ಅಪ್ಪ ನೀನೆ ನಮ್ಮ ಆಸ್ತಿ


Team Udayavani, Mar 21, 2021, 9:45 PM IST

Dadsbaby

ಮನೆಯವರ ಇಷ್ಟ-ಕಷ್ಟಗಳ ಪೂರೈಸಲು ಶ್ರಮಿಸುವ ಅಪ್ಪ ತನ್ನ ಬಗ್ಗೆ ಆಲೋಚಿಸುವುದು ಬಹಳ ಅಪರೂಪ.

ತನ್ನೆಲ್ಲಾ ನೋವನ್ನು ಒಡಲೊಳಗೆ ಬಚ್ಚಿಡುವ ಅಪ್ಪ ಸಿಡುಕ ಅಂತ ಅನ್ಸೋದು ಸಹಜ. ನಮ್ಮೆಲ್ಲ ಬೇಕು ಬೇಡಗಳನ್ನು ಅರ್ಥ ಮಾಡ್ಕೊಳ್ಳೋ ಅಪ್ಪನ ಬೇಕು ಬೇಡಗಳನ್ನು ಅರ್ಥಮಾಡ್ಕೊಳ್ಳೋದ್ರಲ್ಲಿ ನಾವು ಯಾಕೆ ವಿಫ‌ಲರಾಗ್ತೀವಿ?

ಅಪ್ಪನ ಪ್ರತೀ ಗದರುವಿಕೆಯಲ್ಲೂ ಪ್ರೀತಿ ಅಡಕ
ಮನೆಯಿಂದ ಹೊರಗಿದ್ದು ಕೆಲಸ ಮಾಡೋ ಅಪ್ಪನಿಗೆ ಸಮಾಜದ ಆಗುಹೋಗುಗಳು ನಮಗಿಂತ ಚೆನ್ನಾಗಿ ಅರಿವಿರುತ್ತದೆ. ¤ ಕುಟುಂಬವನ್ನು ಜೋಪಾನ ಮಾಡಿ ಕಾಪಾಡುವ ಹೊಣೆ ಅಪ್ಪನಿದ್ದಾಗಿದ್ದು ಇದನ್ನೆಲ್ಲಾ ತಿಳ್ಕೊಳ್ಳಲೇ ಬೇಕು. ಇದರ ಅರಿವಿರೋದ್ರಿಂದನೇ ಅಪ್ಪ ನಮ್ಮಲ್ಲಿ ಶಿಸ್ತು ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳೋದಿಕ್ಕೆ ಹೇಳ್ತಾರೆ, ಕೆಲವು ಬಾರಿ ಕಟ್ಟುಪಾಡುಗಳನ್ನು ಹಾಕ್ತಾರೆ. ಅವುಗಳನ್ನು ನಾವು ಅನುಸರಿಸದೇ ಇದ್ದ ಸಂದರ್ಭದಲ್ಲಿ ಗದರಬಹುದು ಆದ್ರೆ ಅವನ ಉದ್ದೇಶ ಒಂದೇ ಅವನ ಮಕ್ಕಳಿಗೆ ಜೀವನ ಪಾಠವನ್ನು ಕಲ್ಸೊàದು. ಅಪ್ಪನನ್ನು ಬೈದುಕೊಂಡೆ ನಾವು ಇವುಗಳನ್ನೆಲ್ಲಾ ಕಲ್ತಿರ್ತೀವಿ ಆದ್ರೆ ಅಪ್ಪ ಮಾಡಿದ್ದು ಸರಿ ಅಂತ ಅರ್ಥ ಆಗೋವಾಗ ಬಹಳ ತಡವಾಗುತ್ತದೆ.

ಅಪ್ಪಾ ನೀನು ನಮಗೆಲ್ಲವನ್ನು ಮಾಡಿಕೊಡುವುದರ ಜತೆಗೆ ಸ್ವಾಲಂಬಿಯಾಗಿರುವುದನ್ನು ಕಲಿಸಿದ್ದೀಯ, ಅಪ್ಪ ಕೋಪ ಮಾಡಿಕೊಂಡಾಗ ಯಾಕೆ ಹೀಗಾಡ್ತಾರೆ ಅಂತ ಅನ್ಸಿದ್ರು ಅವರು ಆ ರೀತಿ ನಡೆದುಕೊಳ್ಳೊದ್ರ ಫ‌ಲನೇ ನಮ್ಮಲ್ಲಿ ಶಿಸ್ತು ಮನೆ ಮಾಡಿರೋದು. ನಾವು ಇವತ್ತು ಎಷ್ಟೇ ಬೇಳೆದು ದೊಡ್ಡವರಾಗಿರಲಿ ನಮ್ಮ ನೋವಲ್ಲಿ ಮೊದಲು ನೆನಪಾಗೋದು ನೀನೆ, ನಮ್ಮ ಪ್ರತಿ ಕಷ್ಟದಲ್ಲು ಜತೆ ನಿಂತವನೂ ನೀನೆ. ತಪ್ಪೋ ಸರಿನೋ ಆದ್ರೆ ಯಾವ ಕ್ಷಣದಲ್ಲಿಯೂ ನಮ್ಮ ಕೈ ಬಿಟ್ಟಿಲ್ಲ ನೀನು. ಸಣ್ಣ ತಪ್ಪಿಗೂ ಗದರುವ ನೀನು ನಮ್ಮ ಸಣ್ಣ ಸಣ್ಣ ಸಾಧನೆಯಲ್ಲಿಯೂ ಸಾರ್ಥಕತೆ ಕಂಡಿದ್ದೀಯ ಅದ್ಕೆ ನೀನಂದ್ರೆ ನಮ್ಗೆ ಗೌರವ ಪ್ರೀತಿ ಎಲ್ಲ. ಮನೆಯಲ್ಲಿ ಎಷ್ಟೇ ಬೈದ್ರೂ ಶಾಲಾ ಕಾಲೇಜುಗಳಲ್ಲಿ ಪೇರೆಂಟ್ಸ್‌ ಮೀಟಿಂಗ್‌ಗೆ ಬರೋ ನೀನು ನಮ್ಮನ್ನ ಒಂದು ದಿನ ಬಿಟ್ಟು ಕೊಟ್ಟಿದ್ದಿಲ್ಲ. ಅವಾಗೆಲ್ಲ ನಿನ್ನ ಬಗ್ಗೆ ಅಪಾರವಾದ ಹೆಮ್ಮೆ ನಮಗಾಗ್ತಿತ್ತು.

ಅಪ್ಪಾ ಯು ಆರ್‌ ಹೀರೋ
ನಾವು ಸಣ್ಣವರಿದ್ದಾಗ ಆ ಸ್ಕೂಟರ್‌ ಅಲ್ಲಿ ನಮ್ಮನ್ನೆಲ್ಲಾ ಕೂರಿಸ್ಕೊಂಡು ಹೋಗ್ತಿದ್ದಾಗ ದಾರಿ ಉದ್ದಕ್ಕೂ ನಿಂಗೆ ಎಲ್ಲಾರು ನಮಸ್ತೆ ಮಾಡ್ತಿದ್ರೆ ನಮೊಗೊಂತರ ಗೌರವ, ಜತೆಗೆ ನೀನು ಹೀರೋ ಆಗಿºಡ್ತಿದ್ದೆ ನಮ್ಮ ಕಣ್ಣಲ್ಲಿ. ನೀನು ಯಾವತ್ತಿಗೂ ಹೀರೋನೆ. ಎಷ್ಟೋ ವಿಷಯಗಳನ್ನು ನಮ್ಗೆ ಮನಬಂದಂತೆ ನೀನು ಮಾಡ್ಲಿಕ್ಕೆ ಬಿಡದಿದ್ದಾಗ ನಮ್ಗೆ ನಿನ್ನ ಬಗ್ಗೆ ಬೇಜಾರಾದ್ರೂ ಯಾವತ್ತು ನಮ್ಮನ್ನು ಅನುಮಾನಿಸದೆ ಇದ್ದೆ ಅಲ್ವ ನೀನು? ಅದಕ್ಕಾಗಿ ನಿನ್ನ ಬಗ್ಗೆ ತುಂಬಾ ಹೆಮ್ಮೆ. ಅಪ್ಪಾ ಅಂದ್ರೆ ನಿನ್ನ ಹಾಗೆ ಇರ್ಬೇಕು ಅಂತ ಅನ್ಸಿದ್ದು ಸುಳ್ಳಲ್ಲ.

ಇವತ್ತು ನಾಲ್ಕು ಜನರ ಮಧ್ಯೆ ತಲೆ ಎತ್ತಿ ಓಡಾಡುವ ತಾಕತ್ತನ್ನು ನಮ್ಗೆ ನೀಡಿದ ನೀನು ಗ್ರೇಟ್‌ . ಎಲ್ಲರ ನೋವಿಗೂ ನಲಿವಾಗೋ ನಮ್ಮಪ್ಪನ ನಗು ನಾವಾಗಬೇಕು. ಮತ್ಯಾಕೆ ಅಲ್ವಾ ಮಕ್ಕಳಿರೋದು. ಕೋಟಿ ಕೋಟಿ ಆಸ್ತಿ ಇದ್ದರೇನು ಬಂತು ಅಪ್ಪನ ಮುಖದಲ್ಲಿ ನಗು ತರಿಸುವ ತಾಕತ್ತು ಮಕ್ಕಳಿಗಿಲ್ಲವಾದರೆ. ಅಪ್ಪ ಮಾಡಿಟ್ಟ ಆಸ್ತಿ ಕರಗಿ ಹೋಗಬಹುದು ಆದ್ರೆ ಅವನು ಕಲಿಸಿದ ಪಾಠಗಳು ಜೀವನದುದ್ದಕ್ಕೂ ನಮ್ಮನ್ನು ಕಾಪಾಡುತ್ತವೆ. ಅಪ್ಪ ಒಂಥರಾ ಆಕಾಶನೆ. ಅವನ ಅಸ್ತಿತ್ವದ ಅನಿವಾರ್ಯಯ ಅರಿವು ನಮಗಾಗದಿದ್ದರೂ ಅವನ ಅನುಪಸ್ಥಿತಿ ಖಂಡಿತ ಅರಿವಾಗುತ್ತದೆ. ನಮ್ಮ ನೆಮ್ಮದಿಯ ಬಾಳಿನ ಸೂತ್ರದಾರನಿಗೆ ಧನ್ಯವಾದ. ನಮ್ಮ ಆಸ್ತಿ ನೀನು. ಅಪ್ಪ.


ಸಾಯಿ ಶ್ರೀಪದ್ಮ ಡಿ.ಎಸ್‌., ಸಂತ ಫಿಲೋಮಿನಾ ಕಾಲೇಜು, ಮೈಸೂರು 

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.