Cartoon: ಕಾರ್ಟೂನ್ ನಿಂದ ಕಾದಂಬರಿಯತ್ತ

Team Udayavani, Oct 15, 2023, 3:36 PM IST

Cartoon: ಕಾರ್ಟೂನ್ ನಿಂದ ಕಾದಂಬರಿಯತ್ತ

ಪ್ರತೀ ದಿನ ಬೆಳಗ್ಗೆಯಿಂದ ಆರಂಭವಾಗಿ ಕಣ್ಣುಗಳು ನಿದ್ದೆಗೆ ಜಾರುವವರೆಗೂ ಕಾರ್ಟೂನ್‌ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದ ಕಾಲವೊಂದಿತ್ತು. ಊಟ ಮಾಡುವಾಗ, ತಿಂಡಿ ತಿನ್ನುವಾಗ ಟಿವಿ ಹೀಗೆ ಪ್ರತಿಯೊಂದಕ್ಕೂ ಕನಸಿನ ಲೋಕಕ್ಕೆ ಕೊಂಡೊಯ್ಯುವ ಮಾಯಜಾಲವೇ ಆ ಟಿವಿಯಲ್ಲಿ ಬರುತ್ತಿದ್ದ ಕಾಟೂìನ್‌ಗಳಾಗಿತ್ತು. ಬಗೆ ಬಗೆಯ ಬಣ್ಣದ ಲೋಕವನ್ನೇ ಕಣ್ಮುಂದೆ ಕಟ್ಟುವಂತೆ ಮಾಡುತ್ತಿತ್ತು. ಆಹಾ! ಅದೆಂತ ಸುಂದರವಾದ ದಿನಗಳು ಇಂದಿಗೂ ಮನಸ್ಸು ಹಾತೋರೆಯುವುದು ಅಂತಹ ಕ್ಷಣಗಳನ್ನು ಸವಿಯಲು. ಚಿಕ್ಕವರಿದ್ದಾಗ ಮಾಡಿದ ತುಂಟಾಟಗಳು, ತರ್ಲೆಗಳು ಎಲ್ಲವೂ ನೆನಪಾಗುವುದು ದೊಡ್ಡವರಾದ ಮೇಲಲ್ಲವೇ?

ಶಾಲೆ ಬಿಟ್ಟು ಬಂದಕೂಡಲೇ ಟಿವಿ ಆನ್‌ ಮಾಡಿದರೆ ಆ ಟಿವಿಗೆ ನಾನೊಬ್ಬನೇ ಯಜಮಾನ ಎನ್ನುವ ಹಾಗೆ ಯಾರಿಗೂ ಟಿವಿ ರಿಮೋಟನ್ನು ಕೊಡದೆ, ನಗುವನ್ನೇ ಮುಖದ ಉಡುಗೆಯಾಗಿ ತೊಟ್ಟು ಕಿಲ ಕಿಲ ಎಂದು ಇಡೀ ಮನೆಯೇ ನಿಶಬ್ದವಾಗಿದ್ದರೂ ಜೋರಾಗಿ ಕಿರುಚುತ್ತ, ಕೂಗುತ್ತ, ಅಮ್ಮನ ಬಳಿ ಪೆಟ್ಟು ತಿಂದ ಆ ದಿನಗಳು ಮರೆಯಲು ಸಾಧ್ಯವಿಲ್ಲದ ಕ್ಷಣಗಳು.

ಅಂದಿಗೆ ಕಾರ್ಟೂನ್‌ನ ಹೀರೋಗಲೇ ನಮ್ಮ ನೆಚ್ಚಿನ ನಾಯಕರಾಗಿದ್ದರು. ಅವರಂತೆ ಮಾತಾಡಲು, ನಾಯಕರಾಗಳು ಇಷ್ಟಪಡುತ್ತಿದ್ದೆವು. ಆದರೆ ದೊಡ್ಡವರಾದಂತೆ ನಮ್ಮ ವಿಚಾರಗಳೆಲ್ಲ ಬದಲಾಗಿ ಹೊಸ ಆಲೋಚನೆಗಳ ಪಥದಲ್ಲಿ ಸಾಗುವ ನಾವಿಕರಾಗುತ್ತೇವೆ.

ಬದುಕಿನ ಕನಸನ್ನು ನನಸು ಮಾಡುವ ದಾರಿಯಲ್ಲಿ ಸಾಗುವ ನಮಗೆ ಅಂದಿನ ಕಾರ್ಟೂನ್‌ಗಿಂತ ಜ್ಞಾನವನ್ನು ನೀಡುವ ಪುಸ್ತಕದ ಭಂಡಾರವೇ ಹೆಚ್ಚಾಗಿ ಕಾಣುವುದಂತೂ ಖಂಡಿತ. ಅಕ್ಷರವನ್ನು ಮುತ್ತಿನಂತೆ ಪೋಣಿಸಿರುವ ಪುಸ್ತಕಗಳ ಒಂದೊಂದು ಪುಟವು ಜೀವನಕ್ಕೊಂದು ಪಾಠ ಕಲಿಸುತ್ತದೆ.

ಚಿಕ್ಕವರಿದ್ದಾಗ ಕಾರ್ಟೂನ್‌ಗಳು ನೀಡುತ್ತಿದ್ದ ಸಂತೋಷ ದೊಡ್ಡವರಾದಂತೆ ಓದುವ ಪ್ರತಿಯೊಂದು ಪುಸ್ತಕಗಳು ನೀಡುತ್ತದೆ. ಹಾಗೆಯೇ ಕಾರ್ಟೂನ್‌ನಂತೆ ಕಾದಂಬರಿಯಲ್ಲಿಯೂ ನಾಯಕ ನಾಯಕಿಯರ ಪಾತ್ರವಿರುತ್ತದೆ. ಪ್ರತಿಯೊಬ್ಬರ ಪಾತ್ರವು ನಮ್ಮ ಮೇಲೆ ಪ್ರಭಾವ ಬೀರುತ್ತದೆ.

ಕಾರ್ಟೂನ್‌ಗಳನ್ನು ಪ್ರತಿನಿತ್ಯ ನೋಡುವುದು ಹೇಗೆ ನಮ್ಮ ಹವ್ಯಾಸವಾಗಿತ್ತೋ ಹಾಗೆಯೇ ದೊಡ್ಡವರಾದಂತೆ ಕಥೆ, ಕಾದಂಬರಿಗನ್ನು ಪ್ರತಿನಿತ್ಯ ಓದುವ ಹವ್ಯಾಸ ನಮ್ಮದಾದರೆ ನಮಗೆ ತಿಳಿಯದ ಅದೆಷ್ಟೋ ವಿಷಯಗಳ ಅರಿವು ನಮ್ಮದಾಗುವುದು.

ಕಾದಂಬರಿಯಲ್ಲಿ ಅದೆಷ್ಟೋ ಕಥೆಗಳು ನೈಜವಾದ, ನಿಜ ಜೀವನಕ್ಕೆ ಸಂಬಂಧಿಸಿದ, ನಮ್ಮ ಜೀವನಕ್ಕೊಂದು ನೀತಿ ಪಾಠ ಹೇಳುವ ಕಥೆಗಳಿರುತ್ತವೆ. ಅವುಗಳನ್ನು ಓದಿದಾಗ ಅರ್ಥ ಮಾಡಿಕೊಂಡಾಗ ಮಾತ್ರ ನಮ್ಮಲ್ಲಿಯ ಜ್ಞಾನದ ವೃದ್ಧಿಯಾಗುವುದು ಖಂಡಿತ.

ಇಂದಿನ ಯುಗದಲ್ಲಿ ಮೊಬೈಲ್‌ಗ‌ಳು ಹೇಗೆ ನಮ್ಮ ನಿತ್ಯ ಜೀವನದ ಸಹಪಾಠಿಯಾಗಿವೆಯೋ ಹಾಗೆಯೇ ಪುಸ್ತಕವು ನಮ್ಮ ಬದುಕಿನ ಭಾಗವಾಗಬೇಕಿದೆ. ಕಥೆ, ಕವನ, ಕಾದಂಬರಿಗಳನ್ನು ಬರೆಯುವುದು, ಓದುವುದು ನಮ್ಮ ಹಿಂದಿನವರ ಕಾಲಕ್ಕೆ ನಿಂತು ಹೋಗಬಾರದು. ಅವರಂತೆ ಬರೆಯಲು ಸಾಧ್ಯವಾಗದಿದ್ದರೂ ನಮ್ಮ ಪ್ರಯತ್ನ ನಾವು ಮಾಡಬೇಕಲ್ಲವೇ?

ಪ್ರಯತ್ನ ಪಟ್ಟಾಗ ಮಾತ್ರ ಫ‌ಲ ನಮ್ಮದಾಗುತ್ತದೆ. ಹೆಚ್ಚು ಹೆಚ್ಚು ಓದಿದಾಗ ಮಾತ್ರ ಬರೆಯಲು ಸಾಧ್ಯವಾಗುತ್ತದೆ.

ನಮ್ಮ ಜೀವನದ ಕಥೆ ಕಾರ್ಟೂನ್‌ನಿಂದ ಶುರುವಾಗಿ ಕಾದಂಬರಿಗೆ ಬಂದು ನಿಂತಂದೆ. ಕಾರ್ಟೂನನ್ನು ನೋಡಿ, ಕಾದಂಬರಿಯನ್ನು ಓದಿ, ಕಥೆಯನ್ನು ಬರೆಯಲು ನಾವು ಪ್ರಾರಂಭಿಸುವುದಲ್ಲ. ಕಲಿಯಲು ನೂರು ದಾರಿಗಳಿವೆ ಹುಡುಕುವ ಪ್ರಯತ್ನ ನಮ್ಮದಾಗಬೇಕಷ್ಟೆ.

– ಭಾವನಾ ಪ್ರಭಾಕರ್‌. ಶಿರಸಿ

ಟಾಪ್ ನ್ಯೂಸ್

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Kambala

Kambala; ಬೆಂಗಳೂರು ಕಂಬಳ ಈ ಬಾರಿ ಅನುಮಾನ

yahia-Sinwar

Terrorist Organization: ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

1-horoscope

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

NDA-Meet

NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್‌ಡಿಎ ಬದ್ಧ: ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Kambala

Kambala; ಬೆಂಗಳೂರು ಕಂಬಳ ಈ ಬಾರಿ ಅನುಮಾನ

yahia-Sinwar

Terrorist Organization: ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

1-horoscope

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಗೌರವ ಹಾಗೂ ಆದಾಯ ವೃದ್ಧಿ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.