ಯುವ ಜನತೆಯ ಸ್ಫೂರ್ತಿ ಬಸವರಾಜ  ನಾಗಪ್ಪ ನರ್ತಿ


Team Udayavani, Jul 3, 2021, 3:22 PM IST

ಯುವ ಜನತೆಯ ಸ್ಫೂರ್ತಿ ಬಸವರಾಜ  ನಾಗಪ್ಪ ನರ್ತಿ

ನಾವೆಲ್ಲರೂ ಇಂದು ಇಷ್ಟು ನಿರ್ಭೀತಿಯಿಂದ  ಯಾವುದೇ ಶತ್ರುಗಳ ಭಯವಿಲ್ಲದೆ ಸಂತೋಷದಿಂದ ದಿನಗಳನ್ನು ಕಳೆಯುತ್ತಿದ್ದೇವೆ ಎಂದರೆ ಅದಕ್ಕೆ ಕಾರಣಕರ್ತರಾದವರು  ನಮ್ಮ ದೇಶದ ಸೈನಿಕರು.

ತಮ್ಮ ರಕ್ತ ಚೆಲ್ಲಿಯಾದರೂ ಭಾರತಮಾತೆಯ ರಕ್ಷಣೆ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಹತ್ತಾರು ಕೆಜಿಗಳ ಸಿಡಿ ಮದ್ದುಗುಂಡುಗಳನ್ನು ರಕ್ಷಣ ಸಾಮಗ್ರಿಗಳನ್ನು ಬೆನ್ನಿಗೆ ವರಿಸಿ ಗಾಳಿ, ಮಳೆ, ಚಳಿ, ಬಿಸಿಲು ಎನ್ನದೆ ದುರ್ಗಮ ಮಾರ್ಗದಲ್ಲಿ ಸಂಚರಿಸಿ ಶತ್ರುಗಳ ದಾಳಿಯನ್ನು ಎದುರಿಸಲು ಗಡಿಭಾಗದಲ್ಲಿ ತಯಾರಾಗಿರುವ ಸೈನಿಕರೆಂದರೆ ಪ್ರತಿಯೋರ್ವ ಭಾರತೀಯನೂ ಗೌರವಿಸಬೇಕಾದ ವ್ಯಕ್ತಿತ್ವ.  ತಮ್ಮ ತಂದೆ ತಾಯಿ ಬಂಧು ಬಳಗದಿಂದ ದೂರ ಇದ್ದು, ದೇಶಕ್ಕಾಗಿ ಪ್ರಾಣದ ಹಂಗನ್ನು ತೊರೆದು ಹಗಲಿರುಳು  ಕಾರ್ಯನಿರ್ವಹಿಸುತ್ತಾರೆ. ಅಂತವರಲ್ಲಿ ಒಬ್ಬರು ಬಸವರಾಜ ನಾಗಪ್ಪ ನರ್ತಿ.

ಇವರು ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದವರು. ಚಿಕ್ಕ ವಯಸ್ಸಿನಿಂದಲೂ ಸೈನ್ಯಕ್ಕೆ ಸೇರಬೇಕೆಂಬ  ಮಹದಾಸೆ ಇತ್ತು. ಆ ಆಸೆ ಚಿಗುರೊಡೆದಿದ್ದು ಹಿಂದಿ ಬಾರ್ಡರ್‌ ಸಿನೆಮಾದಿಂದ. ಸೈನ್ಯಕ್ಕೆ ಸೇರಬೇಕೆಂದು ಮನೆಯಲ್ಲಿ ಅನುಮತಿ ಕೇಳಿದಾಗ ಇವರ ತಂದೆ ನಾಗಪ್ಪ ನರ್ತಿ ಬೆನ್ನೆಲುಬಾಗಿ ನಿಂತರು. ನೀನು ಏನು ಮಾಡತ್ತಿಯಾ ಮಾಡು ಅದಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದರು.

ಮಿಲಿಟರಿ ರ್ಯಾಲಿಗೆ ಗೆಳೆಯರೊಂದಿಗೆ ಇವರು ತೆರಳುತ್ತಾರೆ. ಗೆಳೆಯರನ್ನು ಬಿಟ್ಟು ಇವರು ಮಾತ್ರ ಸೈನ್ಯಕ್ಕೆ ಆಯ್ಕೆ ಆಗುತ್ತಾರೆ.

ಆಗ ತಾನೇ ಪಿಯುಸಿ ಮುಗಿಸಿ ಜಗತ್ತನ್ನು ಭಿನ್ನ ದೃಷ್ಟಿಕೋನದಿಂದ ನೋಡತೊಡಗಿದ್ದ ಹದಿಹರೆಯದ ಹುಡುಗ. ಓದಿನಲ್ಲಿಯೂ ಮುಂದೆ. ಹಾಗಾಗಿ ಆರ್ಮಿ ಸೇರ್ಪಡೆ ಪರೀಕ್ಷೆಯಲ್ಲಿಯೂ ಪಾಸಾಗುತ್ತಾರೆ. ಮುಂದೆ ಸೈನ್ಯದ ಜೀವನ ಪ್ರಾರಂಭವಾಗುತ್ತದೆ.

ಮೊದಲು  ಮಹಾರಾಷ್ಟ್ರದ ನಾಸಿಕ ತರಬೇತಿ ಕೇಂದ್ರಕ್ಕೆ ಪೋಸ್ಟಿಂಗ್‌ ಆಗುತ್ತದೆ. ಅನಂತರ ತಮಿಳುನಾಡಿನ ಕೊಯುಮತ್ತೂರಿಗೆ ಅಲ್ಲಿಂದ ಜಮ್ಮು-ಕಾಶ್ಮೀರದ ಗಡಿಗೆ.

ಅಲ್ಲಿಂದ ಮುಂದೆ ಪ್ರತೀ ಕ್ಷಣ ಸಾವಿನೊಂದಿಗೆ ಸೆಣಸಾಡುವ ಜೀವನ ಪ್ರಾರಂಭವಾಗುತ್ತದೆ. ಹಾಗೆಂದ ಮಾತ್ರಕ್ಕೆ ಅಲ್ಲಿ ಯಾವತ್ತೂ ಯುದ್ಧಭೀತಿ ಇದೆ ಎಂದಲ್ಲ. ಆದರೆ ಯಾವ ಕ್ಷಣ ಬೇಕಾದರೂ ದಾಳಿಯಾಗಬಹುದುನ್ನುವ ಸನ್ನಿವೇಶ ಕಾಡುತ್ತಿರುತ್ತದೆ.

ಉಗ್ರರನ್ನು ಸದೆ ಬಡಿದ ಕ್ಷಣ :

ಅದೊಂದು ದಿನ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪದಕರು ಇರುವ ಜಾಗದ ಬಗ್ಗೆ ಸುಳಿವು ಸಿಗುತ್ತ‌¤ದೆ. ಬಸವರಾಜ ನಾಗಪ್ಪ ಅವರ ತಂಡದಲ್ಲಿ ಕೇವಲ 4 ಮಂದಿ ಇರುತ್ತಾರೆ. ಉಗ್ರರ ಅಡಗು ತಾಣದ 300 ಮೀಟರ್‌ ಜಾಗವನ್ನು ಕವರ್‌ ಮಾಡುತ್ತಾರೆ. ಈ ವೇಳೆಗೆ ಉಗ್ರರಿಗೆ ಸೈನ್ಯ ಆಕ್ರಮಣದ ಬಗ್ಗೆ ಮಾಹಿತಿ ತಿಳಿದು, 3 ಜನ ಆಂತಕವಾದಿಗಳು ಫೈರಿಂಗ್‌ ಮಾಡುತ್ತಾರೆ. ಬಸವರಾಜ ನಾಗಪ್ಪ ಅವರ ತಂಡ ಸುತ್ತುವರೆದು ಉಗ್ರರ ಮೇಲೆ ಕೌಂಟರ್‌ ಅಟ್ಯಾಕ್‌ ಮಾಡುತ್ತಾರೆ. ಆಗ ಕೆಲವು ಸೈನಿಕರಿಗೆ ಗುಂಡು ಬಿದ್ದು ರಕ್ತ ಸುರಿಯುತ್ತಿದ್ದರೂ. ಇಬ್ಬರು ಉಗ್ರರನ್ನು ಯಶಸ್ವಿಯಾಗಿ  ಸೆರೆಹಿಡಿಯುವಲ್ಲಿ ಸಫ‌ಲರಾಗುತ್ತಾರೆ.

ಯುವ ಜನರಿಗೆ ಪ್ರೇರಣೆ:

ಬಸವರಾಜ ನಾಗಪ್ಪ ಅವರು ತಮ್ಮ  ರಜೆ ದಿನಗಳಲ್ಲಿ ಊರಿಗೆ ಬಂದಾಗ  ಸುಮ್ಮನೇ ಕಾಲ ಹರಣ ಮಾಡದೇ ಆರ್ಮಿ ಸೇರಲು ತಯಾರಿ ನಡೆಸುತ್ತಿರುವ ಯುವಕ-ಯುವತಿಯರಿಗೆ ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ  ಮತ್ತು ಯುವ ಜನಾಂ ಗವನ್ನು ದೇಶಸೇವೆ ಮಾಡಲು ಹುರಿದುಂಬಿಸಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಮಾರ್ಗದರ್ಶನ ಪಡೆದ ಓರ್ವ ಯುವಕ ಆರ್ಮಿಯಲ್ಲಿ ಕರ್ತವ್ಯ ಮಾಡುತ್ತಿದ್ದಾನೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ರ್ಯಾಲಿಯಲ್ಲಿ 3 ಜನ ಆಯ್ಕೆಯಾಗಿ ದ್ದಾರೆ.

ನನ್ನ ಪುಣ್ಯ : ರಜೆಗೆ ಊರಿಗೆ ಬಂದು ನನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನಮ್ಮ ಊರಿನ ಯುವಪಡೆಗೆ ಮಾರ್ಗದರ್ಶನ ಮಾಡುತ್ತೇನೆ. ಅದು ನನಗೆ ಹೊರೆ ಎನಿಸುವುದಿಲ್ಲ. ಬದಲಾಗಿ ನನ್ನ ಕರ್ತವ್ಯ. ಈ ದೇಶವನ್ನು ರಕ್ಷಿಸುವುದು ನನ್ನ ಪರಮ ಆದ್ಯ ಕರ್ತವ್ಯ  ಹೇಗೋ ಹಾಗೆಯೇ  ನನ್ನ ಹಾಗೆ ನಮ್ಮ ಊರಿನ ಯುವಕರು ಭಾರತಾಂಬೆಯ ರಕ್ಷಣೆ ಕೆಲಸದಲ್ಲಿ ಭಾಗಿಯಾಗಲು ಸಹಕರಿಸುತ್ತಿರುವುದು ನನ್ನ ಪುಣ್ಯ. -ಬಸವರಾಜ ನಾಗಪ್ಪ ನರ್ತಿ

 

ಸೌಭಾಗ್ಯ ಬಸವರಾಜ ಕುಂದಗೋಳ

ಎಸ್‌ಜೆಎಂವಿಎಸ್‌ ಮಹಿಳಾ ವಿದ್ಯಾಲಯ ಹುಬ್ಬಳ್ಳಿ

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.