UV Fusion: ಆದರ್ಶ ಗುರು
Team Udayavani, Feb 21, 2024, 1:10 PM IST
ನೆನಪುಗಳೆಂದರೆ ಅಮರ ಮತ್ತು ಮಧುರ. ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ಸಿಹಿ-ಕಹಿ ಘಟನೆಗಳು ನಡೆದೇ ಅದೇ ರೀತಿಯಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಮರೆಯಲಾಗದ ಘಟ್ಟವೆಂದರೆ ಕಾಲೇಜು ಜೀವನ. ಏಕೆಂದರೆ ಕಾಲೇಜು ದಿನಗಳಲ್ಲಿನ ಮೆಲುಕು, ಆಗಿನ ಗಮ್ಮತ್ತು ರಸವತ್ತಾದ ಘಟನಾವಳಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಕಾಲೇಜು ಎಂದಾಕ್ಷಣ ನಮ್ಮೆಲ್ಲರ ಕಣ್ಣ ಮುಂದೆ ಬರುವವರು ಶಿಕ್ಷಕರು. ಗುರು ಎಂಬ ಪದವನ್ನು ಉಚ್ಚರಿಸುವಾಗ ಕೇವಲ ನಾಲಿಗೆಯಿಂದ ಉಚ್ಚರಿಸುವುದಿಲ್ಲ, ಬದಲಾಗಿ ಹೃದಯದಿಂದ ಉಚ್ಚರಿಸಿರುತ್ತೇವೆ. ತಂದೆ-ತಾಯಿ ಅನಂತರದಲ್ಲಿ ವಿದ್ಯಾರ್ಥಿ ದೆಸೆಯಿಂದ ಗುರುಗಳೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತಾರೆ. ಅಪ್ಪ-ಅಮ್ಮ ಜೀವನದ ಪಾಠ ಕಲಿಸುತ್ತಾ ಜತೆಯಾದರೆ, ಶಿಕ್ಷಕರು ನಮ್ಮಲ್ಲಿನ ಅಜ್ಞಾನವೆಂಬ ಅಂಧಕಾರವನ್ನು ಕಳೆದು ಜ್ಞಾನದೀವಿಗೆಯನ್ನು ಬೆಳಗಿಸುವವರು ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ ಪಾತ್ರ ಮಹತ್ವ ಮತ್ತು ಅನನ್ಯವಾದದ್ದು.
ಅದು ಪದವಿ ಓದುತ್ತಿರುವ ಸಮಯ, ನಮ್ಮ ಮಹಾವಿದ್ಯಾಲಯಕ್ಕೆ ಒಬ್ಬರು ಹೊಸದಾಗಿ ಪತ್ರಿಕೋದ್ಯಮ ಉಪನ್ಯಾಸಕರಾಗಿ ಸೇರಿಕೊಂಡರು. ಮೊದಲ ದಿನದಿಂದ ನಾನು ಅವರನ್ನು ಬಹಳ ಗಂಭೀರವಾಗಿ ಗಮನಿಸಿದೆ. ಒಂದೇ ನೋಟದಲ್ಲಿ ಅವರ ಸಾಮರ್ಥ್ಯ ಶಕ್ತಿ ಜ್ಞಾನ ಮತ್ತು ವ್ಯಕ್ತಿತ್ವ ನನಗಿಷ್ಟವಾಯಿತು. ಅವರನ್ನು ಹೇಗಾದರೂ ಆಗಲಿ ಮಾತನಾಡಿಸ ಬೇಕೆಂದು ಪ್ರಯತ್ನಪಟ್ಟೆ.
ಅವರು ಜ್ಞಾನವನ್ನು ನಮ್ಮೊಂದಿಗೆ ಹಂಚಿಕೊಂಡು ನನ್ನ ಆದರ್ಶ ಶಿಕ್ಷಕ ಆಗಬೇಕೆಂಬ ಹಂಬಲವೂ ನನ್ನಲ್ಲಿತ್ತು. ಅವರೊಂದಿಗೆ ಬೆರೆತು ಅವರಿಂದ ಅನೇಕ ವಿಷಯಗಳನ್ನು ಕಲಿಯಬೇಕೆಂಬ ಆಸೆ, ಮನಸ್ಸಿನಲ್ಲಿ ಮೊಳಕೆ ಯೊಡೆಯಿತು. ಏಕೆಂದರೆ ಅವರ ತ್ಯಾಗ,ಪ್ರೇರಣೆ,ಧೈರ್ಯ, ದೂರದೃಷ್ಟಿ,ಸ್ಥಿರತೆ ಮತ್ತು ಹವ್ಯಾಸಗಳು ಹೊಸ ರೀತಿಯ ಅನ್ವೇಷಣೆಗಳು ನನ್ನನ್ನು ಪ್ರೇರೇಪಿಸಿ ಅನುಕರಣೆ ಮಾಡುವಲ್ಲಿ ಸಹಕಾರಿಯಾದವು.
ದಿನ ಕಳೆದಂತೆ ಅಕ್ಷಯ ಸರ್ ನಮ್ಮೊಂದಿಗೆ ತಮ್ಮ ಜ್ಞಾನ-ವಿಚಾರಗಳನ್ನು ವ್ಯಕ್ತಪಡಿಸುತ್ತಾ ಆತ್ಮೀಯರಾಗಿ, ಮಾರ್ಗದರ್ಶಕರಾಗಿ, ಸ್ನೇಹಿತರಾಗಿ ನನಗೆ ಪೋ›ತ್ಸಾಹ ನೀಡುತ್ತಿದ್ದರು. ನಮಗೆ ತಿಳಿಯ ಬೇಕಾದದ್ದನ್ನು ಅತ್ಯಂತ ಸರಳವಾಗಿ ಉದಾಹರಣೆಗಳೊಂದಿಗೆ ತಿಳಿಸುತ್ತಿದ್ದರು. ನನ್ನಲ್ಲಿರುವ ಸಾಮರ್ಥ್ಯವನ್ನು ಜೊತೆಗೆ ಪ್ರತಿಭೆಯನ್ನು ಗುರುತಿಸಿ ಪೋ›ತ್ಸಾಹಿಸುತ್ತ ನನಗೆ ಅತ್ಯುತ್ತಮ ಸಲಹೆಗಳನ್ನು ನೀಡುತ್ತ ಪ್ರಯತ್ನವೂ ಯಶಸ್ಸನ್ನು ನೀಡುತ್ತದೆ, ಕಠಿಣ ಪರಿಶ್ರಮ ವಿರಲಿ ಎಂದು ಹೇಳುತ್ತಿದ್ದರು.
ನಿಮ್ಮ ಉತ್ತಮ ಉದಾಹರಣೆಯನ್ನು ಅನುಸರಿಸುವ ಮೂಲಕ ನಾನು ನನ್ನನ್ನು ಕಂಡುಕೊಂಡಲೆಲ್ಲ ನಾನು ಯಾವಾಗಲೂ ಯಶಸ್ವಿಯಾಗುತ್ತೇನೆ ಎಂದು ನನಗೆ ಖಚಿತವಾಗಿ ತಿಳಿದಿದೆ.ಅಲ್ಪ ಅವಧಿಯಲ್ಲಿ ನೀವು ನಮಗೆ ತೋರಿಸಿದ ಪ್ರೀತಿ, ನೀಡಿದ ಪೊ›ತ್ಸಾಹ ಮತ್ತು ಸಹಕಾರಕ್ಕೆ ಧನ್ಯವಾದಗಳು ಸರ್.
ನೀವು ನೀಡಿದ ಜ್ಞಾನವು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ನೀವು ಕಳಿಸಿದ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಮಾದರಿ ವ್ಯಕ್ತಿಯಾಗುತ್ತೇನೆ, ಎಂದು ಭರವಸೆ ನೀಡುತ್ತೇನೆ. ನಿಮ್ಮ ಶ್ರೇಷ್ಠತೆಯ ಹಾದಿಯನ್ನು ನಾನು ಅನುಸರಿಸಿಕೊಂಡು ಹೋಗುತ್ತೇನೆ. ನಿಮ್ಮೊಂದಿಗೆ ಕಳೆದ ಅಮೂಲ್ಯ ಸಮಯ ಎಂದಿಗೂ ಮರೆಯಲು ಸಾಧ್ಯವಿಲ್ಲ.
ನೀವು ನನ್ನ ಗುರುಗಳು ಮಾತ್ರವಲ್ಲ.ನಾನು ಅನುಸರಿಸ ಬೇಕಾದ ನಿಜವಾದ ನಾಯಕ.
–ಸುರಕ್ಷಿತಾ ಮಾಳಿ
ಹುಬ್ಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.