UV Fusion: ನಿಮ್ಮದು ಚರ ಮನಸ್ಥಿತಿಯಾ..?


Team Udayavani, Nov 30, 2024, 3:40 PM IST

10-uv-fusion

ನನ್ನ ಮಗ ಹೇಳಿದ ಮಾತೇ ಕೇಳಲ್ಲ ಮೇಷ್ಟ್ರೆ. ಎಲ್ಲ ತರದಲ್ಲಿಯೂ ಹೇಳಿ¨ªಾಯಿತು. ಏನ್‌ ಹೇಳಿದ್ರು ಅಷ್ಟೇ. ಯಾವ ಕೆಲಸಾನೂ ನೆಟ್ಟಗೆ ಮಾಡಲ್ಲ ಅಂತಾನೆ. ಅವನ ಮನಸ್ಸೇ ಚಂಚಲ ಮೇಷ್ಟ್ರೆ… ಈ ಕ್ಷಣ ಇದ್ದ ಮನಸು ಇನ್ನೊಂದು ಕ್ಷಣ ಇರಲ್ಲ. ಇದೇ ಸಮಸ್ಯೆ… ಆದ್ರೆ ಇದನ್ನು ಒಪ್ಕೊಳ್ಳದೆ ನಮಗೆನೆ ಹೇಳ್ಳೋಕೆ ಬರ್ತಾನೆ. ಏನ್‌ ಮಾಡೋಕೆ ಹೋದ್ರೂ, ಸ್ವಲ್ಪ ಹೊತ್ತಿಗೆ ಮೂಡ್‌ ಇಲ್ಲ, ಇಂಟರೆಸ್ಟ್‌ ಇಲ್ಲ ಅಂತಾನೆ. ಇವನನ್ನು ಏನ್‌ ಮಾಡ್ಬೇಕು ಹೇಳಿ..?

ಓದೋ ಟೈಮಲ್ಲಂತೂ ಓದಿಲ್ಲ… ಕೊನೆಪಕ್ಷ ಇಂತದ್ದು ಮಾಡ್ತಿನಿ ಅಂತಾದರೂ ಹೇಳಬೇಕಲ್ಲ. ಹೀಗೆ ಆದ್ರೆ ನಾವು ಏನಂತ ತಿಳಿಬೇಕು…? ಏನೋ, ನೀವೇ ಅವನಿಗೆ ಬೈದು ಬುದ್ಧಿ ಹೇಳಿ ಸರಿ ದಾರಿಗೆ ತರಬೇಕು ಹಾಗಂತ ತಾಯಿಯೊಬ್ಬಳು ಹತ್ತಿರದಲ್ಲಿದ್ದ ತನ್ನ ಮಗನನ್ನು ತೋರಿಸುತ್ತಾ ಮೇಷ್ಟ್ರ ಬಳಿ ಅವಲತ್ತುಕೊಂಡಳು.

ಮೇಷ್ಟ್ರು ಮುಗುಳನ್ನಕ್ಕರು. ಅವರಿಗೆ ಎಲ್ಲವೂ ಅರ್ಥವಾಯಿತು. ಈ ಮಹಾತಾಯಿ ಪ್ರಶ್ನೆಯನ್ನು ತಾನೇ ಕೇಳಿಕೊಂಡು, ಅದಕ್ಕೆ ಉತ್ತರವನ್ನು ತಾನೇ ಕಂಡುಕೊಂಡು, ಜಸ್ಟ್‌ ಲೂಸ್‌ ಆಗಿರುವ ಮಗನ ತಲೆಯನ್ನು ಟೈಟ್‌ ಮಾಡಿ ಕಳಿಸಿ ಅನ್ನೊ ತರದಲ್ಲಿ ಕೇಳ್ತಿದ್ದಾರೆ ಅನ್ನಿಸಿತು. ಇವರಿಗೆ ಹೇಳುವುದಕ್ಕಿಂತಲೂ ಆ ಹುಡುಗನೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿದರೆನೆ ಸೂಕ್ತ ಅಂತಂದುಕೊಂಡರು. ಅವರನ್ನು ಹೊರಡುವಂತೆ ಹೇಳಿ ಹುಡುಗನನ್ನು ಮಾತನಾಡಿಸಲು ಮುಂದಾದರು.

ಹಾØ… ಈಗ ಹೇಳಪ್ಪ…ಏನ್‌ ಸಮಾಚಾರ ನಿಂದು… ನಗುನಗುತ್ತಾ ಅವನ ಮೂಡ್‌ ಅನ್ನು ಕ್ಯಾಚ್‌ ಮಾಡಿಕೊಳ್ಳುತ್ತಾ ಕೇಳಿದರು. ಸರ್‌ ಅದು..ಅದು…, ಅದೇ ಗೊತ್ತಾಗ್ತಿಲ್ಲ ಸರ್‌. ಅರೆ…ನನಗೆಲ್ಲ ಅರ್ಥವಾಗ್ತದಪ್ಪ.. ಈಗಷ್ಟೇ ನಿನ್ನ ತಾಯಿ ಎದುರು ನಿನ್ನ ವಹಿಸಿಕೊಂಡು ಮಾತಾಡಿದೀನಿ. ಅದೇನೇ ಇರಲಿ ಹೇಳು.

ಅದೆನೋ ಗೊತ್ತಿಲ್ಲ ಸರ್‌ ಏನೇ ಮಾಡೋಕೆ ಹೋದ್ರೂ ಸ್ವಲ್ಪ ಸಮಯಕ್ಕೆನೆ ಬೋರ್‌ ಆಗ್ತದೆ. ಆಸಕ್ತಿಯಿಂದಲೇ ಶುರುಮಾಡಿರ್ತಿನಿ, ಆದ್ರೆ ಸ್ವಲ್ಪ ಸಮಯಕ್ಕೆ ಎಲ್ಲವೂ ನೀರಸ ಅನ್ನಿಸ್ತಿದೆ. ಇದರÇÉೇನು ಇಲ್ಲ ಇನ್ನು ಬೇರೆನೋ ಬೇಕು ಅನ್ನಿಸುತ್ತೆ. ಇನ್ನೇನೋ ಬೇಕು ಅನ್ನೊ ಹುಡುಕಾಟದಲ್ಲಿ ಬೇರೆದೆನೋ ಮಾಡೋಕೆ ಹೋಗ್ತಿನಿ. ಅಲ್ಲೂ ಸ್ವಲ್ಪ ಸಮಯಕ್ಕೆ ಹೀಗೆ ಅನ್ನಿಸೋಕೆ ಶುರುವಾಗ್ತದೆ. ಎಲ್ಲವೂ ಇಷ್ಟೇ ಅನ್ನಿಸ್ತದೆ. ಯಾಕ್‌ ಹೀಗೆ ಆಗ್ತಿದೆ ಅಂತಾ ಗೊತ್ತಾಗ್ತಿಲ್ಲ ಸರ್‌.

ಯಾವುದೋ ಒಂದು ವಿಷಯ ನಿನ್ನನ್ನು ತುಂಬಾ ಹೊತ್ತು ಇಂಪ್ರಸ್‌ ಮಾಡಲ್ಲ ಅಂದಾಗಾಯಿತು. ಅಂದ್ರೆ, ಪ್ರತಿ ಕ್ಷಣದಲ್ಲೂ ಪ್ರತಿ ಹಂತದಲ್ಲೂ ಹೊಸತನ್ನೆನೋ ನೋಡೋಕೆ ಹಂಬಲಿಸುತ್ತಿಯಾ ಅಂತಾಯಿತು. ಗುಡ್‌, ಖಂಡಿತ ನಿನ್ನದು ಸಮಸ್ಯೆನೆ ಅಲ್ಲ. ಇದು ನಿನ್ನಲ್ಲಿರೋ ಕ್ವಾಲಿಟಿ. ಪ್ರತಿಯೊಂದರಲ್ಲೂ ಸ್ವಾರಸ್ಯವಾದದ್ದೆನನ್ನೊ ನಿರೀಕ್ಷೆ ಮಾಡೋದು ನಿನ್ನ  ಮನಸ್ಸು ಎಂದರು.  ನಿನ್ನ ಮನಸಿಗೆ ಏನೇನ್‌ ತೋಚುತ್ತೂ ಅದನ್ನು ಬರೆಯೋಕೆ ಶುರುಮಾಡು.

ಇಂತದ್ದೇ ವಿಚಾರ ಅಂತಿಲ್ಲ. ನಿನಗೆ ಯಾವ ವಿಷಯದಲ್ಲಿ ಏನ್‌ ಅನ್ನಿಸುತ್ತೂ ಅದನ್ನೆಲ್ಲ ಬರೆಯುತ್ತಾ ಹೋಗು… ಒಂದ್‌ ವೇಳೆ ಅದು ಬೋರ್‌ ಅನ್ನಿಸಿದ್ರೆ, ಅದನ್ನಲ್ಲಿಗೆ ಮುಗಿಸಿ ಬೇರೆ ವಿಷಯದ ಬಗ್ಗೆ ಶುರುಮಾಡು. ಒಟ್ಟಿನಲ್ಲಿ ಬರೆಯೋದನ್ನು ನಿಲ್ಲಿಸಬಾರದು. ಕನಿಷ್ಠ ಎರಡೂ¾ರು ತಿಂಗಳಾದ್ರು ನೀನಿದನ್ನು ಮಾಡ್ಬೇಕು. ದಿನದಲ್ಲಿ ನಿನಗೆ ಇಷ್ಟವಾಗೋ ಯಾವುದಾದರೂ ವಿಷಯದ ಬಗ್ಗೆ ಕನಿಷ್ಠ ಎರಡು ಪುಟಗಳನ್ನಾದರೂ ಬರಿಬೇಕು. ಅದು ಹ್ಯಾಗೆ ಇರಲಿ.

ಮೊದಲು ಇಷ್ಟು ಮಾಡು ಎಂದರು. ಹುಡುಗನಿಗೆ ನಿರಾಳತೆ ಭಾವ ತೋರಿತು.  ಮನೆಗೆ ಬಂದವನೆ ಬರೆಯಲು ಶುರುಮಾಡಿದ. ಮೊದಮೊದಲು ಅವನ ಪೆನ್ನು ಓಡಲಿಲ್ಲ. ಮನಸ್ಸಿನಲ್ಲಿದ್ದ ವಿಚಾರಗಳು ಕದ ತೆರೆದು ಹೊರಬರಲು ಶುರುಮಾಡಿದವೋ, ಆಗಲೇ ಅವನ ಪೆನ್ನು ಸರಾಗವಾಯಿತು. ನಂತರ ಅವನು ಹಿಂತಿರುಗಿ ನೋಡಲಿಲ್ಲ. ಬರೆದ ಬರೆದ ಬರೆದ…

ಇಂತ ವಿಷಯ ಅಂತಿಲ್ಲದೆ ಎಲ್ಲದರ ಬಗ್ಗೆಯೂ ಮನಸ್ಸು ಬಿಚ್ಚಿ ಬರೆದ. ಇಷ್ಟು ದಿನ ಮಾತಿನಲ್ಲಿ ಹೇಳಲಾಗದ ಎಲ್ಲಾ ವಿಷಯಗಳನ್ನು ಬರೆದು ಬರೆದೇ ಹಗುರ ಮಾಡಿಕೊಂಡ. ಯಾವುದೇ ವಿಷಯ ಸ್ವಲ್ಪ ಬೋರ್‌ ಹೊಡೆಯುತ್ತಿದ್ದಂತೆಯೇ ಅದನ್ನಲ್ಲಿಗೆ ಮುಗಿಸಿ ಬೇರೆ ವಿಷಯದ ಕಡೆಗೆ ಶಿಫ್ಟ್ ಆಗುತ್ತಿದ್ದ. ಹೀಗಾಗಿ ಬೋರ್‌ ಎನ್ನುವ ಶಬ್ದವೇ ಮಾಯಾವಾಯಿತು. ಬದಲಾಗಿ ತಾನೂ ಒಂದಷ್ಟು ವಿಷಯಗಳ ಬಗ್ಗೆ ಬರೆಯಬಲ್ಲೆ ಅನ್ನೊ ಸಾಮರ್ಥ್ಯ ತಿಳಿಯಿತು. ಇದು ಅವನಿಗೆ ಬರೆದದ್ದನ್ನು ಪತ್ರಿಕೆಗಳಿಗೆ ಕಳಿಸೋಕೂ ಪ್ರಚೋದನೆಯನ್ನು ನೀಡಿತು. ಮೊದಮೊದಲು ಪತ್ರಿಕೆಗಳಿಂದ ಪ್ರತಿಕ್ರಿಯೆ ಬರಲಿಲ್ಲ.

ಆದರೆ ಅದೊಂದು ದಿನ ಅವನು ತನ್ನ ಏರಿಯಾದ ಒಳಚರಂಡಿಯ ವ್ಯವಸ್ಥೆಯ ಬಗ್ಗೆ ಮಾಡಿದ ಗಂಭೀರ ವರದಿಯೊಂದು ಪೇಪರಿನಲ್ಲಿ ಪ್ರಕಟವಾಗಿ ದೊಡ್ಡ ಸುದ್ದಿ ಮಾಡಿತು. ಮೇಷ್ಟ್ರು ಕೂಡ ಅದನ್ನು ನೋಡಿ ಗಮನಿಸಿದರು. ಅವನನ್ನು ಕರೆಸಿಕೊಂಡು ಶಹಬ್ಟಾಸ್‌ ಗಿರಿ ಹೇಳಿದರು.ಎಲ್ಲ ನಿಮ್ಮಿಂದ ಸರ್‌. ದಿನಕ್ಕೆ ಕನಿಷ್ಠ ಎರಡು ಪುಟ ಬರಿ ಅಂದಿದ್ರಿ. ಆದ್ರೆ ಒಂದೊಂದು ವಿಷ್ಯಾನೇ ನನ್ನನ್ನು ಪುಟಗಟ್ಟಲೆ ಎಳಕೊಂಡು ಹೋದ್ರು… ಆರಂಭದಲ್ಲಿ ಆ ವಿಷ್ಯಗಳ ಬಗ್ಗೆ ನಂಗೇನು ಗೊತ್ತು ಅಂತ  ಸುಮ್ಮನಿರ್ತಿದ್ದೆ.

ಆದರೆ ಬರಿಯೋಕೆ ಶುರುಮಾಡಿದ ಮೇಲೆ ನನಗೆನೆ ಗೊತ್ತಿಲ್ಲದಂತೆ ಹಲವು ವಿಚಾರಗಳು ಸೇರಿಕೊಂಡವು. ಈಗ ಯಾವ್‌ ವಿಷ್ಯ ಕೊಟ್ರೂ ಬರಿಬಹುದು ಅನ್ನೊ ಕಾನ್ಫಿಡೆನ್ಸ್‌ ಸಿಕ್ಕಿದೆ ಸರ್‌.  ನೀನೊಬ್ಬ ಬರಹಗಾರ. ಮುಂದೆ ಪತ್ರಿಕೆಯ ವರದಿಗಾರನಾಗುವ ಸಾಮರ್ಥ್ಯ ನಿನಗೆ ಇದೆ.  ನಿನಗೆ ಅನ್ನಿಸಿದ್ದನ್ನು ಒಂದು ಲಹರಿಯಲ್ಲಿ ಬರೆದುಬಿಡ್ತಿ… ಆದರೆ ಓದುಗನಿಗೆ ಅದು ಬೋರ್‌ ಆಗಲೇಬಾರದು ಅಂತೇನಿಲ್ಲ. ಯಾಕ್‌ ಹೇಳ್ತಿದೀನಿ ಅಂದ್ರೆ, ಯಾವುದು ನಿನಗೆ ಏನ್‌ ಅನುಭವ ನೀಡಿರ್ತದೊ, ಬೇರೆಯವರಿಗೂ ಕೂಡ ಅದೇ ಅನ್ನೊದನ್ನ ಮರಿಬಾರದು. ನೆನಪಿರಲಿ, ಇದು ಒಳ್ಳೆ ವಿಷಯಕ್ಕೂ ಅಪ್ಲೆç ಆಗುತ್ತೆ. ಒಳ್ಳೆದಾಗಲಿ… ಎಂದು ಶುಭ ಹಾರೈಸಿದರು.  ಮೇಷ್ಟ್ರ ಮಾತುಗಳನ್ನು ಕೇಳಿ ಹುಡುಗನಿಗೆ ಮತ್ತಷ್ಟು ಹುರುಪು ಬಂದಂತಾಯಿತು.

-ಮಧುಕರ್‌

ಬಳ್ಕೂರು

ಟಾಪ್ ನ್ಯೂಸ್

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

3-kadaba

Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್‌ ಚಾಲಕ!

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Mangaluru: ಮತ್ತೆ ಫ್ಲೆಕ್ಸ್‌ , ಬ್ಯಾನರ್‌ಗಳ ಉಪಟಳ

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

2

Kundapura: ಒಂದು ಕರೆಗಾಗಿ 3-4 ಕಿ.ಮೀ. ನಡೆಯಬೇಕು!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.