ಅವನಿ ಚತುರ್ವೇದಿ; ಭಾರತದ ಮೊದಲ ಮಹಿಳಾ ಫೈಟರ್ ಪೈಲೆಟ್
Team Udayavani, Jun 10, 2020, 10:23 AM IST
ಭಾರತೀಯ ಪುರಾಣಗಳ ಪ್ರಕಾರ ನಾರಿ ಶಕ್ತಿಯೇ ಎಲ್ಲ ಶಕ್ತಿಗಳಿಗೆ ಮೂಲ. ಮನೆ ಕೆಲಸಕ್ಕೆ ಮಾತ್ರ ಮಹಿಳೆಯರು ಸೀಮಿತ ಎಂಬ ಕಾಲ ಮುಗಿದಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮನಾಗಿ ಮಹಿಳೆಯರು ನಿಲ್ಲುತ್ತಿದ್ದಾರೆ.
ತಿಹಾರ್‌ನ ಪುರುಷರ ಜೈಲ್‌ನ ಮೊದಲ ಮಹಿಳಾ ಅಧೀಕ್ಷಕಿ ಅಂಜು ಮಾಂಗಿಯಾ, ವಂಕಡರಥ್ ಸರಿತಾ ದೆಹಲಿಯ ಮೊದಲ ಮಹಿಳಾ ಬಸ್ ಚಾಲಕಿ, ಸುರೇಖಾ ಯಾದವ್ ಪ್ಯಾಸೆಂಜರ್ ರೈಲಿನ ಮೊದಲ ಮಹಿಳಾ ಚಾಲಕಿ, ಪ್ರಿಯಾ ಜಿಂಗನ್ ಸೇನೆ ಸೇರಿದ ಮೊದಲ ಮಹಿಳೆ. ಹೀಗೆ ಪುರುಷ ಪ್ರಾಧಾನ್ಯವಿದ್ದ ಪ್ರತೀ ಕ್ಷೇತ್ರಗಳಲ್ಲೂ ಮಹಿಳೆಯರು ದಾಪುಗಾಲಿಡುತ್ತಲೇ ಬಂದಿದ್ದಾರೆ. ಇಂಥವರ ಪಟ್ಟಿಗೆ ಈಗ ಮತ್ತೂಂದು ಸೇರ್ಪಡೆ ಅದುವೇ ಅವನಿ ಚತುರ್ವೇದಿ.
ಹಳ್ಳಿಗಳು ಮತ್ತು ಸಣ್ಣ ನಗರಗಳಲ್ಲಿ ಇನ್ನೂ ಮಹಿಳಾ ಸಮಾನತೆಯ ಮಾತು ಕೇಳುತ್ತಿರುವ ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಸಣ್ಣ ಹಳ್ಳಿಯಿಂದ ಬಂದ ಈ ಹೆಣ್ಮಗಳು ಫೈಟರ್ ಪೈಲೆಟ್ ಆಗುವ ಮೂಲಕ ಮಹಿಳೆಯರಿಂದ ಈ ಕಾರ್ಯ ಸಾಧ್ಯವಿಲ್ಲ ಎನ್ನುತ್ತಿದ್ದವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಬಹಳ ಹಿಂದಿನಿಂದಲೂ ಸೇನೆಯಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತ ಬಂದಿದ್ದರೂ ಡಾಕ್ಟರ್, ನರ್ಸ್‌ನಂತಹ ವೈದ್ಯಕೀಯ ಸೇವೆಗಳಿಗೆ ಮಾತ್ರ ಅವರಿಗೆ ಅವಕಾಶವಿತ್ತು.
1992ರಲ್ಲಿ ಮೊದಲ ಬಾರಿಗೆ ಐಎಎಫ್ನ ಇತರ ಶಾಖೆಗಳಲ್ಲಿ ಅವಕಾಶ ನೀಡಲಾಯಿತು. ಹೈದರಾಬಾದ್‌ನ ವಾಯುಪಡೆಯ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದವರನ್ನು ಇದಕ್ಕೆ ನೇಮಿಸಲಾಗುತ್ತಿತ್ತು. ಯುವತಿಯರಿಗೂ ಸಾಮರ್ಥ್ಯವಿರುವುದನ್ನು ಮನಗಂಡ ಬಳಿಕ 1993ರಲ್ಲಿ ಫ್ಲೈಯಿಂಗ್ ಶಾಖೆಯಲ್ಲಿ ಅವಕಾಶ ನೀಡಲಾಯಿತು. ಅದಾಗಿಯೂ ವಿಮಾನ ಮತ್ತು ಹೆಲಿಕಾಫ್ಟರ್‌ಗಳನ್ನು ಸಾಗಿಸುವಲ್ಲಿ ಮಾತ್ರ ಇವರಿಗೆ ಅವಕಾಶ ನೀಡಲಾಗುತ್ತಿತ್ತು. 1994ರಲ್ಲಿ ಹರಿತಾ ಕೌರ್ ಅವರು ಎಚ್‌ಎಸ್-748ಅವ್ರೊ ವಿಮಾನ ಹಾರಾಟ ನಡೆಸಿದ ಲೇಡಿ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದರ ಮುಂದುವರಿದ ಭಾಗವೋ ಎಂಬಂತೆ ಈಗ ಯುದ್ಧ ವಿಮಾನವನ್ನೂ ಹಾರಿಸುವ ಮೂಲಕ ಅವನಿ ಚತುರ್ವೇದಿ ಅವರು ಹೊಸ ಇತಿಹಾಸ ಮಾಡಿದ್ದಾರೆ.
ಯಾರೀ ಅವನಿ ಚತುರ್ವೇದಿ?
ಅಕ್ಟೋಬರ್ 27, 1993ರಂದು ಜನಿಸಿದ ಇವರು ಬಿ.ಟೆಕ್ ಪದವೀಧರೆ. ಮಧ್ಯಪ್ರದೇಶದ ಡಿಯೋಲಂಡ್ ಎಂಬ ಸಣ್ಣ ಪಟ್ಟಣದಲ್ಲಿ ಶಾಲಾ ಶಿಕ್ಷಣ ಪೂರೈಸಿದ ಇವರು, ರಾಜಸ್ಥಾನದ ಬನಸ್ಥಾಲಿ ವಿಶ್ವವಿದ್ಯಾಲಯದಿಂದ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ಹಿರಿಯ ಸಹೋದರನಿಂದ ಹೆಚ್ಚು ಸ್ಫೂರ್ತಿಗೊಂಡಿದ್ದ ಇವರು, ತಮ್ಮ ವಿಶ್ವವಿದ್ಯಾಲಯದ ಪ್ಲೇಯಿಂಗ್ ಕ್ಲಬ್‌ನಿಂದ ವಿಮಾನ ಹಾರಾಟದ ಅನುಭವ ಪಡೆದಿದ್ದರಂತೆ. ಇದೇ ಮುಂದೆ ಇವರ ಸಾಧನೆಗೆ ಪ್ರೇರಣೆಯಾಯಿತು. ಗುಜರಾತ್‌ನ ಜಮ್‌ನಗರದಿಂದ ಎಂಐಜಿ-21 ಬೈಸನ್ ವಿಮಾನವೇರಿ ಹಾರಾಟ ಮಾಡಿದ್ದಲ್ಲದೆ ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧ ವಿಮಾನವನ್ನು ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ. 2018ರಲ್ಲಿ ಇವರನ್ನು ಫ್ಲೆçಟ್ ಲೆಫ್ಟಿನಂಟ್ ಹುದ್ದೆಗೆ ಭಡ್ತಿ ನೀಡಲಾಗಿದೆ.
ಪ್ರಸನ್ನ ಹೆಗಡೆ, ಕುಮುಟಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Fraud Case: 3.25 ಕೋಟಿ ವಂಚನೆ ಕೇಸ್; ಐಶ್ವರ್ಯ ದಂಪತಿ ಮತ್ತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.