ಬರ್ಕಣಾ ಜಲಪಾತದ ವೈಭೋಗ
Team Udayavani, Jun 28, 2021, 9:00 AM IST
ಸುತ್ತ ಹಸುರ ಕೇಶರಾಶಿಯ ಮಧ್ಯೆ ಬೈತಲೆಯಂತೆ ಸಾಗುವ ಕಣಿವೆ. ಬೆಟ್ಟ – ಗುಡ್ಡಗಳ ಸಾಲು, ಬಾನಿಗೆ ಮುತ್ತಿಕ್ಕೋ ಮಂಜಿನ ರಾಶಿ. ಹಸುರ ಬೆಟ್ಟಗಳ ಸಾಲಿನಿಂದ, ಕಲ್ಲು- ಬಂಡೆಗಳ ಮಧ್ಯದಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ. ಇದು ದಕ್ಷಿಣದ ಚಿರಾಪುಂಜಿಯೆಂದೇ ಹೆಸರುವಾಸಿಯಾದ ಆಗುಂಬೆ ಸಮೀಪದ ಮಲ್ಲಂದೂರಿನಲ್ಲಿ ವೈಭವದಿ ಹರಿಯುವ ಬರ್ಕಣಾ ಜಲಪಾತದ ಸೊಬಗು.
ಆಗುಂಬೆ ಎಂದರೆ ಸಾಕು ಸಾಲು – ಸಾಲು ಜಲಪಾತಗಳು ನಮ್ಮನ್ನು ಕೈ ಬೀಸಿ ಕರೆಯುತ್ತವೆ. ಬರ್ಕಣಾ, ಒನಕಿ ಅಬ್ಬಿ, ಜೋಗಿ ಗುಂಡಿ, ಕುಂಚಿಕಲ್ ಹೀಗೆ ಮುಂದುವರಿಯುತ್ತದೆ. ಅದರಲ್ಲೂ ಡಾ| ರಾಜಕುಮಾರ್ ಅಭಿನಯದ ಆಕಸ್ಮಿಕ ಸಿನೆಮಾ ಚಿತ್ರೀಕರಣಗೊಂಡ ಬರ್ಕಣಾ ಜಲಪಾತವಂತೂ ನೋಡುಗರ ಕಣ್ಮನ ಸೆಳೆಯುತ್ತದೆ. ಮಳೆಗಾಲದಲ್ಲಂತೂ ಬಂಡೆಗಳ ಮೇಲಿನಿಂದ ಜುಳು – ಜುಳು ನಿನಾದಗೈಯ್ಯುತ್ತಾ, ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತವೆ. ಆಗಾಗ ಬರುವ ಮಳೆಗೆ ಬೆಟ್ಟಗಳ ಸಾಲು ಹಸಿರೊದ್ದು ಝೇಂಕರಿಸುತ್ತಿದ್ದರೆ, ಮಂಜಿನ ಕಣ್ಣಮುಚ್ಚಾಲೆ ಆಟವು ನಿಸರ್ಗದ ನೈಜ ಸಂಪತ್ತನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ.
ಬರ್ಕಣಾ ಜಲಪಾತವು ದೇಶದ 11ನೇ ಅತೀ ಎತ್ತರದ ಜಲಪಾತವಾಗಿದ್ದು, ಇಲ್ಲಿ ಸುಮಾರು 850 ಅಡಿ ಎತ್ತರದಿಂದ ಕಲ್ಲು, ಬಂಡೆಗಳ ಮಧ್ಯೆ ಹಾಲ್ನೊರೆಯಂತೆ ನೀರು ಧುಮ್ಮಿಕ್ಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಪಶ್ಚಿಮ ಘಟ್ಟದ ದಟ್ಟ ಅರಣ್ಯ ಪ್ರದೇಶಗಳ ಮಧ್ಯೆ ಇರುವ ಈ ಜಲಪಾತವು ಇಲ್ಲಿಗೆ ಬರುವ ಪ್ರವಾಸಿಗರು, ಚಾರಣಿಗರಿಗೆ ವಿಶಿಷ್ಟ ಅನುಮತಿಯನ್ನು ನೀಡುತ್ತದೆ. ಬರ್ಕಣಾ ವೀಕ್ಷಕ ತಾಣ (ಬರ್ಕಣಾ ವ್ಯೂ ಪಾಯಿಂಟ್)ವು ಪಶ್ಚಿಮ ಘಟ್ಟಗಳ ರುದ್ರರಮಣೀಯ ಸೌಂದರ್ಯವನ್ನು ತೆರೆದಿಡುತ್ತದೆ.
ನರಸಿಂಹ ಪರ್ವತದಲ್ಲಿ ಹುಟ್ಟಿ, ಆಗುಂಬೆಯನ್ನು ದಾಟಿಕೊಂಡು, ಸೋಮೇಶ್ವರದಲ್ಲಿ ಹರಿದು, ಉಡುಪಿಯಲ್ಲಿ ಸಮುದ್ರ ಸೇರುವ ಸೀತಾ ನದಿಯು ಈ ಬರ್ಕಣಾ ಜಲಪಾತವನ್ನು ದಾಟಿಯೇ ಮುನ್ನಡೆಯುವುದು ವಿಶೇಷ.
ಈ ಬರ್ಕಣಾ ಜಲಪಾತವು ಕುದುರೆಮುಖ ವನ್ಯಜೀವಿ ವಿಭಾಗ, ಸೋಮೇಶ್ವರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವುದರಿಂದ ಅರಣ್ಯ ಇಲಾಖೆಯವರ ಅನುಮತಿ ತೆಗೆದುಕೊಂಡೇ ಹೋಗುವುದು ಸೂಕ್ತ.
ಯಾವಾಗ ಸೂಕ್ತ?:
ಇಲ್ಲಿಗೆ ವರ್ಷದ ಎಲ್ಲ ದಿನಗಳಲ್ಲೂ ಭೇಟಿ ನೀಡಬಹುದಾದರೂ, ಸಪ್ಟೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ಇಲ್ಲಿಗೆ ಬಂದಲ್ಲಿ ಅತ್ಯದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಬೇಸಿಗೆಯಲ್ಲಿ ಜಲಪಾತದಲ್ಲಿ ಅಷ್ಟೇನು ನೀರಿನ ಹರಿವು ಇರುವುದಿಲ್ಲ. ಅಷ್ಟೊಂದು ಆಕರ್ಷಕವಾಗಿಯೂ ಇರುವುದಿಲ್ಲ.
ದಾರಿ ಹೇಗೆ?:
ಬರ್ಕಣಾ ಜಲಪಾತವು ಆಗುಂಬೆಯಿಂದ 8 ಕಿ.ಮೀ. ದೂರದಲ್ಲಿದ್ದು, ಅಲ್ಲಿಂದ ಶೃಂಗೇರಿಗೆ ಹೋಗುವ ಮಾರ್ಗದ ಕಡೆಗೆ ಬರುವಾಗ ಮಲ್ಲಂದೂರು ಗ್ರಾಮದ ಕಡೆಗೆ ಸಂಚರಿಸುವ ರಸ್ತೆ ಸಿಗುತ್ತದೆ. ಆ ಮಾರ್ಗದಲ್ಲಿ ಸುಮಾರು 3 ಕಿ.ಮೀ. ಪರ್ವತ ಹಾದಿಗಳ ಮಧ್ಯೆ, ಚಾರಣ ಮಾಡಿಕೊಂಡು ಬರ್ಕಣಾ ಜಲಪಾತವನ್ನು ತಲುಪಬಹುದು. ಈ ಜಲಪಾತವನ್ನು ತಲುಪಲು ಸುಮಾರು 5 ಕಿ.ಮೀ.ವರೆಗೆ ದಾರಿಯಿದ್ದು, ಅಲ್ಲಿಂದ ಮುಂದಕ್ಕೆ 3 ಕಿ.ಮೀ. ಕಾಲ್ನಡಿಗೆಯಿಂದಲೇ ಸಂಚರಿಸಬೇಕು. ಇನ್ನು ಉಡುಪಿಯಿಂದ 60 ಕಿ.ಮೀ., ಮಂಗಳೂರಿನಿಂದ 105 ಕಿ.ಮೀ., ಶಿವಮೊಗ್ಗದಿಂದ 100 ಕಿ.ಮೀ., ತೀರ್ಥಹಳ್ಳಿಯಿಂದ 38 ಕಿ.ಮೀ., ಬೆಂಗಳೂರಿನಿಂದ 352 ಕಿ.ಮೀ. ದೂರದಲ್ಲಿದೆ. ಟ್ರೆಕ್ಕಿಂಗ್ ಮಾಡುವವರಿಗೆ ಇದು ಒಳ್ಳೆಯ ಪ್ರವಾಸಿ ತಾಣ.
ಸಿಂಚನಾ ಎಂ.ಆರ್.
ಆಗುಂಬೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.