೆ, ಅವಲಕ್ಕಿ, ಲಡ್ಡು ಮುಂತಾದ ಉಡುಗೊರೆ ಕೊಟ್ಟು ಊಟ ಮಾಡಿ ಹೋಗಬೇಕು. ಹಾಗೇ ಗಂಡನ ಮನೆಯವರು ಸೊಸೆಗೆ ಹೊಸ ಸೀರೆ ಕೊಡಬೇಕು.ಇದನ್ನು “ಮದಿ ಹೊಸ್ತ್’ ಎನ್ನುತ್ತಾರೆ.

ಪದ್ಧತಿ
ಊಟ ಮಾಡುವ ಮುಂಚೆ ಹಿರಿಯವರಲ್ಲಿ “ಹೊಸ್ತ್ ಉಂತೆ'(ಊಟ ಮಾಡುವೆ) ಎಂದು ಹೇಳಿ ಆಶೀರ್ವಾದ ಪಡೆಯುವುದು ರೂಢಿ. ಊಟ ಮಾಡುವ ಮಧ್ಯದಲ್ಲಿ ಏಳಕೂಡದು. ಹಾಗೇ ಊಟ ಮಾಡಿದ ಅನಂತರ ವೀಳ್ಯದೆಲೆ ತಿನ್ನಬೇಕು. ಎಲೆ ತಿನ್ನುವ ಮುಂಚಿತವಾಗಿ ಸೀನುವಂತಿಲ್ಲ ಇದೆಲ್ಲ ಪದ್ಧತಿ.


 ಅಂಜನಿ ಶೆಟ್ಟಿ, ಹಾಲಾಡಿ ಕುಂದಾಪುರ  (ಅತಿಥಿ ಅಂಗಳ)

 

ಟಾಪ್ ನ್ಯೂಸ್

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

de

Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.