ಅತಿ ಕಿರಿಯ ಐಎಎಸ್‌ ಅಧಿಕಾರಿ ಅನ್ಸರ್‌ ಶೇಕ್

Team Udayavani, Jun 17, 2020, 1:12 AM IST

ಅತಿ ಕಿರಿಯ ಐಎಎಸ್‌ ಅಧಿಕಾರಿ ಅನ್ಸರ್‌ ಶೇಕ್

ಈತ ಭಾರತದ ಅತೀ ಕಿರಿಯ ಐಎಎಸ್‌ ಆಧಿಕಾರಿ. 21ನೇ ವಯಸ್ಸಿನಲ್ಲೇ ದೇಶದ ಅತ್ಯುನ್ನತ ಹುದ್ದೆಗೆ ನಡೆಯುವ  ನಾಗರಿಕ ಸೇವಾ ಪರೀಕ್ಷೆಯನ್ನು  ಎದುರಿಸಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣನಾದ ಚಲಗಾರ.

2016 ಪರೀಕ್ಷೇಯಲ್ಲಿ  ದೇಶಾದ್ಯಂತ 361ನೇ ರ್‍ಯಾಂಕ್‌ ಪಡೆಯುವುದೆಂದರೆ ಸಾಮಾನ್ಯವೇನಲ್ಲ.  ಈ ವ್ಯಕ್ತಿ ಬೇರಾರು ಅಲ್ಲು  ಇಂದು ಹೆಚ್ಚು ಚಿರಪರಿಚಿತರಾಗಿರುವ  ಅನ್ಸರ್‌ ಶೇಕ್‌. ಇವರು ನಡೆದು ಬಂದ ದಾರಿ ಯುವಕರಿಗೆ ಸ್ಫೂರ್ತಿ ತುಂಬುವಂತದ್ದು.

ಅನ್ಸರ್‌ ಹುಟ್ಟಿದ್ದು  ಮಹಾರಾಷ್ಟ್ರದ ಜಲ್ಸಾ ಜಿಲ್ಲೆಯ ಬರಪೀಡಿತ ಗ್ರಾಮ ಶೇಲ್ಗಾಂವ್‌. ಈತನ ತಂದೆ ರಿಕ್ಷಾ ಚಾಲಕರಾಗಿದ್ದು, ಮಧ್ಯದ ಚಟದಿಂದ ಬಳಲುತ್ತಿದ್ದರು. ತಂದೆಯ 3 ಜನ ಪತ್ನಿಯರಲ್ಲಿ ಅನ್ಸರ್‌ ತಾಯಿ ಎರಡನೇಯವರು. ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹದಂತ ಪಿಡುಗನ್ನು ನೊಡುತ್ತ ಬೆಳೆದವರು ಅನ್ಸರ್‌. ಈತನ ಸಹೋದರಿಯರಿಗೆ 15ನೇ ವಯಸ್ಸಿಗೆ ವಿವಾಹವಾಗಿದ್ದು, ಸಹೋದರ ತನ್ನ 6ನೇ ತರಗತಿಗೆ ಶಿಕ್ಷಣ ನಿಲ್ಲಿಸಿ ಚಿಕ್ಕಪ್ಪನ ಗ್ಯಾರೇಜ್‌ನಲ್ಲಿ  ಕೆಲಸ ಮಾಡುತ್ತಿದ್ದ.

4ನೇ ತರಗತಿಯಲ್ಲಿ  ಓದುತ್ತಿರುವಾಗಲೇ ಅನ್ಸರ್‌ನ ಶಿಕ್ಷಣ ನಿಲ್ಲಿಸುವ ತೀರ್ಮಾನಕ್ಕೆ ಬಂದಿದ್ದ ಕುಟುಂಬ ಆತನ ಶಿಕ್ಷಕರ ಮಾತಿನಿಂದ ತಮ್ಮೆಲ್ಲ  ಒತ್ತಡದ ನಡುವೆಯೂ ಓದಿಸಲು  ನಿರ್ಧರಿಸಿತ್ತು. 12ನೇ ತರಗತಿಯಲ್ಲಿ  ಶೇ. 91 ಅಂಕ ಪಡೆದು ಆತ ಅವರ ಬರವಸೆಯನ್ನು  ಇನ್ನಷ್ಟು  ಗಟ್ಟಿಗೊಳಿಸಿದ್ದ.

ಮರಾಠಿ ಮಾಧ್ಯಮದಲ್ಲಿ ಓದಿದ್ದ  ಅನ್ಸರ್‌ ಪದವಿ ಶಿಕ್ಷಣಕ್ಕಾಗಿ ಪುಣೆಯ ಪ್ರತಿಷ್ಠಿತ ಪರ್ಗ್ಯುಸನ್‌ ಕಾಲೇಜಿಗೆ  ಸೇರಿಕೊಳ್ಳುತ್ತಾನೆ. ಈತನ ಶಿಕ್ಷಣಕ್ಕಾಗಿ ಅಣ್ಣ  ತನ್ನ ಸಂಪೂರ್ಣ 6 ಸಾವಿರ ಸಂಬಳ ಮತ್ತು ತಂದೆ ತನ್ನ ಉಳಿತಾಯದ ಸ್ವಲ್ಪ ಹಣವನ್ನು  ಕಳಿಸುತ್ತಿದ್ದರು. ಪರ್ಗ್ಯುಸನ್‌ ಕಾಲೇಜು ಸೇರಿದಾಗ ಅನ್ಸರ್‌ ಬಳಿ ಇದ್ದದ್ದು ಒಂದು ಜೋತೆ ಚಪ್ಪಲಿ ಮತ್ತು ಎರಡು ಜೊತೆ ಬಟ್ಟೆ, ಜತೆಗೆ ಅರೆಬರೆ ಇಂಗ್ಲಿಷ್‌ ಭಾಷೆ. ಆದರೆ ಅನ್ಸರ್‌ ಯಾವುದಕ್ಕೂ ಹಿಂಜರಿಯಲಿಲ್ಲ. ಪದವಿಯ ಪ್ರಥಮ ವರ್ಷದಲ್ಲೇ ಯುಪಿಎಸ್ಸಿ ತರಬೇತಿ ತರಗತಿಗೆ ಸೇರ ಬಯಸುತ್ತಾನೆ.

ಆದರೆ ಇದಕ್ಕೆ ಬೇಕಾಗಿದ್ದ 70 ಸಾವಿರ ದುಡ್ಡು ಹೊಂದಿಸುವುದೇ ಕಷ್ಟವಾಗಿತ್ತು. ತರಬೇತಿ ಕೇಂದ್ರದ ಮುಖ್ಯಸ್ಥ ಅನ್ಸರ್‌ನಲ್ಲಿದ್ದ ಸಾಧಿಸುವ ಆಸಕ್ತಿ ಕಂಡು ಅರ್ಧದಷ್ಟು ರಿಯಾಯಿತಿಯೊಂದಿಗೆ ತರಗತಿಗೆ ಸೇರಿಸಿಕೊಂಡರು. ತರಬೇತಿ ಮುಂದುವರೆದಂತೆ ಹೆಚ್ಚು ಹೆಚ್ಚು ಇತರರೊಂದಿಗೆ ಚರ್ಚೆ, ಸಂವಾದದಲ್ಲಿ ತೊಡಗುತ್ತಿದ್ದ. ಅನ್ಸರ್‌ ಅವರ ಪ್ರಕಾರ ಸಂವಾದ, ಪ್ರಶ್ನಿಸುವ ಗುಣ ಯುಪಿಎಸ್ಸಿ ಆಕಾಂಕ್ಷಿಗಳಲ್ಲಿರಬೇಕಾದ ಒಂದು ಪ್ರಮುಖ ಅಂಶ.

ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡ ಹಾಗೆ ಎಷ್ಟೋ ಬಾರಿ ಊಟಕ್ಕೆ ಹಣವಿಲ್ಲದೇ ಕೇವಲ ಒಂದು ವಡಾಪಾವ್‌ ತಿಂದು ಇರುತ್ತಿದ್ದರಂತೆ. ದಿನಕ್ಕೆ 13 ಗಂಟೆಗಳು ಶೃದ್ಧೆಯಿಂದ ಅಭ್ಯಾಸ ಮಾಡುತ್ತಿದ್ದ ಈತ ಯಶಸ್ಸಿನ ಮೊದಲ ಹೆಜ್ಜೆಯಾಗಿ ಪ್ರಿಲಿಮ್ಸ್‌  ಪಾಸಾದ.

ಆದರೆ ಅದೇ ಸಮಯಕ್ಕೆ ಸಹೋದರಿಯ ಪತಿ ತೀರಿಕೊಳ್ಳುತ್ತಾರೆ. ಮನೆಯ ಬಡತನ ಇನ್ನೂ ಹಾಗೆ ಇತ್ತು ಇಂತ ಕಷ್ಟದ ಪರಿಸ್ಥಿತಿಯಲ್ಲೂ ಆತನ ಕುಟುಂಬ ಓದು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಅನಂತರ ತನ್ನ ಪರಿಶ್ರಮದ ಮೂಲಕ ಮುಖ್ಯ ಪರೀಕ್ಷೆಯನ್ನು ಪಾಸಾಗಿ, ಸಂದರ್ಶನವನ್ನೂ ಎದುರಿಸಲು ಸಜ್ಜಾದ. ಸಂದರ್ಶನವನ್ನು ಸಮರ್ಥ ಉತ್ತರಗಳ ಮೂಲಕ ಎದುರಿಸಿ 275ಕ್ಕೆ  199 ಅಂಕ ಪಡೆದಿರುವದು ಇವರ ಇನ್ನೊಂದು ಮಹತ್ವದ ಸಾಧನೆ.

ನಿಮ್ಮೊಂದಿಗಿರುವ ಲಕ್ಷಾಂತರ ವ್ಯಕ್ತಿಗಳನ್ನು ಎದುರಿಸಿ ಉತೀರ್ಣರಾಗಬೇಕು ಎಂದುಕೊಳ್ಳುವುದು ತಪ್ಪು. ನಿಮ್ಮ ಪರೀಕ್ಷೆ ಇರುವುದು ನಿಮ್ಮೊಂದಿಗೆ ಮಾತ್ರ. ಇದರಿಂದ ನಿಮ್ಮಲ್ಲಿರು ನಿರಾಶಾವಾದಿ ಭಾವನೆ, ಹಿಂಜರಿತಗಳನ್ನು  ಹೊಗಲಾಡಿಸಲು ಸಾಧ್ಯವೆಂದು ಯುಪಿಎಸ್ಸಿ ಆಕಾಂಕ್ಸಿಗಳಿಗೆ ಅನ್ಸರ್‌ ಹೇಳುವ ಕಿವಿಮಾತಿದು.

ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎನ್ನುವುದು ನೀವು ನೆನಪಿನಲ್ಲಿಡಬೇಕಾದ ಮೊದಲ ಅಂಶ. ನಿಮ್ಮ ಮನೆತನದ ಹಿನ್ನೆಲೆ, ನೀವು ಪಡೆಯುವ ಅಂಕಗಳು ನಿಮ್ಮ ಸಾಧನೆಯನ್ನು  ನಿರ್ಧರಿಸಲಾರವು. ಸಾಧನೆಗೆ ಬೇಕಾಗಿರುವುದ ನಿಮ್ಮ ಗಟ್ಟಿ ನಿರ್ಧಾರ ಮತ್ತು ಪರಿಶ್ರಮ. ಬಡತನ, ಕೌಟುಂಬಿಕ ಸಮಸ್ಯೆ ಇನ್ನಿತರ ಕಾರಣಗಳು ಇವು ನಮಗೆ ನಾವು ಹಾಕಿಕೊಳ್ಳುವ  ಹುಸಿ ಬೇಲಿಗಳಷ್ಟೇ. ಸಾಧನೆ ಮಾಡುವ ಚಲವಿದ್ದರೆ ಎಂತಹ ಅಡೆತಡೆಗಳಿದ್ದರೂ ಪುಡಿಗಟ್ಟುವ ಶಕ್ತಿ ನಿಮಗೆ ದೊರೆಯುತ್ತದೆ ಎನ್ನುವುದು ಅನ್ಸರ್‌ ಅವರನ್ನು ನೋಡಿ ತಿಳಿಯಬಹುದು.

– ಶಿವಾನಂದ ಎಚ್‌.

ಟಾಪ್ ನ್ಯೂಸ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.