ತಂದೆ-ತಾಯಿ ದೇವರು ಕೊಟ್ಟ ವರ


Team Udayavani, Mar 16, 2021, 4:10 PM IST

parents

ಅಮ್ಮ ಮಗುವನ್ನು ಒಂಬತ್ತು ತಿಂಗಳು ತನ್ನ ಗರ್ಭದಲ್ಲಿರಿಸಿ,ತನ್ನ ಕಂದಮ್ಮನಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುವಳು.

ಅದೇ ಗರ್ಭದಲ್ಲಿರುವ ಮಗುವಿಗೆ ಉಸಿರಾಗಿರುವ ಅಪ್ಪ ನಿಜಕ್ಕೂ ಗ್ರೇಟ್‌! ಅಮ್ಮ ಕೇವಲ ತನ್ನ ಗರ್ಭದಲ್ಲಿರುವ ಮಗುವಿಗಾಗಿ ಕಷ್ಟ-ನೋವುಗಳನ್ನು ಸಹಿಸಿಕೊಂಡರೆ, ಅಪ್ಪ ತನ್ನ ಹೆಂಡತಿಯನ್ನು,ಗರ್ಭದಲ್ಲಿರುವ ಮಗುವಿನ ಕ್ಷೇಮವನ್ನೂ ಎಚ್ಚರದಿಂದ ನೋಡಿಕೊಳ್ಳುವನು ಅನ್ನೋದು ಸತ್ಯ. ಅಪ್ಪ ತನ್ನ ಮಗುವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿರುತ್ತಾನೆ. ತನ್ನ ಆಸೆ-ಕನಸುಗಳನ್ನೆಲ್ಲ ಬದಿಗೊತ್ತಿ ತನ್ನ ಆಸೆಗಳನ್ನು ಮಗುವಿಗೆ ನೀಡುತ್ತಾನೆ.

ಅಮ್ಮ ತನ್ನ ಮಗುವನ್ನು ಕಂಕುಳಲ್ಲಿ ಹೊತ್ತು ಊರನ್ನು ತೋರಿಸುವಳು. ಆದರೆ ಅಪ್ಪ ತನ್ನ ಹೆಗಲ ಮೇಲೆ ಹೊತ್ತುಕೊಂಡು ಇಡೀ ಊರನ್ನು ತೋರಿಸುವನು.ಇವರಿಬ್ಬರ ನಡುವೆ ವ್ಯತ್ಯಾಸವೇನೆಂದರೆ ಅಮ್ಮ ತೋರಿಸೋದು ಕೇವಲ ಊರಿನ ಅಂಗಡಿಗಳು, ಜನರನ್ನು. ಆದರೆ ಅಪ್ಪ ತಾನು ಸೇವಕನಂತೆ ನೀನು ರಾಜನಂತೆ ಯಾವಾಗಲೂ ಊರನ್ನು ಅಂಬಾರಿಯಲ್ಲೇ ನೋಡಬೇಕು ಅನ್ನೋ ಆಸೆ ಅಪ್ಪನದ್ದು! ಇಷ್ಟೊಂದು ಅಪ್ಪನ ಬಗ್ಗೆ ಯಾಕಾಗಿ ಹೇಳುತ್ತಿದ್ದೇನೆಂದರೆ, ಇತ್ತೀಚಿನ ದಿನಗಳಲ್ಲಿ ಅಪ್ಪ-ಮಕ್ಕಳ ಪ್ರೀತಿ ದೂರವಾಗುತ್ತಿರುವುದು. ಅಪ್ಪ ತನ್ನ ಮಗುವನ್ನು ಹೆಗಲ ಮೇಲೆ ಹೊತ್ತು ಆಡಿಸದಿದ್ದರೂ ತನ್ನ ಮಗುವಿನ ಬಗ್ಗೆ ಕಾಳಜಿ ವಹಿಸುತ್ತಿರುವುದು ಕಡಿಮೆಯಾಗುತ್ತಿದೆ.

ತಂದೆ-ಮಗನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಬಾಲ್ಯದಲ್ಲಿ ಮಗನನ್ನು ತಂದೆ ಹೇಗೆ ರೂಪಿಸಿದ್ದ್ದದಾನೆ ಎನ್ನುವುದು ಮುಖ್ಯ ಕಾರಣವಾಗುತ್ತದೆ. ವಯಸ್ಸಿಗೆ ಬಂದ ಮಗ ಎದುರಾಡುತ್ತಾನೆಂದರೆ ಅವನಿಗೆ ಬಾಲ್ಯದಲ್ಲಿ ಸರಿಯಾದ ಮಾರ್ಗದರ್ಶನ ದೊರೆತಿಲ್ಲ ಎಂದರ್ಥ. ಪುತ್ರನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿ, ಅವನಲ್ಲಿ ಪ್ರೀತಿ-ವಿಶ್ವಾಸ, ಹಿರಿಯರ ಬಗ್ಗೆ ಗೌರವ ಮುಂತಾದ ಗುಣಗಳನ್ನು ಬೆಳೆಸುವ ಜವಾಬ್ದಾರಿ ತಂದೆಯದ್ದು.

ಅನೇಕ ತಂದೆಯಂದಿರು ತಮ್ಮ ಕೆಲಸದ ಒತ್ತಡಗಳಿಂದಾಗಿ ಮಗನೊಂದಿಗೆ ಸಂವಹನವನ್ನು ಬೆಳೆಸಿಕೊಳ್ಳುವುದಿಲ್ಲ. ಆಗ ತಂದೆಯಿಂದ ಮಗ ಭಾವನಾತ್ಮಕವಾಗಿ ದೂರಾಗುತ್ತಾನೆ. ಹೀಗಾಗದಂತೆ ನೋಡಿಕೊಳ್ಳಲು ತಂದೆಯಾದವನು ಮುಂಚಿನಿಂದಲೇ ಪ್ರಯತ್ನಿಸಬೇಕು. ತನ್ನ ಕೆಲಸ-ಕಾರ್ಯಗಳ ಮಧ್ಯೆಯೂ ಮಗನಿಗಾಗಿ ಕೆಲವು ನಿಮಿಷಗಳನ್ನು ಮೀಸಲಿಡಬೇಕು. ಇಂತಹ ಸಂವಹನದಿಂದ ಪರಸ್ಪರ ತಿಳಿವಳಿಕೆ ಹೆಚ್ಚುತ್ತದೆ.

ಕೆಲವು ಶ್ರೀಮಂತ ತಂದೆಯಂದಿರು ಮಗನ ಮೇಲಿನ ಅತಿಯಾದ ಪ್ರೀತಿಯಿಂದ ರಕ್ಷಿತ ವಾತಾವರಣದಲ್ಲಿ ಮಗನನ್ನು ಬೆಳೆಸುತ್ತಾರೆ. ಆದರೆ ಆ ಮಗುವಿಗೆ ಮುಂದೆ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ತುಂಬಾನೇ ಕಷ್ಟ ಅವರನ್ನ ಮುದ್ದು ಮಾಡಿ ಸಾಕಿದರೆ ಸಾಲದು ಒಳ್ಳೆಯ ಬುದ್ದಿ, ನಡೆನುಡಿ, ಒಳ್ಳೆಯ ಗುಣಗಳನ್ನು ಕಲಿಸಬೇಕು.


-ಸದಾಶಿವ ಬಿ. ಎನ್‌., ಎಂ.ಜಿ.ಎಂ. ಕಾಲೇಜು ಉಡುಪಿ

ಟಾಪ್ ನ್ಯೂಸ್

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.