Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ
Team Udayavani, Jan 11, 2025, 3:43 PM IST
ಪ್ರತಿ ವರ್ಷ ನವೆಂಬರ್ 17 ರಂದು ದೇವಾಲಯ ಮತ್ತು ಸ್ನೇಹಿತರ ಜತೆ ಆಚರಿಸುತ್ತಿದ್ದ ನನ್ನ ಹುಟ್ಟುಹಬ್ಬವನ್ನು ಈ ಬಾರಿ ಅಮ್ಮನ ಸಲಹೆಯಂತೆ ಯಾವುದಾದರೂ ಒಂದು ಆಶ್ರಮಕ್ಕೆ ಹೋಗಿ ಆಚರಿಸಲು ಮುಂದಾದೆ. ಅದರಂತೆ “ಪ್ರಶಾಂತ್ ನಿವಾಸ ಮರಿಯ ನಿಲಯ’ ಎಂಬ ಕ್ರಿಶ್ಚಿಯನ್ ಆಶ್ರಮಕ್ಕೆ ಹೋಗಿದ್ದೆವು.
ಅಲ್ಲಿಗೆ ತೆರಳುವ ಮುನ್ನ ಬೇಕಾದ ತಿಂಡಿ ತಿನಿಸುಗಳ ವ್ಯವಸ್ಥೆ ಮಾಡಿಕೊಂಡು ಹೋಗಿದ್ದೆವು. ಅಲ್ಲಿ ಹೋಗಿ ನೋಡಿದರೆ ಅಲ್ಲಿದ್ದವರು ನಾವು ಹೋದ ತತ್‌ಕ್ಷಣ ನನಗೆ ಹಾಡಿನ ಮೂಲಕ ಸ್ವಾಗತ ಮಾಡಿದರು. ಅಲ್ಲಿದ್ದ ಸಿಸ್ಟರ್ಸ್ ಹೂವು ನೀಡಿ ಸ್ವಾಗತ ಕೋರಿದರು. ವಿಶೇಷ ಅನಿಸಿದ್ದು, ಅಲ್ಲಿ ಯಾರಲ್ಲೂ ತಾವು ಏನನ್ನೋ ಕಳೆದುಕೊಂಡಿದ್ದೇವೆ ಎಂಬ ಭಾವ ಇರಲೇ ಇಲ್ಲ. ಆರೋಗ್ಯ ಸರಿಯಿಲ್ಲ ಎಂಬ ಚಿಂತೆ ಕಾಣಲಿಲ್ಲ.
ಬಳಿಕ ನಾವು ತಂದಿದ್ದ ತಿಂಡಿ ತಿನಸುಗಳನ್ನು ಅವರಿಗೆ ನೀಡಿ ಅವರ ಬಳಿ ಸಂವಹನ ನಡೆಸಿದೆ. ಅಲ್ಲಿದ್ದ ಕೆಲವು ಜನರಿಗೆ ಮಾತನಾಡಲು, ನಡೆದಾಡಲು, ಕೈಕಾಲು ಅಲ್ಲಾಡಿಸಲೂ ಆಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿದ್ದರೂ ಅವರು ಸಂತೋಷದಿಂದ, ಆತ್ಮೀಯತೆಯಿಂದ ನನ್ನೊಂದಿಗೆ ಬೆರೆತರು. ಸಂತೋಷದಿಂದ ಅವರೊಂದಿಗೆ ಸ್ವಲ್ಪ ಹೆಚ್ಚಿನ ಸಮಯವೂ ಕಳೆದೆವು. ಹೀಗೆ ಅಲ್ಲಿದ್ದ ಸಿಸ್ಟರ್ಸ್ ಅವರ ದೇವರಲ್ಲಿ ನಮಗಾಗಿ ಪ್ರಾರ್ಥಿಸಿದರು. ಅಲ್ಲಿದ್ದ ಹಿರಿಜೀವಗಳು ನನ್ನ ಹುಟ್ಟಹಬ್ಬಕ್ಕೆ ಹಾರೈಸಿ ಶುಭಾಶೀರ್ವಾದವಿತ್ತರು.
ನನ್ನ ಇಷ್ಟು ವರ್ಷದ ಜನುಮದಿನಗಳಲ್ಲಿ ಇದು ಬಹಳ ವಿಶೇಷವಾದ ಜನ್ಮದಿನಾಚರಣೆ ಎನಿಸಿದ್ದು ಮಾತ್ರ ಸುಳ್ಳಲ್ಲ. ಇದನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೆಯೇ ಅಲ್ಲಿದ್ದ ಜನರ ಮುಖದಲ್ಲಿ ನೋವಿನ ಹಿಂದಿದ್ದ ನಗು, ಅವರ ಆಶೀರ್ವಾದ ಎಲ್ಲವೂ ನನ್ನ ನೆನಪಿನ ಪುಟಗಳಲ್ಲಿ ಶಾಶ್ವತವಾಗಿ ಉಳಿಯಲಿದೆ.
ಆ ದಿನದ ಹೆಚ್ಚಿನ ಸಮಯವನ್ನು ಅವರ ಜತೆಗೇ ಕಳೆಯಬೇಕೆನ್ನುವ ಮನಸ್ಸಿತ್ತಾದರೂ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಅವರ ಮುಖದ ಮೇಲಿದ್ದ ಅಪರಿಮಿತ ಸಂತೋಷ ನೋಡಿದ ಯಾವೊಬ್ಬ ವ್ಯಕ್ತಿಗೂ ಅವರನ್ನು ಬಿಟ್ಟು ಹೊರಡುವ ಮನಸ್ಸಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಅವರು ಮತ್ತೆ ಕ್ರಿಸ್ಮಸ್ ಹಬ್ಬಕ್ಕೆ ಬರುವಂತೆ ಆಹ್ವಾನ ನೀಡಿದರು. ಹೀಗೆ ಬಹಳ ನೋವಿನಿಂದಲೇ ಅಲ್ಲಿದ್ದವರಿಗೆ ವಿದಾಯ ಹೇಳಿ ಭಾರವಾದ ಮನಸ್ಸಿನಿಂದ ವಾಪಸ್ಸಾದೆವು.
ಬಹುತೇಕ ಜನರು ಹುಟ್ಟುಹಬ್ಬದ ಆಚರಣೆಗೆ ದುಂದುವೆಚ್ಚಗಳನ್ನು ಮಾಡುವುದಿದೆ. ಆದರೆ ಅದರ ಬದಲಾಗಿ ಆಚರಣೆಯ ನೆಪದಲ್ಲಾದರೂ ಇಂತಹ ಹಿರಿಜೀವಗಳೊಂದಿಗೆ ಕಾಲ ಕಳೆಯುವ ಅಭ್ಯಾಸ ಮಾಡಿಕೊಂಡರೆ ಆಚರಣೆ ಅರ್ಥಪೂರ್ಣ ಎನಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ನನ್ನ ಅಮ್ಮನ ಸಲಹೆಯಂತೆ ಅಲ್ಲಿಗೆ ತೆರಳಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಅನುಭವ ತಂದು ಕೊಟ್ಟಿತು. ಹಾಗಾಗಿ ಅವರಿಗೂ ಕೂಡ ಧನ್ಯವಾದ ಹೇಳಲೇಬೇಕು.
– ಜೀವನ್
ವಿವಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.